ಮನಾಮಾ: ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಆಚರಿಸಿದ ಇಫ್ತಾರ್ ಕೂಟ |
ಪ್ರಕಟಿಸಿದ ದಿನಾಂಕ : 2008-09-26
ಮನಾಮಾ, ಸೆಪ್ಟೆಂಬರ್ 26: ಇಲ್ಲಿನ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿ ಯೇಶನ್ ನಗರದ ಘುದೈಬಿಯಾದಲ್ಲಿರುವ -ಅನರಥಾ- ಸಭಾಂಗಣದಲ್ಲಿ ಇಪ್ತಾರ್ ಕೂಟವೊಂದನ್ನು ಆಯೋಜಿಸಿತ್ತು. ಸಂಘದ ನೂರಾರು ಸದಸ್ಯರು ಮಾತ್ರ ವಲ್ಲದೇ ಬಹರೇನಿನ ವಿವಿಧ ಕರ್ನಾಟಕ ಮೂಲದ ಸಂಘಸಂಸ್ಥೆಗಳ ಪದಾಧಿ ಕಾರಿಗಳು ಹಾಗೂ ಇತರ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು.
ಸಂಘದ ಅಧ್ಯಕ್ಷರಾದ ಹಾಜಿ ಅಬ್ದುಲ್ ರಜಾಕ್ ಹೆಜಮಾಡಿ ಹಾಗೂ ಇತರ ಪದಾಧಿ ಕಾರಿಗಳು ಆಹ್ವಾನಿತ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡರು.
ನಿಗದಿತ ಸಮಯಕ್ಕೆ ಮೊದಲೇ ಎಲ್ಲರೂ ಆಗಮಿಸಿದ್ದು ಸೂರ್ಯಾಸ್ತದ ಸಮಯ ವಾಗು ತ್ತಿದ್ದಂತೆ ಮೊಳಗಿನ ಬಾಂಗ್ (ಪ್ರಾರ್ಥನೆಯ ಕರೆ) ನೊಂದಿಗೆ ಅಂದಿನ ಉಪವಾಸ ವನ್ನು ಪೂರ್ಣಗೊಳಿಸಲಾಯಿತು. ಪ್ರವಾದಿಯವರ ಆದರ್ಶದಂತೆ ಖರ್ಜೂರವನ್ನು ಸೇವಿಸುವ ಮೂಲಕ ಉಪವಾಸ ಪೂರ್ಣಗೊಳಿಸಿದ ಮುಸ್ಲಿಂ ಬಾಂಧವ ರೊಂದಿಗೆ ಉಳಿದವರು ಖರ್ಜೂರ ಸೇವಿಸಿ ಒಂದೇ ಮನೆಗೆ ಸೇರಿದ ಅನುಭವ ನೀಡಿದರು. ಆ ಬಳಿಕ ಲಘು ಪಾನೀಯ ಮತ್ತು ಲಘು ಉಪಾಹಾರಗಳ ಬಳಿದ ಪ್ರಾರ್ಥನೆಗೆ ತೆರಳಿದ ಮುಸ್ಲಿಮ್ ಬಾಂಧವರು ಹಿಂದುರುಗಿದ ನಂತರ ಭೋಜನವನ್ನು ಪೂರ್ಣ ಗೊಳಿಸಿದರು.
ಭೋಜನದ ಬಳಿಕ ಮಾತನಾಡಿದ ಅಧ್ಯಕ್ಷರು ಆತಿಥಿಗಳನ್ನು ಗೌರವಪೂರ್ವಕವಾಗಿ ವಂದಿಸಿ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದುದಕ್ಕೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.
ಪವಿತ್ರ ರಮಧಾನ್ ತಿಂಗಳ ಇಫ್ತಾರ್ ಕೂಟದಲ್ಲಿ ಜಾತಿಮತ ಬೇಧವನ್ನು ಮರೆತು ಒಂದಾಗಿ ಸಂತೋಷದಿಂದ ಪಾಲ್ಗೊಂಡು ಸರ್ವಧರ್ಮ ಸಮನ್ವಯ ಎನ್ನುವಂತಹ ವಾತಾವರಣ ಕಂಡುಬಂದಿತ್ತು. ಸದಾ ಸಮಾಜಕಲ್ಯಾಣ ಕಾರ್ಯಗಳನ್ನು ನಡೆಸುತ್ತಾ ತನ್ಮೂಲಕ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ನೋವು ನಲಿವುಗಳಿಗೆ ಸ್ಪಂದಿಸುವ ಸಂಘದಿಂದ ಇನ್ನಷ್ಟು ಜನಪರ ಕಾರ್ಯಕ್ರಮಗಳಾಗಲಿ ಎಂದು ಹಾರೈಸುತ್ತಾ ಎಲ್ಲರೂ ಒಬ್ಬರನ್ನೊಬ್ಬರು ಬೀಳ್ಕೊಟ್ಟರು.
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-26
|
|
|