ರವಿ ಬೆಳಗೆರೆ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2008-10-02
ಕುಂದಾಪುರ, ಅ. ೧: ಉಡುಪಿ ತಾಲೂಕು ಕೋಟತಟ್ಟು ಗ್ರಾ.ಪಂ. ಕೊಡಮಾಡುವ ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಈ ಬಾರಿ ಪತ್ರಕರ್ತ ರವಿಬೆಳಗೆರೆ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರಶಸ್ತಿ ಪ್ರದಾನಕ್ಕೆ ಸಿಎಂ
ಕೋಟದ ಗಿಳಿಯಾರು ಶಾಂಭವಿ ಹಿ.ಪ್ರಾ. ಶಾಲೆಯಲ್ಲಿ ಅ. 10 ರಂದು ಮಧ್ಯಾಹ್ನ 2ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು.
ನರೇಂದ್ರ ಕುಮಾರ್ ಕೋಟ ಸಂಪಾದಿಸಿರುವ ವಿಶೇಷ ಚಿತ್ರಕೃತಿಯನ್ನು ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅನಾವರಣ ಮಾಡಲಿದ್ದಾರೆ.
ಇದೇ ಸಂದರ್ಭ ಸ್ಥಳೀಯಾಡಳಿತಗಳ ಪ್ರತಿನಿಧಿಗಳ ಸಮಾವೇಶವೂ ನಡೆಯಲಿದೆ. ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಉಸ್ತುವಾರಿ ಸಚಿವರಾದ ಡಾ| ವಿ.ಎಸ್. ಆಚಾರ್ಯ, ಕೃಷ್ಣ ಜಿ. ಪಾಲೆಮಾರ್, ಜಿ.ಪಂ. ಅಧ್ಯಕ್ಷ ರಾಜು ಪೂಜಾರಿ, ಉಡುಪಿ ತಾ.ಪಂ. ಅಧ್ಯಕ್ಷೆ ಗೀತಾ ಪ್ರಭು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೋಟತಟ್ಟು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಶ್ವಪ್ರಕಾಶಿನಿ ಹಂದೆ, ಮಾಜಿ ಅಧ್ಯಕ್ಷ ಪ್ರಭಾಕರ ಕಾಂಚನ್, ಪ್ರಶಸ್ತಿ ಆಯ್ಕೆ ಸಮಿತಿಯ ವಿಠಲ ಗಾಂವ್ಕರ್, ಯು. ಎಸ್. ಶೆಣೈ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-02
|
|
|