ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics } |
ಪ್ರಕಟಿಸಿದ ದಿನಾಂಕ : 2009-11-16
{ಚಿತ್ರ ವರದಿ: ಮೋಹನ್ ದಾಸ್ ಕಾಮತ್ ಮಂಜೇಶ್ವರ್)
ರಜತ ಕಂಡ ಕುವೈತ್ ಕನ್ನಡ ಕೂಟ
ಕುವೈತ್, ನವಂಬರ್ ೧೩: ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕ ರ್ನಾಟಕ ರಾಜ್ಯೋತ್ಸವದ ಜೋಡಿ ಸಮಾರಂಭವನ್ನು ಇಲ್ಲಿನ ಅಮೇರಿಕನ್ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ಆಚರಿಸಲಾಯಿತು.
ಬೆಳಿಗ್ಗೆ ೯ ಘಂಟೆಗೆ ಆಗಮಿಸಿದ ಮಹಾಮಹಿಮ ಕುವೈತಿನಲ್ಲಿರುವ ಭಾರತದ ರಾಯಭಾರಿ ಶ್ರೀ ಅಜಯ್ ಮಲ್ಹೋತ್ರ ಮತ್ತು ಕರ್ನಾಟಕದಿಂದ ಆಗಮಿಸಿದ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರನ್ನು ಮಂಗಳ ಕುಂ ಭದೊಂದಿಗೆ ಸುಮಂಗಲಿಯರು ಚಂಡೆ-ಮದ್ದಳೆ ಮೊಳಗಿವಿಕೆಯ ನಡುವೆ ಮುನ್ನಡೆಸಿದ ರು.
ಕೂಟದ ಅಧ್ಯಕ್ಷರಾದ ಶ್ರೀ ಸತೀಶ್ ಚ೦ದ್ರ ಶೆಟ್ಟರು, ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರು, ಪೂರ್ವ ಅಧ್ಯಕ್ಷರುಗಳು ಮತ್ತು ಸರ್ವ ಸದಸ್ಯರು ಮುಖ್ಯ ಅತಿಥಿಗಳನ್ನು ಆತ್ಮೀ ಯವಾಗಿ ಬರಮಾಡಿಕೊಂಡು ಶಾಲೆಯ ಆವರಣದಲ್ಲಿ ಮೆರವಣಿಗೆಯ ಮೂಲಕ ಸಭಾಂಗ ಣಕ್ಕೆ ಕರೆತಂದರು.
ಕೂಟದ ಸದಸ್ಯರು ಹಾಡಿದ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಗೆ ನಾಡಿ ನ ವಿವಿಧ ಕಾಲದ ಗಣ್ಯರ ವೇಷದಲ್ಲಿದ್ದ ಕೂಟದ ಮಕ್ಕಳು ವಿಶೇಷ ಮೆರಗನ್ನಿತ್ತರು. ತದ ನಂತರದ ನಮನ ನೃತ್ಯ ಕೂಟದ ಹೆಣ್ಣುಮಕ್ಕಳಿಂದ ನ್ರತ್ಯ ಕಾರ್ಯಕ್ರಮವು ಮನಮೋ ಹಕವಾಗಿ ಮೂಡಿಬಂತು. ಹಚ್ಚೇವು ಕನ್ನಡದ ದೀಪ ಗೀತೆಯ ಹಿನ್ನೆಲೆಯಲ್ಲಿ ಕೂಟದ ರಜ ತಮಹೋತ್ಸವ ವರ್ಷದ ಕಾರ್ಯಕಾರಿ ಮತ್ತಿತರ ಸಮಿತಿ ಸದಸ್ಯರು ದೀಪಾರಾಧನೆ ಯನ್ನು ಮಾಡಿದರು.
ಕೂಟದ ನಡೆದುಬಂದ ಹಾದಿ ಎಂಬ ಶೀರ್ಷಿಕೆಯಡಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕೂಟ ನಡೆಸಿಕೊಂಡು ಬಂದ ವಿವಿಧ ಕಾರ್ಯಕ್ರಮಗಳ ಒಂದು ಪಕ್ಷಿನೋಟವನ್ನು ಪರದೆ ಯಮೇಲೆ ಪ್ರದರ್ಶಿಸಲಾಯಿತು.
ರಜತಮಹೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಂಚಾಲನೆಯನ್ನು ಪ್ರಾರಂಭಿಸಿದ ಶ್ರೀಮತಿ ಶಶಿಕಲಾ ರಮೇಶ್ ರವರು ದಿನದ ಕಾರ್ಯಕ್ರಮಗಳ ಪರಿಚಯ ನೀಡಿದರು. ಸಮಾರಂಭಕ್ಕೆ ಮಹಾಮಹಿಮರನ್ನು ಸ್ವಾಗತಿಸಿದ ಅಧ್ಯಕ್ಷ ಶ್ರೀ ಸತೀಶ್ಚಂದ್ರ ಶೆಟ್ಟರು, ಕೂಟದ ರಜತಮಹೋತ್ಸವದ ಸ್ಥೂಲ ಪರಿಚಯದ ಮೂಲಕ ಮುಖ್ಯ ಅತಿಥಿ ಗಳನ್ನು ಮತ್ತು ಎಲ್ಲಾ ಆಮಂತ್ರಿತರನ್ನು ಸ್ವಾಗತಿಸಿದರು.
ಶ್ರೀ ಅಜಯ್ ಮಲ್ಹೋತ್ರರವರು ಮಾತನಾಡಿ ಇಪ್ಪತ್ತೈದು ವರ್ಷ ಪೂರೈಸಿದ ಕೂಟಕ್ಕೆ ಶುಭ ಹಾರೈಸಿ ಕಲೆ ಸಂಸ್ಕೃತಿ ಆಧಾರಿತ ಕಾರ್ಯಕ್ರಮಗಳಲ್ಲದೇ ಕುವೈತಿನಲ್ಲಿರುವ ಭಾರತೀಯರ ಮತ್ತು ನಾಡಿನಜನತೆಯ ಒಳಿತಿಗಾಗಿ ಸಾಮಾಜಿಕ ಕಾರ್ಯಕ್ರಮಗಳನ್ನೂ ನಡೆಸುತ್ತಾ ಬಂದಿರುವ ಕುವೈತ್ ಕನ್ನಡ ಕೂಟಕ್ಕೆ ಎಲ್ಲ ಸಹಕಾರದ ಭರವಸೆಯನ್ನು ನೀಡಿದರು.
ಕುವೈತ್ ಕನ್ನಡ ಕೂತದ ರಜತ ಮಹೋತ್ಸವ ನೆನಪಿನ ಸಂಚಿಕೆಯನ್ನು ಬಿಡುಗಡೆ ಮಾಡಿದ ಮುಖ್ಯ ಅತಿಥಿಗಳಾದ ಕ್ಯಾ. ಗಣೇಶ್ ಕಾರ್ಣಿಕ್‌ರವರು ಕೂಟದ ಉತ್ಸಾಹೀ ಚಟುವಟಿಕೆಗಳನ್ನು ಪ್ರಶಂಸಿಸಿ ಇದೊಂದು ತನ್ನ ಜೀವನದ ಅವಿಸ್ಮರಣೀಯ ದಿನವೆಂ ದರು. ತಮ್ಮ ಜೀವನ ಮತ್ತು ತಮ್ಮವರ ಏಳಿಗೆಗಾಗಿ ಪರದೇಶಕ್ಕೆ ಬಂದು ನೆಲೆಸಿ ಕನ್ನಡ ಸೇವೆಯನ್ನು ಮಾಡುವುದರ ಜೊತೆಗೆ ನಾಡಿನ ಸಾಮಾಜಿಕ ಬೇಕುಗಳಿಗೆ ಸ್ಪಂದಿಸುತ್ತಿ ರುವುದು ಕೂಟದ ಹಿರಿಮೆ ಎಂದರು.
ಅನಿವಾಸಿ ಭಾರತೀಯ ವೇದಿಕೆಯ ಪಾತ್ರವನ್ನು ವಿವರಿಸುತ್ತಾ ಕರ್ನಾಟಕ ಹೇಗೆ ದೇಶ ದಲ್ಲೇ ಮಾದರಿಯಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂಬುದನ್ನು ಸಭಿಕರಿಗೆ ವಿವರಿಸಿದರು. ಹೊರ ದೇಶ, ಅದರಲ್ಲೂ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ನಾಡಿನ ಜನತೆಗೆ ಸಹಾಯಕವಾಗುವ, ಅವರಲ್ಲಿ ಆ ದೇಶದ ಬಗ್ಗೆ ಪೂರ್ವ ತಿಳುವಳಿಕೆಗಳನ್ನು ಮೂಡಿಸುವ ತರಬೇತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕರ್ನಾಟಕ ಸರ್ಕಾರದ ಯೋಜನೆ ಗಳ ಮಾಹಿತಿ ನೀಡಿದರು.
ಅನಿವಾಸಿ ಭಾರತೀಯ ವೇದಿಕೆಯ ಭವಿಷ್ಯದ ಯೋಜನೆಗಳು ಜ್ಜಾನಾಧಾರಿತ ಮಾನವ ಸಂಪನ್ಮೂಲದ ವಿಶೇಷ ಬಳಕೆಯನ್ನು ಅವಲಂಬಿಸಿರುತ್ತವೆ ಎಂದೂ ತಿಳಿಸಿದರು. ಕೂಟದ ಕಾರ್ಯಕ್ರಮಗಳಿಗೆ ನೆರವಾಗಲು ಮತ್ತು ವಿಶೇಷ ಕಾರ್ಯಕ್ರಮ ಪ್ರಸ್ತುತಿಗೆ ಕರ್ನಾಟಕ ದಿಂದ ಆಗಮಿಸಿದ್ದ ಪ್ರಭಾತ್ ಕಲಾವಿದರನ್ನು ‘ಪ್ರಭುದ್ಧ ಕಲಾವಿದರು’ ಎಂದು ಬಣ್ಣಿಸಿದರು.
ಕರ್ನಾಟಕದಲ್ಲಿರುವ ಮತ್ತು ಕುವೈತಿನಲ್ಲಿರುವ ವಿಶೇಷ ಆಮಂತ್ರಿತ ಕೂಟದ ಪೂರ್ವ ಅಧ್ಯಕ್ಷರುಗಳು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು. ಅದರಲ್ಲೂ ಇಪ್ಪತ್ತೈದು ವರ್ಷಕ್ಕೆ ಪೂರ್ವದಲ್ಲಿ ಕನ್ನಡ ಕೂಟವನ್ನು ಕುವೈತಿನಲ್ಲಿ ಹುಟ್ಟುಹಾಕಿದ ದಿನ ಗಳನ್ನು ಇಂದಿನ ರಜತ ಸಂಭ್ರಮದಲ್ಲಿರುವ ಕೂಟದೊಂದಿಗೆ ತಾಳೆಹಾಕಿ ನೆನೆದು ಡಾ. ತಾರಕನಾಥರು ಮನತುಂಬಿ ಆಡಿದ ಅನುಭವದ ಮಾತುಗಳು ಸಭಿಕರ ಮನಮುಟ್ಟು ವಂತಿದ್ದವು.
ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷ ಶ್ರೀಯುತರುಗಳಾದ ಗೋಪೀನಾಥ್, ಶ್ರೀನಿವಾಸ ಮೂ ರ್ತಿ ಮತ್ತು ಎಮ್.ಎನ್.ರೈ ಸಹ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಕೂಟಕ್ಕೆ ಶುಭಕೋರಿದರು. ಕೂಟದ ವಿಶೇಷ ಆಮಂತ್ರಿತ ಅತಿಥಿಯಾಗಿ ಉದಯವಾಣಿ ಪತ್ರಿಕೆಯ ಸುದ್ದಿಸಂಪಾದಕರಾದ ಶ್ರೀ ಮನೋಹರ್ ಪ್ರಸಾದ್ ರವರು ಆಗಮಿಸಿ ಕೂಟದ ಕಾರ್ಯ ಕ್ರಮಗಳ ಚೊಕ್ಕ ಪ್ರಸ್ತುತಿ ಮತ್ತು ಕೂಟದ ಕಳೆದ ಇಪ್ಪತ್ತೈದು ವರ್ಷಗಳ ಚಟುವಟಿಕೆ ಗಳನ್ನು ಪ್ರಶಂಸಿದರು.
ಡಿ.ವಿ.ಜಿ. ಯವರ ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು..’ ಎಂಬುದ ನ್ನು ಕುವೈತ್ ಕನ್ನಡ ಕೂಟದ ಪೂರ್ವ ಅಧ್ಯಕ್ಷರ ಅನುಭವ ಹೇಗೆ ವರ್ತಮಾನದ ಯುವ ಕೂಟ ಸದಸ್ಯ ಬಳಗ ಉಪಯೋಗಿಸಿಕೊಂಡು ಹೆಮ್ಮರವಾಗಿದೆ ಎಂಬುದನ್ನು ವಿಶ್ಲೇಷಿಸಿ ದರು.
ಕೂಟದ ಸಾಂಸ್ಕೃತಿಕ ಸಂಜೆಯ ಬಗ್ಗೆ ಮತ್ತು ಕೂಟದ ಸದಸ್ಯರು ಹಾಗೂ ಮಕ್ಕಳ ಮನ ರಂಜನಾ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ತಾನೂ ಕುವೈತಿನಲ್ಲೊಂದು ಉದ್ಯೋಗ ಮಾಡುತ್ತಿದ್ದಿದ್ದರೆ ಚೆನ್ನಿತ್ತು ಅನ್ನುವ ಮನೋಭಿಲಾಶೆಯನ್ನು ವ್ಯಕ್ತಪಡಿಸಿದರು. ಈ ಸಂದ ರ್ಭದಲ್ಲಿ ನೆನಪಿನ ಕಾಣಿಕೆ ನೀಡುವ ಮೂಲಕ ಎಲ್ಲ ಆಮಂತ್ರಿತರನ್ನು ಕೂಟವು ಸನ್ಮಾನಿ ಸಿತು.
ಸಾಂಸ್ಕೃತಿಕ ಸಂಜೆಯ ಕಾರ್ಯಕ್ರಮಗಳನ್ನು ಪ್ರಭಾತ್ ಕಲಾವಿದರು ತಮ್ಮ‘ಹಾಸ್ಯ’ ದ ಮೂಲಕ ಪ್ರಾರಂಭಿಸಿದರು. ಆನಂತರ ಕೂಟದ ಮಹಿಳೆಯರ ಅಷ್ಟಲಕ್ಷ್ಮಿ ನೃತ್ಯರೂಪಕ ಎಂಟು ಗುಣವಿಶೇಷಗಳ ಲಕ್ಷ್ಮಿಯ ರೂಪಗಳನ್ನು ದರ್ಶಿಸುವ ಪ್ರಯತ್ನವಾಗಿತ್ತು. ಬೇಲೂ ರಿನ ಶಿಲಾಬಾಲಿಕೆಯರನ್ನು ನೆನಪಿಸುವ ‘ಶಿವಾಮೃತ’ ನೃತ್ಯವನ್ನು ಕೂಟದ ಶ್ರೀಮತಿ ರಂಗಶ್ರೀ ಮಲ್ಲೂರ್ ರವರು ಪ್ರಸ್ತುತಪಡಿಸಿದರು.
ಗುಬ್ಬಿ ಬೆಳಗಿನ ಚಿಲಿಪಿಲಿಯನ್ನು ಮಕ್ಕಳಲ್ಲಿ ಎಂತಹ ಮನದ ಮುದಕ್ಕೆ ಕಾರಣವಾಗುತ್ತದೆ ಎಂಬುದನ್ನು ‘ಗುಬ್ಬಿ-ಗುಬ್ಬಿ’ ಹಾಡಿಗೆ ನರ್ತಿಸುವ ಮೂಲಕ ಕೂಟದ ಪುಟಾಣಿಗಳು ಪ್ರದ ರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಹೀಗೆಯೇ ಕೋಲಾಟ, ನವಿಲು ನೃತ್ಯ, ಮಕ್ಕಳ ಸೂತ್ರದ ಬೊಂಬೆ ನೃತ್ಯ ಕೂಟದ ಕಲಾವಿದರಿಂದ ಪ್ರಸ್ತುತವಾಯಿತು. ನಾಗರಹೊಳೆಯ ಅಮ್ಮಾಲೆ ಚಲನಚಿತ್ರ ಗೀತೆಗೆ ಮನಮೋಹಕವಾಗಿ ಕುಣಿದು ಕೂಟದ ಮಕ್ಕಳು ಎಲ್ಲರ ಮನಸೂರೆಗೊಂಡರು.
ಪ್ರಭಾತ್ ಕಲವಾದರು ಪ್ರಸ್ತುತ ಪಡಿಸಿದ ಕೃಷ್ಣಲೀಲೆ ಕೃಷ್ಣನ ಗೋಕುಲವಾಸದ ವಿವಿಧ ಘಟನಾವಳಿಗಳ ರಮ್ಯ ನೃತ್ಯರೂಪಕವಾಗಿತ್ತು. ಪ್ರಭಾತ್ ಕಲಾವಿದರು ಮತ್ತು ಕೂಟದ ಸದಸ್ಯರು ಕೂಡಿ ಜಂಟಿಯಾಗಿ ಪ್ರಸ್ತುತ ಪಡಿಸಿದ ಕುವೆಂಪುರವರ ಕೃತಿ ಅಧಾರಿತ ನೃತ್ಯ ರೂಪಕ ಬೊಮ್ಮನ ಹಳ್ಳಿಯ ಕಿಂದರಿಜೋಗಿ ಮರೆಯಲಾರದ ಅನುಭವವಾಗಿತ್ತು. ನಂತ ರ ವಿವಿಧ ಕಾರ್ಯಕ್ರಮಗಳ ಕೂಟದ ನಿರ್ದೇಶಕರನ್ನು ಸನ್ಮಾನಿಸಿ ನೆನೆಪಿನ ಕಾಣಿಕೆಯ ನ್ನು ನೀಡಲಾಯಿತು.
ರಾತ್ರಿ ಆಕರ್ಷಣೆಯಾಗಿ ಪ್ರಭಾತ್ ಕಲಾವಿದರ ಧರ್ಮ ಭೂಮಿ ಭಾರತದ ಅಲೆಕ್ಸಾಂಡರ್ ಭೇಟಿಯ ಕಾಲದ ವೈಭವನ್ನು, ಪೌರಸ್ಸನ ಶೌರ್ಯ, ಆತ್ಮಾಭಿಮಾನ ಮತ್ತು ದೇಶಪ್ರೇಮ ವನ್ನು ಪ್ರದರ್ಶಿಸಿದ್ದೇ ಅಲ್ಲದೇ ಭಾರತದ ಧರ್ಮ, ಸಂಸ್ಕೃತಿಗಳನ್ನು ಅಲೆಕ್ಸಾಂಡರಿನಿಗೆ ಪರಿಚಯಿಸುವ ಮನೋಜ್ಜ ನಾಟಕವಾಗಿ ಪ್ರದರ್ಶಿತವಾಯಿತು. ಇದೇ ಕಲಾವಿದರ ದಶಾ ವತಾರ ವಿವಿಧ ವಿಷ್ಣುವಿನ ಅವತಾರಗಳನ್ನು ನೃತ್ಯರೂಪಕ ಮಾಧ್ಯಮದಲ್ಲಿ ಪ್ರದರ್ಶಿಸುವ ಪ್ರಯತ್ನವಾಗಿತ್ತು.
ಎಲ್ಲ ಕಾರ್ಯಕ್ರಮಗಳ ಕಳಸಪ್ರಾಯವಾಗಿ ಮೂಡಿಬಂದ ಕಾರ್ಯಕ್ರಮ ಕನ್ನಡನಾಡಿನ ಸುಪ್ರಸಿದ್ಧ ಪುಣ್ಯಕೋಟಿಯ ಕಥೆ. ಕೂಟದ ಸದಸ್ಯರೊಂದಿಗೆ ಒಂದು ವಾರಕಳೆದ ಪ್ರಭಾ ತ್ ಕಲಾವಿದರ ಶ್ರೀ ಹರೀಶ್ ಮತ್ತು ಶ್ರೀಮತಿ ದೀಪಶ್ರೀ ಹರೀಶ್ ಮಕ್ಕಳು ಮತ್ತು ಹಿರಿಯ ಕೂಟದ ಸದಸ್ಯರಿಗೆ ತರಬೇತಿ ನೀಡಿದ್ದಲ್ಲದೇ, ಕಿಂದರಿಜೋಗಿ, ರಾಮ ಮತ್ತು ಕೃಷ್ಣನ ಪಾತ್ರದಲ್ಲಿ ಹರೀಶ್ ಎಲ್ಲರ ಮನಸುರೆಗೊಂಡರು.
ದೀಪಶ್ರೀಯವರ ಜಾನಕಿ ಮತ್ತು ಪುಣ್ಯಕೋಟಿ ಪಾತ್ರಗಳಿಗೆ ಜೀವತುಂಬಿ, ಪುಣ್ಯಕೋಟಿ ಯಾಗಿ ಕಂದನನ್ನು ಬೀಳ್ಕೊಡುವ ದೃಶ್ಯದಲ್ಲಿ ಸಭಿಕರು ಕಣ್ತುಂಬಿ ಬರುವಂತಹ ಮನೋ ಜ್ಜ ಅಭಿನಯ ನೀಡಿದರು.
ಕಾರ್ಯಕ್ರಮದ ಕಡೆಯಲ್ಲಿ ಪ್ರಭಾತ್ ಕಲಾವಿದರ ಶ್ರಮ ಮತ್ತು ಸಹಾಯವನ್ನು ಶ್ಲಾಘಿಸಿ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ದಿನವಿಡೀ ಪ್ರೇಕ್ಷಕಗಣದ ಮನಸೂರೆಗೊಂಡ ಕಾರ್ಯಕ್ರಮಗಳ ನಂತರ ಕೂಟದ ಕಾರ್ಯ ಕಾರಿ ಸಮಿತಿಯ ಪಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ ಕುಲಕರ್ಣಿಯವರು ವಂದನಾರ್ಪಣೆ ಮಾಡಿದರು, ಸಮಾರಂಭ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.
ವರದಿಯ ವಿವರಗಳು |
 |
ಕೃಪೆ : ಮೋಹನ್ ದಾಸ್ ಕಾಮತ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-11-16 00:00:00
|
|
|