ದೋಹಾ: ಈದ್ ವಿಹಾರಕೂಟ ಆಚರಿಸಿದ ತುಳು ಕೂಟ ಕತರ್ |
ಪ್ರಕಟಿಸಿದ ದಿನಾಂಕ : 2008-10-03
(ಒಟ್ಟು 112 ಚಿತ್ರಗಳಿವೆ.ಚಿತ್ರ, ವರದಿ: ಇಕ್ಬಾಲ್ ಮನ್ನಾ, )
ಇನ್ನೂರೈವತ್ತು ಸದಸ್ಯರ ಭಾಗಿತ್ವ: ಒಂದೇ ಕುಟುಂಬದ ಅನುಬಂಧ
ದೋಹಾ, ಅಕ್ಟೋಬರ್ 3: ಅಕ್ಟೋಬರ್ ಒಂದರಂದು ತುಳು ಕೂಟ ಕತರ್ ನಗರದ ಶಮಾಲ್ ಗಾರ್ಡನ್ ಉದ್ಯಾನದಲ್ಲಿ ವಾರ್ಷಿಕ ವಿಹಾರ ಕೂಟವನ್ನು ಆಯೋಜಿಸಿತ್ತು.
ಈ ವಿಹಾರಕೂಟದಲ್ಲಿ ವಿವಿಧ ಸಂಘಟನೆಗಳ ಇನ್ನೂರೈವತ್ತಕ್ಕೂ ಹೆಚ್ಚು ಕುಟುಂಬ / ಸದಸ್ಯರು ಆಗಮಿಸಿ ಅವಿಸ್ಮರಣೀಯ ಅನುಭವ ಪಡೆದರು. ತುಳುನಾಡಿನವರೇ ಹೆಚ್ಚಾಗಿದ್ದ ಕೂಟದಲ್ಲಿ ಎಳೆಯ ಮಗುವಿನಿಂದ ವಯೋವೃದ್ಧರೂ ಭಾಗವಹಿಸಿ ಒಂದು ಕುಟುಂಬದ ಅನುಬಂಧ ಮೂಡಿಸುವಲ್ಲಿ ಯಶಸ್ವಿಯಾದರು.
ಬೆಳಿಗ್ಗೆ ಎಂಟೂವರೆಗೆ ನಾಲ್ಕು ಖಾಸಗಿ ವಾಹನಗಳಲ್ಲಿ ಹೊರಟ ತಂಡ ದಾರಿಯುದ್ದಕ್ಕೂ ಹಾಸ್ಯ ಹಾಗೂ ರಂಜನೆಗಳಿಂದ ಪ್ರಯಾಣವನ್ನು ರಸಮಯವಾಗಿಸಿತ್ತು. ಶಮಾಲ್ ಗಾರ್ಡನ್ ಉದ್ಯಾನವನದಲ್ಲಿ ಎಲ್ಲಾ ವರ್ಗದವರಿಗೆ ತುಳು ಕೂಟದ ಸದಸ್ಯರು ಪ್ರತ್ಯೇಕವಾದ ಹಲವಾರು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದರು. ಮಹಿಳೆಯರಿಗೆ, ಮಕ್ಕಳಿಗೆ, ಹಿರಿಯರಿಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಆ ಸಮಯದಲ್ಲಿ ಎಲ್ಲರೂ ತಮ್ಮ ವಯಸ್ಸನ್ನು ಮರೆತು ಚಿಕ್ಕಮಕ್ಕಳಾದರು. ಹಗ್ಗ ಜಗ್ಗಾಟ, ಬಿಂಗೋ, ರನ್ನಿಂಗ್ ರೇಸ್, ಲೆಮನ್ ರೇಸ್, ಗೋಣಿಚೀಲದ ರೇಸ್, ರಿವರ್ಸ್ ಬಾಲ್ ಥ್ರೋ ಹಾಗೂ ವಿಶೇಷ ಆಕರ್ಷಣೆಯಾಗಿ ತುಳುನಾಡ ಹೆಮ್ಮೆಯ ಕ್ರೀಡೆಯಾದ ಕಬಡ್ಡಿ ಆಟ ಎಲ್ಲರ ಮನಸೆಳೆಯಿತು.
ಆ ಬಳಿಕ ನಾಲ್ಕು ಕಿರು ತುಳು ರೂಪಕಗಳನ್ನು ಸಂಘದ ಸದಸ್ಯರು ಪ್ರಸ್ತುತಪಡಿಸಿದರು. ಅತ್ಯುತ್ತಮ ನಿರ್ವಹಣೆ ಹಾಗೂ ನಟನಾಕೌಶಲ್ಯದಿಂದ ನಾಲ್ಕೂ ರೂಪಕಗಳು ಎಲ್ಲರ ಮನರಂಜಿಸಿದವು. ಹುಲಿವೇಶ ನೃತ್ಯವಂತೂ ತುಳುನಾಡ ಸಂಸ್ಕೃತಿಯನ್ನೇ ವಿದೇಶದಲ್ಲಿ ಮೂಡಿಸಿತ್ತು.
ಆ ಬಳಿಕ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘದ ಹಿರಿಯ ಸದಸ್ಯರು ಈ ಬಹುಮಾನಗಳನ್ನು ವಿತರಿಸಿದರು.
ಈ ವಿಶೇಷ ಕೂಟವನ್ನು ಸಂಘದ ಸದಸ್ಯರಾದ ಶ್ರೀ ಶ್ರೀಧರ ನಾಯಕ್ ನಿರೂಪಿಸಿದ್ದರು. ಅವರೊಂದಿಗೆ ಶ್ರೀಮತಿ ಸುಧಾ ಶೆಟ್ಟಿ, ದಿನೇಶ್ಚಂದ್ರ ಶೆಟ್ಟಿ, ಮೋಹನ್ ಜೆ, ರಾಮಚಂದ್ರ ಶೆಟ್ಟಿ, ಸುಧೀರ್ ಕೋಟ್ಯಾನ್, ಎಂ.ಇಕ್ಬಾಲ್ ಮನ್ನಾ, ಶ್ರೀಮತಿ ಪ್ರಾರ್ಥನಾ ಶೆಟ್ಟಿ, ಸತೀಶ್ ಪೂಂಜಾ, ಚಂದ್ರಶೇಖರ್ ಶೆಟ್ಟಿ, ಧನಂಜಯ ರೈ, ವಿಜಯ್ ರೈ, ಸತ್ಯನಾರಾಯನ ಹೆಗಡೆ ಹಾಗೂ ಇನ್ನೂ ಹಲವಾರು ಸದಸ್ಯರು ಈ ವಿಹಾರಕೂಟವನ್ನು ಯಶಸ್ವಿ ಯಾಗಿಸುವಲ್ಲಿ ತಮ್ಮ ಸಹಕಾರ ನೀಡಿದರು.
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಸದಸ್ಯರ ದಂಡನ್ನು ಕಂಡು ಹರ್ಷಚಿತ್ತರಾದ ಶ್ರೀ ರವಿ ಶೆಟ್ಟಿಯವರು ಈ ಕೂಟದಲ್ಲಿ ಸಹಕಾರ ನೀಡಿದಂತೆ ಮುಂದೆ ನಡೆಯಲಿರುವ -ದೋಹಾ ಕಿ ಶಾಮ್ ರಫಿ ಕೆ ನಾಮ್- ಕಾರ್ಯಕ್ರಮದಲ್ಲೂ ನೀಡಬೇಕೆಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿಯಾದ ಶ್ರೀ ವಿವಿಯನ್ ಡಿಸೋಜಾ ರವರು ವಂದನಾರ್ಪಣೆ ಸಲ್ಲಿಸಿದರು. ಅಡ್ವಾನ್ಸ್ ಟೆಕ್ನಿಕಲ್ ಸರ್ವಿಸಸ್ ಸಂಸ್ಥೆ ಮತ್ತು ಮಂಜುನಾಥ ಶೆಟ್ಟಿಯವರು ಈ ಕಾರ್ಯಕ್ರಮದ ವಾಹನ ಸೌಕರ್ಯವನ್ನು ಆಯೋಜಿಸಿದ್ದರು. ವಿವಿಯನ್ ಡಿಸೋಜಾರವರು ಟೀ-ಕಾಫಿ ಯನ್ನು ಪ್ರಾಯೋಜಿಸಿ ವಿಹಾರಕೂಟಕ್ಕೆ ತಮ್ಮ ಅನುದಾನ ನೀಡಿದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ, ವರದಿ: ಇಕ್ಬಾಲ್ ಮನ್ನಾ, ಕತರ್. ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-03
|
|
| Sudhir Kotian, Mangalore | 2008-10-04 | | Enjoyed the Eid Picnic with great enthusiasm...
Wish all the participants/members and organisers best of luck and success of Tulukoota in future...
|
| Rajaram Melanta SOC Libya, LIBYA | 2008-10-03 | | Congratulations Ravi.........!!!!
Enthusiastic spirit with TULU KOOTA members is marvelous....The unified way of sharing culture, customs, and happiness by Tulu Koota people is amazing model for all Anivasi Bharathiyaas in universe. The photographs just mirror image of all Tulu Bhaandavaas unity and integrity in DOHA. Keep it up and show the world.....WE ARE ALL ‘ONE’
Once again hats-off to Tulu Koota Sarathi RAVI.....
|
| P.Ramachandra, Ras Laffan, State of Qatar | 2008-10-03 | | I wish to express the following as a participant of the event.
The evidence of active involvement of previous office bearers of Tulukoota Qatar in organizing the event was a proof on unity of persons from Tulunadu.
The unification of diversity of Tulunadu was exemplified with the whole hearted participation of all members belonging to Tulunadu based at Qatar.
The untiring services rendered by Mr. Sridhar Nayak, –F |
|