ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಸ್ಫೂರ್ತಿ ಒಂದು ಅನರ್ಘ್ಯ ರತ್ನ

ಯಾರೇ ಯಾವುದೇ ಹೊತ್ತಲ್ಲಿ ಎಂತಹದ್ದೆ! ಸಂದರ್ಭದಲ್ಲಿ ಸಹಾಯಕ್ಕಾಗಿ ಹಂಬಲಿಸಿ ಬಂದರೆ ಕೈ ಬೀಸಿ ತನ್ನ ತೆಕ್ಕೆಗೆ ಸೇರಿಸಿಕೊಂಡು ಸಹಾಯ ನೀಡುವ ಸ್ಫೂರ್ತಿ ಸಂಸ್ಥೆ, ಸಂಘ-ಸಂಸ್ಥೆಗಳಿಗೆ, ಸಮಾಜಕ್ಕೆ ಮಾದರಿ.

ಸಮಾಜದ ಸರ್ವಾಂಗೀಣ ಪ್ರಗತಿಗೆ ಕಂಕಣ ತೊಟ್ಟು ಸ್ಫೂರ್ತಿ ಸೇವಾ ಸಂಸ್ಥೆಯನ್ನು ಕಟ್ಟಿ ವಂಚಿತ, ಅಸಹಾಯಕ ಮಕ್ಕಳಿಗೆ ಶಿಕ್ಷಣ ನೀಡಿ ಬೆಳೆಸುವ ದಿವ್ಯ ದೀಕ್ಷೆ ತೊಟ್ಟ ಸ್ಫೂರ್ತಿ ಸಂಸ್ಥೆಗೆ ಈಗ 16 ವರ್ಷ.

ಐದು ಮಂದಿ ಉತ್ಸಾಹಿ ಸೇವಾರ್ಥಿಗಳ ಅಪರೂಪದ ಹೋರಾಟ, ತ್ಯಾಗ, ಸೇವೆಯ ಫಲವೇ ಸ್ಫೂರ್ತಿಧಾಮ ಪುನರ್ವಸತಿ ಕೇಂದ್ರ. ಇದರ ಮುಚೂಣಿ ಯಲ್ಲಿದ್ದು ಕಾರ್ಯನಿರ್ವಹಿಸುವ ಕೇಶವ ಕೋಟೇಶ್ವರ ಸೇವಾ ಕ್ಷೇತ್ರ ಕ್ಕೊಂದು ಹೊಸ ಇತಿಹಾಸ ಬರೆದ ಮಹನೀಯ. ಯಾವುದೇ ಹಿನ್ನೆಲೆ ಇಲ್ಲದ ಈ ಸೇವಾಕಾಂಕ್ಷಿ ನೂರಾರು ಮಕ್ಕಳಿಗೆ ಪ್ರೀತಿಯ ಪಪ್ಪ ನಾಗಿ ಹಲವಾರು ಯುವಕರಿಗೆ ಗೌರವದ ಅಣ್ಣನಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಡೆಸುವ ಸೇವಾ ಕಾರ್ಯದ ಮೇಲೊಂದು ಪಕ್ಷಿ ನೋಟ ಈ ಲೇಖನ.

ಸಮಾಜದಲ್ಲಿ ಬಹಿಷ್ಕ್ರತರು, ಅಸಹಾಯಕರು, ವಂಚಿತರು, ಅನಾಥಾರು ಹುಚ್ಚರು, ವಯಸ್ಕರು, ಮಹಿಳೆಯರು, ಮಕ್ಕಳು ಹೀಗೆ ಯಾರೇ ಇರಲಿ ಇವತ್ತು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ದಲ್ಲಿರುವ ಸ್ಫೂರ್ತಿಧಾಮ ಎಂಬ ಕೇಂದ್ರವನ್ನು ಅರಸಿ ಬಂದರೆ ಅವರಿಗೆ ಆಶ್ರಯ ಗ್ಯಾರಂಟಿ. ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡದೆ ಕೇವಲ ಸೇವೆ ಮಾತ್ರ ತಮ್ಮ ಧ್ಯೆಯವೆಂದು ಹೊರಟ ಸ್ಫೂರ್ತಿ ಸಂಸ್ಥೆ ಬೆಳೆದು ಬಂದ ಪರಿ ಮೈ ನಮಿರೇಳುತ್ತದೆ. ತಾನು, ತನ್ನದು, ತನ್ನವರಿಗಾಗಿಯೇ ಬದುಕಿ ಬರುವ ಈ ಸಮಾಜದ ಕೋಟ್ಯಾಂತರ ಮಂದಿಯ ಎದುರಿಗೆ ಮಾದರಿಯಾಗಿ ನಿಲ್ಲಬಲ್ಲಂತಹ ವ್ಯಕ್ತಿತ್ವದ 43 ರ ಹರೆಯದ ಕೇಶವ ಕೋಟೇಶ್ವರ ಈ ಕಥಾನಕದ ಪ್ರಮುಖ ಪಾತ್ರದಾರಿ.

ಅದು 1993 ರ ಸಮಯ. ಐದು ಜನ ಉತ್ಸಾಹಿ ಯುವಕರು ಈ ಸಮಾಜ ಕ್ಕಾಗಿ ಏನಾದರೂ ನೀಡಬೇಕೆಂದು ಹೊಂಗನಸನ್ನು ಹೊತ್ತು ಜೀವನದ ಎಲ್ಲಾ ಆಕಾಂಶೆಗಳನ್ನು ಬದಿಗೊತ್ತಿ ಸೇವಾ ಕಾರ್ಯದಲ್ಲಿ ತೊಡಗಿದ ದಿನ. ಜನವರಿ 14 ರಂದು ಬಹಳ ವಿಶಿಷ್ಠ ರೀತಿಯಲ್ಲಿ ಸೇವಾ ಕಾರ್ಯಕ್ಕೆ ದುಮುಕಿದ  ಐದು ಮಂದಿ ಸೇರಿ ಐದು ದೀಪಗಳನ್ನು ಬೆಳಗುವುದರ ಮೂಲಕ ತಮ್ಮೊಳಗೆ ಸ್ಫೂರ್ತಿ ಸಂಸ್ಥೆಯನ್ನು ಉದ್ಘಾಟಿಸಿಕೊಂಡರು.

ಕೊರಗ ಸಮಾಜದಿಂದಲೇ ಬಂದ ಅಪರೂಪದ ವ್ಯಕ್ತಿತ್ವದ ಗಣೇಶ, ಕೋಟೇಶ್ವರ ಹಂಗಳೂರಿನವರಾದ ನಿತ್ಯಾನಂದ ಶೇರೆಗಾರ್, ತೆಕ್ಕಟ್ಟೆಯ ಕೊಮೆ ಪರಿಸರದ ಕರುಣಾಕರ, ಎಂ.ಎಸ್.ಡಬ್ಲ್ಯೂ. ಪಧವಿದರೆ ಪ್ರಮೀಳಾ ವಾಜ್ ಮತ್ತು ಈಗ ಸ್ಫೂರ್ತಿಧಾಮಕ್ಕೆ ಸಂಪೂರ್ಣ ಬೆನ್ನೆಲು ಬಾಗಿ ನಿಂತು ದುಡಿಯುತ್ತಿರುವ ಕೇಶವ ಕೋಟೇಶ್ವರ ಇವರೇ ಸ್ಫೂರ್ತಿ ಸಂಸ್ಥೆಯ ಹುಟ್ಟಿಗೆ ಕಾರಣೀಕರ್ತರಾದ ಪಂಚ ಪ್ರಜ್ವಲಿಗಳು.

ಪ್ರಾರಂಭದಲ್ಲಿ ನಿಜವಾಗಿ ಯಾವುದೇ ಆದರ್ಶವಿರಲಿಲ್ಲ. ಕೆಲಸವಿಲ್ಲದ ಕೈಗಳು ಕೆಲಸಕ್ಕಾಗಿ ಹಂಬಲಿಸುತ್ತಾ ತೀರಾ ವಿಶಿಷ್ಠವೆನಿಸದ ರೀತಿಯಲ್ಲಿ ಈ ಸಂಸ್ಥೆಯನ್ನು ಪ್ರಾಂರಂಭಿಸಿದೆವು. ಐದು ಜನ ಸೇರಿದ ಇನ್ಪಿರೇಶನ್ನಿ ನ ಕನ್ನಡ ಅರ್ಥವೆ ಸ್ಫೂರ್ತಿ. ಹಾಗಾಗಿ ಸಂಸ್ಥೆಗೆ ಸ್ಫೂರ್ತಿ ಎಂದು ನಾಮಕರಣ ಮಾಡಿದೆವು. ಒಂದು ಒಳ್ಳೆಯ ಉದ್ದೇಶದೊಂದಿಗೆ ಪ್ರಾರಂಭವಾಗುವ ಯಾವುದೇ ವ್ಯವಸ್ಥೆ ಹೇಗೆ ಬೆಳೆಯಬೇಕೋ ಹಾಗೇ ಸ್ಫೂರ್ತಿ ಬೆಳೆಯುತ್ತ ಬಂತು. ಸತ್ಯ ಮತ್ತು ಪ್ರಾಮಾಣಿಕತೆಯ ಆಧಾರ ಸ್ತಂಭದ ಮೇಲೆ ನಮ್ಮ ಕನಸನ್ನು ಕಟ್ಟುತ್ತಾ ಬಂದೆವು. ಇಲ್ಲಿ ನಾವು ಮಾಡಿದ್ದಕ್ಕಿಂತ ಸಮಾಜ ಕೊಟ್ಟಿದ್ದೇ ಹೆಚ್ಚು. ತೀರ ಚಿಕ್ಕ ವಯಸಿನಲ್ಲಿ ನಾವೆಲ್ಲಾ ಸೇರಿ ಸ್ಫೂರ್ತಿ ಸಂಸ್ಥೆ ಪ್ರಾರಂಭಿಸಿದೆವು. 24-25  ರ ಹರೆಯ ನಮ್ಮನ್ನು ಯಾರೂ ನಂಬುತ್ತಿರಲಿಲ್ಲ. ನಂಬಲು ಸಾಧ್ಯವೂ ಇರಲ್ಲಿಲ್ಲ. ಏಕೆಂದರೆ ನಾವು ಐದು ಜನರ ಪೈಕಿ ಪ್ರಮೀಳಾ ವಾಜ್(ಈಗ ಕೇಶವರ ಹೆಂಡತಿ) ಒಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಅತ್ಯಂತ ಕಡು ಬಡತನದಿಂದ ಬಂದವರು. ಅಲ್ಲದೆ ಎಲ್ಲಿ ಸಂಸ್ಥೆ ಪ್ರಾರಂಭಿಸಿದ್ದೇವೋ ಅದೇ ಪರಿಸರದವರು, ಸಮಾಜಕ್ಕೆ ನಾವ್ಯಾರು, ನಮ್ಮ ಹಿನ್ನೆಲೆ ಏನೆಂದು ತಿಳಿದಿತ್ತು. ಹಾಗಾಗಿ ಜನ 100 ರೂ ದಾನ ನೀಡಲು ಹಿಂಜರಿಯುತ್ತಿದ್ದರು. ಆಗ ನಮ್ಮ ಸಹಾಯಕ್ಕೆ ಬಂದವರು ಮಂಗಳೂರಿನ ಡೆಸ್ಮಂಡ್ ಡಿ ಎಬ್ರಿಯೋ ಮತ್ತು ಮಾರ್ಗರೇಟ್ ದಂಪತಿಗಳು. ನಾವು ಐವರು ಒಂದಾಗಿರುವುದೇ ದೊಡ್ಡ ಸಾಧನೆ ಎಂದು ನಮಗೆ ಮನದಟ್ಟು ಮಾಡುತ್ತಾ ಸಹಾಯಹಸ್ತ ಚಾಚಿದವರು. ಸಂಸ್ಥೆ ಪ್ರಾರಂಭಿಸುವಾಗ ಅವರ ಆಶ್ರಯ ಇಲ್ಲದಿದ್ದರೆ ನಮ್ಮದೂ ಹತ್ತರೊಟ್ಟಿಗೊಂದು ಸಂಸ್ಥೆಯಂತಾಗುತ್ತಿತ್ತು.

ಡೆಸ್ಮಂಡ್ ಕೈಚಾಚಿದ್ದೆ ವರ್ಷ ಕಳೆಯುವುದರೊಳಗೆ ಇಡೀ ಸಮಾಜ ಸ್ಫೂರ್ತಿಯೊಂದಿಗೆ ಸ್ಪಂದಿಸಿತು. ಆಗ ನಾವು ಮತ್ತಷ್ಟು ಬಿಗಿಗೊಂಡೆವು. ಮೌಲ್ಯಗಳೊಂದಿಗೆ ಬದುಕಲು ಶುರುವಿಟ್ಟೆವು. ಬದುಕೇ ಬೇರೆಯಾಯಿತು. ನೂರಾರು ವಂಚಿತ  ಅಸಹಾಯಕ ಕೊರಗ ಮಕ್ಕಳೊಂದಿಗೆ ಅದೆಷ್ಟೊ ಜನ ಬದುಕು ಕಳೆದುಕೊಂಡವರೊಂದಿಗೆ ಬದುಕು ಕಟ್ಟಿಕೊಂಡೆವು. ಹಾಗಾಗಿ ಈ ಸಮಾಜ ನಮಗೆ ಎಲ್ಲವನ್ನು ನೀಡಿತು ಎಂದು ಕೇಶವ ಕೋಟೇಶ್ವರ ಮುಕ್ತವಾಗಿ ಹೇಳುತ್ತಾರೆ.

ಸ್ಫೂರ್ತಿ ಸಮಾಜದಲ್ಲಿ ಗಟ್ಟಿ ನೆಲೆಯನ್ನು ಕಂಡುಕೊಂಡಿದೆ. ಎಲ್ಲಾ ಸಂಸ್ಥೆ ಗಳಂತೆ ಕೇವಲ ಸರಕಾರದ ಅನುದಾನಕ್ಕಾಗಿಯೋ - ವಿದೇಶಿ ನೆರವಿ ಗಾಗಿಯೋ ಸ್ಫೂರ್ತಿ ಕಾದು ಕುಳಿತಿಲ್ಲ. ಸ್ಫೂರ್ತಿಯ ಆದಾಯದ ಮೂಲವೇ ಸಹೃದಯವಂತ ದಾನಿಗಳು. ಅವರಿವರು ನೀಡುವ ಹತ್ತೋ ಇಪ್ಪತ್ತೋ, ಐವತ್ತೋ ನೂರೋ, ಸ್ಫೂರ್ತಿಯ ಖಾತೆಗೆ ಆಗಾಗ ಬಂದು ಬೀಳುತ್ತಲೇ ಇರುತ್ತದೆ. ಅದೇ ಸಣ್ಣ ಮೊತ್ತ ಮಾಸಿಕ ಲಕ್ಷಾಂತರ ರೂಗಳಾಗಿ ಮಾರ್ಪಟ್ಟು ಸ್ಫೂರ್ತಿಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುತ್ತಿದೆ.

ಸ್ಫೂರ್ತಿಧಾಮದ ಒಂದು ದಿನದ ಸಂಪೂರ್ಣ ನಿರ್ವಹಣೆಗೆ ಈಗ 4 ಸಾವಿರ ರೂ ಖರ್ಚಾಗುತ್ತದೆ. ಮಾಸಿಕ ಒಂದು ಲಕ್ಷದ ಇಪ್ಪತ್ತು ಸಾವಿರ ಪ್ರತಿ ತಿಂಗಳು ಇಷ್ಟು ಅಥವಾ ಇದಕ್ಕಿಂತ ಹೆಚ್ಚಿನ ಮೊತ್ತ ಬರಲೇ ಬೇಕು ಇಲ್ಲವಾದರೆ ಸ್ಫೂರ್ತಿಯ ಕಾರ್ಯ ಸ್ಥಗಿತಗೊಳ್ಳುತ್ತದೆ. ಪ್ರತಿ ತಿಂಗಳೂ ಲಕ್ಷ ರೂ ಖರ್ಚು ಎಂದರೆ ಯಾರಿಗಾದರೂ ಭಯವಾಗಬೇಕು. ಅದೂ  ದಾನಿಗಳ ನೆರವಿನಿಂದಲೇ ಸಂಗ್ರಹವಾಗಬೇಕಾದರೆ ಹೇಗೆ ಸಾಧ್ಯ ಎಂದು ಕೇಳೀದರೆ ಕೇಶವ ಕೋಟೇಶ್ವರ ಹೀಗೆ ಹೇಳುತ್ತಾರೆ. ಸಮಾಜವನ್ನು ಪ್ರೀತಿಸುವ ಅಸಹಾಯಕರಿಗೆ ನೆರಳಾಗಿ ನಿಲ್ಲಬೇಕೆಂಬ ಹಂಬಲದ ಬಹಳಷ್ಟು ಜನ ನಮ್ಮಲ್ಲಿದ್ದಾರೆ. ತುಂಬಾ ಜನ ದೇವರನ್ನು ನಂಬುತ್ತಾರೆ ಮತ್ತು ದೇವರಿಗಾಗಿ ಸಹಾಯ ಮಾಡುತ್ತಾರೆ. ಕೆಲವರು ಇಂತಹ ಕೆಲಸಗಳಿಗೆ ನೆರವು ನೀಡುವುದೇ ದೇವರ ಕೆಲಸವೆಂದು ನಂಬಿದ್ದಾರೆ. ಧರ್ಮ ಮತ್ತು ಸೇವೆ ಒಂದು ನಾಣ್ಯದ ಎರಡು ಮುಖವಿದ್ದಂತೆ. ನಮ್ಮಲ್ಲಿರುವ ಧಾರ್ಮಿಕ ಕೇಂದ್ರಗಳು ಸಸೂತ್ರವಾಗಿ ನಡೆಯುವುದು ಭಕ್ತರು ನೀಡುವ ಕಾಣಿಕೆ ಹಣದಲ್ಲಿ, ಅದೇ ಕಾಣಿಕೆ ಸೇವಾ ಕಾರ್ಯಕ್ಕೆ ನೀಡಿದರೆ ನೂರಾರು ಜನರನ್ನು ಬದುಕಿಸಲು, ಬದುಕು ನೀಡಲು ಸಾಧ್ಯವಿದೆ. ಹಾಗೆ ಜನ ಸಹಕರಿಸುತ್ತಾರೆಂಬ ನಂಬಿಕೆ ಮೇಲೆ ಸ್ಫೂರ್ತಿ ನಡೆಯುತ್ತಾ ಬಂದಿದೆ. ಮುಂದೆಯೂ ಇನ್ನಷ್ಟು ಉತ್ತಮವಾಗಿ ನಡೆಯುತ್ತದೆ ಎಂಬ ನಂಬಿಕೆ ನನ್ನದು.

ಪ್ರಾರಂಭದಲ್ಲಿ ಸ್ಫೂರ್ತಿಯಲ್ಲಿ ಏನೂ ಇರಲಿಲ್ಲ. ಆದರೆ ಈಗ ಸ್ಫೂರ್ತಿಯಲ್ಲಿ  ಎಲ್ಲವೂ ಇದೆ. ಡೆಸ್ಮಂಡ್ ಡಿ ಎಬ್ರಿಯೋರವರು ಸ್ಫೂರ್ತಿಗಾಗಿ ನೀಡಿದ 2.5 ಎಕ್ರೆ ಸ್ಥಳದಲ್ಲಿ ಸುಸಜ್ಜಿತವಾದ ಕಟ್ಟಡಗಳು,ವ್ಯವಸ್ಥಿತವಾದ ವಾಚನಾಲಯ  ಮಕ್ಕಳ ಮನ ತಣಿಸುವ ಆಟದ ಅಂಗಳ. ಅತ್ಯಂತ ಸ್ವಚ್ಚವಾದ ಅಡುಗೆ ಮನೆ, ಊಟದ ಮನೆ, ವಿಸ್ತಾರವಾದ ಪ್ರಾರ್ಥನಾ ಮಂದಿರ, ಶುಭ್ರ ಹಾಗೂ ಸುಂದರವಾದ ಬಾತ್‌ರೂಂ ಕಾಂಪ್ಲೇಕ್ಸ್ ಚಿಕ್ಕ ಮಕ್ಕಳ ವಾಸಕ್ಕಾಗಿ  ಒಳ್ಳೆಯ ಕೈತೋಟ- ದಾನಿಗಳು ನೀಡಿದ ವಾಹನ, ಕಂಪ್ಯೂಟರ್ ಸೌಲಭ್ಯ ಹೀಗೆ ಒಂದು ವ್ಯವಸ್ಥೆ ಏನೆಲ್ಲ ಹೊಂದಿರಬೇಕೋ ಅದೆಲ್ಲವೂ ಸ್ಫೂರ್ತಿಧಾಮ ದಲ್ಲಿದೆ. ಇಚ್ಚಾಶಕ್ತಿಯೊಂದಿದ್ದರೆ ಎಲ್ಲವನ್ನು ಹೊಂದಬಹುದೆಂಬುದಕ್ಕೇ ಸ್ಫೂರ್ತಿ ಒಂದು ಉದಾಹರಣೆ. ಸ್ಫೂರ್ತಿಧಾಮ ಈಗ ಸರಾಸರಿ ಕೋಟಿ ಬೆಲೆಗೆ ತೂಗಬಹುದು.

ಸ್ಫೂರ್ತಿಯಲ್ಲಿ ಎಲ್ಲವೂ ಪಾರದರ್ಶಕ ಯಾರೇ ಸ್ಫೂರ್ತಿ ಪ್ರವೇಶಿಸಿದರೂ ಕೇಳಿದ್ದೆಲ್ಲವನ್ನೂ ತೋರಿಸುವ, ಎಲ್ಲವನ್ನೂ ತೆರೆದಿಡುವ ವ್ಯವಸ್ಥೆ ಅಲ್ಲಿದೆ. ಶಿಸ್ತಿಗೆ ಸಂಬಂಧಿಸಿದ ಕೆಲವು ಕಟ್ಟುಪಾಡುಗಳನ್ನು ಹೊರತು ಪಡಿಸಿದರೆ ಎಲ್ಲ ಕಡೆಗೂ ಮುಕ್ತವಾಗಿ ಪ್ರವೇಶಿಸುವ ಅವಕಾಶ ಸ್ಫೂರ್ತಿಯಲ್ಲಿದೆ.  ಮಕ್ಕಳೊಂದಿಗೆ, ಮಹಿಳೆಯರೊಂದಿಗೆ, ಕಾರ್ಯಕರ್ತರೊಂದಿಗೆ ಆತ್ಮೀಯವಾಗಿ ಮಾತನಾಡಬಹುದು, ವ್ಯವಹರಿಸಬಹುದು. ನಮ್ಮ ಪರಿಸರದಲ್ಲೆ ಅತ್ಯಂತ ಶ್ರದ್ದೆಯಿಂದ ನೆಡೆಯುವ ಆಶ್ರಮ, ಪುನರ್ವಸತಿ ಕೇಂದ್ರವೊಂದಿದ್ದರೆ ಅದು ಸ್ಫೂರ್ತಿಧಾಮ. ಬದುಕಿನ ಎಲ್ಲಾ ಜಂಜಾಟ ಬದಿಗೊತ್ತಿ ಒಂದರೆಕ್ಷಣ ನೆಮ್ಮದಿ ಬೇಕೆನಿಸಿದರೆ ನೀವು ಸ್ಫೂರ್ತಿಧಾಮಕ್ಕೆ ಬೇಟಿ ಕೊಡಿ. ನೋಡುವಂತಾದ್ದು, ನೋಡಿ ಕಲಿಯುವಂತಾದ್ದು ಬೇಕಾದಷ್ಟಿದೆ ಇಲ್ಲಿ. ಒಂದೊಂದು ಮಗು ಒಂದೊಂದು ಕಥೆ ಹೇಳಿದರೆ ಒಬ್ಬೊಬ್ಬರದು.

ಬೇರೆ ಬೇರೆ ಬದುಕು. ಬದುಕನ್ನು ಅರ್ಥಮಾಡಿಕೊಳ್ಳುವ ವಿಶ್ವ ವಿದ್ಯಾಲಯವಿದ್ದಂತೆ ಈ ಸ್ಫೂರ್ತಿಧಾಮ. ಇಡೀ ಪರಿಸರದಲ್ಲಿ ತೂಗು ಹಾಕಲಾದ ಸುಭಾಶಿತ ಬರಹಗಳನ್ನು ಓದಿ ಅರ್ಥ ಮಾಡಿಕೊಂಡರೆ ಸಾರ್ಥಕ ಬದುಕು ಸಾಗಿಸಬಹುದು.

ಸ್ಫೂರ್ತಿಧಾಮದಲ್ಲಿ ಮಾನವೀಯತೆಯೇ ಮೈದಳೆದು ನಿಂತಿದೆ. ಬರೇ ಪ್ರೀತಿ ವಿಶಾಸದ ಮೇಲೆ ಕಟ್ಟಿದ ಸೌಧವದು. ಕೇಶವ ಕೋಟೇಶ್ವರರನ್ನು ಮಕ್ಕಳೆಲ್ಲರು ಪಪ್ಪ ಪಪ್ಪ ಎಂದು ಕೂಗುತ್ತಾ ತಮ್ಮ ಬೇಡಿಕೆಗಳನ್ನು ಮುಂದಿಡುವುದು ನೋಡಿದರೆ ಆಶ್ಚರ್ಯವಾಗುತ್ತದೆ. ಹಲವು ಮಕ್ಕಳಿಗೆ ತಾಯಿಯಾದವರಿದ್ದಾರೆ. ಆದರೆ ಹಲವಾರು ಮಕ್ಕಳಿಗೆ ತಂದೆಯಾದದ್ದಿದ್ದರೆ ಅದೂ ಕೇಶವ ಕೋಟೇಶ್ವರ ಮಾತ್ರ. ಅಲ್ಲಿ ದೇವರು ಧರ್ಮದ ತೊಡಕಿಲ್ಲ. ಜಾತಿ ಮತದ ಅಂತರವಿಲ್ಲ. ಯಾವುದೇ ಪೂಜೆ ಪುರಸ್ಕಾರವಿಲ್ಲದೆ, ಅಬ್ಬರ ಅಡಂಭರವಿಲ್ಲದೆ ಬದುಕು ಸಾಧಿಸಲು ಸಾಧ್ಯವೆಂದಾದರೆ ಅ ಬಗ್ಗೆ ಕಲಿಯುವ ಕುತೂಹಲಿಗಳಿದ್ದರೆ ಸ್ಫೂರ್ತಿಧಾಮಕ್ಕೆ ಬರಲೇಬೇಕು.

ಸ್ಫೂರ್ತಿಯಲ್ಲಿ ನಡೆಯುತ್ತಿರುವ ದಶಾಂಶ ಚಟುವಟಿಕೆಗಳು:-
೧) ಕೊರಗ ಗಂಡು ಮಕ್ಕಳ ಅನುದಾನಿತ ವಸತಿ ನಿಲಯ
೨) ಕೊರಗ ಹೆಣ್ಣು ಮಕ್ಕಳ ಅನುದಾನಿತ ವಸತಿ ನಿಲಯ
೩) ವಂಚಿತ ಮಕ್ಕಳ ಅನೌಪಚಾರಿಕ ಶಿಕ್ಷಣ ಕೇಂದ್ರ
೪) ಸಮಾಜಾಭಿವೃದ್ದಿ ಕ್ಷೇತ್ರ ಕಾರ್ಯಕ್ರಮ.
೫) ದತ್ತು ಕೇಂದ್ರ.
೬) ರಂಗಸ್ಫೂರ್ತಿ ಕೇಂದ್ರ.
೭) ಎಚ್.ಐ.ವಿ ಬಾಧಿತರಿಗೆ ಆಪ್ತ ಸಮಾಲೋಚನೆ ಸಲಹ ಕೇಂದ್ರ
೮) ಆಶ್ರಯ ಬಯಸಿ ಬರುವ ಮಹಿಳೆಯರಿಗಾಗಿ ಆಶ್ರಯ ಯೋಜನೆ.
೯) ಚಿಣ್ಣರ ಯಕ್ಷಗಾನ ಕೇಂದ್ರ
೧೦)ಹೊಲಿಗೆ ತರಬೇತಿ ಕೇಂದ್ರ

ಸ್ಫೂರ್ತಿಯಲ್ಲಿ ಒಟ್ಟು ವಾಸ್ತವ್ಯವಿದ್ದು ಶಿಕ್ಷಣ ಪಡೆಯುತ್ತಿರುವ ಮಕ್ಕಳು 125 ಈ ಪೈಕಿ ಕೇವಲ 81 ಮಕ್ಕಳಿಗೆ ಉಡುಪಿ ಜಿಲ್ಲಾ ಪಂಚಾಯತು ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯಿಂದ ತಲಾ ಮಾಸಿಕ 450/- ರೂ ಗಳಂತೆ ವಾರ್ಷಿಕ 1,87,000/- ರೂ ಮಾತ್ರ ಅನುದಾನ ನೀಡುತ್ತದೆ. ಉಳಿದ 84 ಮಕ್ಕಳ ನಿರ್ವಹಣೆಯನ್ನು ಜೊತೆಗೆ ಎಲ್ಲಾ ಕಾರ್ಯಕ್ರಮಗಳನ್ನು ದಾನಿಗಳ ನೆರವಿನಿಂದಲೇ ನಡೆಸಲಾಗುತ್ತಿಡೆ. ಈ ಕೆಲಸಗಳಿಗಾಗಿ ವಿದೇಶದಿಂದ ಅಥವಾ ಸರಕಾರದಿಂದ ಯಾವುದೇ ಅನುದಾನವಿಲ್ಲ. ಹಾಗಾಗಿ ಸಹೃದಯವಂತರಾದ ನೀವು ಈ ವ್ಯವಸ್ಥೆಗೆ ಸಹಕರಿಸುವ ಅವಶ್ಯವಿದೆ.

ಸ್ಫೂರ್ತಿಗೆ ನೀವು ಹೇಗೆ ಸಹಕರಿಸಬಹುದು? ಯೋಚಿಸಿ.

* ಬೆಳಗಿನ ಉಪಹಾರ                                              ೧೦೦೦/-
* ಮಧ್ಯಾಹ್ನದ ಊಟ                                                ೧೨೫೦/-
* ಸಂಜೆ ಉಪಹಾರ                                                   ೭೫೦/-
* ರಾತ್ರಿ ಊಟ                                                         ೧೨೫೦/-
* ಒಂದು ಮಗುವಿನ ತಿಂಗಳ ಊಟದ ಖರ್ಚು                    ೪೫೦/-
* ಒಂದು ಮಗುವಿನ ಸಂಪೂರ್ಣ ಖರ್ಚು                            ೯೦೦/-
* ಒಂದು ಹೊತ್ತಿನ ವಿಶೇಷ ಬೋಜನ                             ೫೦೦೦/-
* ಒಂದು ಮಗುವಿನ ವಾರ್ಷಿಕ ಊಟೋಪಹಾರ                 ೫೪೦೦/-
* ಒಂದು ಮಗುವಿನ ವಾರ್ಷಿಕ ಸಂಪೂರ್ಣ ನಿರ್ವಹಣೆ       ೧೦,೮೦೦/-
* ಆಶ್ರಮದ ಒಂದು ದಿನದ ಸಂಪೂರ್ಣ ವೆಚ್ಚ                       ೫೦೦೦/-

ವಿಶೇಷ ದಿನಗಳನ್ನು  ಆಶ್ರಮದ ಮಕ್ಕಳೊಂದಿಗೆ ಆಚರಿಸಿ.

 ಆಶ್ರಮದ ಮಕ್ಕಳ ಹುಟ್ಟಿದ ದಿನವನ್ನು
 ನಿಮ್ಮ ಮಕ್ಕಳ ಹುಟ್ಟಿದ ದಿನವನ್ನು ಈ ಮಕ್ಕಳೊಂದಿಗೆ
 ನಿಮ್ಮ ಹುಟ್ಟಿದ ದಿನವನ್ನು ಆಶ್ರಮದಲ್ಲಿ.
 ನಿಮ್ಮ ಮೆಚ್ಚಿದವರ ಗೆಳೆಯ/ಗೆಳತಿಯ ಹುಟ್ಟಿದ ದಿನ.
 ನಿಮ್ಮ ಹಿರಿಯರ ನೆನಪಿನ ದಿನವನ್ನು.
 ಮದುವೆಯ ದಿನವನ್ನು
 ಯಾವುದೇ ಹಬ್ಬ ಹರಿದಿನವನ್ನು
 ರಾಷ್ಟ್ರೀಯ ಹಬ್ಬವನ್ನು.

ಸ್ಫೂರ್ತಿಯ ಆಡಳಿತ ಮಂಡಳಿ:-

ಶ್ರೀಮತಿ ಮಾರ್ಗರೇಟ್ ಡಿ ಎಬ್ರಿಯೋ -    ಅಧ್ಯಕ್ಷರು
ಶ್ರೀ ನಿತ್ಯಾನಂದ ಎಸ್.ಎಚ್. -               ಉಪಾಧ್ಯಾಕ್ಷರು
ಶ್ರೀ ಕೇಶವ ಕೋಟೇಶ್ವರ -                    ಕಾರ್ಯದರ್ಶಿ
ಶ್ರೀಮತಿ ವಿಜಯಲಕ್ಷ್ಮಿ ಎಸ್.-           ಜೊತೆ ಕಾರ್ಯದರ್ಶಿ
ಶ್ರೀ ವೆಂಕಟೇಶ್ ಕಿಣಿ -                    ಕೋಶಾಧಿಕಾರಿಗಳು
ಶ್ರೀ ಟಿ. ರಾಮಣ್ಣ -                                 ನಿರ್ದೇಶಕರು
ಶ್ರೀ ಮಾಧವ ಕಾರಂತರು -                       ನಿರ್ದೇಶಕರು
ಶ್ರೀ ಪ್ರದೀಪ ವಾಜ್ -                               ನಿರ್ದೇಶಕರು
ಕು:ಜಯಮಾಲ -                                    ನಿರ್ದೇಶಕರು
ಶ್ರೀ ಟಿ.ಬಿ ಶೆಟ್ಟಿ  -                               ಕಾನೂನು ಸಲಹೆಗಾರರು
ಶ್ರೀಮತಿ ಮರ್ಲಿನ್ ಮಾರ್ಟಿಸ್  -           ಕಾನೂನು ಸಲಹೆಗಾರರು
ಶ್ರೀ ಪ್ರಭಾಕರ ಮಯ್ಯ-                     ಲೆಖ್ಖ ಪರಿಶೋಧಕರು

ವರ್ಷವಾರು ಸ್ಫೂರ್ತಿಯ ಖರ್ಚುವೆಚ್ಚ :

೧೯೯೨-೯೩ ರಿಂದ ೨೦೦೭-೦೮:

ಕ್ರ,ಸಂ ವರ್ಷ ದೇಣಿಗೆ ಸರಕಾರದ ವಿವಿಧ ಇಲಾಖೆಗಳಿಂದ ಬಂದ ಮೊತ್ತ ಒಟ್ಟು :
೧) ೧೯೯೨-೯೩         ೧೭,೫೦೭:೦೦ -----------           ೧೭,೫೦೭:೦೦ 
೨) ೧೯೯೩-೯೪         ೩೪,೩೬೯:೩೮-----------           ೩೪,೩೬೯:೩೮ 
೩) ೧೯೯೪-೯೫         ೫೪,೨೫೦:೯೦ -----------           ೫೪,೨೫೦:೯೦ 
೪)೧೯೯೫-೯೬     ೧,೩೭,೦೬೪:೪೦        ೧,೧೦,೦೪೫:೦೦    ,೪೭,೧೦೯:೪೦ 
೫) ೧೯೯೬-೯೭      ೩,೨೯,೪೫೪:೨೦       ೯೪,೪೩೯:೦೦        ೪,೨೩,೮೯೩:೨೦ 
೬) ೧೯೯೭-೯೮      ೩,೨೪,೨೯೮:೫೨    ೩,೨೫,೪೨೯:೦೦        ೬,೪೯,೭೨೭:೫೨ 
೭) ೧೯೯೮-೯೯      ೧,೮೫,೯೩೧:೯೦    ೫,೬೮,೧೨೩:೦೦        ೭,೫೪,೦೫೪:೯೦ 
೮) ೧೯೯೯-೦೦      ೨,೦೩,೪೯೬:೬೬    ೨,೬೭,೬೨೦:೦೦        ೪,೭೧,೧೧೬:೬೬ 
೯) ೨೦೦೦-೦೧     ೭,೦೫,೮೪೦:೨೫    ೩,೧೩,೬೭೪:೦೦      ೧೦,೧೯,೫೧೪:೨೫ 
೧೦) ೨೦೦೧-೦೨   ೯,೧೫,೦೪೮:೭೦    ೨,೩೫,೨೨೬:೦೦      ೧೧,೫೦,೨೭೪:೭೦ 
೧೧) ೨೦೦೨-೦೩   ೧೪,೭೬,೩೫೬:೦   ೩,೫೧,೪೮೮:೦೦      ೧೮,೨೭,೮೪೪:೦೧ 
೧೨) ೨೦೦೩-೦೪    ೯,೫೬,೨೫೪:೬೯  ೩,೪೯,೪೨೭;೦೦      ೧೩,೦೫,೬೮೧:೬೯ 
೧೩) ೨೦೦೪-೦೫    ೧೦,೭೫,೦೪೫:೬೦   ೬೩,೩೨೦:೦೦      ೧೧,೩೮,೩೬೫:೬೦ 
೧೪) ೨೦೦೫-೦೬:  ೧೮,೯೬,೭೧೦:೮೯  ೧,೪೧,೪೨೫:೦೦     ೨೦,೩೮,೧೩೫:೮೯ 
೧೫) ೨೦೦೬-೦೭    ೨೦,೧೧,೫೦೧:೪೬  ೩,೩೬,೪೯೭:೦೦    ೨೩,೪೭,೯೯೮:೪೬ 
೧೬) ೨೦೦೭-೦೮    ೨೬,೯೦,೧೭೮:೦೦   ೮೭,೨೧೭:೦೦      ೨೭,೭೭,೩೯೫:೦೦ 
  ೧,೩೨,೩೯,೩೪೦:೧೮    ೩೨,೪೩,೯೩೦:೦೦  ೧,೬೪,೮೩,೨೭೦:೧೮ 

೧೯೯೨ ರಿಂದ ೨೦೦೮ ಮಾರ್ಚ ತನಕದ ಒಟ್ಟು ಖರ್ಚು ಒಂದು ಕೋಟಿ ಅರವತ್ತಾ ನಾಲ್ಕು ಲಕ್ಷದ ಎಂಬತ್ತಮೂರು ಸಾವಿರದ ಇನ್ನೂರ ಎಪ್ಪತ್ತು.

ಇದರಲ್ಲಿ ಸರಕಾರದ ಪಾಲು ಮೂವತ್ತೆರಡು ಲಕ್ಷದ ನಲವತ್ತಾಮೂರು ಸಾವಿರದ ಒಂಬೈನೂರ ಮೂವತ್ತು. ಅಂದರೆ ಒಂದು ಕೋಟಿ ಮೂವತ್ತೇರಡು ಲಕ್ಷಕ್ಕೂ ಮಿಕ್ಕಿದ ಮೊತ್ತವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ. ಒಂದು ಸ್ವಯಂ ಸೇವಾ ಸಂಸ್ಥೆಗೆ ಇಷ್ಟೊಂದು ಬೃಹತ್ ಮೊತ್ತ ದೇಣಿಗೆ ರೂಪದಲ್ಲಿ ಸಂಗ್ರಹವಾಗಬೇಕಿದ್ದರೆ ಈ ಕೆಲಸದ ಶ್ರೇಷ್ಠತೆಯೇ ಕಾರಣವಲ್ಲವೇ?

* ನಿಮ್ಮಲ್ಲಿ ನಡೆಯುವ ವಿಶೇಷ ದಿನಗಳಂದು ಆಶ್ರಮದ ಮಕ್ಕಳಿಂದ  ಮನೋರಂಜನೆ, ಯಕ್ಷಗಾನ ನಾಟಕ ಕಾರ್ಯಕ್ರಮ ನಡೆಸಬಹುದು.

ಈ ಯೋಜನೆಗೆ 90 ಲಕ್ಷ ಬೇಕು.

ಸ್ಫೂರ್ತಿಯ ಮಹತ್ವಕಾಂಕ್ಷಿ ಯೋಜನೆ ಸುಸಜ್ಜಿತವಾದ ಹಿರಿಯರ ಮನೆ(ವೃದ್ದಾಶ್ರಮ) ಯೋಜನೆಯಲ್ಲಿ 60 ಮಂದಿ ಹಿರಿಯ ನಾಗರೀಕರಿಗೆ ತಮ್ಮ ವೃದ್ದಾಪ್ಯವನ್ನು ಕಳೆಯಲು ಅವಕಾಶ ಕಲ್ಪಿಸಲಾಗಿದೆ. ಆ ಪೈಕಿ ೩೦ ಜನ ಕಡು ಬಡವರಿಗೆ ಉಚಿತ ಪ್ರವೇಶವಾದರೆ 30 ಜನ ಹಣವಂತರಿಗೆ ಆಶ್ರಯ ನೀಡಲಾಗುತ್ತದೆ. ಸುಮಾರು

೧೩೫೦೦ ಸ್ವಾರ್ ಅಡಿ ವಿಸ್ತೀರ್ಣದ ಕಟ್ಟಡಕ್ಕೆ ೯೦ ಲಕ್ಷ ರೂಗಳ ಪ್ರಸ್ತಾವನೆ ತಯಾರಿಸಲಾಗಿದೆ. ಆರ್ಥಿಕ ಬಲವೇ ಇಲ್ಲದೆ ಹೇಗೆ ಇಷ್ಟೊಂದು ಬೃಹತ್ ಮೊತ್ತ ಕಲೆಹಾಕುತ್ತೀರಿ ಎಂದು ಕೇಳಿದರೆ ನೀವು ೯೦ ಲಕ್ಷ ಬೃಹತ್ ಮೊತ್ತದ ಬಗ್ಗೆ ಯೋಚನೆ ಮಾಡಬೇಡಿ. ಒಟ್ಟು ಕಟ್ಟಡ ೧೩,೫೦೦ ಚದರ ಅಡಿ ವಿಸ್ತೀರ್ಣವಿದೆ. ಒಂದು ಚದರ ಅಡಿ ಕಟ್ಟಡಕ್ಕೆ ತಗುಲುವ ವೆಚ್ಚ ೧೦೦೦/- ರೂ. ಈ ಯೋಜನೆಗಾಗಿ ದಾನ ಮಾಡಿ ಕಟ್ಟಡ ತಾನಾಗಿಯೇ ಆಗುತ್ತದೆ. ಹನಿಹನಿ ಕೂಡಿದರೆ ಹಳ್ಳ ಎನ್ನುತ್ತಾ ಮುಗುಳು ನಗುತ್ತಾರೆ ಸಂಸ್ಥೆಯ ನಿರ್ವಾಹಕ ಕೇಶವ ಕೋಟೆಶ್ವರ.

ವೃದ್ದಾಶ್ರಮಕ್ಕೆ ನೀವು ಹೀಗೆ ಸಹಕರಿಸಬಹುದು

ಒಂದು ಸ್ಕ್ವಾರ್ ಅಡಿ ಕಟ್ಟಡಕ್ಕೆ                       ೧೦೦೦/-
ಒಂದು ಸ್ಕ್ವಾರ್ ಮೀಟರ್ ಕಟ್ಟಡಕ್ಕೆ                 ೧೦,೦೦೦/-
ಒಂದು ಜನರಲ್ ಬೆಡ್                                 ೩೦,೦೦೦/-
ಒಂದು ಸ್ಪೇಷಲ್ ರೂಂ                               ೧,೫೦,೦೦೦/-
ಅಡುಗೆ ಮನೆ                                           ೫,೦೦,೦೦೦/-
ಪ್ರಾರ್ಥನಾ ಮಂದಿರ                                ೧೦,೦೦,೦೦೦/-
ಮೊದಲ ಅಂತಸ್ತು                                   ೪೦,೦೦,೦೦೦/-
ನೆಲ ಅಂತಸ್ತು                                        ೫೦,೦೦,೦೦೦/-

ದಾನಿಗಳ ಹೆಸರನ್ನು ಅಮೃತ ಶಿಲೆಯಲ್ಲಿ ಕೆತ್ತಲಾಗುವುದು.

ಸ್ಫೂರ್ತಿಯನ್ನು ಅವರಿವರು ಕಂಡಂತೆ.

ಪೂಜ್ಯ ಡಾ:ಡಿ.ವಿರೇಂದ್ರ ಹೆಗ್ಗಡೆ :- ದಿನಾಂಕ ೦೭:೦೧:೨೦೦೬ ಸ್ಫೂರ್ತಿ ಕೇಂದ್ರದಲ್ಲಿ ನಡೆಯುತ್ತಿರುವ ಈ ಸೇವಾ ಕಾರ್ಯವು ಅಭಿನಂದನೀಯ. ಸಮಾಜದಲ್ಲಿ ಉಪೇಕ್ಷಿತ ವರ್ಗಗಳಿಗೆ ದ್ವನಿ ಕೊಡುವುದು ಅನುಕರಣೀಯ, ಶ್ರೀ ಮಂಜುನಾಥ ಸ್ವಾಮಿ ಇಲ್ಲಿರುವ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಕರುಣಿಸಲಿ.

ಶ್ರೀ ವೆಂಕಟಾಚಲ ಮಾಜಿ ಲೋಕಯುಕ್ತರು:- ದಿನಾಂಕ: ೧೧:೧೦:೨೦೦೬ ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಫೂರ್ತಿಯಂತಹ ಸಂಸ್ಥೆಯು ನಮ್ಮ ದೇಶಕ್ಕೆ ಅತ್ಯಗತ್ಯವಾಗಿದೆ. ನಮ್ಮ ದೇಶದಲ್ಲಿರುವ ಬಡವರು ಮತ್ತು  ಅಸಹಾಯಕ ಮಕ್ಕಳ ಅಭಿವೃದ್ದಿಗಾಗಿ ಶ್ರೀ ಕೇಶವ ಕೋಟೇಶ್ವರರಂತಹ ಸಾಮಾಜಿಕ ಕಾರ್ಯಕರ್ತರ ಅಗತ್ಯ ನಮಗಿದೆ. ಈ ಸಂಸ್ಥೆಯಲ್ಲಿ ಮಕ್ಕಳಿಗೆ ಸಿಗುವ ಪ್ರೋತ್ಸಹವು ಅವರನ್ನು ನಮ್ಮ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಹಾಗೂ ಇತರರ ಕಷ್ಟದಲ್ಲಿ ನೆರವಾಗುವಲ್ಲಿ ಪ್ರೇರೆಪಿಸುತ್ತದೆ. ಎನ್ನುವ ವಿಶ್ವಾಸ ನನಗಿದೆ. ಶ್ರೀ ದೇವರು ಈ ಸಂಸ್ಥೆಯನ್ನು, ಸ್ಥಾಪಕರನ್ನು ಹಾಗೂ ಸಂಬಂಧ ಪಟ್ಟ ಎಲ್ಲರನ್ನು ಆಶೀರ್ವದಿಸಲಿ.

ಶ್ರೀ ಅನಂತ ಕುಮಾರ್, ಕೇಂದ್ರ ನಗರಾಭಿವೃದ್ದಿ ಸಚಿವರು :-ದಿನಾಂಕ:೧೬:೦೧:೨೦೦೩ ಕಣ್ತೆರೆಸಿದ ಭೇಟಿ , ಸ್ಫೂರ್ತಿ ಕೊರಗ ಮಕ್ಕಳ ಶಾಲೆ. 

ಶ್ರೀ ಬಿ.ಎಸ್. ಎಡಿಯೂರಪ್ಪ, ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ:-ದಿನಾಂಕ:೦೨:೦೪:೨೦೦೮ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತಹ ಕೆಲಸ ಈ ಸಂಸ್ಥೆ ಮಾಡುತ್ತಿದೆ. ಸರಕಾರಿಂದ ದಾನಿಗಳಿಂದ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುವ ಅಗತ್ಯವಿದೆ.

ಶ್ರೀ ಎ.ಜಿ ಕೊಡ್ಗಿಯವರು, ಅಧ್ಯಕ್ಷರು ಮೂರನೆ ಹಣಕಾಸು ಅಯೋಗ :-ದಿನಾಂಕ:೨೭:೦೭:೧೯೯೪ ಕೆದೂರಿನ ಸ್ಫೂರ್ತಿಧಾಮಕ್ಕೆ ಶ್ರೀ ವಿ.ವಿ ಐತಾಳರೊಂದಿಗೆ ಬೇಟಿ ಕೊಡುವ ಸದಾವಕಾಶ ಒದಗಿ ಬಂದಿತು. ಸ್ಫೂರ್ತಿ ಸಂಸ್ಥೆಯವರು ನಡೆಸುತ್ತಿರುವ ಅನೌಪಚಾರಿಕ ಶಿಕ್ಷಣ ಪದ್ದತ್ತಿಯ ಪರಿಚಯವಾಯಿತು. ವಂಚಿತ ಮಕ್ಕಳು ವಿದ್ಯಾಭ್ಯಾಸ ಮಾಡುವುದನ್ನು ಕಂಡು ತುಂಬಾ ಸಂತೋಷವಾಯಿತು. ಕಡೆಗಣಿಸಲ್ಪಟ್ಟ ಕೊರಗ ಸಮಾಜಕ್ಕೆ ಸರಕಾರದಿಂದ ಒದಗುವ ಎಲ್ಲಾ ರೀತಿಯ ಸೌಲಭ್ಯಗಳು ಸಕಾಲದಲ್ಲಿ ಸಂಪೂರ್ಣ ಒದಗುವಂತೆ ಮಾಡುವುದು ತೀರ ಅಗತ್ಯ. ಸ್ಫೂರ್ತಿ ಸಂಸ್ಥೆ ಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ದುಡಿಯುವ ಶಕ್ತಿ ಬರಲೆಂದು ಹಾರೈಸುತ್ತಾ, ಎಲ್ಲಾ ರೀತಿಯ ಸಹಾಯ ಒದಗಿಸುವುದಾಗಿ ಭರವಸೆ ನೀಡುತ್ತೇನೆ.

ಶ್ರೀಜಯಪ್ರಕಾಶ ಹೆಗ್ಗಡೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು:-ದಿನಾಂಕ:೨೪:೧೧:೧೯೯೫ ಈ ದಿವಸ ಇಲ್ಲಿಯ ಮಕ್ಕಳೊಡನೆ ಸ್ವಲ್ಪ ಸಮಯವನ್ನು ಕಳೆಯಲು ಬಹಳ ಸಂತೋಷವಾಯಿತು ಇಲ್ಲಿ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ನೋಡಿಕೊಂಡು ವಿದ್ಯಯನ್ನು ಕೊಟ್ಟು ಅವರ ಬಾಳಿಗೆ ಬೆಳಕನ್ನು ತರುವ ಆಶಾಕಿರಣವನ್ನು ಗಣೇಶ್ ಮತ್ತು ಬಳಗದವರು ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರಿಗೆ ಹಾಗೂ ಇಲ್ಲಿರುವ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕರುಣಿಸಲಿ ಭಗವಂತನಲ್ಲಿ ಹಾರೈಸುತ್ತಾ ಇನ್ನು ಮುಂದೆ  ಸರಕಾರದಿಂದ ಸಿಕ್ಕುವ ಸೌಲಭ್ಯಗಳನ್ನು ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ ಎಂದು  ಅಶ್ವಾಸನೆಯನ್ನು ಕೊಡುತ್ತೇನೆ.
ಶ್ರೀ‌ಅನಂತ ಮೊವಾಡಿ ಅಧ್ಯಕ್ಷರು ತಾಲೂಕು ಪಂಚಾಯತ್ ಕುಂದಾಪುರ:- ದಿನಾಂಕ:   
  ೦೩:೦೯:೧೯೯೭ ಸ್ಫೂರ್ತಿ ಸಂಸ್ಥೆಗೆ  ಬೇಟಿ ನೀಡಿದ ಬಡ ಕೊರಗ ಮಕ್ಕಳಿಗೆ ಸ್ಫೂರ್ತಿಯವರು ನಡೆಸುವ ವಿದ್ಯೆ   ಮತ್ತು ಅವರ ಅಭಿವೃದ್ದಿಗೆ ಶ್ರಮಿಸುವುದು ತುಂಬಾ ಶ್ಲಾಘನೀಯ. ಪ್ರಗತಿಯನ್ನು ಮುಂದುವರಿಸಿ ಸಮಾಜಕ್ಕೆ   ಮಾದರಿ ಎಂಬುದನ್ನು ಒಪ್ಪಿದೆ.

ಡಾ: ಸುಬ್ರಹ್ಮಣ್ಯೇಶ್ವರ ರಾವ್ ಐ.ಪಿ.ಎಸ್. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಡುಪಿ :  
  ದಿನಾಂಕ: ೧೧:೦೨:೨೦೦೭ ಸ್ಫೂರ್ತಿ ಸಂಸ್ಥೆ ವತಿಯಿಂದ ಆಯೋಜಿಸಲ್ಪಟ್ಟ ಯಕ್ಷಗಾನ ತರಬೇತಿ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದಕ್ಕೆ   ಅತೀವ ಸಂತೊಷವಾಗುತ್ತದೆ. ಇದು ನಮ್ಮ ಸುಯೋಗ ಎಂದು ಭಾವಿಸಿದ್ದೇನೆ. ದೇಶದ ಸಂಸ್ಕ್ರತಿಯನ್ನು  ಎತ್ತಿಹಿಡಿಯಲು ಪ್ರಯತ್ನಿಸುತ್ತಿರುವ ಸ್ಫೂರ್ತಿ ಸಂಸ್ಥೆಗೆ ಹಾರ್ದಿಕ ಶುಭಾಶಯಗಳು. 

ಶ್ರೀ ವಿ ಪೊನ್ನುರಾಜ್ ಐ.ಎ.ಎಸ್. ಜಿಲ್ಲಾಧಿಕಾರಿಗಳು ಉಡುಪಿ:-ದಿನಾಂಕ: ೦೬:೧೦:೦೬ ಸ್ಫೂರ್ತಿ ಸಂಸ್ಥೆಯು ಶ್ರೇಷ್ಠವಾದ ಉದ್ದೇಶವನ್ನು ಹೊಂದಿದೆ. ಇಲ್ಲಿರುವ ಪ್ರತಿಯೊಬ್ಬರಿಗೂ ಈ ಅರ್ಥಪೂರ್ಣ ಕೆಲಸದಲ್ಲಿ ಯಶಸ್ಸು ಲಭಿಸಲಿ ಎಂದು ಹಾರೈಸುತ್ತೇನೆ. ಸಂಸ್ಥೆಯು ಇಲ್ಲಿನ ಮಕ್ಕಳ ಶಿಕ್ಷಣದ ಗುಣ ಮಟ್ಟವನ್ನು ಅಭಿವೃದ್ದಿ ಪಡಿಸುವಲ್ಲಿ ಸ್ವಲ್ಪ ಹೆಚ್ಚಿನ ಗಮನ ಹರಿಸುವುದು ಅಗತ್ಯ ಎನ್ನುವುದು ನನ್ನ ಅನಿಸಿಕೆ. ಶ್ರೀ ಕೇಶವ ಕೋಟೇಶ್ವರ ಹಾಗೂ ಸ್ಫೂರ್ತಿ ಕುಟುಂಬಕ್ಕೆ   ನನ್ನ ಶುಭ ಹಾರೈಕೆಗಳು

ಶ್ರೀ ಕೆ.ಎನ್. ಪಣೀಂದ್ರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಉಡುಪಿ:- ದಿನಾಂಕ ೧೭:೧೧:೨೦೦೬ ಸ್ಫೂರ್ತಿ ಸಂಸ್ಥೆ ಒಂದು ಬೃಹತ್ ಚೇತನ. ಚಿಣ್ಣರ ಕನಸುಗಳನ್ನು ನನಸ್ಸಾಗಿಸಲು ಮಕ್ಕಳನ್ನು ಭವ್ಯ ಭಾರತದ ಸತ್ಪ್ರಜೆಗಳನ್ನಾಗಿಸಲು ಶ್ರಮಿಸುವ ಸಂಸ್ಥೆ ಅವರ ಆಶೋತ್ತರಗಳು ಫಲಿಸಲಿ ಎಂದು ಹಾರೆಸುತ್ತೇನೆ.

ಶ್ರೀ ಕರಣಾಕರ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ ಬೇಳೂರು:- ಮಹಾತ್ಮ ಗಾಂಧಿಯವರ ಕನಸು ನನಸಾಗುವಲ್ಲಿ ಸ್ಫೂರ್ತಿ ಸಂಸ್ಥೆಯವರ ಸೇವೆ ಗುರುತ್ತಿಸಲ್ಪಡಲಿ. ಅಂತಯೇ ಕೊರಗ ಜನಾಂಗವು ಇತರ ಜನಾಂಗದವರೊಂದಿಗೆ ಬಾಳಿ ಬದುಕುವಂತಾಗಲಿ. ಈ ಜನಾಂಗದಲ್ಲಿ ಹುಟ್ಟಿದ ಮಗು ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬರಿಗೂ ಸಿಗುವ ಸವಲತ್ತನ್ನು ಪಡೆಯುವಂತಾಗಲಿ ಈ ನಿಟ್ಟಿನಲ್ಲಿ ಸ್ಫೂರ್ತಿ ಸಂಸ್ಥೆಗೆ ಶ್ರೀ ದೇವರು ಅನುಗ್ರಹಿಸಲಿ ಎಂದು ಹರಸಿ ನಮ್ಮೆಲ್ಲಾ ಸಹಕಾರವನ್ನು ನೀಡುವ ಭರವಸೆಯೊಂದಿಗೆ.

ಶ್ರಿ ಸದಾನಂದ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕೆದೂರು:- ದಿನಾಂಕ:೧೨:೧೦:೧೯೯೫ ಒಂದು ಅನೌಪಚಾರಿಕ ಸಂಸ್ಥೆ ಸಮಾಜದಲ್ಲಿ ಅತೀ ಹಿಂದುಳಿದ ಜನಾಂಗವಾದ ಕೊರಗ ಜನಾಂಗದವರನ್ನು ವಿದ್ಯಾವಂತರನ್ನಾಗಿ ಮಾಡುವ ಕಾರ್ಯ ನಿಜವಾಗಿಯೂ ಆಶ್ಚರ್ಯ ಹಾಗೂ ಸಂತೋಷ ತಂದಿದೆ.

ಕೇಶವ ಕೋಟೇಶ್ವರ ವ್ಯಕ್ತಿ ಪರಿಚಯ

ವಯಸ್ಸು 43. ೧೯೬೫ನೇ ಇಸವಿ ಜೂನ್ ೧ ರಂದು ಕೋಟೇಶ್ವರದ ಸಂಜೀವಯ್ಯ ಮತ್ತು ಲಕ್ಷ್ಮಿ ದಂಪತಿಗಳ ಆರು ಮಕ್ಕಳಲ್ಲಿ ಮೂರನೇ ಮಗನಾಗಿ ಜನನ. ಕುಟುಂಬದ ಕಡು ಬಡತನ ಓದಿಗೆ ಸಹಕರಿಸಲಿಲ್ಲ. ಕೈಯಲ್ಲೊಂದು ಡಿಗ್ರಿ ಸಂಪಾದಿಸಲು ಸಾಧ್ಯವಾಗದ ಕೇಶವ ಕೋಟೇಶ್ವರರು ತನಗೆ ಏನನ್ನು ಸಾಧಿಸಲು ಸಾಧ್ಯವಾಗಿಲ್ಲ ಅದನ್ನು ಸಮಾಜದ ವಂಚಿತ ಮಕ್ಕಳಿಗೆ ಸಾಧಿಸಲು ಅವಕಾಶ ನೀಡಿದ ಅಪರೂಪದ ಸಾಧಕ.

೧೯೯೭ ರಲ್ಲಿ ಕ್ರಿಶ್ಚಿಯನ್ ಸಮೂದಾಯದ ಎಂ.ಎಸ್.ಡಬ್ಲ್ಯೂ ಪಧವೀಧರೆ ಪ್ರಮೀಳಾ ಜೆ.ವಾಜ್‌ರನ್ನು ಮದುವೆಯಾದ ಕೋಟೇಶ್ವರರಿಗೆ ೭ನೇ ತರಗತಿ ಓದುತ್ತಿರುವ ಪ್ರೀತಿ ಎನ್ನುವ ಮಗಳಿದ್ದಾಳೆ. ಚಿಕ್ಕ ಸಂಸಾರ ಸುಖಕ್ಕೆ ಆಧಾರ ಎನ್ನುವಂತೆ ಪ್ರೀತಿಸಿ ಮದುವೆಯಾದ ಹೆಂಡತಿ ಮಗಳೊಂದಿಗೆ ಕೇಶವರದ್ದು ಆದರ್ಶ ಬದುಕು.

ಉತ್ತಮ ವಾಗ್ಮಿ, ಭಾಷಣಕ್ಕೆ ನಿಂತರೆ ಮೀರಿಸುವವರಿಲ್ಲದಂತೆ ಮಾತಿ ಗಿಳಿಯುತ್ತಾರೆ. ಒಳ್ಳೆಯ ಓದುಗ ಬಿಡುವಿನ ಸಮಯದಲ್ಲಿ ಓದುವುದು ಕೇಶವರ ಹವ್ಯಾಸ. ಸಮಾಜ ಶಾಸ್ತ್ರಕ್ಕೆ ಸಂಬಂಧಿಸಿದ ಹಾಗೂ ಕಾನೂನು ಪುಸ್ತಕಗಳೆಂದರೆ ಅಚ್ಚು-ಮೆಚ್ಚು. ಪ್ರಕರ ಜ್ಞಾನಿ, ಕುಂದಾಪುರ ತಾಲೂಕಿನ ಮೂಲೆ, ಮೂಲೆಯ ಜನ ಎಷ್ಟೊ ಸಮಸ್ಯೆಗಳನ್ನು ಇವರಲ್ಲಿ ತರುತ್ತಾರೆ. ಸೂಕ್ತ ಸಲಹೆ ಸೂಚನೆ ನೀಡಿ ಸಮಸ್ಯೆ ಪರಿಹಾರ ಮಾರ್ಗ ಸೂಚಿಸುವ ಮಾರ್ಗದರ್ಶಿ, ಒಳ್ಳೆಯ ತರಬೇತುದಾರ, ಭಾಷಣಕಲೆ, ಪರಿಣಾಮಕಾರಿ ನಾಯಕತ್ವ, ಸಂವಹನ ಕಲೆ, ಭಾವೈಕ್ಯತೆಯಂತಹ ವಿಷಯಗಳ ಮೇಲೆ ದಿನವಿಡಿ ಮಾತನಾಡಬಲ್ಲ ಸಮರ್ಥ ಸಂಪನ್ಮೂಲ ವ್ಯಕ್ತಿ

ಶವದಾನ ಪತ್ರ :- ೪೩ ರ ಹರೆಯದ ಕೇಶವ ಕೋಟೇಶ್ವರ ೧೯೯೯ರಲ್ಲೇ ತನ್ನ ಶವವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ. 

ದಿನಚರಿ

ಪ್ರತಿದಿನ ಬೆಳಿಗ್ಗೆ ೪ ಘಂಟೆ ಎಚ್ಚರ, ೪:೩೦ ಆಫೀಸಿಗೆ ಆಗಮನ ೫:೪೫ರ ತನಕ ಬರಹ. ೫:೪೫ ಆಶ್ರಮದ ಮಕ್ಕಳೊಂದಿಗೆ ಪ್ರಾರ್ಥನೆ, ೬ಕ್ಕೆ ಮಕ್ಕಳೊಂದಿಗೆ ಚಾ, ೭:೩೦ರ ತನಕ ಓದು-ಬರಹ, ೮ಕ್ಕೆ ಉಪಹಾರ, ೮:೩೦ ರಿಂದ ಮಧ್ಯಾಹ್ನ ೧:೩೦ ಹೊರಗಿನ ಕೆಲಸಗಳು, ೧:೩೦ ರಿಂದ ೩:೩೦ ವಿಶ್ರಾಂತಿ, ೩:೩೦ ರಿಂದ ೫:೦೦ ಸಾರ್ವಜನಿಕ ಭೇಟಿ ಇತರ ಕಾರ್ಯಗಳು, ೬ ತನಕ ಮಕ್ಕಳೊಂದಿಗೆ ಆಟ, ೮:೦೦ ರ ತನಕ ಓದು ಬರಹ, ಕಛೇರಿ ಕೆಲಸ, ೮:೩೦ಕ್ಕೆ ರಾತ್ರಿ ಊಟ, ರಾತ್ರಿ ೯ಕ್ಕೆ ವಿಶ್ರಾಂತಿ,

ಕೆದೂರು ಯುವಕ ಮಂಡಲದ ವ್ಯವಸ್ಥಿತ ಪಿತೂರಿ

ನೀವು ಯಾವ ಕೋನದಿಂದ ಪ್ರಯತ್ನಿಸಿದರೂ ಸ್ಫೂರ್ತಿಯ ಬಗ್ಗೆ ಒಂದಿನಿತೂ ಸಂಶಯ ಸಾಧ್ಯವಿಲ್ಲ. ಸಂಸ್ಥೆಗೆ ಭೇಟಿ ನೀಡಿದ ಎಲ್ಲರೂ ಅಲ್ಲಿಯ ಕೆಲಸಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುವವರೇ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಿಂದ ಹಿಡಿದು  ರಾಜ್ಯ, ರಾಷ್ಟ್ರ ಮಟ್ಟದ ಘಟಾನುಘಟಿ  ರಾಜಕಾಣಿಗಳೆಲ್ಲರೂ ಸ್ಫೂರ್ತಿಧಾಮವನ್ನು ಸಂದರ್ಶಿಸಿದ್ದಾರೆ. ಕೇಂದ್ರ ಸರಕಾರದಲ್ಲಿ ಬಡತನ ನಿರ್ಮೂಲನೆ ಸಚಿವರಾಗಿದ್ದ ಶ್ರೀ ಅನಂತ ಕುಮಾರರಂತಹ ಮಂತ್ರಿಗಳು ಸ್ಫೂರ್ತಿಗೆ ಬಂದು ಇಲ್ಲಿಯ ಕೆಲಸ ಕಂಡು ಸಂತೋಷದಿಂದ 10 ಲಕ್ಷ ರೂ ನೀಡಿ ಹೋದದ್ದು ಈಗ ಇತಿಹಾಸ.

ಇಂತದ್ದರಲ್ಲಿ ಈ ಸ್ಫೂರ್ತಿಯ ಬಗ್ಗೆ ಸ್ಥಳೀಯ ನಾಲ್ಕಾರು ಮಂದಿ ಯುವಕರ ಗುಂಪೊಂದು ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಲೇ ಬರುತ್ತಿದೆ.

ಸ್ಫೂರ್ತಿ ತಾನಾಯಿತು ತನ್ನ ಕೆಲಸವಾಯಿತೆಂದು ಸಂಪೂರ್ಣ ಎಲೆಮರೆಯ  ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿತ್ತು ೧೯೯೩ ರಲ್ಲಿ ಈ ಸಂಸ್ಥೆ ಪ್ರಾರಂಭವಾದರೂ ೨೦೦೦ರ ತನಕ ಇದರ ಬಗ್ಗೆ ಅಷ್ಟೊಂದು ಪ್ರಚಾರವಿರಲಿಲ್ಲ. ೨೦೦೦-೨೦೦೧ರ ಸುಮಾರಿಗೆ ಏಕಾ‌ಏಕಿ ಸ್ಫೂರ್ತಿಧಾಮದಲ್ಲಿ ಅವ್ಯವಹಾರವಾಗುತ್ತಿದೆ ಮತಾಂತರ ನಡೆಯುತ್ತಿದೆ, ಸ್ವಂತಕ್ಕಾಗಿ ಆಸ್ತಿ ಮಾಡುತ್ತಿದ್ದಾರೆ ಕೊರಗರ ಹೆಸರಿನಲ್ಲಿ ಉಂಡೇಳು ತ್ತಿದ್ದಾರೆ ಎಂದು ಗುಲ್ಲೆಬ್ಬಿಸಲಾಯಿತು. ಉಡುಪಿ ಜಿಲ್ಲಾ ಪಂಚಾಯತು ಸ್ಫೂರ್ತಿಯ ವಿರುದ್ದ ತಿರುಗಿ ಬಿದ್ದಿತ್ತು. ಸಾಕಷ್ಟು ತನಿಖೆಗಳು ನಡೆದವು. ಮಾನ್ಯತೆ ರದ್ದತಿಯಂತಹ ನಿರ್ಣಯಗಳು ಜಿಲ್ಲಾ ಪಂಚಾಯತ್‌ನಿಂದ ಕೈಗೊಳ್ಳಲಾಯಿತು. ಕೇಶವ ಕೋಟೇಶ್ವರರಿಗೆ ಜೀವ ಬೆದರಿಕೆಗಳು ಬಂದವು. ಯಾರು ಏನೇ ಮಾಡಿದರೂ ಎಷ್ಟೇ ಪ್ರಭಲವಾದ ಒತ್ತಡ ಹೇರಿದರೂ ಜಪ್ಪಯ್ಯ ಎನ್ನದ ಸ್ಫೂರ್ತಿ ಸಂಸ್ಥೆ ಸೇವೆಯೊಂದಿಗೆ ಹೋರಾಟವನ್ನು ತನ್ನ ಅಸ್ತ್ರವಾಗಿಸಿಕೊಂಡಿತು. ವಿರೋಧಿಗಳ ಎದೆ ಝಲ್ ಎನಿಸುವಂತೆ ತನ್ನ ಕೆಲಸದಲ್ಲಿ ಎಕಾಗ್ರತೆ ವಹಿಸಿತು. ಅಂದಿನಿಂದ ಇಂದಿನ ತನಕ ಕೆದೂರು ಯುವಕ ಮಂಡಲದ ಹೆಸರಿನಲ್ಲಿ ನಾಲ್ಕಾರು ಮಂದಿ ಯುವಕರು ಯಾವುದೇ ಮಸಲತ್ತು ಮಾಡಿದರೂ ಸ್ಫೂರ್ತಿಯನ್ನು ಏನೂ ಮಾಡಲಾಗಿಲ್ಲ. ಆ ಯುವಕರು ಬರೆಯುವ ಪ್ರತಿ ಪತ್ರವು ಹೂಡುವ ಪ್ರತಿ ದಾವೆಯೂ ಸ್ಫೂರ್ತಿಗೆ ಪುಕ್ಕಟೆ ಪ್ರಚಾರ ದೊರಕಿಸಿಕೊಟ್ಟಿತು. ಎನೋ ಮಾಡಲು ಹೋಗಿ ಏನೋ ಮಾಡಿದಂತೆ ತಮ್ಮೆಲ್ಲ ಕೆಲಸ ಕಾರ್ಯ ಬಿಟ್ಟು ಸ್ಫೂರ್ತಿಯ ಹಿಂದೆ ಅಲೆಯುವ ಯುವಕರಿಂದಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಫೂರ್ತಿ ಸಂಸ್ಥೆ ಗುರುತಿಸಿಕೊಂಡಿದೆ.  ವಿದೇಶಿ ಪ್ರತಿನಿಧಿಗಳು ಇಲ್ಲಿಗೆ ಕಲಿಯಲು ಬರುತ್ತಾರೆ. ರಾಜ್ಯದ ಸಮಾಜ ಶಾಸ್ತ್ರ ಅಧ್ಯಯನ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಅನುಭವ ಪಡೆಯಲು ಬರುತ್ತಾರೆ. ಒಟ್ಟಾರೆ ಈ ಸಂಸ್ಥೆ ರಾಜ್ಯಕ್ಕೆ ಮಾದರಿಯಾತ್ತಿದೆ. ಇಷ್ಟೆತ್ತರಕ್ಕೆ ಬೆಳೆಯಲು ಯುವಕ ಮಂಡಲದ ವಿರೋಧವೇ ಕಾರಣ. ವಿರೋಧಿಗಳೆ ಇಲ್ಲಾದಿದ್ದರೆ ನಮಗೆ ಇಷ್ಟೊಂದು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೇಶವ ಕೋಟೇಶ್ವರ ಸೌಮ್ಯವಾಗಿ ನುಡಿಯುತ್ತಾರೆ.

ಸಹಕರಿಸುವವರು ಈ ವಿಳಾಸವನ್ನು ಸಂಪರ್ಕಿಸಿ :-

 ಕೇಶವ ಕೋಟೇಶ್ವರ, ಮುಖ್ಯ ಕಾರ್ಯನಿರ್ವಾಹಕರು ಸ್ಫೂರ್ತಿಧಾಮ, ಬೇಳೂರು, ಕೆದೂರು ಅಂಚೆ, ೫೭೬೨೩೧, ಕುಂದಾಪುರ, ಉಡುಪಿ ಜಿಲ್ಲೆ, ಕರ್ನಾಟಕ, ಭಾರತ

ಬ್ಯಾಂಕ್ ಖಾತೆ ಸಂಖ್ಯೆ:-೧೦೪೪೪ ಕೆನರಾ ಬ್ಯಾಂಕ್ ತೆಕ್ಕಟ್ಟೆ, 
   ೦೨೨೧೨೨೦೦೦೧೭೦೫೦ ಸಿಂಡಿಕೇಟ್ ಬ್ಯಾಂಕ್ ವಡೇರ್ ಹೋಬಳಿ ಕುಂದಾಪುರ,
  ೦೧೪೯೨೨೦೦೦೩೧೬೭೯ ಸಿಂಡಿಕೇಟ್ ಬ್ಯಾಂಕ್ ಕೋಟೇಶ್ವರ( ವಿದೇಶಿ ವ್ಯವಹಾರಕ್ಕಾಗಿ)

ದೂರವಾಣಿ: ಕಛೇರಿ-೨೫೦೭೯೫೮* ೨೦೦೧೭೫೪(೦೮೨೦),ಮೊ: ೯೪೪೮೯೮೪೧೧೯* ೯೪೪೯೧೭೦೧೨೭

 e-mail:  spoorthirdats@rediffmail.com

*desmargarete@satyama.net.in

Website:  wwwspoorthi.org

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕೇಶವ ಕೋಟೇಶ್ವರ, ಸ್ಫೂರ್ತಿಧಾಮ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-03


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»2008 ನಲ್ಲಿ ಕಾಲ್ತುಳಿತಕ್ಕೆ 360 ಕ್ಕೂ ಹೆಚ್ಚು ಬಲಿ , ಬಾಂಬ್ ಸ್ಪೋಟಕ್ಕೆ 156
»ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..??
»The dilemma of an educated Muslim youth
»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»