ದೋಹಾ: ತುಳುಕೂಟ ಆಯೋಜಿಸಿರುವ ವಿಹಾರಕೂಟ |
ಪ್ರಕಟಿಸಿದ ದಿನಾಂಕ : 2008-09-27
ಈದ್ ಉಲ್ ಫಿತರ್ ಮರುದಿನ ಆಯೋಜಿತ ಕಾರ್ಯಕ್ರಮ : ಸದಸ್ಯರಲ್ಲಿ ನೋಂದಾಯಿಸಿಕೊಳ್ಳಲು ಕರೆ
ದೋಹಾ, ಸೆಪ್ಟೆಂಬರ್ 27: ಈದ್ ಉಲ್ ಫಿತರ್ ಹಬ್ಬದ ರಜೆಯನ್ನು ವಿಹಾರಕೂಟದಲ್ಲಿ ಭಾಗವಹಿಸುವುದರ ಮೂಲಕ ಅವಿಸ್ಮರಣೀಯವನ್ನಾಗಿಸಿಕೊಳ್ಳುವಲ್ಲಿ ಕತರ್ ತುಳು ಕೂಟ ಈದ್ ಉಲ್ ಫಿತರ್ ಹಬ್ಬದ ಮರುದಿನ ವಿಹಾರಕೂಟವೊಂದನ್ನು ಏರ್ಪಡಿಸಿದೆ. ನಗರದಿಂದ ಸುಮಾರು ನೂರು ಕಿ.ಮೀ. ದೂರವಿರುವ ಅಲ್ ಶಾಮಾಲ್ ಗಾರ್ಡನ್ಸ್ ನಲ್ಲಿ ಏರ್ಪಡಿಸಿರುವ ವಿಹಾರಕೂಟದಲ್ಲಿ ಭಾಗವಹಿಸಲು ಸದಸ್ಯರು ಹಾಗೂ ಅವರ ಕುಟುಂಬವರ್ಗಕ್ಕೆ ಆಹ್ವಾನ ನೀಡಲಾಗಿದೆ.
ಶಾರಾ ಕರಾಬಾ ರಸ್ತೆಯ ಪಾರ್ಕಿಂಗ್ ಸ್ಥಳ (ಕೆನರಾ ಜ್ಯೂಎಲರಿ ವಿರುದ್ಧ ಸ್ಥಳ)ದಲ್ಲಿ ಬೆಳಿಗ್ಗೆ ಎಂಟು ಘಂಟೆಗೆ ಮುನ್ನವೇ ಆಗಮಿಸಬೇಕೆಂದು ಆಯೋಜಕರು ಆಗ್ರಹಿಸಿದ್ದಾರೆ. ಎಂಟು ಘಂಟೆಗೆ ಸರಿಯಾಗಿ ವಾಹನಗಳು ಶಮಾಲ್ ಗಾರ್ಡನ್ಸ್ ಎಡೆಗೆ ತೆರಳಲಿವೆ.
ಹೆಚ್ಚಿನ ವಿವರಗಳಿಗೆ ಈ ಕೆಳಕಂಡವರನ್ನು ಸಂಪರ್ಕಿಸಬಹುದಾಗಿದೆ: ದಿನೇಶ್ ಚಂದ್ರ ಶೆಟ್ಟಿ - 5245034 ಮೋಹನ್ ಜೆ :- 5906479 ವಿಜಯ್ ರೈ: - 5854679 ಸತ್ಯನಾರಾಯಣ ಹೆಗಡೆ:- 5974002 ಶ್ರೀಧರ್ ನಾಯಕ್:- 5182799 ಶ್ರೀಮತಿ ಸುಧಾ ಶೆಟ್ಟಿ: - 4651541
ಈ ವಿಹಾರಕೂಟದಲ್ಲಿ ಕುಟುಂಬಸಹಿತ ಪಾಲ್ಗೊಳ್ಳಲು ಎಲ್ಲಾ ಸದಸ್ಯರಲ್ಲಿ ತುಳು ಕೂಟದ ಅಧ್ಯಕ್ಷರಾದ ಶ್ರ್‍ಈ ರವಿಶೆಟ್ಟಿಯವರು ಕೋರಿದ್ದಾರೆ. ತುಳುಬಾಂಧವರು ಒಂದೆಡೆ ಸೇರಿ ಒಂದು ಕುಟುಂಬದ ವಾತಾವರಣದಲ್ಲಿ ಕಾಲ ಕಳೆಯಲು ಇದೊಂದು ಸದಾವಕಾಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಿ: ಇಕ್ಬಾಲ್ ಮನ್ನಾ, ದೋಹಾ, ಕತರ್.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ, ದೋಹಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-27
|
|
| Mohankudla, Mangalore | 2008-09-27 | | very nice programme |
|