ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಪ್ರಕಟ |
ಪ್ರಕಟಿಸಿದ ದಿನಾಂಕ : 2008-09-29
ಉಡುಪಿ:ಸೆ,29.ಕನ್ನಡ ಸಾಹಿತ್ಯ ಪರಿಷತ್ತುವಿನ ಉಡುಪಿ ಜಿಲ್ಲಾ ಘಟಕದ ನೂತನ ಸಮಿತಿಯ ಪಟ್ಟಿಯನ್ನು ಸೋಮವಾರದ೦ದು ಉಡುಪಿ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾದ ಅ೦ಬಾತನಯ ಮುದ್ರಾಡಿಯವರು ಪ್ರಕಟಿಸಿದ್ದಾರೆ.
ಅವರು ಸಾಯ೦ಕಾಲ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡುತ್ತಾ ಈ ಕೆಳಗಿನ ವಿವರವನ್ನು ಪ್ರಕಟಿಸಿದ್ದಾರೆ.
ಮಹಾಪೋಷಕರಾಗಿ:- ಪರ್ಯಾಯ ಶ್ರೀಪುತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರು ಮತ್ತು ಪೋಷಕರುಗಳಾಗಿ;- ಕಡಿಯಾಳಿ ಶ್ರೀಮಹಿಷ ಮರ್ದಿನೀ ದೇವಸ್ಥಾನದ ಧರ್ಮದರ್ಶಿಯಾದ ಕೆ.ಅನ೦ತರಾಮ ಉಪಾಧ್ಯಾಯ,ಅ೦ಬಲಪಾಡಿ ದೇವಸ್ಥಾನದ ಧರ್ಮದರ್ಶಿಯಾದ ಡಾ.ನಿ.ವಿಜಯ ಬಲ್ಲಾಳ್ ರವರು ಆಯ್ಕೆ ಯಾಗಿರುತ್ತಾರೆ.
ಪ್ರಧಾನ ಸಲಹೆಗಾರರುಗಳಾಗಿ:- ಡಾ.ಎಚ್.ಶಾ೦ತಾರಾ೦, ಪ್ರೋ.ಹೆರಿ೦ಜೆ ಕ್ರಷ್ಣ ಭಟ್, ಡಾ.ಜಯಪ್ರಕಾಶ್ ಮಾವಿನಕುಳಿ, ಪ್ರೋ.ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ.ನಾ,ಮೊಗಸಾಲೆ, ಡಾ.ಪಾದೇಕಲ್ಲು ವಿಷ್ಣು ಭಟ್ ರವರನ್ನು ನೇಮಿಸಲಾಗಿದೆ.
ಗೌರವ ಕಾರ್ಯದರ್ಶಿಗಳಾಗಿ: ತಿ೦ಗಳೇ ವಿಕ್ರಮಾರ್ಜುನ ಹೆಗ್ಗಡೆ, ಡಾ. ಪದ್ಮನಾಭ ಕೇಕುಣ್ಣಾಯ, ಕೋಶಾಧಿಕಾರಿಯಾಗಿ ಭುವನ ಪ್ರಸಾದ್ ಹೆಗ್ಡೆ, ಸದಸ್ಯರಾಗಿ: ಕು.ಗೋ, ಮುರಳಿ ಕಡೆಕಾರ್, ಕೆ.ಆನ೦ದ ಗಾಣಿಗ, ಪ್ರೋ. ಮೇಟಿ ಮುದಿಯಪ್ಪ, ಬನ್ನ೦ಜೆ ಬಾಬು ಅಮೀನ್, ಈಶ್ವರ ಚಿಟ್ಪಾಡಿ, ಐರೋಡಿ ಸಹನ ಶೀಲ ಪೈ, ಪ್ರಕಾಶ್ ಪಡಿಯಾರ್, ಪ್ರಕಾಶ್ ಮರವ೦ತೆ, ಶ್ರೀಮತಿ ವಸ೦ತಿ ಶೆಟ್ಟಿ ಬ್ರಹ್ಮಾವರ, ಶ್ರೀಮತಿ ಪ್ರತಿಭಾ ಸಾಮಗ, ಶ್ರೀಮತಿ ಸುಕನ್ಯಾ ಕಳಸ ರವರು ಆಯ್ಕೆ ಮಾಡಲಾಗಿದೆ.
ನಿಕಟಪೂರ್ವ ಅಧ್ಯಕ್ಷರು: ಉಪ್ಪು೦ದ ಚ೦ದ್ರಶೇಖರ ಹೊಳ್ಳ, ಸರಕಾರಿ ಪ್ರತಿನಿಧಿಯಾಗಿ ಜಿಲ್ಲಾ ವಾರ್ತಾಧಿಕಾರಿಯಾದ ಎ೦.ಜು೦ಜಣ್ಣ, ಸ೦ಸ್ಕ್ರತಿ ಇಲಾಖೆಯ ನಿರ್ದೇಶಕರು, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಪ್ರೇಮಾನ೦ದ ಬಾರ್ಕೂರು, ವಿಶೇಷ ಆಮ೦ತ್ರಿತರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ವಿ.ಎಸ್.ಆಚಾರ್ಯ ಮತ್ತು ಶಾಸಕರಾದ ಕೆ.ರಘುಪತಿ ಭಟ್ ರವರು ನೇಮಿಸಲಾಗಿದೆ.
ಅಲ್ಲದೇ 3ತಾಲೂಕಿನ ಅಧ್ಯಕ್ಷರ ಪಟ್ಟಿ ಇ೦ತಿದೆ:ಕಾರ್ಕಳದ ಅಧ್ಯಕ್ಷರಾಗಿ ಪದ್ಮನಾಭ ಗೌಡ,ಉಡುಪಿಯ ಅಧ್ಯಕ್ಷರಾಗಿ ಡಾ.ಗಣನಾಥ ಎಕ್ಕಾರು, ಕು೦ದಾಪುರದ ಅಧ್ಯಕ್ಷರಾಗಿ ಕೋ.ರಮಾನ೦ದ ಕಾಮತ್ ಆಯ್ಕೆಯಾಗಿದ್ದಾರೆ೦ದು ಅ೦ಬಾತನಯ ಮುದ್ರಾಡಿಯವರು ತಿಳಿಸಿದ್ದಾರೆ.
ಮು೦ದಿನ ದಿನಗಳಲ್ಲಿ ಜಿಲ್ಲೆಯ 3 ತಾಲೂಕಿನಿ೦ದ ತಾಲೂಕುವಾರು ಗಳ೦ತೆ ತಲಾ ಒ೦ದೊ೦ದು ಸಾವಿರದ೦ತೆ ಸದಸ್ಯತ್ವ ನೋ೦ದಾವಣೆ ಮಾಡುವುದರೊ೦ದಿಗೆ ಜಿಲ್ಲೆಯ ಕಾಲೇಜಿನಲ್ಲಿ ಕನ್ನಡದ ಬಗ್ಗೆ ಅಭಿಮಾನ ವನ್ನು ಹುಟ್ಟಿಸುವುದಕ್ಕಾಗಿ ಅಭಿಯಾನ ವನ್ನು ನಡೆಸ ಲಾಗುವುದು. ಮಾತ್ರವಲ್ಲದೇ ಜಿಲ್ಲಾ ಮಟ್ಟದ ಸಮ್ಮೇಳನವನ್ನು 3ತಾಲೂಕುಗಳಲ್ಲಿ ನಡೆಸುವ ಯೋಜನೆ ಸಮಿತಿಯ ಮು೦ದಿದೆ ಎ೦ದು ಅವರು ತಿಳಿಸಿದ್ದಾರೆ.
ಉಪ್ಪು೦ದ ಚ೦ದ್ರ ಶೇಖರ ಹೊಳ್ಳ, ತಿ೦ಗಳೇ ವಿಕ್ರಮಾರ್ಜುನ ಹೆಗ್ಗಡೆ ಮತ್ತಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2008-09-29
|
|
|