ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಶಿಶುನಾಳ ಶರೀಫರು

ಶಿಶುನಾಳ ಶರೀಫರು ತಮ್ಮ ತತ್ವಪದಗಳಿಂದಾಗಿ ಕರ್ನಾಟಕದ ತುಂಬ ಖ್ಯಾತ ರಾಗಿದ್ದಾರೆ. ಇವರ ಜೀವನದ ವಿವರಗಳು ಇಂತಿವೆ:

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿರುವ ಶಿಶುನಾಳವು ಈಗಲೂ ಸಹ ಒಂದು ಸಣ್ಣಹಳ್ಳಿ. ಈ ಹಳ್ಳಿಯಲ್ಲಿ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಹಾಗು ಅವರ ಹೆಂಡತಿ ಹಜ್ಜೂಮಾ ದಂಪತಿಗಳು ಜೀವಿಸುತ್ತಿದ್ದರು.

ಈ ದಂಪತಿಗಳಿಗೆ ಅನೇಕ ವರ್ಷಗಳವರೆಗೆ ಮಕ್ಕಳಿಲ್ಲದ್ದರಿಂದ, ಹುಲಗೂರಿನಲ್ಲಿದ್ದ ಸಂತ ಖಾದರ ಷಾವಲಿ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅದರ ಫಲವಾಗಿ ಕ್ರಿ.ಶ. 1819 ನೆಯ ಇಸವಿಯ ಮಾರ್ಚ ತಿಂಗಳಿನ 7 ನೆಯ ದಿನಾಂಕದಂದು ಮಹಮ್ಮದ ಶರೀಫ ಜನಿಸಿದರು.

ಶರೀಫರು ಶಿಶುನಾಳದಲ್ಲಿಯೇ ಇದ್ದ ಕೂಲಿಮಠದಲ್ಲಿ ಕಲಿತು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಶಿಶುನಾಳದ ಅಕ್ಕಪಕ್ಕದಲ್ಲಿದ್ದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರಿಬೂದಿಹಾಳ, ಗುಂಜಳ ಹಳ್ಳಿಗಳ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲವು ವರ್ಷ ಕೆಲಸ ಮಾಡಿದರು.

ಕೆಲ ಕಾಲಾನಂತರ ಕೆಲಸ ಬಿಟ್ಟ ಶರೀಫರು ತಮ್ಮ ಹಳ್ಳಿಯಲ್ಲಿಯೇ ಆಧ್ಯಾತ್ಮ ಚಿಂತನೆಯಲ್ಲಿ ಮಗ್ನರಾಗಿದ್ದರು. ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ಆಧ್ಯಾತ್ಮ ಚರ್ಚೆಯಲ್ಲಿ ತೊಡಗಿರುತ್ತಿದ್ದರು.

ಈ ಸಮಯದಲ್ಲಿ ಅವರಿಗೆ ಕಳಸದ ಗೋವಿಂದ ಭಟ್ಟರ ಭೆಟ್ಟಿಯಾಯಿತು. ಗೋವಿಂದ ಭಟ್ಟರಿಂದ ಶರೀಫರಿಗೆ ಉಪದೇಶವಾಯಿತು. ಸ್ವಜಾತಿ ಬಾಂಧವರಿಗೆ ಇದು ಸರಿ ಬರಲಿಲ್ಲ. ಆದರೆ ಶರೀಫರು ತಮ್ಮ ಗುರುವಿನ ಸಂಗವನ್ನು ಬಿಡಲಿಲ್ಲ.

ತಮ್ಮ ಗುರುವನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪಲ್ಲ||

ಕರ ಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರ ಬೋಧಿಸಿ ಕರವಿಟ್ಟು ಶಿರದೊಳು ||೧||

ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨||

ಗುರುವರ ಗೋವಿಂದ ಪರಮಗಾರುಡಿಗ ನೀ—
ನಿರುತಿಹೆ ತಿಳಿಯದು ನರರಿಗೆ ಪರಿಯಿದು ||೩||

ಕೆಲಕಾಲದ ನಂತರ ಶರೀಫರಿಗೆ ಕುಂದಗೋಳದ ನಾಯಕ ಮನೆತನದ ಫಾತಿಮಾಳೊಡನೆ ಮದುವೆಯಾಯಿತು.

ಶರೀಫರಿಗೆ ತಮ್ಮ ಹೆಂಡತಿಯ ಬಗೆಗಿರುವ ಮರ್ಯಾದೆಯ ಭಾವವು ಅವರು ರಚಿಸಿದ ಈ ಹಾಡಿನಲ್ಲಿ ಕಂಡುಬರುತ್ತದೆ:

ನನ್ನ ಹೇಣ್ತೆ ನನ್ನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ ||ಪಲ್ಲ||

ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ ||ಅನುಪಲ್ಲ||

ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನ್ನ ಹೇಣ್ತೆ ಮತ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ್ನ ಹೇಣ್ತೆ ||೧||

ಅತ್ತಿಗಿ ನಾದುನಿ ನನ್ನ ಹೇಣ್ತೆ
ನಮ್ಮತ್ಯಾಗಿ ನಡಿದೀಯೇ ನನ್ನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದೆ ನನ್ನ ಹೇಣ್ತೆ
ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ್ನ ಹೇಣ್ತೆ ||೨||

ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡೆದೆಲ್ಲ ನೀ ನನ್ನ ಹೇಣ್ತೆ
ಬಾಳೊಂದು ಚಲ್ವಿಕೆ ನನ್ನ ಹೇಣ್ತೆ
ಆಳಾಪಕೆಳಸಿದೆ ನನ್ನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ್ನ ಹೇಣ್ತೆ ||೩||

ಮಂಗಳರೂಪಳೆ ನನ್ನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ್ನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ್ನ ಹೇಣ್ತೆ
ಕುಶಲದಿ ಕೂಡಿದ ನನ್ನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ್ನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ ||೪||

ಶರೀಫರ ಸಂಸಾರದಲ್ಲಿ ಇಷ್ಟು ಚೆನ್ನಾಗಿ ಹೊಂದಿಕೊಂಡದ್ದಷ್ಟೇ ಅಲ್ಲ, ಅವರ ಹೆಂಡತಿ ಅವರ ಆಧ್ಯಾತ್ಮ ಸಾಧನೆಯಲ್ಲಿಯೂ ಅವರಿಗೆ ಜೊತೆಗಾತಿಯಾಗಿರಬಹುದು.

“ಘನಪ್ರೀತಿಲೆ ಈ ತನುತ್ರಯದೊಳು ದಿನ ಅನುಗೂಡೂನು ಬಾ ಗುಣವಂತೆ” ಎನ್ನುವ ಸಾಲುಗಳು ಸ್ಥೂಲದೇಹಕ್ಕಷ್ಟೇ ಅಲ್ಲ, ಸೂಕ್ಷ್ಮದೇಹ ಹಾಗೂ ಕಾರಣದೇಹಗಳಲ್ಲೂ ತಾವು ಜೊತೆಯಾಗಿರೋಣ ಎಂದು ಶರೀಫರು ತಮ್ಮ ಹೆಂಡತಿಗೆ ಕರೆ ಕೊಡುವದನ್ನು ತೋರಿಸುತ್ತವೆ.

ಕೆಲಕಾಲದ ನಂತರ ಶರೀಫರಿಗೆ ಒಂದು ಹೆಣ್ಣು ಮಗು ಜನಿಸಿ, ಬೇಗನೇ ಮರಣ ವನ್ನಪ್ಪುತ್ತದೆ. ಅವರ ಹೆಂಡತಿ ಫಾತಿಮಾ ಸಹ ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತಾಳೆ. ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರ ಮಾವ ಅವರಿಗೆ ಹೇಳಿ ಕಳಿಸು ತ್ತಾರೆ. ಆದರೆ, ಶರೀಫರು ಈಗ ಎಲ್ಲಾ ಮಾಯಾಬಂಧಗಳಿಂದ ಮುಕ್ತರಾಗಿದ್ದರು.

ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಅವರು ಭಾಗವಹಿಸಲಿಲ್ಲ. ಅವರ ಮನೋ ಭಾವನೆ ಈ ಹಾಡಿನಲ್ಲಿ ವ್ಯಕ್ತವಾಗಿದೆ:

ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ನ್ಯಾಕೋ ||ಪಲ್ಲ||
ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ ||ಅನುಪಲ್ಲ||

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವದ್ಯಾಕೋ ||೧||

ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ ||೨||

ಇನ್ನು ಮುಂದೆ ಶರೀಫರ ಜೀವನವು ಪೂರ್ಣವಾಗಿ ಪಾರಮಾರ್ಥಿಕ ಸಾಧನೆಗೆ ಮೀಸ ಲಾಯಿತು. ಮಗಳು, ಮಡದಿ, ತಂದೆ,ತಾಯಿ ಹಾಗು ಕೊನೆಗೆ ಗುರು ಗೋವಿಂದ ಭಟ್ಟರ ನಿಧನದ ನಂತರ, ಶರೀಫರು ಪುಣ್ಯಕ್ಷೇತ್ರಗಳ ಯಾತ್ರೆ ಹಾಗು ಪುಣ್ಯಜೀವಿಗಳ ಭೆಟ್ಟಿಯಲ್ಲಿ ಕಾಲ ಕಳೆದರು. ನವಲಗುಂದದ ನಾಗಲಿಂಗಪ್ಪನವರು ಹಾಗೂ ಗರಗದ ಮಡಿವಾಳಪ್ಪ ನವರು ಶರೀಫರಿಗೆ ಅತ್ಯಂತ ಆಪ್ತರಾಗಿದ್ದರು.

ಆ ಅವಧಿಯಲ್ಲಿ ಇಳಿವಯಸ್ಸಿನಲ್ಲಿದ್ದ ಶ್ರೀ ಚಿದಂಬರ ಸ್ವಾಮಿಗಳ ಹಾಗು ಬಾಲಲೀಲಾ ಮಹಾಂತ ಶಿವಯೋಗಿಗಳ ದರ್ಶನ ಪಡೆದರು.

ಅಲ್ಲದೆ ಸಮಕಾಲೀನರಾದ ಅಗಡಿಯ ಶೇಷಾಚಲ ಸ್ವಾಮಿಗಳು, ಅವರಾದಿ ಫಲಾಹಾರ ಸ್ವಾಮಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿಯ ಶ್ರೀ ಅಡವಿ ಸ್ವಾಮಿಗಳು ಹಾಗು ವಿಶ್ವಕರ್ಮದ ಪ್ರಭುಸ್ವಾಮಿಗಳು ಇವರೆಲ್ಲರ ಸತ್ಸಂಗವನ್ನು ಪಡೆದರು.

ತಮ್ಮ ಕೊನೆಯ ದಿನಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳನ್ನು ಸಂದರ್ಶಿಸಿದಾಗ ಸ್ವಾಮಿಗಳಿನ್ನೂ ಚಿಕ್ಕವರಿದ್ದರು.

ಶರೀಫರು ಯಾವುದೇ ಕೆಲಸ ಮಾಡದೆ, ಆತ್ಮಚಿಂತನೆಯಲ್ಲಿ ಮಗ್ನರಾಗಿ ಇರುತ್ತಿದ್ದರಿಂದ ಸಾಕಷ್ಟು ನಿಂದನೆಯನ್ನು ಎದುರಿಸಬೇಕಾಯಿತು. ಸಾಲಗಾರರ ಕಾಟದಿಂದ ಮುಕ್ತ ರಾಗಲು, ಶಿಶುನಾಳದಲ್ಲಿದ್ದ ತಮ್ಮ ಹೊಲವನ್ನು ಮಾರಬೇಕಾಯಿತು. ಇದೆಲ್ಲವನ್ನೂ ಶರೀಫರು ದೇವರ ದಯವೆಂದೇ ಭಾವಿಸಿದರು:

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ ||ಪಲ್ಲ||
ಪರಾತ್ಪರನಾದ ಗುರುವಿನ
ಅಂತಃಕರಣ ಒಂದು ಬಿಡದಿರಲಿ ||ಅನುಪಲ್ಲ||

ಬಡತನೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ ||೧||

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದೆಯಲಿ
ಬಂಡು ಮಾಡಿ ಜನರು ನಗಲಿ ||೨||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಅಂಬಲಿ ಎನಗೆ ಸಿಗದೆ ಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮ್ಯಾಲೆ ಬೀಳಲಿ ||೩||

ವ್ಯಾಪಾರುದ್ಯೋಗ ಇಲ್ಲದಾಂಗಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದು ಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ ||೪||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯ ಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ ||೫||

ತಮ್ಮ ಕೊನೆಗಾಲವನ್ನು ಅರಿತ ಶರೀಫರು, ಶರಣರ ಪದ್ಧತಿಯಂತೆ “ವಿಭೂತಿ ವೀಳ್ಯೆ” ಮಾಡಿಸಿಕೊಂಡು ದೇಹತ್ಯಾಗ ಮಾಡಲು ಬಯಸಿದರು. ಈ ವಿಧಾನದ ಪ್ರಕಾರ ಜಂಗಮ ಪಾದಪೂಜೆ ಹಾಗು ಶರೀಫರ ಮಸ್ತಕದ ಮೇಲೆ ಜಂಗಮನ ಪಾದವಿಟ್ಟು ಶಿವಸಾಯುಜ್ಯ ಮಂತ್ರಪಠಣ ಮಾಡುವ ಅವಶ್ಯಕತೆ ಇತ್ತು. ಶರೀಫರ ಹಣೆಯ ಮೇಲೆ ಪಾದವಿಡಲು ಯಾವ ಜಂಗಮ ಒಪ್ಪಿಯಾರು? ಕೊನೆಗೆ ಹಿರೇಮಠದ ಕರಿಬಸವಯ್ಯನವರು ಶರೀಫರ ಇಚ್ಛೆಯನ್ನು ಪೂರ್ಣಗೊಳಿಸಿದರು. ಆ ಕ್ಷಣವೇ ಶರೀಫರು ಓಂಕಾರದಲ್ಲಿ ಲೀನವಾದರು:(ಕ್ರಿ.ಶ.1889 ನೆಯ ಮಾರ್ಚ 7ನೆಯ ದಿನಾಂಕ.)

ಬಿಡತೇನಿ ದೇಹ ಬಿಡತೇನಿ ||ಪಲ್ಲ||

ಬಿಡತೇನಿ ದೇಹವ ಕೊಡತೇನಿ ಭೂಮಿಗೆ
ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||೧||

ಪಾವಕಾಗುಹುತಿ ಮಾಡಿ ಜೀವನದಸು
ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||೨||

ಅವನಿಯೊಳು ಶಿಶುನಾಳಧೀಶನೆ ಗತಿಯೆಂದು
ಜವನಬಾಧೆಗೆದ್ದು ಶಿವಲೋಕದೊಳು ದೇಹಾ ಬಿಡತೇನಿ ||೩||

ಶರೀಫರ ಅಂತ್ಯಕ್ರಿಯೆಯನ್ನು ಹಿಂದು ಹಾಗು ಮುಸ್ಲಿಮರು ಕೂಡಿಯೇ ಮಾಡಿದರು. ಶರೀಫರ ತಂದೆ, ತಾಯಿಗಳ ಸಮಾಧಿಯ ಪಕ್ಕದಲ್ಲಿಯೇ ಶರೀಫರ ಸಮಾಧಿಯಾಯಿತು. ಈ ಗದ್ದುಗೆಯು ಯಾವುದೇ ಧರ್ಮದ ಮಾದರಿಯಲ್ಲಿ ಇಲ್ಲ. ವಿಶಾಲವಾದ ಕಟ್ಟೆ, ಅದಕ್ಕೆ ನೆರಳು ನೀಡುವ ಮರ ಇವೇ ಅವರ ಗದ್ದುಗೆ.

ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಹಾಗು ಬಲಭಾಗದಲ್ಲಿ ಹಿಂದೂಗಳು ತಮ್ಮ ಪದ್ಧತಿಯ ಪ್ರಕಾರ ಪೂಜೆ ಸಲ್ಲಿಸುತ್ತಾರೆ.

ಗುಡಿಯ ನೋಡಿರಣ್ಣಾ ದೇಹದ
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||೧||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||೩||

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸಲ್ಲಾಪ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-24


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಗೋಕರ್ಣದ ಅಶೋಕೆಗೆ ರಾಮಚಂದ್ರಾಪುರ ಮಠ?
»ವಿಶ್ವದ ಅತ್ಯ೦ತ ಕಿರಿಯ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಪ್ರಶಸ್ತಿ
»ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ
»ಎಚ್. ಶಕುಂತಳಾ ಭಟ್‌ಗೆ ಹೊರನಾಡ ರಾಜ್ಯೋತ್ಸವ ಪ್ರಶಸ್ತಿ
»ಜ್ಯೋತಿ ಕುಲಾಲ್‌ಗೆ ಪ್ರಗತಿಶೀಲ ರೈತ ಮಹಿಳೆ ಪ್ರಶಸ್ತಿ
»ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಪೂರ್ಣಿಮಾ ಪ್ರಥಮ ಸ್ಥಾನ
»ಕೊಡೇಕಲ್‌ನಲ್ಲಿ 401 ಜೋಡಿ sಸಾಮೊಹಿಕ ವಿವಾಹ
»ಚೆಂಬೂರು ಕರ್ನಾಟಕ ಸಂಘದಿಂದ ಸಾಹಿತ್ಯ ಸಹವಾಸ-2008 ಕಾರ್ಯಕ್ರಮ
»ತಬಲಾ ಜತೆಗೆ ಗಾಯನ ಲಿಮ್ಕಾ ದಾಖಲೆಯತ್ತ
»ಚೀನಾ ನೆಲದಲ್ಲಿ ಯಕ್ಷಗಾನ ಚೈನಾದಲ್ಲಿ ಪ್ರದರ್ಶನ ನೀಡಿದ ಮಹಿಳಾ ಯಕ್ಷಗಾನ ತಂಡ.
»ಹಿರಿಯಡಕ ಯಕ್ಷಗಾನ ಮೇಳ ಮತ್ತೆ ತಿರುಗಾಟ ಆರಂಭ
» 'ಕುರುಕ್ಷೇತ್ರಕ್ಕೊಂದು ಅಯೋಗ’ ಯಕ್ಷರಂಗ ಪ್ರಯೋಗ
»ಕೃಷ್ಣಪ್ರಸಾದ್, ಶರಾವತಿಗೆ ಕಂಬಳ ಕಲಾಪ್ರಶಸ್ತಿ
»ಕನ್ನಡದಲ್ಲಿರುವ ‘ಮಂಕುತಿಮ್ಮನ ಕಗ್ಗ' ಆಂಗ್ಲಕ್ಕೆ ಅನುವಾದದ ಕೃತಿ ಬಿಡುಗಡೆ
»ಜನಮನ ಸೂರೆಗೊಂಡ ಹಿಂದೂಸ್ಥಾನೀ ಗಾಯನ
»ಲಿಯೋ ಫೆರ್ನಾಂಡಿಸ್ ಮತ್ತು ವಿಲ್ಸನ್ ಒಲಿವೆರಾ ಪಾಲಿಗೆ ಈ ಭಾರಿಯ ದಿವೋ ಸಾಹಿತ್ಯ ಪುರಸ್ಕಾರ-2008
»ಹಿರಿಯ ಕೊಂಕಣಿ ಸಾಹಿತಿ ರವೀಂದ್ರ ಕೇಲ್ಕರ್ ರಿಗೆ ಘನತೆಯ ಜ್ನಾನಪೀಟ ಪ್ರಶಸ್ತಿ
»ಸಂಧ್ಯಾ ಪೈ ಅವರ‘ಗಮ್ಮತ್ತಿನ ಕಥೆಗಳು’,ಮು೦ತಾದ 6 ಕೃತಿ ಬಿಡುಗಡೆ
»ಜನಪದ ಸಂಸ್ಕೃತಿಯ ಬೆಸುಗೆಗೆ ಅಪೂರ್ವ, ಅಪರೂಪ ಸುಗ್ಗಿ ಬೆನ್ನಿ
»ಅರಾಟೆ ಮಂಜುನಾಥಗೆ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ
»ವೈಷ್ಣವಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ: ರಾಜ್ಯಕ್ಕೆ ಹೆಮ್ಮೆ
»‘ನಿರ್ಭಯ ಸೂರ್ಯ’ ಕವನ ಸ೦ಕಲನ ಬಿಡುಗಡೆ
»ಪ್ರಕಾಶ ಚಂದ್ರ ಶಿಶಿಲ ಅವರಿಗೆ ಡಾಕ್ಟರೇಟ್
»ಪೆರ್ಣೆ: 26 ಜೋಡಿಗಳಿಗೆ ಕಂಕಣ ಭಾಗ್ಯ
»ಮೈಸೂರು:ಬೆಟ್ಟದ ನಂದಿಗೆ ಮಹಾಭಿಷೇಕ
»ಯಲ್ಲಾಪುರ:ಮನಸೂರೆಗೊ೦ಡ ಸಂಕಲ್ಪ ಉತ್ಸವ
»ರಾಜ್ಯಮಟ್ಟದ ತುಳು ಜನಪದ ಜಾತ್ರೆ: ತುಳುವೆರೆ ಆಯನೊ-2009
»ಕೇರಳ ರಾಜ್ಯ 4 ನೇ ಕನ್ನಡ ಸಮ್ಮೇಳನಕ್ಕೆ ಸಿದ್ಧತೆ
»ಸಾಹಿತ್ಯ ಕ್ಷೇತ್ರದಲ್ಲಿ ವಿಖ್ಯಾತರಾಗಿರುವ ಲೇಖಕ ಮಾಳಗಾಂವಕರ
»ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ಡಿ. ಮನೋಹರ ಕುಮಾರ್
»ಕನ್ನಡ ಬಾಷೆಗೆ ಶಾಸ್ತ್ರೀಯ ಸ್ಥಾನಮಾನಗಳಿಸುವಲ್ಲಿ ಹೋರಾಟ ನಡೆಸಿದ ಗಣ್ಯರಿಗೆ ಗೌರವ
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು- ಪ್ರಾ. ಸೀತಾರಾಮ್ ಶೆಟ್ಟಿ
»ಅರ್ಧ ಶಕ್ತಿ ಪೀಠ: ನಾಸಿಕ್ ಸಪ್ತಶೃಂಗಿ ದೇವಿ
»‘ಎದೆ ತುಂಬಿ ಹಾಡುವೆನು' ಕಾರ್ಯಕರಮದಲ್ಲಿ ಮಣಿಪಾಲದ ಕೋಗಿಲೆ ಮರಿಗೆ ಪ್ರಶಸ್ತಿ
»ಯಕ್ಷಗಾನದಲ್ಲಿನ ಬದಲಾವಣೆಗೆ ಕಲಾವಿದ, ಪ್ರೇಕ್ಷಕರಿಬ್ಬರು ಕಾರಣ: ಗಣಪತಿ ಶಾಸ್ತ್ರಿ
»ಸೂರ್ಯ ಶೇರಿಗಾರ್ ನಿಟ್ಟೂರು ಉಡುಪಿ ಇವರಿಗೆ ಸನ್ಮಾನ
»ಗದುಗಿನ ‘ರತ್ನ’ ಈಗ ‘ಭಾರತ ರತ್ನ’ ;ಎಲ್ಲೆಡೆ ಸಡಗರ,ಸ೦ಭ್ರಮ, ಹರ್ಷ
»ಜ.29 ರಿಂದಚಿತ್ರದುರ್ಗದಲ್ಲಿ 75ನೇ ಸಾಹಿತ್ಯ ಸಮ್ಮೇಳನ
»ಕನ್ನಡ ಸಾಹಿತ್ಯ ಪರಿಷತ್ ನ ಉಡುಪಿ ಜಿಲ್ಲಾ ಘಟಕ ಉದ್ಘಾಟನೆ:ಪರಿಷತ್ ಕಟ್ಟಡಕ್ಕೆ ಶೀಘ್ರವೇ ಮ೦ಜೂರಾತಿ- ಡಿಸಿ
»ನುಡಿಸಿರಿ ಉದ್ಘಾಟನೆಗೆ ನಿಸಾರ್, ಅಧ್ಯಕ್ಷತೆ ಕಣವಿ
»ಕಲೆಯ ಉಳಿವಿಗೆ ಸಮಷ್ಟಿ ಯತ್ನ : ಹೇರಂಜಾಲು ಚಂದ್ರಶೇಖರ ಹೊಳ್ಳ
»ಬರವಣಿಗೆ ನನಗೆ ಸತ್ಯಾನ್ವೇಷಣೆ: ಭೈರಪ್ಪ
»ತೋನ್ಸೆ ಪಡುಮನೆ ಪಾರ೦ಪರಾಗತ ಕ೦ಬಳ
»ರಾಷ್ಟ್ರೀಯ ಭಾಷಾ ನೀತಿ ಜಾರಿಗೆ ಬರಗೂರು ಆಗ್ರಹ
»ಶಾಸ್ತ್ರೀಯ ಸ್ಥಾನ: ಪಿಐಎಲ್‌ ವಜಾಕ್ಕೆ ರಾಜ್ಯ ಆಗ್ರಹ
»ತುಳು ಭಾಷೆಗೆ ಎರಡು ಸಾವಿರ ವರ್‍ಷ ಇತಿಹಾಸ: ಪಾಲ್ತಾಡಿ ರಾಮಕೃಷ್ಣ ಆಚಾರ್
» ಈಗ ಎಲ್ಲೆಲ್ಲೂ ಹರಡುತ್ತಿದೆ ಕನನ್ನಡದ ಕಂಪು
»ಕೊಂಕಣಿ ಜನರು ಎಲ್ಲಾ ಕ್ಷೇತ್ರಗಳಲ್ಲಿ ಸೈಎನಿಸಿಕೊಳ್ಳಬೇಕು : ಖಾರ್ವಿ ಕರೆ
»ಮತಾಂತರ ಬೇಡ ದಲಿತ ಸಮುದಾಯಕ್ಕೆ ಪೇಜಾವರ ಶ್ರೀಗಳ ಕರೆ
»ಸಾಹಿತಿಗಳ ಸ್ವಸಹಾಯ ಸಂಘ ಉತ್ತಮ ಬೆಳವಣಿಗೆ: ಕಲ್ಕೂರ
»ಬ್ರಹ್ಮ ಕಲಶೋತ್ಸವ ಸಿದ್ಧತೆಯಲ್ಲಿ ಉದ್ದಂತೋಡು ತರವಾಡು
»ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ : ನಾಡೋಜನಿಗೆ ಹರ್ಷ
»ಮಾಧವ ಕುಲಕರ್ಣಿ, ಮೋಹನ ಸೋನಗೆ ಕಾಂತಾವರ ಪುರಸ್ಕಾರ ಪ್ರದಾನ
»ಶಾಸ್ತ್ರೀಯ ಭಾಷೆಗೆ ಪದ ಎರವಲು: ಕನ್ನಡ ಮನಸುಗಳ ದ್ವಂದ್ವ
»ರಾಜ್ಯೋತ್ಸವಕ್ಕೆ ಶಾಸ್ತ್ರೀಯ ಸಂಭ್ರಮ .
»ಧರ್ಮಸ್ಥಳ: ದೇವರು ಬಂದರು ಅಂಗಣದೆಡೆಗೆ...
»ಪಾಟೀಲ್ ಪುಟ್ಟಪ್ಪಗೆ ನೃಪತುಂಗ ಪ್ರಶಸ್ತಿ
»ಕನ್ನಡ ನಿಧಿ ಯೋಜನೆಗೆ 10ಕೋಟಿ ಸಂಗ್ರಹ
»ಯುಕ್ತಿ, ಶಕ್ತಿಗಳ ಹೋರಿ ಬೆದರಿಸುವ ಹಟ್ಟಿಹಬ್ಬ
»ಹಂಪಿ ಉತ್ಸವ: ಪರಂಪರೆ ನಡಿಗೆಗೆ ನಾ೦ದಿ
»ಯಕ್ಷಗಾನ ಶಿಕ್ಷಣಕ್ಕೆ ಪ್ರಮಾಣಪತ್ರದ ಮಾನ್ಯತೆ ಅಗತ್ಯ: ರಘುಪತಿ ಭಟ್
»ಜಾನಪದ ಸಾಹಿತಿ ಮುದೇನೂರು ಸಂಗಣ್ಣ ವಿಧಿವಶ
»‘ಯಕ್ಷಗಾನ ಧರ್ಮವೂ ಹೌದು’
»ಪೇಜಾವರ ಸದಾಶಿವರಾವ್ ಸ್ಮಾರಕ ಪ್ರಶಸ್ತಿಗೆ ಅರ್‍ಜಿ ಆಹ್ವಾನ
»ಬ೦ದಿದೆ ಸಡಗರದ ಹಬ್ಬ ದೀಪಾವಳಿ ,ನಿವಾರಿಸಲಿ ಮನದ ಅ೦ಧಕಾರದ ಹಾವಳಿ
»ಮರೆಯಾಗುತ್ತಿರುವ ಸಾ೦ಪ್ರದಾಯಿಕ ಗೂಡುದೀಪಗಳು
»ಗೋರುಚ ಜಾನಪದ ಅಕಾಡೆಮಿ ಅಧ್ಯಕ್ಷ
»ದಿಲ್ಲಿಯಲ್ಲಿ ಯಕ್ಷಲೋಕ ಸೃಷ್ಟಿಸಿದ ಕಾಸರಗೋಡಿನ ಬೊಂಬೆಗಳು
»ಪ್ರದೀಪ್ ಕುಮಾರ್ ಕಲ್ಕೂರರಿಗೆ ಸಾರ್ವಜನಿಕ ಅಭಿನಂದನೆ
»ಮಲೆನಾಡಗಿತ್ತಿಗೆ ದೀಪದೋಕುಳಿ
»ಮುಂಬೈ ಕನ್ನಡಿಗರ ಮನಗೆದ್ದ `ಉಷಾಹರಣ' ನಾಟಕ
»‘ವೈಟ್ ಟೈಗರ್’ ನಾಯಕ ಬೆಂಗಳೂರಿನವ
»ಬೆಳ್ಳಾರೆ: 3ನೇ ವರ್ಷದ ಶಾರದೋತ್ಸವ
»ಸಾಮೂಹಿಕ ಆಚರಣೆಯಿಂದ ಧರ್ಮಜಾಗೃತಿ : ರಾಘವೇಶ್ವರ ಶ್ರೀಗಳು
»ಮಂಗಳೂರಿನ ಅರವಿಂದ್‌‌ ಅಡಿಗರಿಗೆ 'ಬೂಕರ್' ಪ್ರಶಸ್ತಿ’
»ಸಾಹಿತಿ ಆನಂದಿ ಸದಾಶಿವ ರಾವ್ ಇನ್ನಿಲ್ಲ
»ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯ ಮಹಾರಥೋತ್ಸವ
»ಸನಾತನ ಧರ್ಮ ಅತ್ಯ೦ತ ದೊಡ್ಡ ಧರ್ಮ,ಉಳಿದ ಧರ್ಮ ಹುಟ್ಟಲು ಇದು ಕಾರಣ;ಸದಾನ೦ದ ಗೌಡ
»ಕೇರಳದ ಪ್ರೀತಿಯ ಸಿಸ್ಟರ್ ಈಗ ಸಂತ ಅಲ್ಫೋನ್ಸಾ
»ತುಳು ಅಕಾಡೆಮಿ ಅಧ್ಯಕ್ಷರಾಗಿ ಸಾಹಿತಿ ಪಾಲ್ತಾಡು ರಾಮಕೃಷ್ಣ ಆಚಾರ್
»ಮುಂಬೈಯಲ್ಲಿ ಸುಬ್ರಾಯ ಭಟ್ಟರಿಗೆ ಸನ್ಮಾನ
»ಗೋಕರ್ಣ ಪುನರುತ್ಥಾನಕ್ಕೆ ನಾಂದಿ
»ಕಾರಂತರು ಒಂದು ವಿಸ್ಮಯ: ಅಂಬಾತನಯ ಮುದ್ರಾಡಿ
»ಮಿತ್ತ ಬೈಲು ಯಮುನಕ್ಕ ತುಳುನಾಡಿನ ಸಾಂಸ್ಕೃತಿಕ ಕೃತಿ: ಡಿ.ಕೆ. ಚೌಟ
»ನಾದವೈಭವಂನ ಭಜನಾ ನಾದಾಭಿಯಾನಕ್ಕೆ ಚಾಲನೆ
»ಫ್ರೆಂಚ್ ಲೇಖಕ ಲೆ ಕ್ಲೇಜಿಯೊಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
»ಇಸ್ಲಾ೦ ಧರ್ಮದ ಐದು ಆಧಾರ ಸ್ಥ೦ಭಗಳು
»ನಾಳೆ ನಗರದಲ್ಲಿ ಕಾರಂತ ಹುಟ್ಟು ಹಬ್ಬ
»ಮೂವರು ಗಣ್ಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ
»ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಮೊತ್ತ 1 ಲಕ್ಷರು.ಗೆ ಏರಿಕೆ
»ಭಾರತೀಯ ತತ್ತಶಾಸ್ತ್ರ ಪ್ರವೇಶ ಗ್ರಂಥ ಲೋಕಾರ್ಪಣೆ
»ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ
»ಕರ್ನಾಟಕ ಸಾಹಿತ್ಯ ಪರಿಷತ್ ಉದಯ
»ಹೂವಿನಕೋಲಿಗೆ ಮನಸೋತ ಸೋನಿಯಾ
»ರವಿ ಬೆಳಗೆರೆ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ
»ಮಾನವೀಯತೆಯೇ ನಿಜವಾದ ಧರ್ಮ : ಶ್ರೀ ಪೂರ್ಣಕಾಮಾನಂದಜೀ
»`ಮಕ್ಕಳ ಮೊಲಕ ಕನ್ನಡ ಕಸ್ತೂರಿಯನ್ನು ಪಸರಿಸಿ'
»ಐತಿಹಾಸಿಕ ಮೈಸೂರು ದಸರಾಕ್ಕೆ ಸಿದ್ದಗಂಗಾಶ್ರೀ ಚಾಲನೆ
»ನವಮದ ಮಹತ್ವ ಹೊತ್ತ ನವರಾತ್ರಿ
»ಈದಲ್ ಫಿತ್ರ್ `ಮಾನವ ಮೈತ್ರಿಗೆ ರಮ್ಜಾನ್ ಸಂದೇಶ'
»ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಪ್ರಕಟ
»ಕಸಾಪಗೆ ಪರ್ಯಾಯವಾಗಿ ಕರ್ನಾಟಕ ಸಾಹಿತ್ಯ ಪರಿಷತ್!
»ಜಿಲ್ಲಾ ಕಾರಾಗೃಹದಲ್ಲಿ ಬಹುಭಾಷಾ ಕವಿಗೋಷ್ಟಿ !
»ದೆಹಲಿಯಲ್ಲಿ ಮಿಂಚಿದ ‘ಮಳೆಹಕ್ಕಿ’
»ಐವರು ಗಣ್ಯರಿಗೆ ಅನುವಾದ ಅಕಾಡೆಮಿ ಗೌರವ ಪ್ರಶಸ್ತಿ
»ಚಾಂದ್ರಾಯಣ ವ್ರತ
»ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ
»ಶಿಶುನಾಳ ಶರೀಫರು
»ಶಿಕ್ಷಣದಲ್ಲಿ ಗಮಕ ಕಲೆ ಕಡ್ಡಾಯಕ್ಕೆ ಗೊತ್ತುವಳಿ ಮಂಡನೆ
»ವಿದೇಶದ ಕ್ರೈಸ್ತ ಶಾಲೆಗಳಲ್ಲಿ ವೇದಾಂತ ಪಾಠ!
»ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!
»ವಸುಧೈವ ಕುಟುಂಬಕಮ್
»ವಿವೇಕಾನಂದ ಎಂಬ ವೀರ ಸನ್ಯಾಸಿ
»‘ಗೋಕರ್ಣ: ಸ್ಥಿರಾಸ್ತಿ ವರ್ಗಾವಣೆಯಾಗಿಲ್ಲ ’
» 8 ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ.ಗಮಕಿಗಳಿಗೆ ‘ಕುಮಾರವ್ಯಾಸ’ ಪ್ರಶಸ್ತಿ- ಆಚಾರ್ಯ
»ಹಿಂದೂ ಧರ್ಮ ಅಪಾರ್ಥಕ್ಕೆ ಒಳಗಾಗಿದೆಯೇ?
»`ಆದೇಶದಿಂದ ಕನ್ನಡದ ಕಳಕಳಿ ಮೊಡದು'
»ಕೋಳ್ಯೂರು ಅವರಿಗೆ ಮಂಡೆಚ್ಚ ಪ್ರಶಸ್ತಿ
»ಆತ್ಮಲಿಂಗ-ಭಕ್ತರ ಮಧ್ಯೆ ಮಠ ಗೋಡೆಯಾಗಲ್ಲ: ರಾಘವೇಶ್ವರ ಶ್ರೀ ಘೋಷಣೆ
»ಕಟೀಲಿನಲ್ಲಿ 19 ರಿಂದ ರಾಜ್ಯ ಗಮಕ ಕಲಾ ಸಮ್ಮೇಳನ
»ಗಂಗೂಬಾಯಿ, ಭೀಮಸೇನರಿಗೆ ಸವಾಯಿ ಗಂಧರ್ವ ಪ್ರಶಸ್ತಿ
»ರಾಘವೇಶ್ವರ ಸ್ವಾಮಿ ಪುರ ಪ್ರವೇಶ. ಗೋಕರ್ಣದಲ್ಲಿ ‘ಮಹಾಸಂಕಲ್ಪ ಸಮಾವೇಶ’.ಹಸ್ತಾಂತರಕ್ಕೆ ಸ್ವರ್ಣವಲ್ಲಿಶ್ರೀ ವಿರೋಧ
»ಹಿಂದಿ ಹೇರಿಕೆ ತಡೆಗೆ 12 ಸೂತ್ರಗಳು!!
»ಎಸೆಸೆಲ್ಸಿ ಪ್ರಥಮ ರ್‍ಯಾಂಕ್ ಪಡೆದಿದ್ದ ಅರವಿಂದ
»ದೇವಾಲಯಗಳ ಹಸ್ತಾಂತರ ಜಾತಿ ಸಂಘಷ೯ಕ್ಕೆ ಮೂಲವಾದೀತೇ ?
»ಅಧ್ಯಾತ್ಮಕ ಪಾಶ್ಚಾತ್ಯ ಸಂಸ್ಕೃತಿ ಧಕ್ಕೆಯಾಗದಿರಲಿ: ಕಲ್ಕೂರ
» ಅಮೆರಿಕದಲ್ಲಿ ಕನ್ನಡದ ಕ೦ಪು
»ನಲ್ಲೂರು - ಸಾರಥಿಯಾದ ಬಗೆ
»9/11- ಅವತ್ತು ಅಮೆರಿಕೆಯೇನು? ಇಡೀ ಜಗತ್ತೇ ನಡುಗಿತ್ತು!
»ಚೌತಿ ಹಬ್ಬ ಮತ್ತು ಪ್ಯಾಸೆಂಜರ್ ರೈಲಿನ ಪ್ರಯಾಣ!
»'ಬೂಕರ್' ಪ್ರಶಸ್ತಿ ಸಾಲಿನಲ್ಲಿ ಮಂಗಳೂರಿನ ಅರವಿಂದ್‌‌
&ra