ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ದೋಹಾ: ದಕ್ಷಿಣದ ರಫಿಯ ಗಾನದ ಮೋಡಿ ಕತರಿನಲ್ಲಿ

ತುಳು ಕೂಟ ಕತರ್ ಪ್ರಸ್ತುತ ಪಡಿಸುತ್ತಿದೆ : ದೋಹಾ ಕಿ ಶಾಮ್-ರಫಿ ಕೆ ನಾಮ್

ದೋಹಾ, ಸೆಪ್ಟೆಂಬರ್ 28:  ದಕ್ಷಿಣದ ರಫಿ ಎಂದೇ ಪ್ರಸಿದ್ಧರಾಗಿರುವ ಮಂಗಳೂರಿನ ಟಾಗೋರ್ ದಾಸ್ ಅವರು ಸತತ ನಾಲ್ಕು ಘಂಟೆಗಳ ಕಾಲ ನೇರ ಸಂಗೀತ ಕಾರ್ಯಕ್ರಮವೊಂದನ್ನು ನೀಡಿ ಸಭಿಕರನ್ನು ರಂಜಿಸಲಿದ್ದಾರೆ.

ನವೆಂಬರ್ 7 ರಂದು ನಗರದ ದೋಹಾ ಸಿನೆಮಾ ಸಭಾಂಗಣದಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮಕ್ಕೆ -ದೋಹಾ ಕಿ ಶಾಮ್ ರಫಿ ಕೆ ನಾಮ್- ಎಂಬ ಶಿರೋನಾಮೆಯನ್ನು ನೀಡಲಾಗಿದೆ.  ಈ ಕಾರ್ಯಕ್ರಮವನ್ನು ತುಳು ಕೂಟ ಕತರ್ ಆಯೋಜಿಸಿದ್ದು ಇತ್ತೀಚೆಗೆ ಉಡುಪಿಯಲ್ಲಿ ಸತತ ಹನ್ನೆರೆಡು ಘಂಟೆಗಳ ಕಾಲ ಯಶಸ್ವೀ ಪ್ರದರ್ಶನ ನೀಡಿದ್ದಾರೆ.  ಇದುವರೆಗೂ ದಾಸ್ ಅವರು ಸ್ವದೇಶ ಹಾಗೂ ವಿದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. 

ದೋಹಾ ಕಿ ಶಾಮ್ ರಫಿ ಕೆ ನಾಮ್ ತುಳು ಕೂಟದ ಹತ್ತನೆಯ ವಾರ್ಷಿಕೋತ್ಸವದ ವಿಶೇಷ ಆಕರ್ಷಣೆಯಾಗಲಿದೆ.  ಗಾನಗಂಧರ್ವ ದಿವಂಗತ ಮೊಹಮ್ಮದ್ ರಫಿಯವರ ಧನಿಯನ್ನು ಯಥಾವತ್ತಾಗಿ ಅನುಸರಿಸುವ ದಾಸ್ ಅವರು ಹಿಂದಿ ಗಾನಪ್ರಿಯರ ನಡುವೆ ಜನಪ್ರಿಯರಾಗಿದ್ದಾರೆ.  ಅವರು ಸುಮಾರು ಆರುನೂರಕ್ಕೂ ಹೆಚ್ಚು ರಫಿಯವರ ಹಾಡುಗಳನ್ನು ಕಂಠಪಾಠದ ಮೂಲಕ ಹಾಡಿ ತೋರಿಸಬಲ್ಲವರಾಗಿದ್ದಾರೆ.

ಈ ಕಾರ್ಯಕ್ರಮವನ್ನು ಆಯೋಜಿಸಲು ಹಲವು ಕಾಲದಿಂದ ನಾವು ಕಾಯುತ್ತಿದ್ದು ಈಗ ಆ ಘಳಿಗೆ ಸನ್ನಿಹಿತವಾಗಿದೆ, ನವೆಂಬರ್ 7 ನಮ್ಮೆಲ್ಲರಿಗೂ ಒಂದು ಅವಿಸ್ಮರಣೀಯ ಅನುಭವ ನೀಡಲಿದೆ, ತುಳುನಾಡಿನ ಪ್ರತಿಭೆಗಳನ್ನು ಹೊರನಾಡಿಗೆ ಆಹ್ವಾನಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಅವರ ಪ್ರತಿಭೆ ಬೆಳೆಯಲು ನಾವು ನೀಡಬಹುದಾದ ಪ್ರಯತ್ನವಾಗಿದೆ ಎಂದು ತುಳುಕೂಟ ಕತರ್ ಅಧ್ಯಕ್ಷರಾದ ಶ್ರೀ ರವಿಶೆಟ್ಟಿಯವರು ತಿಳಿಸಿದ್ದಾರೆ.

ಶ್ರೀ ಟಾಗೋರ್ ದಾಸ್ ಅವರು ಒಂಭತ್ತು ಸದಸ್ಯರ ತಂಡವನ್ನು ಹೊಂದಿದ್ದು ಅವರಲ್ಲಿ ಕೇರಳದ ಖ್ಯಾತ ಸಂಗೀತಕಾರರಾದ ಶ್ರೀ ಪಪ್ಪನ್ ಅವರೂ ಒಬ್ಬರಾಗಿದ್ದಾರೆ.  ಈ ಸಂಗೀತಸಂಜೆಯ ಟಿಕೇಟುಗಳು ಶೀಘ್ರದಲ್ಲಿಯೇ ನಗರದ ಖ್ಯಾತ ಸುಪರ್ ಮಾರ್ಕೆಟ್ ಹಾಗೂ ಹೋಟೆಲುಗಳಲ್ಲಿ ಲಭ್ಯವಾಗಲಿವೆ. ಅಪರೂಪದ ಈ ಅವಕಾಶವನ್ನು ಬಳಸಿಕೊಳ್ಳುವಂತೆ ಎಲ್ಲಾ ಮೊಹಮ್ಮದ್ ರಫಿ ಅಭಿಮಾನಿಗಳು ಹಾಗೂ ತುಳುನಾಡಿನ ಬಾಂಧವರಲ್ಲಿ ತುಳು ಕೂಟ ಕತರ್ ಅಧ್ಯಕ್ಷರಾದ ರವಿಶೆಟ್ಟಿಯವರು ಮನವಿ ಮಾಡಿಕೊಂಡಿದ್ದಾರೆ.

ಚಿತ್ರ, ವರದಿ: ಇಕ್ಬಾಲ್ ಮನ್ನಾ, ದೋಹಾ ಕತರ್. 

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಇಕ್ಬಾಲ್ ಮನ್ನಾ, ದೋಹಾ ಕತರ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-28


ಪ್ರತಿಸ್ಪಂದನ
Vijay Suvarna, Qatar
2008-11-01
I wish to Qatar Tulukoota to get the great and splendid succes in this melodious, sweet sounding programme that called \"Doha ki Shaam Rafi ke Naam\". My best wishes always with our Tulukoota.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ
»ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ.
»ತುಂಡಾದ ಕೇಬಲ್ : ಅಸ್ತವ್ಯಸ್ತವಾದ ಕತರ್ ಟೆಲಿಫೋನ್ ವ್ಯವಸ್ಥೆ
»ಅನಿವಾಸಿಗಳಿಂದ ಆಚರಿಸಲ್ಪಟ್ಟ ಗಣತಂತ್ರ ದಿವಸ : ಹಬ್ಬದ ವಾತಾವರಣ
»ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ.
»ತಿಜೋರಿ ಕದ್ದು ಒಡೆಯಲನುವಾಗುತ್ತಿರುವಾಗಲೇ ಪೋಲೀಸರಿಗೆ ಸಿಕ್ಕಿಬಿದ್ದ ಕಳ್ಳರು
»ಜೆಟ್ ಏರ್ ವೇಸ್ ಪ್ರಾರಂಭಿಸಿರುವ ದೋಹಾ-ಮುಂಬೈ,ಕಲ್ಲಿಕೋಟೆ ನೇರ ವಿಮಾನಯಾನ
»ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು
»ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ
»ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ
»ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ
»ಏರುತ್ತಿರುವ ಮೊಟ್ಟೆ ಬೆಲೆ, ಆತಂಕದಲ್ಲಿ ಬೇಕರಿಗಳು.
»ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿಯರ ಸಂಖ್ಯೆ ೭೦ ಮಿಲಿಯನ್!
»ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ.
»ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)
»ಐಸಿಸಿ ಉತ್ಸವದಲ್ಲಿ ಮನಸೆಳೆದ ಮಕ್ಕಳ ನೃತ್ಯ
»ಆಯಾಗಳ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ಇನ್ನೂ ಪ್ರಸ್ತುತ
»ಐಡಿಯಲ್ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ ಅಕಾಲಿಕ ಮ್ರತ್ಯು
»೧೫ ವರ್ಷ ಒಳಗಿನವರ ಕ್ರಿಕೆಟ್-ನಾಯಕತ್ವ ವಹಿಸಿದ ಮಂಗಳೂರಿನ ಬಾಲಕ
»500ಕ್ಕೂ ಹೆಚ್ಚು ಮಕ್ಕಳ ಉಚಿತ ನೇತ್ರ ತಪಾಸಣೆ
»2016ರ ಒಲಿಂಪಿಕ್ಸ್ ಕ್ರೀಡೆಗಳ ಪ್ರಯೋಜಕತೆಗೆ ಕತಾರ್ ಯತ್ನ
»೨೦ನೆ ಮಾಂಟ್ರಿಯಲ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕತಾರ್
»ಇಪ್ಪತ್ತು ವರ್ಷ ಪೂರೈಸಿದ ಮೊಬೈಲ್ ಟೆಲಿಕಾಂ ಕಂಪನಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri