ಮನಾಮಾ: ಪ್ರತಿ ತಿಂಗಳೂ ಎರೆಡು ಸಾವಿರ ಹೊಸ ಕಾರುಗಳು ರಸ್ತೆಗೆ |
ಪ್ರಕಟಿಸಿದ ದಿನಾಂಕ : 2008-09-28
ಈಗಾಗಲೇ ವಾಹನನಿಬಿಡವಾಗಿರುವ ರಸ್ತೆಗಳು : ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಆಗ್ರಹ
ಮನಾಮಾ, ಸೆಪ್ಟೆಂಬರ್ 28: ನಗರದ ರಸ್ತೆಗಳು ಈಗಾಗಲೇ ವಾಹನಗಳಿಂದ ಕಿಕ್ಕಿರಿದಿದ್ದರೂ ಸರ್ಕಾರ ಪ್ರತಿ ತಿಂಗಳೂ ಎರೆಡು ಹೊಸ ಕಾರುಗಳಿಗೆ ಅನುಮತಿ ನೀಡುತ್ತಿದೆ.
ವಾಹನಗಳ ಸುಗಮ ಸಂಚಾರಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡು ಪ್ರಗತಿಯಲ್ಲಿವೆ. ಆ ಯೋಜನೆಗಳು ಕಾರ್ಯಗತವಾಗುವ ಮೊದಲು ಹೊಸ ಕಾರುಗಳಿಗೆ ಆಸ್ಪದ ನೀಡದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೇ ನಿಧಾನಗತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಆಗ್ರಹ ಪಡಿಸಲಾಗಿದೆ.
ಆದರೆ ಈ ಕಾಮಗಾರಿಗಳು ತಮ್ಮ ನಿಗದಿತ ವೇಳಾಪಟ್ಟಿಯಂತೆ ಮುನ್ನಡೆಯುತ್ತಿದ್ದು ನಿಗದಿತ ಸಮಯಕ್ಕೆ ಪ್ರಾರಂಭಗೊಳ್ಳಲಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಪ್ರತಿ ತಿಂಗಳೂ ಸುಮಾರು ಎರೆಡು ಸಾವಿರ ಹೊಸ ಕಾರುಗಳು ರಸ್ತೆಗಿಳಿಯುತ್ತಿದ್ದು ವಾಹನ ಸಂಚಾರವನ್ನು ಇನ್ನಷ್ಟು ನಿಬಿಡಗೊಳಿಸುತ್ತಿವೆ ಎ.
ರಾಷ್ಟ್ರದ ಜನಸಂಖ್ಯೆ ಒಂದು ಮಿಲಿಯನ್ ದಾಟಿರುವುದು ಕಾರುಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಡೇಲಿ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-28
|
|
|