ಮನಾಮಾ: ಬಹರೇನಿನಲ್ಲಿ ಗಲ್ಫ್ ವಾಯ್ಸ್ ಆಫ್ ಮಂಗ್ಳೂರ್ |
ಪ್ರಕಟಿಸಿದ ದಿನಾಂಕ : 2008-09-24
ಮನಾಮಾ, ಸೆಪ್ಟೆಂಬರ್ 24: ಬರುವ ಅಕ್ಟೋಬರ್ ತಿಂಗಳ ಒಂಭತ್ತನೇ ತಾರೀಖಿಗೆ ಸ್ಥಳೀಯ ರಮದಾ ಪ್ಯಾಲೇಸ್ ಹೋಟೆಲಿನ ಭವ್ಯ ಸಭಾಂಗಣದಲ್ಲಿ ಜರುಗಲಿರುವ ಕೊಂಕಣಿ ಗಾಯಕ ಗಾಯಕಿಯರ ಸ್ಪರ್ಧೆಯ ಅಂತಿಮ ಸುತ್ತಿನ ಹಣಾಹಣಿಗೆ ಈಗಾಗಲೇ ವೇದಿಕೆ ಸಿದ್ಧವಾಗಿ ಬಿರುಸಿನ ತಯಾರಿ ನಡೆಯುತ್ತಿದೆ.
ಕುವೈಟ್ ಯೂಥ್ ಕ್ರಿಯೇಶನ್ ಕ್ಲಬ್ ನವರು ಕೊಲ್ಲಿರಾಷ್ಟ್ರಗಳಲ್ಲಿರುವ ಕೊಂಕಣಿ ಗಾಯಕ-ಗಾಯಕಿಯರ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ವಿವಿಧ ರಾಷ್ಟ್ರಗಳಲ್ಲಿ ಆಯೋಜಿಸಿದ್ದು ಬಹರೇನಿನಲ್ಲಿ ಜರುಗಲಿರುವ ಸ್ಪರ್ಧೆಯನ್ನು ಸ್ಥಳೀಯ ಕೊಂಕಣಿ ಕರಾವಳಿ ಕೊಂಕಣ್ಸ್ ಅಸೋಸಿಯೇಶನ್ ರಮದಾ ಪ್ಯಾಲೇಸ್ ನ ಸಹಯೋಗದೊಂದಿಗೆ ಏರ್ಪಡಿಸಿದೆ.
ಭಾರತದ ಜನಪ್ರಿಯ ಟೀವಿ ಕಾರ್ಯಕ್ರಮಗಳಾದ ಸರೆಗಮಪ, ಇಂಡಿಯನ್ ಐಡಲ್ ನಂತಹ ಕಾರ್ಯಕ್ರಮಗಳಿಂದ ಸ್ಪೂರ್ತಿಗೊಂಡು ಕೊಲ್ಲಿಯಲ್ಲಿರುವ ಗಾಯನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲೆಂದೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕರಾವಳಿ ಕೊಂಕಣ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ರೋನಾಲ್ಡ್ ಡಿಸೋಜಾ ತಿಳಿಸಿದ್ದಾರೆ. ಅಲ್ಲದೇ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಡಿನಿಂದ ವಿಲ್ಫಿ ರೆಬಂಬಸ್, ಮೀನಾ ರೆಬಂಬಸ್, ಮೆಲ್ವಿನ್ ಪೆರಿಸ್, ಜೋಯೆಲ್, ಜೋಸ್ವಿನ್, ರಿಚರ್ಡ್, ಕ್ರಿಸ್ಟೋಫರ್, ಧಿಯೋ, ಮೆಲ್ವಿನ್ ಹಾಗೂ ಲೆಸ್ಲಿ ರೇಗೋ ರಂತಹ ಪ್ರಸಿದ್ಧ ಕೊಂಕಣಿ ಗಾಯಕ-ಗಾಯಕಿಯರು ಹಾಗೂ ಸಂಗೀತಕಾರರು ಈ ಸ್ಪರ್ಧೆಗೆಂದೇ ವಿಶೇಷವಾಗಿ ಬಹರೇನಿಗೆ ಆಗಮಿಸಲಿದ್ದಾರೆ. ಕೇವಲ ಹಾಡುವುದು ಮತ್ರವಲ್ಲದೇ ತೀರ್ಪುಗಾರರಾಗಿಯೂ ಸಹಕರಿಸಿ ರಸಮಂಜರಿ ಕಾರ್ಯಕ್ರಮವನ್ನೂ ನೀಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಬಹರೇನ್, ಕುವೈಟ್, ಕತರ್, ಯು.ಎ.ಇ ಯಿಂದ ತಲಾ ಇಬ್ಬರು ಗಾಯಕರನ್ನು ಆಯ್ಕೆಮಾಡಿ ಇವರನ್ನು ಕುವೈಟಿನಲ್ಲಿ ಅಕ್ಟೋಬರ್ ೧೭ ರಂದು ನಡೆಯಲಿರುವ ಅಂತಿಮ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು.
ಬಹರೇನಿನಲ್ಲಿ ಜರುಗಲಿರುವ ಕಾರ್ಯಕ್ರಮದ ಪ್ರವೇಶ ದರ ತಲಾ ಒಂದು ಬಹರೇನಿ ದಿನಾರ್ ಆಗಿದ್ದು ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಕರಾವಳಿ ಕೊಂಕಣ್ಸ್ ಅಧ್ಯಕ್ಷರಾದ ರೋನಾಲ್ಡ್ ಡಿ’ಸೋಜಾರವರನ್ನು ದೂರವಾಣಿ ಸಂಖ್ಯೆ 00973-39278607 ಮೂಲಕ ಸಂಪರ್ಕಿಸಬಹುದಾಗಿದೆ.
ವರದಿ: ಕಮಲಾಕ್ಷ ಅಮೀನ್, ಬಹರೇನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-24
|
|
|