ಜೆದ್ದಾ: ನಾಲ್ಕು ದಿನಗಳ ಕಲಾಕೃತಿ ಪ್ರದರ್ಶನ - ಮ್ಯಾಜಿಕ್ ಕಾರ್ಪೆಟ್- ಯಶಸ್ವಿ |
ಪ್ರಕಟಿಸಿದ ದಿನಾಂಕ : 2008-09-23
ಪ್ರದರ್ಶನದಿಂದ ಬಂದ ಲಾಭ ದತ್ತಕ ಸಂಸ್ಥೆಗಳಿಗೆ : ಭಾಗವಹಿಸಿದ್ದ ಸುಮಾರು ನೂರು ಸಂಸ್ಥೆಗಳು
ಜೆದ್ದಾ, ಸೆಪ್ಟೆಂಬರ್ 23: ಕಳೆದ ವಾರ ನಗರದ ಹಿಲ್ಟನ್ ಜೆದ್ದಾದಲ್ಲಿ ಆಯೋಜಿಸಲಾಗಿದ್ದ ಕಲಾಕೃತಿ ಪ್ರದರ್ಶನದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು. ಬುಸ್ಸಾತ್ ಅಲ್ ರೀಹ್ ಅಥವಾ ಮ್ಯಾಜಿಕ್ ಕಾರ್ಪೆಟ್ (ಮಾಯಾಕಂಬಳಿ) ಎಂಬ ಹೆಸರಿನ ಈ ಪ್ರದರ್ಶನ ನಾಲ್ಕು ದಿನಗಳ ಕಾಲ ಪ್ರದರ್ಶನಗೊಂಡಿದ್ದು ಸೌದಿ ಅರೇಬಿಯಾ ಹಾಗೂ ಇತರ ರಾಷ್ಟ್ರಗಳ ನೂರಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದವು. ಇದರಲ್ಲಿ ಸೌದಿ ಅರೇಬಿಯಾದ ಮಹಿಳೆಯರು ತಯಾರಿಸಿದ್ದ ಕರಕುಶಲ ವಸ್ತುಗಳೇ ಪ್ರಮುಖವಾಗಿದ್ದವು.
ಈ ಪ್ರದರ್ಶನದಿಂದ ಲಭ್ಯವಾದ ಲಾಭವನ್ನು ಸಂಪೂರ್ಣವಾಗಿ ದತ್ತಕ ಸಂಸ್ಥೆಗಳಿಗೆ ನೀಡಲಾಗಿದೆ. ಈ ಪ್ರದರ್ಶನದಲ್ಲಿ ಸೌದಿ ಅರೇಬಿಯಾ ಸಹಿತ ಇತರ ಅರಬ್ ರಾಷ್ಟ್ರಗಳು ತಮ್ಮ ಪ್ರಾಯೋಜಕತ್ವವನ್ನು ನೀಡಿ ಪ್ರೋತ್ಸಾಹಿಸಿದ್ದವು.
ವರದಿಯ ವಿವರಗಳು |
 |
ಕೃಪೆ : ಸೌದಿ ಗೆಜೆಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-23
|
|
|