ದೆಹಲಿಯಲ್ಲಿ ಮಿಂಚಿದ ‘ಮಳೆಹಕ್ಕಿ’ |
ಪ್ರಕಟಿಸಿದ ದಿನಾಂಕ : 2008-09-28
ಪುತ್ತೂರು: ಪುತ್ತೂರಿನ ಶ್ರೀರಾಮಕೃಷ್ಣ ಪ್ರೌಢಶಾಲೆಯ ’ಮಳೆ ಹಕ್ಕಿ- ಹಾರ್ನ್‌ಬಿಲ್’ ಮಕ್ಕಳ ನಾಟಕ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ಉತ್ತಮ ನಾಟಕ ಎಂಬ ಪ್ರಶಂಸೆಗೆ ಪಾತ್ರವಾಗಿದೆ.
ನಾಟಕ ನಿರ್ದೇಶಕ ಐ.ಕೆ.ಬೊಳುವಾರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಂಡದ ನಟಿ ಅನುಷಾ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
16 ರಂದು ದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರದ ಆಡಿಟೋರಿಯಂನಲ್ಲಿ ’ಮಳೆಹಕ್ಕಿ-ಹಾರ್ನ್‌ಬಿಲ್’ ನಾಟಕ ಪ್ರದರ್ಶನಗೊಂಡಿತು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಅಭಿಜಿತ್‌ಸೇನ್ ಗುಪ್ತಾ, ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯದ ಮಹಾನಿರ್ದೇಶಕ ಇಂಜಿತ್ ಮುಖರ್ಜಿ, ಮಹಾರಾಷ್ಟ್ರದ ಹಿರಿಯ ವಿಜ್ಞಾನಿ ಹಾಗೂ ರಂಗಕರ್ಮಿ ಡಾ.ಹೇಮು ಅಧಿಕಾರಿ, ಮೈಸೂರು ರಂಗಾಯಣ ನಿರ್ದೇಶಕ ಸಿ.ಬಸವಲಿಂಗಯ್ಯ, ನಾಟಕೋತ್ಸವದ ಮುಖ್ಯ ನಿರ್ವಾಹಕ ಸುಬ್ರತ್ ಸೇನ್, ಬೆಂಗಳೂರು ವಿಶ್ವೇಶ್ವರಯ್ಯ ಕೈಗಾರಿಕಾ ತಾಂತ್ರಿಕ ವಸ್ತುಸಂಗ್ರಹಾಲಯದ ನಿರ್ದೇಶಕ ಲಕ್ಷ್ಮೀನಾರಾಯಣ ಅವರ ಸಮಕ್ಷಮದಲ್ಲಿ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ನಾಟಕದ ಕಲಾವಿದರಾದ ಸಹಮತ, ಮೇಘಾ ಆರ್.ದೇವಾಡಿಗ, ಶೋಭಿತ್, ಕಾವ್ಯಶ್ರೀ, ಅಜಯಕೃಷ್ಣ, ಕೃಷ್ಣವೇಣಿ, ಪ್ರತ್ಯುಷ್, ಅನುಷಾ ಅವರು ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ಪಡೆದುಕೊಂಡರು.
ತಂಡದಲ್ಲಿ ಮಾರ್ಗದರ್ಶಿ ಶಿಕ್ಷಕಿ ವಸಂತಿ, ನಾಟಕ ನಿರ್ದೇಶಕ ಐ.ಕೆ.ಬೊಳುವಾರು, ಸಹನಿರ್ದೇಶಕ ಮೌನೇಶ ವಿಶ್ವಕರ್ಮ ಇದ್ದರು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-28
|
|
|