ಕಸ್ತೂರಿ ಕನ್ನಡ' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಗಡಿನಾಡ ಘಟಕಾಧ್ಯಕ್ಷರಾದ ಎಸ್.ವಿ. ಭಟ್ಟ ಅವರನ್ನು ಮುಂಬಯಿಯ ಆರ್.ಎಸ್. ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸದಾನಂದ ಡಿ. ನಾಯಕ್ ಅವರು ಹಾರಾರ್ಪಣೆಗೈದು ಶಾಲು ಹೊದೆಸಿ, ಫಲಪುಷ್ಪ ನೀಡಿ ಸಮ್ಮಾನಿಸಿದರು.
ಕಯ್ಯಾರು ಚರ್ಚ್‌ನ ಧರ್ಮಗುರು ವಂದನೀಯ ಅನಿಲ್ ಡಿ'ಸೋಜಾ, ರಂಗನಟ, ಸಮಾಜ ಸೇವಕ ಕೋಳಾರು ಸತೀಶ್ಚಂದ್ರ ಭಂಡಾರಿ, ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಅಧ್ಯಾಪಕ ಕುಂಡೇರಿ ಜಯಂತ ನಾಯಕ್, ಪೈವಳಿಕೆ ಗ್ರಾ.ಪಂ. ಉಪಾಧ್ಯಕ್ಷ ಅಚ್ಯುತ ಚೇವಾರ್, ಸದಸ್ಯರುಗಳಾದ ಬಿ.ಎ. ಮಹಮ್ಮದ್, ಶ್ರೀಮತಿ ರಾಜೀವಿ ರೈ, ಶ್ರೀಮತಿ ಭಾರತಿ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸುಬ್ಬಯ್ಯ ಕಟ್ಟೆ ಕನ್ನಡ ಸಂಘ ಮತ್ತು ಕನ್ನಡ ಕೈರಳಿಯ ಸಂಯುಕ್ತ ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎ.ಆರ್. ಸುಬ್ಬಯ್ಯ ಕಟ್ಟೆ, ಬಿ.ಕೆ. ಖಾದರ್, ಕೆ. ರಾಮಕೃಷ್ಣ ಭಂಡಾರಿ, ಸುರೇಶ್ ಕುಮಾರ್ ಶೆಟ್ಟಿ ಹೇರೂರು ಶಾಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಕರ್ತ ಕೆ. ಭಾಸ್ಕರ ಸ್ವಾಗತಿಸಿದರು. ಕಯ್ಯಾರು ಶಾಲಾ ಮುಖ್ಯೋಪಾಧ್ಯಾಯ ಲೂಯಿಸ್ ಮೊಂತೆರೋ ವಂದಿಸಿದರು.
ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.