ಬಹರೇನ್: ಅನಿವಾಸಿ ಭಾರತೀಯ ಪ್ರೊಫೆಸರ್ ಡಾ. ಪ್ರೇಮ್ ಲಾಲ್ ಜೋಶಿಯವರಿಗೆ ಹಿಂದ್ ರತ್ನ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2008-09-26
ಬರುವ ಗಣರಾಜ್ಯದಂದು ಪ್ರದಾನ : ವಿದೇಶದಲ್ಲಿ ಸಲ್ಲಿಸಿದ ಸೇವೆಗೆ ಮನ್ನಣೆ
ಮನಾಮಾ, ಸೆಪ್ಟೆಂಬರ್ 26: ವಿದೇಶದಲ್ಲಿ ಗುರುತರ ಸೇವೆ ಸಲ್ಲಿಸಿದ ಅನಿವಾಸಿಗಳಿಗೆ ವರ್ಷಕ್ಕೊಂದು ಬಾರಿ ನೀಡಲಾಗುವ ಹಿಂದ್ ರತ್ನ (ಭಾರತದ ರತ್ನ) ಪ್ರಶಸ್ತಿಯನ್ನು ಬಹರೇನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಅಗಿರುವ ಡಾ. ಪ್ರೇಮ್ ಲಾಲ್ ಜೋಶಿಯವರು ಪಡೆಯಲಿದ್ದಾರೆ. ಈ ಪ್ರಶಸ್ತಿಯನ್ನು ಬರುವ ಗಣರಾಜ್ಯೋತ್ಸವದ ಮುನ್ನಾದಿನ (ಜನವರಿ 25) ರಂದು ಪ್ರದಾನಿಸಲಾಗುವುದು.
ಈ ಪ್ರಶಸ್ತಿಯನ್ನು NRI Welfare Society of India ಪ್ರತಿವರ್ಷ ನೀಡುತ್ತಿದ್ದು ವಿದೇಶದಲ್ಲಿ ಗುರುತರ ಸೇವೆ ಸಲ್ಲಿಸಿದ ಅನಿವಾಸಿ ಭಾರತೀಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 28ನೇ ಅಂತಾರಾಷ್ಟ್ರ್‍ಈಯ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ನೀಡಲಾಗುವುದು.
ಬಹರೇನ್ ವಿಶ್ವವಿದ್ಯಾಲಯದಲ್ಲಿ ಅಕೌಂಟ್ಸ್ ಬೋಧಿಸುವ ಐವತ್ತನಾಲ್ಕು ವರ್ಷ ವಯಸ್ಸಿನ ಪ್ರೊಫೆಸರ್ ಜೋಶಿಯವರು ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದು ಹಲವು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಬ್ರಿಟನ್ನಿನ್ನಿಂದ ಪ್ರಕಟವಾಗುತ್ತಿರುವ Accounting Auditing and Performance Evaluation ಪತ್ರಿಕೆಯ ಸಹಸಂಪಾದಕರಾಗಿ ಹಾಗೂ Afro Asian Journal of Finance and Accounting ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ವೀಕ್ಲಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-26
|
|
|