ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಈದಲ್ ಫಿತ್ರ್ `ಮಾನವ ಮೈತ್ರಿಗೆ ರಮ್ಜಾನ್ ಸಂದೇಶ'

`ಈದುಲ್ ಫಿತ್ರ್' ದಾನ ಧರ್ಮಗಳ ಹಬ್ಬ. ಇದು ಬಾಂಧವ್ಯತೆಯನ್ನು ಸುದೃಢ ಗೊಳಿಸುವ ಹಬ್ಬ. ಬಡವ-ಬಲ್ಲಿದ, ಮೇಲು-ಕೀಳು ಎನ್ನದೆ ಪ್ರತಿಯೋರ್ವ ಮುಸಲ್ಮಾನನೂ ಪರಸ್ಪರ ಆಲಿಂಗಿಸಿಕೊಂಡು ಆತ್ಮಿಯರಾಗುವ ಅಪೂರ್ವ ಕ್ಷಣ.

ವಿವಿಧ ಧರ್ಮೀಯರು ವಾಸಿಸುತ್ತಿರುವ ನಮ್ಮ ಭಾರತದಲ್ಲಿ ಹಬ್ಬ ಹರಿದಿನಗಳೆಂದರೆ ಭಾರೀ ಅಗ್ಗ. ವರ್ಷಪೂರ್ತಿ ಒಂದಲ್ಲೊಂದು ಹಬ್ಬವನ್ನು ನಾವು ಆಚರಿಸುತ್ತೇವೆ. ಗಣ್ಯರಿಂದ ಶುಭ ಹಾರೈಕೆಗಳೇನೋ ಹರಿದು ಬರುತ್ತದೆ. ಹಬ್ಬಗಳಿಗಾಗಿ ಕಾಯುತ್ತಿರುವ ಮುಖಂಡರು ಸಂದೇಶ ನೀಡಲು ಕಾತುರರಾಗಿರುತ್ತಾರೆ. ಹಬ್ಬ ಬಂತೆಂದರೆ ನಮ್ಮ ಪೇಟೆ, ಪಟ್ಟಣಗಳಲ್ಲಿ ಜನದಟ್ಟಣೆ, ಜವುಳಿ ಅಂಗಡಿಗಳಲ್ಲಿ ಜನಜಂಗುಳಿ, ತಟ್ಟಿ ಗುಡಿಸಲುಗಳಲ್ಲೂ ತರತರದ ತಿಂಡಿತಿನಸುಗಳು, ಸುತ್ತಮುತ್ತಲೂ ಸುಗಂಧ ದ್ರವ್ಯಗಳ ಸುವಾಸನೆ ಹೊಟ್ಟೆಗೆ ಹಿಟ್ಟಿಲ್ಲದವರ ಜುಟ್ಟಿನಲ್ಲೂ ಮಲ್ಲಿಗೆ ಮೇಲಾಟ. ಹಬ್ಬಗಳೆಂದರೆ ಇದೆಲ್ಲವೂ ಮಾಮೂಲು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಹಬ್ಬಗಳನ್ನು ಭಾರೀ ಗೌಜಿಯಿಂದ ಆಚರಿಸುತ್ತಾರೆ. ಅಂತವರಿಗೆ ಜೂಜು ಹಬ್ಬದ ಮೋಜು! ಬಾಟಲಿ, ಲಾಟರಿ, ಸಿನೆಮಾ, ಅಶ್ಲೀಲತೆಗೆ ಹಬ್ಬದ ಪ್ರಯುಕ್ತ ಮುಕ್ತ ಪರವಾನಗಿ. ಆದರೆ ಇಂತಹ ಹಬ್ಬ ಆಚರಣೆಗಳಿಂದ ನಮಗೆ ಏನನ್ನೂ ಸಾಧಿಸಲಾಗದು.

ಪಶ್ಚಿಮ ಮಂಡಲದಲ್ಲಿ ಶವ್ವಾಲ್ ಚಂದ್ರದರ್ಶನವು ರಮನಾಳ್ ತಿಂಗಳಿಗೆ ವಿರಾಮ ಹಾಕಿ, ಕೋಟ್ಯಾಂತರ ಮುಸ್ಲಿಮರ ಹೃದಯದಲ್ಲಿ ನವಚೈತನ್ಯದ ಬೆಳಕು ಚಿಮ್ಮುತ್ತದೆ. ತಿಂಗಳು ಪೂರ್ತಿ ಅನ್ನಾಹಾರಗಳನ್ನು, ದೇಹೇಚ್ಛೆಗಳನ್ನು ಕಡಿತಗೊಳಿಸಿ ದೇವರಾಜ್ಞೆಯನ್ನು ಪಾಲಿಸಿ ಪಾಪಮುಕ್ತರಾಗಿ ಪೆರ್ನಾಳ್ ಆಚರಿಸುವಾಗ ಯಾವ ಸತ್ಯವಿಶ್ವಾಸಿಯ ಹೃದಯದಲ್ಲೂ ಸಂತೋಷದ ಸಾಗರ ಹರಿಯದೆ ಇರಲಾರದು. ಒಂದು ತಿಂಗಳ ವ್ರತಾನುಷ್ಠಾನದ ವೇಳೆ ಏನಾದರೂ ತಪ್ಪು ಸಂಭವಿಸಿದ್ದಲ್ಲಿ ಅದನ್ನು ಪರಿಹರಿಸಲಿಕ್ಕೋಸ್ಕರ ಅಲ್ಲಾಹನು ಕಡ್ಡಾಯಗೊಳಿಸಿದ ದಾನವೇ ಫಿತ್ರ್ ಝಕಾತ್ (ಪಿತ್ರ್‌ಝಕಾತ್).

ಈ ಝಕಾತ್‌ನಲ್ಲಿ ಸಾಮಾಜಿಕ ಭದ್ಧತೆಯ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ಇದ್ದವರಂತೆ ಇಲ್ಲದವರು ಯಾವುದೇ ಅಡ್ಡಿ ಆತಂಕಗಳಿಲ್ಲದೇ ಪೆರ್ನಾಳ್ ಆಚರಿಸಬೇಕೆಂಬುದೇ ಫಿತ್ರ್ ಝಕಾತಿನ ಉದ್ದೇಶ. ಆದರೆ ಇಂದು ಈ `ಫಿತ್ರ್ ಝಕಾತ್' ಎಂಬುದು ಭಿಕ್ಷಾಟನೆಗೆ ಮತ್ತೊಂದು ಹೆಸರಾಗಿ ಪರಿಣಮಿಸಿದೆ. ಬಡವರಿದ್ದಲ್ಲಿಗೆ ತಲುಪಿಸಬೇಕಾದ ಝಕಾತನ್ನು ಪ್ರತಿಷ್ಠೆ ಮತ್ತು ಶ್ರೀಮಂತಿಕೆಯ ಪ್ರದರ್ಶನಕ್ಕೆ ಬಳಸುವುದು ಸರಿಯೆನಿಸದು. ಸತ್ಯ ಹೇಳುವುದಾದರೆ ಇಸ್ಲಾಮಿನ ಝಕಾತ್ ವ್ಯವಸ್ಥೆಯು (ಎಲ್ಲಾ ತರದ ಝಕಾತ್‌ಗಳೂ ಸೇರಿ) ಮಾನವರಿಗೆ ಅಲ್ಲಾಹನ ಒಂದು ಕೊಡುಗೆ ಎಂದೇ ಹೇಳಬೇಕು. ಶಿಷ್ಠಾಚಾರ ಪ್ರಕಾರ ಇಸ್ಲಾಮೀ ಝಕಾತನ್ನು ಜಾರಿಗೊಳಿಸಿದರೆ ಇಲ್ಲಿ ಯಾತನೆ ಅನುಭವಿಸುವ ಬಡವರನ್ನು ಕಾಣಸಿಗಲಾರದು. ಯಾವುದೇ ಸರಕಾರದ ಯೋಜನೆಗಳು ಇಲ್ಲಿ ಅಪ್ರಸ್ತುತಗೊಳ್ಳುವುದು. ಆದರೆ ನಮಾಝ್ ನಿರ್ವಹಿಸುವ ಕಟ್ಟಾ ಮುಸ್ಲಿಮನೂ ಸಹಾ ಝಕಾತ್‌ನ ವಿಷಯದಲ್ಲಿ ಅಷ್ಟೊಂದು ಕಾಳಜಿ ವಹಿಸುವುದಿಲ್ಲವೆಂದು ಮಾತ್ರವಲ್ಲ ಅದರ ಬಗ್ಗೆ ಗಮನ ಹರಿಸುವುದೇ ಇಲ್ಲ. ಪವಿತ್ರ ಕುರ್‌ಆನಿನಲ್ಲಿ ನಮಾಝ್‌ಗೆ ಎಷ್ಟು ಪ್ರಾಮುಖ್ಯ ಕಲ್ಪಿಸಲಾಗಿದೆಯೋ ಅಷ್ಟೇ ಪ್ರಾಧಾನ್ಯತೆ ಝಕಾತಿಗೂ ಕಲ್ಪಿಸಲಾಗಿದೆಯೆಂದು ಕುರಾನಿನ ಬಗ್ಗೆ ಆಳ ಜ್ಞಾನ ಇಲ್ಲದವನಿಗೂ ಗೊತ್ತಿರುವ ವಿಚಾರ.

``ಸ್ವಲಾತ್" (ನಮಾಝ್) ನಿರ್ವಹಿಸಿರಿ ಎಂದು ಹೇಳಿದ ಕಡೆಯಲೆಲ್ಲಾ ಝಕಾತ್ ಕೊಟ್ಟು ಬಿಡಿರಿ ಎಂದೂ ಕುರ್‌ಆನಿನಲ್ಲಿ ಹಲವು ಕಡೆ ಹೇಳಲಾಗಿದೆ. ಪವಿತ್ರ ರಂಝಾನ್ ಮುಗಿಸಿ ಶವ್ವಾಲ್‌ಗೆ ಪಾದಾರ್ಪಣೆ ಮಾಡುತ್ತಿರುವ ನಾವು ಪೆರ್ನಾಳ್ ಆಚರಣೆಯೊಂದಿಗೆ ಆಶಾಧನೆಗೆ ವಿರಾಮ ಹಾಕುವ ಪರಿಪಾಠ ನಿಲ್ಲಬೇಕುಇಲ್ಲದಿದ್ದರೆ ಈ ತನಕ ಮಾಡಿದ ಆಚರಣೆಯೆಲ್ಲವೂ ನೀರಿನಲ್ಲಿಟ್ಟ ಹೋಮದಂತೆ ನಿಷ್ಪಲವಾಗುವುದು. ಬಡವರೊಂದಿಗಿನ ಕಾಳಜಿ, ಸ್ನೇಹ, ಸೌಹಾರ್ದತೆ, ತ್ಯಾಗ, ಪೂರ್ವಿಕರ ಸ್ಮರಣೆ, ಕೌಟುಂಬಿಕ ಐಕ್ಯತೆ, ವಿಶ್ವಸಾಹೋದರ್ಯತೆ, ಸಾಮಾಜಿಕ ಚಿಂತನೆ ಇದೆಲ್ಲವೂ ಈದ್ ಆಚರಣೆಯ ಹಿಂದಿನ ಸಂದೇಶಗಳಾಗಿವೆ.

ಶಾಂತಿಯುತ ವಾತಾವರಣದಲ್ಲಿ ಭಕ್ತಿ, ನೆಮ್ಮದಿಯಿಂದ ಧಾರ್ಮಿಕ ಸೀಮೆದಾಟದೆ ಆಚರಿಸುವ ಹಬ್ಬಗಳಿಂದ ಮಾತ್ರ ಉದ್ದೇಶಿತ ಫಲ ಲಭ್ಯ.

ಹಬ್ಬಗಳು ಆಚರಿಸುವುದಕ್ಕೆ ಅದರದ್ದೇ ಆದ ಹಿನ್ನೆಲೆ ಮತ್ತು ಕಾರಣವೂ ಇರುತ್ತದೆ. ಇಂತಹ ಹಬ್ಬಗಳ ಪೈಕಿ ಅರ್ಥಪೂರ್ಣವಾದ ಮತ್ತು ನೈಜ ಹಿನ್ನಲೆಯಿರುವ ಹಬ್ಬಗಳೆಂದರೆ ಇಸ್ಲಾಮ್ ಧರ್ಮದಲ್ಲಿ ಆಚರಿಸಲ್ಪಡುವ ಎರಡು ಹಬ್ಬಗಳಾದ ಈದುಲ್ ಫಿತ್ರ್ ಮತ್ತು ಈದುಲ್ ಅಝ್‌ಹಾ. ಈದುಲ್ ಫಿತ್ರ್ ಆಚರಿಸುವುದರಲ್ಲಿ ಅಡಕಗೊಂಡಿರುವ ಸಂಭ್ರಮ, ಚೈತನ್ಯತೆಯನ್ನು ವಿವರಿಸಿ ಹೇಳಬೇಕಾಗಿಲ್ಲ. ನಿಜವಾದ ಅರ್ಥದಲ್ಲಿರುವ ಹಬ್ಬವೆಂದರೆ ಅದು ಈದುಲ್ ಪಿತ್ರ್. ಮಾಸಪೂರ್ತಿ ಅನ್ನಾಹಾರಗಳನ್ನು ತೊರೆದು ಉಪವಾಸ ಆಚರಿಸಿ `ರಮಳಾನ್' ತಿಂಗಳಿಗೆ ವಿದಾಯ ಹೇಳುತ್ತಿರುವಾಗ ಯಾವುದೇ ಒಬ್ಬ ಸತ್ಯ ವಿಶ್ವಾಸಿಯ ಹೃದಯದಲ್ಲಿ ಪ್ರಕಟಗೊಳ್ಳುವ ಸಂಭ್ರಮಕ್ಕೆ ಮಿತಿ ಇರಲಾರದು. ರಮಳಾನಿನಲ್ಲಿ ಗಳಿಸಿದ ನವಚೈತನ್ಯವನ್ನು ಕಾಯ್ದುಕೊಳ್ಳುವ ಪ್ರತಿಜ್ಞೆಯೇ ಈ ಈದುಲ್ ಫಿತ್ರ್‌ನ ಮುಖ್ಯ ಅಂಶ. ಅಲ್ಲದೇ ಕೇವಲ ತೋರಿಕೆಯ ಡಂಭಾಚಾರಕ್ಕೆ ಇಲ್ಲಿ ಇಂಬು ಕೊಡಲಾಗುವುದಿಲ್ಲ. ರಮ್ಜಾನಿನಲ್ಲಿ ಆರಾಧನೆ ಸಲ್ಲಿಸಲು ಅವಕಾಶ ಕಲ್ಪಿಸಿದ ಅಲ್ಲಾಹನಿಗೆ ಕೃತಜ್ತೆ ಸಲ್ಲಿಸುವುದು ಇಲ್ಲಿ ಮುಖ್ಯ ಅದಕ್ಕಾಗಿ ಪ್ರತ್ಯೇಕ ನಮಾಝ್ ಮತ್ತು ಕುತ್‌ಬಾ ಪಾರಾಯಣವಿದೆ.

ಕೌಟುಂಬಿಕ ಸಂದರ್ಶನ, ಅತಿಥಿ ಸತ್ಕಾರ, ಪರಸ್ಪರ ಆಲಿಂಗನ, ಹಸ್ತದಾನ ಇವೆಲ್ಲವೂ ಹಬ್ಬದ ಒಂದು ಭಾಗ. ಹಬ್ಬದ ನೆಪದಲ್ಲಾದರೂ ಪರಸ್ಪರ ವೈರುತ್ವದಲ್ಲಿರುವವರು ತಪ್ಪೊಪ್ಪಿ ಕೊಂಡು ಪರಸ್ಪರ ಅಪ್ಪಿಕೊಂಡರೆ ಹಬ್ಬವು ಸಾರ್ಥಕವೆನಿಸುತ್ತದೆ. ಅಂದಿ ನಿಂದ ಅನ್ಯೋನ್ಯತೆಯ ಒಂದು ಹೊಸ ಯುಗವೇ‌ಆರಂಭ ಗೊಂಡಂತಾಗುತ್ತದೆ. ಕೇವಲ ಬಿರಿಯಾನಿ ತಿಂದುಂಡು ತೇಗಿದರೆ ಅಥವಾ ತರತರದ ಡಿಸೈನ್‌ಗಳ ವಸ್ತ್ರ ಗಳನ್ನು ಧರಿಸಿದ ಮಾತ್ರಕ್ಕೆ ಅದರಿಂದ ಏನೂ ಫಲವಿಲ್ಲ. ಎಲ್ಲದಕ್ಕೂ ಮುಖ್ಯ ವಾಗಿ ರಮ್ಜಾನಿನಲ್ಲಿ ನಾವು ಗಳಿಸಿದ ನವಚೈತನ್ಯ ನಷ್ಟವಾಗದಂತೆ ಜಾಗ್ರತೆ ವಹಿಸುವ ಜಾಯಮಾನ ಬೆಳೆಸಿಕೊಳ್ಳ ಬೇಕಾಗಿದೆ. ಸತ್ಯವಿಶ್ವಾಸಿಯ ಮಟ್ಟಿಗೆ ಈ ಹಬ್ಬವು ಪುರಸ್ಕಾರದ ದಿನವಾಗಿರು ತ್ತದೆ. ಪ್ರವಾದಿ (ಸ) ಹೀಗೆ ಹೇಳಿರುತ್ತಾರೆ. `ಈದುಲ್ ಫಿತ್ರ್' ದಿನದಂದು ದೇವಚಾರರು ಬೀದಿಗಳ ಇಕ್ಕೆಡೆಗಳಲ್ಲಿ ನಿಂತು ಸ್ವಾಗತ ಕೋರುತ್ತಾರೆ. ನಿನ್ನೆಯ ತನಕ ವ್ರತಧಾರಿಗಳಾಗಿದ್ದವರೇ ಅತೀ ಉದಾರಿಯಂತೆ ನಿಮ್ಮ ಪ್ರಭುವಿನ ಕಡೆಗೆ ನೀವು ನಡೆಯಿರಿ. ಅಲ್ಲಾಹನು ಏನನ್ನು ಆಜ್ಞೆ ಮಾಡಿದ್ದಾನೋ ಅವುಗಳನ್ನೆಲ್ಲ ನೀವು ಚೆನ್ನಾಗಿ ಪಾಲಿಸಿ ದ್ದೀರಿ. ಅದಕ್ಕಾಗಿ ಇಂದು ನಿಮಗೆ ಪುರಸ್ಕಾರ ನೀಡಿ ಗೌರವಿಸ ಲಾಗುತ್ತದೆ' ಎಂದು ದೇವಾಚಾರರು ಕೂಗಿ ಕರೆಯುತ್ತಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-09-30


ಪ್ರತಿಸ್ಪಂದನ
manna iliyas udupi, Bahrain
2008-10-01
ಎಲ್ಲರಿಗೂ ನಮ್ಮ ಈದ್ ಹಬ್ಬದ ಹಾಗು ನವರಾತ್ರಿ ಶುಭಾಶಯಗಳು wish u all to u happy eid and navarathri
Siddiq , Mangalore
2008-10-01
ಎಲ್ಲರಿಗೂ ನಮ್ಮ ಈದ್ ಹಬ್ಬದ ಹಾಗು ನವರಾತ್ರಿ ಶುಭಾಶಯಗಳು
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಗೋಕರ್ಣದ ಅಶೋಕೆಗೆ ರಾಮಚಂದ್ರಾಪುರ ಮಠ?
»ವಿಶ್ವದ ಅತ್ಯ೦ತ ಕಿರಿಯ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಪ್ರಶಸ್ತಿ
»ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ
»ಎಚ್. ಶಕುಂತಳಾ ಭಟ್‌ಗೆ ಹೊರನಾಡ ರಾಜ್ಯೋತ್ಸವ ಪ್ರಶಸ್ತಿ
»ಜ್ಯೋತಿ ಕುಲಾಲ್‌ಗೆ ಪ್ರಗತಿಶೀಲ ರೈತ ಮಹಿಳೆ ಪ್ರಶಸ್ತಿ
»ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಪೂರ್ಣಿಮಾ ಪ್ರಥಮ ಸ್ಥಾನ
»ಕೊಡೇಕಲ್‌ನಲ್ಲಿ 401 ಜೋಡಿ sಸಾಮೊಹಿಕ ವಿವಾಹ
»ಚೆಂಬೂರು ಕರ್ನಾಟಕ ಸಂಘದಿಂದ ಸಾಹಿತ್ಯ ಸಹವಾಸ-2008 ಕಾರ್ಯಕ್ರಮ
»ತಬಲಾ ಜತೆಗೆ ಗಾಯನ ಲಿಮ್ಕಾ ದಾಖಲೆಯತ್ತ
»ಚೀನಾ ನೆಲದಲ್ಲಿ ಯಕ್ಷಗಾನ ಚೈನಾದಲ್ಲಿ ಪ್ರದರ್ಶನ ನೀಡಿದ ಮಹಿಳಾ ಯಕ್ಷಗಾನ ತಂಡ.
»ಹಿರಿಯಡಕ ಯಕ್ಷಗಾನ ಮೇಳ ಮತ್ತೆ ತಿರುಗಾಟ ಆರಂಭ
» 'ಕುರುಕ್ಷೇತ್ರಕ್ಕೊಂದು ಅಯೋಗ’ ಯಕ್ಷರಂಗ ಪ್ರಯೋಗ
»ಕೃಷ್ಣಪ್ರಸಾದ್, ಶರಾವತಿಗೆ ಕಂಬಳ ಕಲಾಪ್ರಶಸ್ತಿ
»ಕನ್ನಡದಲ್ಲಿರುವ ‘ಮಂಕುತಿಮ್ಮನ ಕಗ್ಗ' ಆಂಗ್ಲಕ್ಕೆ ಅನುವಾದದ ಕೃತಿ ಬಿಡುಗಡೆ
»ಜನಮನ ಸೂರೆಗೊಂಡ ಹಿಂದೂಸ್ಥಾನೀ ಗಾಯನ
»ಲಿಯೋ ಫೆರ್ನಾಂಡಿಸ್ ಮತ್ತು ವಿಲ್ಸನ್ ಒಲಿವೆರಾ ಪಾಲಿಗೆ ಈ ಭಾರಿಯ ದಿವೋ ಸಾಹಿತ್ಯ ಪುರಸ್ಕಾರ-2008
»ಹಿರಿಯ ಕೊಂಕಣಿ ಸಾಹಿತಿ ರವೀಂದ್ರ ಕೇಲ್ಕರ್ ರಿಗೆ ಘನತೆಯ ಜ್ನಾನಪೀಟ ಪ್ರಶಸ್ತಿ
»ಸಂಧ್ಯಾ ಪೈ ಅವರ‘ಗಮ್ಮತ್ತಿನ ಕಥೆಗಳು’,ಮು೦ತಾದ 6 ಕೃತಿ ಬಿಡುಗಡೆ
»ಜನಪದ ಸಂಸ್ಕೃತಿಯ ಬೆಸುಗೆಗೆ ಅಪೂರ್ವ, ಅಪರೂಪ ಸುಗ್ಗಿ ಬೆನ್ನಿ
»ಅರಾಟೆ ಮಂಜುನಾಥಗೆ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ
»ವೈಷ್ಣವಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ: ರಾಜ್ಯಕ್ಕೆ ಹೆಮ್ಮೆ
»‘ನಿರ್ಭಯ ಸೂರ್ಯ’ ಕವನ ಸ೦ಕಲನ ಬಿಡುಗಡೆ
»ಪ್ರಕಾಶ ಚಂದ್ರ ಶಿಶಿಲ ಅವರಿಗೆ ಡಾಕ್ಟರೇಟ್
»ಪೆರ್ಣೆ: 26 ಜೋಡಿಗಳಿಗೆ ಕಂಕಣ ಭಾಗ್ಯ
»ಮೈಸೂರು:ಬೆಟ್ಟದ ನಂದಿಗೆ ಮಹಾಭಿಷೇಕ
»ಯಲ್ಲಾಪುರ:ಮನಸೂರೆಗೊ೦ಡ ಸಂಕಲ್ಪ ಉತ್ಸವ
»ರಾಜ್ಯಮಟ್ಟದ ತುಳು ಜನಪದ ಜಾತ್ರೆ: ತುಳುವೆರೆ ಆಯನೊ-2009
»ಕೇರಳ ರಾಜ್ಯ 4 ನೇ ಕನ್ನಡ ಸಮ್ಮೇಳನಕ್ಕೆ ಸಿದ್ಧತೆ
»ಸಾಹಿತ್ಯ ಕ್ಷೇತ್ರದಲ್ಲಿ ವಿಖ್ಯಾತರಾಗಿರುವ ಲೇಖಕ ಮಾಳಗಾಂವಕರ
»ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ಡಿ. ಮನೋಹರ ಕುಮಾರ್
»ಕನ್ನಡ ಬಾಷೆಗೆ ಶಾಸ್ತ್ರೀಯ ಸ್ಥಾನಮಾನಗಳಿಸುವಲ್ಲಿ ಹೋರಾಟ ನಡೆಸಿದ ಗಣ್ಯರಿಗೆ ಗೌರವ
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು- ಪ್ರಾ. ಸೀತಾರಾಮ್ ಶೆಟ್ಟಿ
»ಅರ್ಧ ಶಕ್ತಿ ಪೀಠ: ನಾಸಿಕ್ ಸಪ್ತಶೃಂಗಿ ದೇವಿ
»‘ಎದೆ ತುಂಬಿ ಹಾಡುವೆನು' ಕಾರ್ಯಕರಮದಲ್ಲಿ ಮಣಿಪಾಲದ ಕೋಗಿಲೆ ಮರಿಗೆ ಪ್ರಶಸ್ತಿ
»ಯಕ್ಷಗಾನದಲ್ಲಿನ ಬದಲಾವಣೆಗೆ ಕಲಾವಿದ, ಪ್ರೇಕ್ಷಕರಿಬ್ಬರು ಕಾರಣ: ಗಣಪತಿ ಶಾಸ್ತ್ರಿ
»ಸೂರ್ಯ ಶೇರಿಗಾರ್ ನಿಟ್ಟೂರು ಉಡುಪಿ ಇವರಿಗೆ ಸನ್ಮಾನ
»ಗದುಗಿನ ‘ರತ್ನ’ ಈಗ ‘ಭಾರತ ರತ್ನ’ ;ಎಲ್ಲೆಡೆ ಸಡಗರ,ಸ೦ಭ್ರಮ, ಹರ್ಷ
»ಜ.29 ರಿಂದಚಿತ್ರದುರ್ಗದಲ್ಲಿ 75ನೇ ಸಾಹಿತ್ಯ ಸಮ್ಮೇಳನ
»ಕನ್ನಡ ಸಾಹಿತ್ಯ ಪರಿಷತ್ ನ ಉಡುಪಿ ಜಿಲ್ಲಾ ಘಟಕ ಉದ್ಘಾಟನೆ:ಪರಿಷತ್ ಕಟ್ಟಡಕ್ಕೆ ಶೀಘ್ರವೇ ಮ೦ಜೂರಾತಿ- ಡಿಸಿ
»ನುಡಿಸಿರಿ ಉದ್ಘಾಟನೆಗೆ ನಿಸಾರ್, ಅಧ್ಯಕ್ಷತೆ ಕಣವಿ
»ಕಲೆಯ ಉಳಿವಿಗೆ ಸಮಷ್ಟಿ ಯತ್ನ : ಹೇರಂಜಾಲು ಚಂದ್ರಶೇಖರ ಹೊಳ್ಳ
»ಬರವಣಿಗೆ ನನಗೆ ಸತ್ಯಾನ್ವೇಷಣೆ: ಭೈರಪ್ಪ
»ತೋನ್ಸೆ ಪಡುಮನೆ ಪಾರ೦ಪರಾಗತ ಕ೦ಬಳ
»ರಾಷ್ಟ್ರೀಯ ಭಾಷಾ ನೀತಿ ಜಾರಿಗೆ ಬರಗೂರು ಆಗ್ರಹ
»ಶಾಸ್ತ್ರೀಯ ಸ್ಥಾನ: ಪಿಐಎಲ್‌ ವಜಾಕ್ಕೆ ರಾಜ್ಯ ಆಗ್ರಹ
»ತುಳು ಭಾಷೆಗೆ ಎರಡು ಸಾವಿರ ವರ್‍ಷ ಇತಿಹಾಸ: ಪಾಲ್ತಾಡಿ ರಾಮಕೃಷ್ಣ ಆಚಾರ್
» ಈಗ ಎಲ್ಲೆಲ್ಲೂ ಹರಡುತ್ತಿದೆ ಕನನ್ನಡದ ಕಂಪು
»ಕೊಂಕಣಿ ಜನರು ಎಲ್ಲಾ ಕ್ಷೇತ್ರಗಳಲ್ಲಿ ಸೈಎನಿಸಿಕೊಳ್ಳಬೇಕು : ಖಾರ್ವಿ ಕರೆ
»ಮತಾಂತರ ಬೇಡ ದಲಿತ ಸಮುದಾಯಕ್ಕೆ ಪೇಜಾವರ ಶ್ರೀಗಳ ಕರೆ
»ಸಾಹಿತಿಗಳ ಸ್ವಸಹಾಯ ಸಂಘ ಉತ್ತಮ ಬೆಳವಣಿಗೆ: ಕಲ್ಕೂರ
»ಬ್ರಹ್ಮ ಕಲಶೋತ್ಸವ ಸಿದ್ಧತೆಯಲ್ಲಿ ಉದ್ದಂತೋಡು ತರವಾಡು
»ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ : ನಾಡೋಜನಿಗೆ ಹರ್ಷ
»ಮಾಧವ ಕುಲಕರ್ಣಿ, ಮೋಹನ ಸೋನಗೆ ಕಾಂತಾವರ ಪುರಸ್ಕಾರ ಪ್ರದಾನ
»ಶಾಸ್ತ್ರೀಯ ಭಾಷೆಗೆ ಪದ ಎರವಲು: ಕನ್ನಡ ಮನಸುಗಳ ದ್ವಂದ್ವ
»ರಾಜ್ಯೋತ್ಸವಕ್ಕೆ ಶಾಸ್ತ್ರೀಯ ಸಂಭ್ರಮ .
»ಧರ್ಮಸ್ಥಳ: ದೇವರು ಬಂದರು ಅಂಗಣದೆಡೆಗೆ...
»ಪಾಟೀಲ್ ಪುಟ್ಟಪ್ಪಗೆ ನೃಪತುಂಗ ಪ್ರಶಸ್ತಿ
»ಕನ್ನಡ ನಿಧಿ ಯೋಜನೆಗೆ 10ಕೋಟಿ ಸಂಗ್ರಹ
»ಯುಕ್ತಿ, ಶಕ್ತಿಗಳ ಹೋರಿ ಬೆದರಿಸುವ ಹಟ್ಟಿಹಬ್ಬ
»ಹಂಪಿ ಉತ್ಸವ: ಪರಂಪರೆ ನಡಿಗೆಗೆ ನಾ೦ದಿ
»ಯಕ್ಷಗಾನ ಶಿಕ್ಷಣಕ್ಕೆ ಪ್ರಮಾಣಪತ್ರದ ಮಾನ್ಯತೆ ಅಗತ್ಯ: ರಘುಪತಿ ಭಟ್
»ಜಾನಪದ ಸಾಹಿತಿ ಮುದೇನೂರು ಸಂಗಣ್ಣ ವಿಧಿವಶ
»‘ಯಕ್ಷಗಾನ ಧರ್ಮವೂ ಹೌದು’
»ಪೇಜಾವರ ಸದಾಶಿವರಾವ್ ಸ್ಮಾರಕ ಪ್ರಶಸ್ತಿಗೆ ಅರ್‍ಜಿ ಆಹ್ವಾನ
»ಬ೦ದಿದೆ ಸಡಗರದ ಹಬ್ಬ ದೀಪಾವಳಿ ,ನಿವಾರಿಸಲಿ ಮನದ ಅ೦ಧಕಾರದ ಹಾವಳಿ
»ಮರೆಯಾಗುತ್ತಿರುವ ಸಾ೦ಪ್ರದಾಯಿಕ ಗೂಡುದೀಪಗಳು
»ಗೋರುಚ ಜಾನಪದ ಅಕಾಡೆಮಿ ಅಧ್ಯಕ್ಷ
»ದಿಲ್ಲಿಯಲ್ಲಿ ಯಕ್ಷಲೋಕ ಸೃಷ್ಟಿಸಿದ ಕಾಸರಗೋಡಿನ ಬೊಂಬೆಗಳು
»ಪ್ರದೀಪ್ ಕುಮಾರ್ ಕಲ್ಕೂರರಿಗೆ ಸಾರ್ವಜನಿಕ ಅಭಿನಂದನೆ
»ಮಲೆನಾಡಗಿತ್ತಿಗೆ ದೀಪದೋಕುಳಿ
»ಮುಂಬೈ ಕನ್ನಡಿಗರ ಮನಗೆದ್ದ `ಉಷಾಹರಣ' ನಾಟಕ
»‘ವೈಟ್ ಟೈಗರ್’ ನಾಯಕ ಬೆಂಗಳೂರಿನವ
»ಬೆಳ್ಳಾರೆ: 3ನೇ ವರ್ಷದ ಶಾರದೋತ್ಸವ
»ಸಾಮೂಹಿಕ ಆಚರಣೆಯಿಂದ ಧರ್ಮಜಾಗೃತಿ : ರಾಘವೇಶ್ವರ ಶ್ರೀಗಳು
»ಮಂಗಳೂರಿನ ಅರವಿಂದ್‌‌ ಅಡಿಗರಿಗೆ 'ಬೂಕರ್' ಪ್ರಶಸ್ತಿ’
»ಸಾಹಿತಿ ಆನಂದಿ ಸದಾಶಿವ ರಾವ್ ಇನ್ನಿಲ್ಲ
»ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯ ಮಹಾರಥೋತ್ಸವ
»ಸನಾತನ ಧರ್ಮ ಅತ್ಯ೦ತ ದೊಡ್ಡ ಧರ್ಮ,ಉಳಿದ ಧರ್ಮ ಹುಟ್ಟಲು ಇದು ಕಾರಣ;ಸದಾನ೦ದ ಗೌಡ
»ಕೇರಳದ ಪ್ರೀತಿಯ ಸಿಸ್ಟರ್ ಈಗ ಸಂತ ಅಲ್ಫೋನ್ಸಾ
»ತುಳು ಅಕಾಡೆಮಿ ಅಧ್ಯಕ್ಷರಾಗಿ ಸಾಹಿತಿ ಪಾಲ್ತಾಡು ರಾಮಕೃಷ್ಣ ಆಚಾರ್
»ಮುಂಬೈಯಲ್ಲಿ ಸುಬ್ರಾಯ ಭಟ್ಟರಿಗೆ ಸನ್ಮಾನ
»ಗೋಕರ್ಣ ಪುನರುತ್ಥಾನಕ್ಕೆ ನಾಂದಿ
»ಕಾರಂತರು ಒಂದು ವಿಸ್ಮಯ: ಅಂಬಾತನಯ ಮುದ್ರಾಡಿ
»ಮಿತ್ತ ಬೈಲು ಯಮುನಕ್ಕ ತುಳುನಾಡಿನ ಸಾಂಸ್ಕೃತಿಕ ಕೃತಿ: ಡಿ.ಕೆ. ಚೌಟ
»ನಾದವೈಭವಂನ ಭಜನಾ ನಾದಾಭಿಯಾನಕ್ಕೆ ಚಾಲನೆ
»ಫ್ರೆಂಚ್ ಲೇಖಕ ಲೆ ಕ್ಲೇಜಿಯೊಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
»ಇಸ್ಲಾ೦ ಧರ್ಮದ ಐದು ಆಧಾರ ಸ್ಥ೦ಭಗಳು
»ನಾಳೆ ನಗರದಲ್ಲಿ ಕಾರಂತ ಹುಟ್ಟು ಹಬ್ಬ
»ಮೂವರು ಗಣ್ಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ
»ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಮೊತ್ತ 1 ಲಕ್ಷರು.ಗೆ ಏರಿಕೆ
»ಭಾರತೀಯ ತತ್ತಶಾಸ್ತ್ರ ಪ್ರವೇಶ ಗ್ರಂಥ ಲೋಕಾರ್ಪಣೆ
»ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ
»ಕರ್ನಾಟಕ ಸಾಹಿತ್ಯ ಪರಿಷತ್ ಉದಯ
»ಹೂವಿನಕೋಲಿಗೆ ಮನಸೋತ ಸೋನಿಯಾ
»ರವಿ ಬೆಳಗೆರೆ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ
»ಮಾನವೀಯತೆಯೇ ನಿಜವಾದ ಧರ್ಮ : ಶ್ರೀ ಪೂರ್ಣಕಾಮಾನಂದಜೀ
»`ಮಕ್ಕಳ ಮೊಲಕ ಕನ್ನಡ ಕಸ್ತೂರಿಯನ್ನು ಪಸರಿಸಿ'
»ಐತಿಹಾಸಿಕ ಮೈಸೂರು ದಸರಾಕ್ಕೆ ಸಿದ್ದಗಂಗಾಶ್ರೀ ಚಾಲನೆ
»ನವಮದ ಮಹತ್ವ ಹೊತ್ತ ನವರಾತ್ರಿ
»ಈದಲ್ ಫಿತ್ರ್ `ಮಾನವ ಮೈತ್ರಿಗೆ ರಮ್ಜಾನ್ ಸಂದೇಶ'
»ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಪ್ರಕಟ
»ಕಸಾಪಗೆ ಪರ್ಯಾಯವಾಗಿ ಕರ್ನಾಟಕ ಸಾಹಿತ್ಯ ಪರಿಷತ್!
»ಜಿಲ್ಲಾ ಕಾರಾಗೃಹದಲ್ಲಿ ಬಹುಭಾಷಾ ಕವಿಗೋಷ್ಟಿ !
»ದೆಹಲಿಯಲ್ಲಿ ಮಿಂಚಿದ ‘ಮಳೆಹಕ್ಕಿ’
»ಐವರು ಗಣ್ಯರಿಗೆ ಅನುವಾದ ಅಕಾಡೆಮಿ ಗೌರವ ಪ್ರಶಸ್ತಿ
»ಚಾಂದ್ರಾಯಣ ವ್ರತ
»ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ
»ಶಿಶುನಾಳ ಶರೀಫರು
»ಶಿಕ್ಷಣದಲ್ಲಿ ಗಮಕ ಕಲೆ ಕಡ್ಡಾಯಕ್ಕೆ ಗೊತ್ತುವಳಿ ಮಂಡನೆ
»ವಿದೇಶದ ಕ್ರೈಸ್ತ ಶಾಲೆಗಳಲ್ಲಿ ವೇದಾಂತ ಪಾಠ!
»ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!
»ವಸುಧೈವ ಕುಟುಂಬಕಮ್
»ವಿವೇಕಾನಂದ ಎಂಬ ವೀರ ಸನ್ಯಾಸಿ
»‘ಗೋಕರ್ಣ: ಸ್ಥಿರಾಸ್ತಿ ವರ್ಗಾವಣೆಯಾಗಿಲ್ಲ ’
» 8 ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ.ಗಮಕಿಗಳಿಗೆ ‘ಕುಮಾರವ್ಯಾಸ’ ಪ್ರಶಸ್ತಿ- ಆಚಾರ್ಯ
»ಹಿಂದೂ ಧರ್ಮ ಅಪಾರ್ಥಕ್ಕೆ ಒಳಗಾಗಿದೆಯೇ?
»`ಆದೇಶದಿಂದ ಕನ್ನಡದ ಕಳಕಳಿ ಮೊಡದು'
»ಕೋಳ್ಯೂರು ಅವರಿಗೆ ಮಂಡೆಚ್ಚ ಪ್ರಶಸ್ತಿ
»ಆತ್ಮಲಿಂಗ-ಭಕ್ತರ ಮಧ್ಯೆ ಮಠ ಗೋಡೆಯಾಗಲ್ಲ: ರಾಘವೇಶ್ವರ ಶ್ರೀ ಘೋಷಣೆ
»ಕಟೀಲಿನಲ್ಲಿ 19 ರಿಂದ ರಾಜ್ಯ ಗಮಕ ಕಲಾ ಸಮ್ಮೇಳನ
»ಗಂಗೂಬಾಯಿ, ಭೀಮಸೇನರಿಗೆ ಸವಾಯಿ ಗಂಧರ್ವ ಪ್ರಶಸ್ತಿ
»ರಾಘವೇಶ್ವರ ಸ್ವಾಮಿ ಪುರ ಪ್ರವೇಶ. ಗೋಕರ್ಣದಲ್ಲಿ ‘ಮಹಾಸಂಕಲ್ಪ ಸಮಾವೇಶ’.ಹಸ್ತಾಂತರಕ್ಕೆ ಸ್ವರ್ಣವಲ್ಲಿಶ್ರೀ ವಿರೋಧ
»ಹಿಂದಿ ಹೇರಿಕೆ ತಡೆಗೆ 12 ಸೂತ್ರಗಳು!!
»ಎಸೆಸೆಲ್ಸಿ ಪ್ರಥಮ ರ್‍ಯಾಂಕ್ ಪಡೆದಿದ್ದ ಅರವಿಂದ
»ದೇವಾಲಯಗಳ ಹಸ್ತಾಂತರ ಜಾತಿ ಸಂಘಷ೯ಕ್ಕೆ ಮೂಲವಾದೀತೇ ?
»ಅಧ್ಯಾತ್ಮಕ ಪಾಶ್ಚಾತ್ಯ ಸಂಸ್ಕೃತಿ ಧಕ್ಕೆಯಾಗದಿರಲಿ: ಕಲ್ಕೂರ
» ಅಮೆರಿಕದಲ್ಲಿ ಕನ್ನಡದ ಕ೦ಪು
»ನಲ್ಲೂರು - ಸಾರಥಿಯಾದ ಬಗೆ
»9/11- ಅವತ್ತು ಅಮೆರಿಕೆಯೇನು? ಇಡೀ ಜಗತ್ತೇ ನಡುಗಿತ್ತು!
»ಚೌತಿ ಹಬ್ಬ ಮತ್ತು ಪ್ಯಾಸೆಂಜರ್ ರೈಲಿನ ಪ್ರಯಾಣ!
»'ಬೂಕರ್' ಪ್ರಶಸ್ತಿ ಸಾಲಿನಲ್ಲಿ ಮಂಗಳೂರಿನ ಅರವಿಂದ್‌‌
»ಹೃದಯದಿಂದ ಸ್ಫುರಿಸಿದ ಭಾವ ದೀಪ್ತಿ ‘ಕಾವ್ಯ’: ಬಿ. ಕೃಷ್ಣ ಪೈ
»ವಯೋಲಿನ್ ಮಾಂತ್ರಿಕ ಕುನ್ನಕುಡಿ ವೈದ್ಯನಾಥನ್ ನಿಧನ
»ವಿಶ್ವ ಕನ್ನಡ ಸಮ್ಮೇಳನದ ಸುತ್ತ ಅನುಮಾನದ ಹುತ್ತ
»ಖ್ಯಾತ ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ ಅವರಿಗೆ ಯಕ್ಷ ಕಲಾನಿಧಿ ಪ್ರಶಸ್ತಿ ಪ್ರಧಾನ
»ಬೆಂಗಳೂರಿನಲ್ಲಿ ಯಕ್ಷ ಅಕಾಡೆಮಿ ಕೇಂದ್ರ : ಕುಂಬ್ಳೆ ಸುಂದರ ರಾವ್
»