ನವಮದ ಮಹತ್ವ ಹೊತ್ತ ನವರಾತ್ರಿ |
ಪ್ರಕಟಿಸಿದ ದಿನಾಂಕ : 2008-09-30
ಗ್ರಹಗಳು-ಒಂಬತ್ತು, ರಸಗಳು-ಒಂಬತ್ತು, ಧಾನ್ಯಗಳು-ಒಂಬತ್ತು, ರತ್ನಗಳು-ಒಂಬತ್ತು, ಮಾತೆಯ ಉದರದ ವಾಸ ಮಾಸಗಳು-ಒಂಬತ್ತು, ಮಾನವ ಶರೀರದ ದ್ವಾರಗಳು-ಒಂಬತ್ತು .ಹೀಗೆ ಪ್ರಾಪಂಚಿಕ ಒಂಬತ್ತರ ನಂಟು ಎಣಿಕೆಗೆ ನಿಲುಕದಷ್ಟು !
ಒಂಬತ್ತು ಎಂಬ ಅಂಕೆಯು ಅಧ್ಯಾತ್ಮ ಮತ್ತು ಪೌರಾಣಿಕ ಜಗತ್ತಿನಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಒಂಬತ್ತರ ಮಹಿಮೆಯಾದರೂ ಎಂತಹದು? ಸಂಖ್ಯಾಶಾಸ್ತ್ರದ ನೆಲೆಯಲ್ಲಿ ವಿಶ್ಲೇಷಿಸಿ ಗುಣಾಕಾರದ ದೃಷ್ಟಿ ಯಿಂದ ಪರಿಗಣಿಸುವಾಗ “9" ಎಂಬ ಅಂಕೆಯು, ಒಂಬತ್ತರ ವ್ಯಾಪ್ತಿ ಮೀರು ವುದೇ ಇಲ್ಲ ! ಎಲ್ಲೆ ಮೀರದ ಗಗನದಂತೆ, ಎಲ್ಲೆದಾಟದ ಭೂಮಿಯಂತೆ. ಉದಾ ಹರಣೆಗೆ 9 * 1 = 9, 9* 2 = 18 = 1 + 8 = 9, 9* 3 = 27 = 2 + 7 = 9 ... ಹೀಗೆ ಮುಂದುವರಿಯುತ್ತದಲ್ಲದೆ ಹತ್ತಕ್ಕೇರು ವುದೂ ಇಲ್ಲ, ಎಂಟಕ್ಕೆ ಇಳಿಯುವುದೂ ಇಲ್ಲ, ಸಮಭಾವ, ಸಮ ಚಿತ್ತ, ಸಾಮರಸ್ಯ. ಅದಕ್ಕಾಗಿಯೇ ಜ್ಯೋತಿಷ ಶಾಸ್ತ್ರದಲ್ಲಿ ‘9’ ಭಾಗ್ಯ ಭಾವ, ಅಧ್ಯಾತ್ಮದ ಪ್ರಭಾವ.
ಗ್ರಹಗಳು - ಒಂಬತ್ತು, ರಸಗಳು - ಒಂಬತ್ತು, ಧಾನ್ಯಗಳು - ಒಂಬತ್ತು, ರತ್ನಗಳು - ಒಂಬತ್ತು, ಮಾತೆಯ ಉದರದ ವಾಸ ಮಾಸಗಳು - ಒಂಬತ್ತು, ಮಾನವ ಶರೀರದ ದ್ವಾರಗಳು - ಒಂಬತ್ತು .ಹೀಗೆ ಪ್ರಾಪಂಚಿಕ ಒಂಬತ್ತರ ನಂಟು ಎಣಿಕೆಗೆ ನಿಲುಕದಷ್ಟು !
ಅದೇ ರೀತಿ ಪ್ರಕೃತಿ-ಶಕ್ತಿ ಎಂಬಿತ್ಯಾದಿ ವಿಧಿ-ವಿಧಾನಗಳಿಂದ ಆರಾಧನೆಗೊಳ್ಳುವ ಜಗದಂಬೆಯ ಪುನಸ್ಕಾರದ ಪರ್ವದಿನಗಳು ಒಂಬತ್ತು - ಅದೇ ನವರಾತ್ರಿ. ಶರತ್ಕಾಲದ ಹಬ್ಬವಾದುದರಿಂದ ಶರನ್ನವರಾತ್ರಿ.
ಪ್ರಥಮಂ ಶೈಲಪುತ್ರೀತಿ ದ್ವಿತೀಯಂ ಬ್ರಹ್ಮಚಾರಿಣೀ ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ ಸಪ್ತಮಂ ಕಾಳರಾತ್ರೀಚ ಮಹಾಗೌರೀತಿ ಚಾಷ್ಟಮಂ ನವಮಂ ಸಿದ್ಧಿ ಧಾತ್ರೀಚ ನವದುರ್ಗಾಃ ಪ್ರಕೀರ್ತೀತಾಃ.....
ಎಂದು ಶ್ರೀ ದುರ್ಗಾ ಸಪ್ತಶತೀಯಲ್ಲಿ ಒಂಬತ್ತು ದುರ್ಗೆಯರ ರೂಪ ವೈವಿಧ್ಯ ಮತ್ತು ಆದಿದೇವತಾ ಉಪಾಸನೆ ಕುರಿತು ಉಲ್ಲೇಖಿಸಲಾಗಿದೆ.
ನವರಾತ್ರಿಯ ಪ್ರಥಮ ದಿವಸ ಶ್ರೀ ದುರ್ಗಾ, ಎರಡನೇ ದಿನ ಆರ್ಯದುರ್ಗಾ, ಮೂರನೇ ದಿನ ಭಗವತೀ ದುರ್ಗಾ, ನಾಲ್ಕನೆಯ ದಿನ ಕುಮಾರಿ ದುರ್ಗಾ, ಐದನೆಯ ದಿನ ಅಂಬಿಕಾ ದುರ್ಗಾ, ಆರನೆಯ ದಿನ ಮಹಿಷಮರ್ದಿನಿ ದುರ್ಗಾ, ಏಳನೆಯ ದಿನ ಚಂಡಿಕಾ ದುರ್ಗಾ, ಎಂಟನೆಯ ದಿನ ಸರಸ್ವತೀ ದುರ್ಗಾ, ಒಂಬತ್ತನೆಯ ದಿನ ವಾಗೀಶ್ವರೀ ದುರ್ಗಾ ಎಂದು ಒಂಬತ್ತು ರೀತಿ ಪೂಜಾಲಂಕಾರ, ಆವಾಹನೆ, ಪ್ರಾಣಪ್ರತಿಷ್ಠಾದಿ ಕರ್ಮಾಂಗ ಗಳಿಂದ ಆರಾಧಿಸುವ ಪದ್ಧತಿ ಇದೆ.
ಆವಾಹನಾದಿಗಳನ್ನು ಕಲಶದಲ್ಲಿಯೂ ಕೆಲವೆಡೆ ಮೂರ್ತಿಗಳಲ್ಲಿಯೂ ಮತ್ತೂ ಕೆಲವರು ಶ್ರೀಚಕ್ರ, ದೇವೀ ಮಾಹಾತ್ಮ್ಯಾ ಗ್ರಂಥಗಳಲ್ಲಿಯೂ ನೆರವೇರಿಸಿ ಪೂಜಿಸುತ್ತಾರೆ.
ಶ್ರೀ ದುರ್ಗಾರಾಧನೆಯು ತಾಂತ್ರಿಕತೆಗೆ ಮತ್ತು ಮಾಂತ್ರಿಕ ಶಕ್ತಿಯ ಉದ್ದೀಪನಕ್ಕೆ ಎಂಬ ತಿಳಿವಳಿಕೆಯು ಹಲವರಲ್ಲಿದೆ. ಕೇವಲ ಪೌರಾಣಿಕ ಸ್ತುತಿ - ಸ್ತೋತ್ರಾದಿಗಳಿಂದ ದುರ್ಗಾರಾಧನೆ ನಡೆಯುತ್ತದೆ ಎಂದು ತಿಳಿದವರೂ ಇದ್ದಾರೆ.
ವೈದಿಕವಾಗಿ ಶಕ್ತ್ಯಾರಾಧನೆಗೆ ಮಹತ್ವಗಳಿರುವುದು ಇಲ್ಲಿ ಗಮನೀಯ ವೆನಿಸುತ್ತದೆ. ಋಗ್ವೇದದ ಹತ್ತನೆಯ ಮಂಡಲದಲ್ಲಿನ “ದೇವೀ ಸೂಕ್ತ"ವೇ ಇದಕ್ಕೆ ಉದಾಹರಣೆ. ಆದಿಶಂಕರಾಚಾರ್ಯರಂತೂ ತಾಯಿ ಭಗವತಿಯ ಕುರಿತು ಸೃಜಿಸಿದ “ಸೌಂದರ್ಯ ಲಹರೀ" ಗ್ರಂಥದಲ್ಲಿ.
ಮನಸ್ತ್ವಂ ವ್ಯೋಮ ತ್ವಂ ಮರುದಸಿ ಮರುತ್ಸಾರಥಿರಸಿ ತ್ವಮಾಪಸ್ತ್ವಂ ಭೂಮಿಸ್ತ್ವಯಿ ಪರಿಣತಾಯಾಂ ನಹಿ ಪರಮ್| ತ್ವಮೇವ ಸ್ವಾತ್ಮಾನಂ ಪರಿಣಮಯಿತುಂ ವಿಶ್ವವಪುಷಾ ಚಿದಾನಂದಾಕಾರಂ ಶಿವಯುವತಿ ಭಾವೇನ ಬಿಭ್ಯಷೇ||
ಅಂದರೆ, ಆಜ್ಞಾಚಕ್ರದಲ್ಲಿರುವ ಮನಸ್ತತ್ತ್ವ, ವಿಶುದ್ಧಿ ಚಕ್ರದಲ್ಲಿರುವ ಆಕಾಶತತ್ವ, ಅನಾಹತಾಚಕ್ರದಲ್ಲಿರುವ ವಾಯುತತ್ತ್ವ, ಸ್ವಾಧಿಷ್ಠಾನ ದಲ್ಲಿರುವ ಅಗ್ನಿತತ್ತ್ವ, ಮಣಿ ಪೂರಕದಲ್ಲಿರುವ ಜಲತತ್ವ, ಮೂಲಾ ಧಾರದಲ್ಲಿರುವ ಭೂತತ್ತ್ವ ಎಲ್ಲವೂ ನೀನೇ ಎಂದು ಭಗವತಿಯನ್ನು ಸ್ತುತಿಸಿದ್ದಾರೆ. ಅಂದರೆ ಮಾನವನ ಶರೀರ ಭಾವ ದಲ್ಲಿರುವ ಪಂಚಭೂತ ತತ್ತ್ವಗಳು ಪ್ರಾಕೃತಿಕ ವಾಗಿದ್ದರೂ ಅದು ಭಗವತಿಯ ಆಜ್ಞಾ ಪಾಲನೆಗೆ ಒಳಪಟ್ಟಿವೆ ಎಂಬ ತತ್ತ್ವ.
ನವರಾತ್ರಿಯ ಪರ್ವಕಾಲದಲ್ಲಿ ಶ್ರೀ ದುರ್ಗಾರಾಧನೆಯ ಮೂಲಕ ಪ್ರಕೃತಿಯ ಆರಾಧನೆಯು ನಡೆಯುತ್ತದೆ. ದೇವಿಗೆ ಪ್ರಿಯವಾದ “ನವಾಕ್ಷರಿ"ಯ ಮೂಲಕ ನಡೆಸುವ ಸಾತ್ವಿಕ ಕೈಂಕರ್ಯವು ತಾಯಿಯನ್ನು ಕುರಿತು ಮಕ್ಕಳು ನಡೆಸುವ ಭಕ್ತಿ ಭಾವದ ಪರಾಕಾಷ್ಠೆ ಎಂದರೆ ತಪ್ಪಲ್ಲ.
“ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ" ಎಂಬ ಮಾತೃಭಕ್ತಿಯೊಂದಿಗೆ ನವಮಾಸ ಧರಿಸಿದ ಮಾತೆಯ ಆರಾಧನೆಯನ್ನು ನವ ರಾತ್ರಿಯಲ್ಲಿ ನಡೆಸಿ ಪಾವನರಾಗೋಣ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-30
|
|
| Mohan H Naik, Mangaluru | 2008-09-30 | | ತಾಯೀ ದುರ್ಗೆಯ ಕುರಿತು,ಸರಳ ಹಾಗು ಸುಂದರ ಲೇಖನ. ಲೇಖನದ ಆಯ್ದ ಪಂಕ್ತಿ, ಓದುಗರ ವಿಶೇಷ ಗಮನಕ್ಕೆ, "ನವರಾತ್ರಿಯ ಪ್ರಥಮ ದಿವಸ ಶ್ರೀ ದುರ್ಗಾ, ಎರಡನೇ ದಿನ ಆರ್ಯದುರ್ಗಾ, ಮೂರನೇ ದಿನ ಭಗವತೀ ದುರ್ಗಾ, ನಾಲ್ಕನೆಯ ದಿನ ಕುಮಾರಿ ದುರ್ಗಾ, ಐದನೆಯ ದಿನ ಅಂಬಿಕಾ ದುರ್ಗಾ, ಆರನೆಯ ದಿನ ಮಹಿಷಮರ್ದಿನಿ ದುರ್ಗಾ, ಏಳನೆಯ ದಿನ ಚಂಡಿಕಾ ದುರ್ಗಾ, ಎಂಟನೆಯ ದಿನ ಸರಸ್ವತೀ ದುರ್ಗಾ, ಒಂಬತ್ತನೆಯ ದಿನ ವಾಗೀಶ್ವರೀ ದುರ್ಗಾ\". ಇದಕ್ಕೆ ಇರ್ಬೇಕು ಜಗತ್ತು ನಮ್ಮನ್ನಾ ಕರೆಯೋದು " People with multi God concept" ಅಂತ. ಅದಿರ್ಲಿ, ಯಾರು ಎನೇ ಹೇಳಿದ್ರು,ಬರ್ಕೊಂದ್ರು, "ಸತ್ಯದರ್ಶಿನಿ" ಅಂತಾ ಫಿಲ್ಮ್ ತೆಗೆದರು, ನಮಗೆ ಗೊತ್ತು ನಮ್ಮ ದೇವ್ರು ಏನು ಅಂತ (?). ಅಲ್ಲವಾ?.( Remember the TV add ? "My daddy strongest" ?. So dont worry.Be happy. ನನ್ನ ಮಾತೋಶ್ರೀಯವರು, ಹೇಳಿದಂತೆ ನನ್ನ ಬಾಲ್ಯದಲ್ಲಿ ಅಂದಿನ ಅಧುನಿಕ ವೈದ್ಯ ವಿಜ್ಞಾನ, ನನ್ನ ಹುಟ್ಟಿನ ಮರು ಕ್ಷಣವೇ,ಉಳಿವು ಅಸಾದ್ಯ ಎಂದು ಘೋಷಿಸಿದಾಗ, ತಾಯೀ ದುರ್ಗೆಯ ಕ್ರಪೆಯಿಂದ ಬದುಕಿದೆನಂತೆ . ತಾಯೀ ತೋರಿದ ಈ ಪವಾಡದ ಕುರಿತು\"New life" ಅಂತ ಹೇಳಿಕೊಂಡು ಯಾರನ್ನು ಈ ತನಕ, "ಈ ದೇವರನ್ನೇ ನಂಬಿ, ಬೇರೆ ದೇವರು ದೇವರಲ್ಲ" ಅನ್ನೋ "ಮೂರ್ಖತನದ ಪರಾಮಾವದಿಯ" ವಾದವನ್ನು ಎಲ್ಲೂ ಯಾರ ಎದುರೂ ನಾನು ಮಂಡಿಸಿಲ್ಲಾ. My humble intelligence do not allow such belief. ರಾಮನನ್ನೂ ಗೌರವಿಸಿರುವೆ, ಕೃಷ್ಣನನ್ನು ಪೂಜಿಸಿರುವೆ, ಕ್ರಿಸ್ತನನ್ನು ನಂಬಿರುವೆ, Not to hurt the sentiments of Godssss!!!!!!!!! ಅಲ್ಲವಾ? ಶಾಲಾ ದಿನಗಳಲ್ಲಿ ಮಿತ್ರರರು ಕೊಟ್ಟ ಶಿಲುಬೆಯ ಸರವನ್ನು ಕೊರಳಲ್ಲಿ ಹಾಕಿಕೊಂಡು ಮನೆತುಂಬ ಓಡಾಡಿದಾಗ ನನ್ನ ಹೆತ್ತಮ್ಮ ನಕ್ಕಳೆ ವಿನಾ ಕಣ್ಣು ಕೆಂಪಿಸಲಿಲ್ಲಾ , ರಾತ್ರಿ ಮಲಗೋವಾಗ ಜೋಪಾನ ದಿಂದ ದೇವರ ಗೂಡಲ್ಲಿ ಎತ್ತಿಟ್ಟಳು ಆ ಮಹಾ ತಾಯೀ. ಇಂದು ಕೆಲವು ಬುದ್ದಿಗೆಡಿಗಳು " ನಮ್ಮ ದೇವ್ರು. ನಿಮ್ಮ ದೇವ್ರು" ಅಂತಾ, ಮನುಷ್ಯಪ್ರಾಣಿ ನಂಬಿದ ಇನ್ನೊಂದು ದೇವರನ್ನ " ಸತ್ಯದರ್ಶನದ" ನೆಪದಲ್ಲಿ, ದೇವರ ತೇಜೋವದೆ ಮಾಡ್ದಾಗ, ನನ್ನ ಮನಸ್ಸಿಗೆ ನೋವು ಆಗಿದ್ದಂತೂ ಸತ್ಯ. ನನ್ನನ್ನೇ ನಾನು ಆತ್ಮಾವಲೋಕನಕ್ಕೆ ಗುರಿಪಡಿಸಿದ್ದುಂಟು." ಇದು ನನ್ನ ಸುಪ್ತ ಮೂಲಬೂತವಾದದ ಲಕ್ಷಣವೇ?\" ಮಹಾತ್ಮಾ ಬರೆದ ಕೆಲವು ಸಾಲು ಓದಿದಾಗ ಸಮಾಧಾನ ವಾಯ್ತು. " Its better to be violent than cowardice". ಇಲ್ಲಿ "Violence" ಅಂದರೆ, ಕಲ್ಲು ಹೊಡಿರಿ ಅಂತಲ್ಲ.ಅನ್ಯಾಯ ಸಹಿಸಬೇಡಿ ಅನ್ನೋದು ಮಹಾತ್ಮನ ಅಂಬೋಣ ಅನ್ನೋದು ನನ್ನ ತಿಳುವಳಿಕೆ. ನೀವೇನಂತೀರಾ?. ತೀಸ್ತ ರನ್ನು, ಮಹೇಶ್ ಭಟ್ಟರನ್ನು ಕೇಳಿ confirm ಮಾಡಿಕೊಂದರಾಯ್ತು ಅಂತಿರಾ? ಈ ಮಹಾತ್ಮನನ್ನು ಹಾಗೂ ಆತನ ತತ್ವ ಸಿದ್ದಾಂತಗಳನ್ನು, ಇಂದಿನ ರಾಜಕೀಯ ಪಕ್ಷಗಳೆಲ್ಲ 'copy right', ತೆಗೆದುಕೊಂಡ ಹಾಗೆ ವರ್ತಿಸುತ್ತಿರೋದು ನೋಡಿದ್ದಿರಾ ? ಕೆಲವೊಂದು ಪಕ್ಷಕ್ಕಂತು, the name 'ಗಾಂಧಿ', is fixed deposit. ಯಾವ ಗಾಂಧಿ ಅಂತಾ ಮಾತ್ರ ಕೇಳಬೇಡಿ . ಅಂದ ಹಾಗೆ ನಾಡಿದ್ದು,ಗಾಂದಿ ಜಯಂತಿ. Advance ಆಗಿ ಗಾಂದಿಯನ್ನ ನೆನಸಿಕೊಂಡು ಬಿಡೋಣ. ನಾಡಿದ್ದು ಮರೆಯೋ ಸಾದ್ಯತೆ ಇದೆ. ನಾವೆಲ್ಲ ಹುಲುಮಾನವರು ತಾನೆ? ಮರೆವು ಸಹಜ. Not to worry.
Now Coming to subject, "ದೇವನೊಬ್ಬ ನಾಮ ಹಲವು" ಎಂಬ ಸರ್ವಕಾಲಿನ ಸತ್ಯ ವನ್ನು ವಿಶ್ವಕ್ಕೆ ಸಾರಿದ ಏಕೈಕ ಜನಾಂಗ , ನಾವು ಭಾರತೀಯರು ತಾನೆ?.ದೇವರು, ದೇವರು ತಾನೆ ? ಅದಕ್ಕೆ ಇರ್ಬೇಕು. ನಮ್ಮ ಸುಂದರ ಕನ್ನಡದಲ್ಲಿ ಜ್ಞಾನಿಗಳು ಹೇಳಿದ್ದು," ಹರಿಯ ಭಕ್ತರಿಗೆ ಹರಿ. ಹರನ ಭಕ್ತರಿಗೆ ಹರ. ನರರೆನು ಭಾವಿಸುವರೂ ಅದರಂತೆ ತೋರುವನು". ಈ ತತ್ವವನ್ನು ಇಂದಿನ ಅತಿಬುದ್ದಿವಂತ ಜನ ಅರ್ಥೈಸಿ ಕೊಂಡಲ್ಲಿ, ಪ್ರಸ್ತುತ ಸಮಾಜದ ಸಮಸ್ಯೆಗೆ ಖಂಡಿತ ಪರಿಹಾರ ಸಾದ್ಯ.
ಹರಟೆ ಜಾಸ್ತಿ ಆಯಿತು. ಓದುಗರೆಲ್ಲರಿಗೂ ನವರಾತ್ರಿಯ ಶುಭ ಹಾರೈಕೆ and Eid Mubaarak. |
| Parashuram B , Manipal | 2008-09-30 | | Best Wishes for Best of 'NAVARATRI' to all. |
|