ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ. |
ಪ್ರಕಟಿಸಿದ ದಿನಾಂಕ : 2007-12-27
ದೋಹಾ, ಡಿಸೆಂಬರ್ ೨೭:ಗಲ್ಫ್ ರಾಷ್ತ್ರಗಳಿಗೆ ಭಾರತದಿಂದ ಆಮದಾಗುತ್ತಿದ್ದ ಅಕ್ಕಿ ಹಾಗೂ ಇತರ ಅಗತ್ಯವಸ್ತುಗಳ ಬೆಲೆ ಇನ್ನಷ್ಟು ಏರಲಿದೆ. ಸಧ್ಯಕ್ಕೆ ಆಮದಾಗುತ್ತಿರುವ ಆಹಾರ ಮತ್ತು ಇತರ ಅಗತ್ಯವಸ್ತುಗಳಿಗೆ ಭಾರತದಲ್ಲಿಯೇ ಉತ್ತಮ ಬೇಡಿಕೆಯಿದ್ದು ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುವ ಪ್ರಮಾಣ ಇಳಿಕೆಯಗುವ ಸಾಧ್ಯತೆಯ ಮೇಲೆ ಬೆಲೆಗಳು ಏರಲಿವೆ ಎಂದು ಪ್ರಮುಖ ವಾಣಿಜ್ಯ ವಹಿವಾಟುದಾರರು ಅನುಮಾನಿಸಿದ್ದಾರೆ.
ಭಾರತದ ಏರಿದ ಬೇಡಿಕೆಯನ್ನು ಪೂರೈಸಲು ರಫ್ತು ಮಾಡುತ್ತಿರುವ ಪ್ರಮಾಣದಲ್ಲಾಗುವ ಬದಲಾವಣೆಯ ತೀರ್ಮಾನವನ್ನು ಭಾರತ ಸರ್ಕಾರದ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ತೆಗೆದುಕೊಳ್ಳಬಹುದೆಂದು ತಿಳಿದುಬಂದಿದೆ.
ಪರಿಣಾಮವಾಗಿ ಕನಿಷ್ಟ ಎರೆಡು ಬಗೆಯ ಅಕ್ಕಿ ಹಾಗೂ ದಕ್ಷಿಣ ಭಾರತೀಯರು ಹೆಚ್ಚಾಗಿ ಬಳಸುವ ಕುಚ್ಚಿಗೆ ಅಕ್ಕಿ ಕನಿಷ್ಟ ೨೦% ಬೆಲೆ ಏರಲಿದೆ. ಕಳೆದ ತಿಂಗಳುಗಳಲ್ಲಿ ಎರೆಡು ಬಾರಿ ಬೆಲೆ ಏರಿದ್ದು ಇದು ಸತತ ಮೂರನೆಯ ಬೆಲೆ ಏರಿಕೆಯಾಗಿದೆ. ಹಲವೆಡೆ ಕುಚ್ಚಿಗೆ ಅಕ್ಕಿ ಬೆಲೆ ೫೦% ಕ್ಕೂ ಹೆಚ್ಚಾಗಿ ಏರಿಕೆಯಾಗಿದೆ.
ಕಳೆದ ಬಾರಿಯ ಪೂರೈಕೆಯಲ್ಲಿ ಗಣನೀಯ ಕೊರತೆ ಕಂಡುಬಂದಿದ್ದರಿಂದ ಥಾಯ್ಲೆಂಡಿನಿಂದ ಅಕ್ಕಿ ತರಿಸಲಾಗಿತ್ತು. ಬಳಿಕ ಹೆಚ್ಚಿನ ಅಕ್ಕಿಯ ಬೇಡಿಕೆ ಥಾಯ್ಲೆಂಡಿಗೆ ಸಲ್ಲಿಸಿದ ಕೂಡಲೇ ಅವರೂ ಬೆಲೆ ಏರಿಸಿದ್ದಾರೆ ಎಂದು ಅಕ್ಕಿ ಆಮದು ಮಾಡಿಕೊಳ್ಳುವ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಾಧಾನಕರ ಸಂಗತಿಯೆಂದರೆ ಬಾಸ್ಮತಿ ಅಕ್ಕಿಯ ಮೇಲೆ ಇದುವರೆಗೂ ಯಾವುದೇ ಬೆಲೆ ಏರಿಕೆ ಹೇರಿಲ್ಲ. ಬಾಸ್ಮತಿ ಅಕ್ಕಿಗೆ ಸಧ್ಯ ಸಾಕಷ್ಟು ಪೂರೈಕೆಯಿದ್ದು ಬೆಲೆ ಏರಿಸುವ ಅಗತ್ಯ ಕಂಡುಬರುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-27
|
|
|