ಜೆದ್ದಾ: ಎಂ.ಇ.ಎಂ.ಆರ್. ಬಿ ಸಂಸ್ಥೆ ಯಿಂದ ಇಫ್ತಾರ್ ಕೂಟ : ಒಂದೆಡೆ ಸೇರಿದ ಮಂಗಳೂರು ಬಾಂಧವರು |
ಪ್ರಕಟಿಸಿದ ದಿನಾಂಕ : 2008-09-27
ಜೆದ್ದಾ, ಸೆಪ್ಟೆಂಬರ್ 27: ನಗರದ ಪ್ರತಿಷ್ಟಿತ ಸಂಸ್ಥೆಯಾದ ಎಂ.ಇ.ಎಂ.ಆರ್. ಬಿ. ಸೆಪ್ಟೆಂಬರ್ 25 ರಂದು ನಗರದ ಕ್ರೌನ್ ಪ್ಲಾಜಾ ಹೋಟೆಲಿನಲ್ಲಿ ತನ್ನ ಸದಸ್ಯರಿಗಾಗಿ ಇಫ್ತಾರ್ ಕೂಟವನ್ನು ಏರ್ಪಡಿಸಿತ್ತು. ಸಂಸ್ಥೆಯ ಸುಮಾರು ಅರವತ್ತು ಸದಸ್ಯರಲ್ಲದೇ ಇತರ ಅತಿಥಿಗಳನ್ನೊಳಗೊಂಡು ಸುಮಾರು ನೂರು ಉಪವಾಸಿ ಮುಸ್ಲಿಂ ಬಾಂಧವರು ಕೂಟದಲ್ಲಿ ಭಾಗವಹಿಸಿದ್ದರು.
ಇವರಲ್ಲಿ ಹೆಚ್ಚಿನವರು ಕರಾವಳಿಯ ಮಂಗಳೂರಿನವರಾಗಿದ್ದು ಒಂದೆಡೆ ಕಲೆಯುವ ಸದವಾಶ ಈ ಕೂಟದ ಮೂಲಕ ಕೂಡಿಬಂದಿತ್ತು. ಇಫ್ತಾರ್ ಕೂಟದಲ್ಲಿ ಸದಸ್ಯರನ್ನು ಆಹ್ವಾನಿಸಿದ ಅಧ್ಯಕ್ಷರು ಪವಿತ್ರ ಕುರ್ ಆನಿನ ಕೆಲವು ವಾಕ್ಯಗಳನ್ನು ಪಠಿಸಿ ಪ್ರವಾದಿ ಮೊಹಮ್ಮದ್ (ಸ) ಅವರ ವಚನಗಳನ್ನು ಅರುಹಿದರು. ಪ್ರವಾದಿಯವರ ಆದರ್ಶಗಳನ್ನು ಪಾಲಿಸಲು ಹಾಗೂ ಸರ್ವಶಕ್ತನೊಂದಿಗೆ ಪ್ರಾರ್ಥಿಸಲು ರಮಧಾನ್ ತಿಂಗಳು ಅತ್ಯಂತ ಸೂಕ್ತವಾದ ಅವಕಾಶವಾಗಿದೆ ಎಂದು ತಿಳಿಸಿದರು. ಪ್ರಾರ್ಥನೆ ಹಾಗೂ ಉಪವಾಸಗಳನ್ನು ಆಚರಿಸುವುದರ ಮೂಲಕ ನಮ್ಮೊಳಗಿನ ಪಾಪವನ್ನು ತೊಳೆಯಬಹುದಾಗಿದೆ, ನಮಗಿಂತಲೂ ಕೆಳಗಿರುವವರ ಸ್ಥಿತಿಯನ್ನು ತಿಳಿಯಲು ಉಪವಾಸದ ಮೂಲಕ ಸಾಧ್ಯವಾಗುತ್ತದೆ ಹಾಗೂ ಜಕಾತ್ ಮೂಲಕ ಸಮಾಜದ ಎಲ್ಲಾ ವರ್ಗದವರೂ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಉಪಸ್ಥಿತರಲ್ಲಿ ಹೆಚ್ಚಿನವರು ಉರ್ದು ಮಾತೃಭಾಷೆಯ ಕುಟುಂಬದವರಾಗಿದ್ದು ಮಹಿಳೆಯರಿಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿತ್ತು.
ಚಿತ್ರ, ವರದಿ: ಮೊಹಮ್ಮದ್ ಇಸ್ಮಾಯಿಲ್ ಕುಳಾಯಿ, ಅಬೂಬಕರ್ ಕುಳಾಯಿ, ಮೊಹಮ್ಮದ್ ಹನೀಫ್ ಬಜ್ಪೆ, ಮನ್ಸೂರ್ ಕುಳಾಯಿ, ಜೆದ್ದಾ
ವರದಿಯ ವಿವರಗಳು |
 |
ಕೃಪೆ : ಮನ್ಸೂರ್ ಕುಳಾಯಿ, ಜೆದ್ದಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-27
|
|
| sadik, udupi | 2008-09-27 | | really good to see this pics.. but hope there is more mangalore people above than urdu, any way thanks gulf kannada news.. and thanks mansoor.. |
| ziya, mumbai | 2008-09-27 | | very nice pics, we can see our brothers in this pic really great... thanks gulf kannadiga |
|