ಮನಾಮಾ: ನರ್ಸ್ ಗಳಿಗೆ ವೇತನದಲ್ಲಿ 37% ಹೆಚ್ಚಳ |
ಪ್ರಕಟಿಸಿದ ದಿನಾಂಕ : 2008-09-23
ಪ್ರಧಾನ ಮಂತ್ರಿಗಳಿಂದ ಅನುಮೋದನೆ : ಮೂರು ಸಾವಿರ ದಾದಿಯರಿಗೆ ಫಲ
ಮನಾಮಾ, ಸೆಪ್ಟೆಂಬರ್ 23: ಬಹರೇನ್ ಆದ್ಯಂತ ಉದ್ಯೋಗ ನಿರ್ವಹಿಸುತ್ತಿರುವ ದಾದಿಯರ ವೇತನದಲ್ಲಿ 37% ವೃದ್ಧಿಯನ್ನು ಘೋಷಿಸಲಾಗಿದೆ. ಕಳೆದ ವಾರ ಘುದೈಬಿಯಾ ಅರಮನೆಯಲ್ಲಿ ನಡೆದ ವಾರದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಪ್ರಧಾನ ಮಂತ್ರಿಗಳಾದ ಶೇಖ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾರವರು ತಮ್ಮ ಅನುಮೋದನೆ ಪ್ರಕಟಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ಕೊಡುಗೆಯನ್ನು ಶ್ಲಾಘಿಸಿ ಅವರ ಸೇವೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದರು.
ಈ ಏರಿಕೆಯಿಂದಾಗಿ ಒಟ್ಟು ೫.೭ ಮಿಲಿಯನ್ ಬಹರೇನಿ ದಿನಾರ್ ವೆಚ್ಚವಾಗಲಿದ್ದು ಸುಮಾರು ಮೂರು ಸಾವಿರ ದಾದಿಯರಿಗೆ ಫಲ ಸಿಗಲಿದೆ ಎಂದು ಬಹರೇನ್ ಕೇಂದ್ರ ಸರ್ಕಾರದ ಅಧಿಕಾರಿ ಶೇಖ್ ಅಹ್ಮದ್ ಬಿನ್ ಅತ್ತಾಯೆತಾಲಾ ಅಲ್ ಖಲೀಫಾ ತಿಳಿಸಿದ್ದಾರೆ.
ಅಲ್ಲದೇ ನರ್ಸಿಂಗ್ ಪದವಿಯನ್ನು ಪಡೆದಿರುವ ದಾದಿಯರಿಗೆ ವಿಶೇಷ ದರ್ಜೆಯನ್ನು ನೀಡಲಾಗುವುದು, ಪದವಿ ಇಲ್ಲದಿರುವವರಿಗೂ ಸರ್ಕಾರಿ ನೌಕರರ ವರ್ಗಕ್ಕೆ ಸಮನಾದ ಶ್ರೇಣಿಯನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಡೇಲಿ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-23
|
|
|