|
|
|
ಪ್ರಕಟಿಸಿದ ದಿನಾಂಕ : 2008-09-22
ಕಣ್ಣಿಲ್ಲದವರಿಗೆ ಕಣ್ಣು ಬರತ್ತಂತೆ, ಕಾಲಿಲ್ಲದವರಿಗೆ ಕಾಲು, ದುಡ್ಡಿಲ್ಲದವರಿಗೆ ದುಡ್ಡು, ಅವರು ನೇರ ದೇವರೊಡನೆ ಮಾತಾಡ್ತಾರಂತೆ ಎಂದು ೬ನೇ ತರಗತಿ ಕೋಣೆಯ ತುಂಬಾ ಗುಸುಗುಸು. ’ಅಲ್ಲಿ’ ೪ ದಿನಗಳಿಂದ ನೆಡೆಯುತ್ತಿದೆ. ನಾನು ನಿನ್ನೆ ನೋಡಿಬಂದೆ. ಆಶ್ಚರ್ಯ ಆಯ್ತು ಎಂದರು ಒಂದಿಬ್ಬರು.ನನಗೂ ಹೋಗಿ ನೋಡಬೇಕೆಂಬ ಆಸೆ. ಆದರೆ ಇನ್ನೂ ಸಣ್ಣವನು, ಹೇಗೆ ಹೋಗಲಿ, ಯಾರ ಜೊತೆ ಹೋಗಲಿ ಎಂದು ಪೇಚಿಗಿಟ್ಟಾಗ ಅದೇ ಸ್ಥಿತಿಯಲ್ಲಿದ್ದ ಇನ್ನೆರಡು ಗೆಳೆಯರೂ ಕೂಡಿ ಹೇಗಾದರೂ ಮಾಡಿ ಇವತ್ತು ಹೋಗೋಣ ಎಂದು ತೀರ್ಮಾನಿಸಿಕೊಂಡೆವು. ಸಂಜೆಯ ಹಿಂದಿಕ್ಲಾಸು ಅವತ್ತಿನ ಆ ’ಅದ್ಭುತ’ವನ್ನು ನೋಡಲು ಬಲಿಯಾಗಿತ್ತು.
ದೊಡ್ಡದೊಂದು ಸಭಾಂಗಣ. ಬಹಳ ಜನ ಸೇರಿದ್ದಾರೆ. ಹೇಗೋ ಒಳಗೆ ತೂರಿಕೊಂಡೆವು. ಕಾರ್ಯಕ್ರಮ ಶುರುವಾಯಿತು. ವೇದಿಕೆಯ ಮೇಲೆ ನಾಲ್ಕು ಜನ ವಿದೇಶೀಯರು ಬಂದರು. ಅವರೊಡನೆ ಒಬ್ಬ ಭಾರತೀಯ. ಮಾತು ಶುರುವಾಯಿತು. ಭಾರತೀಯ ಕನ್ನಡದಲ್ಲಿ ವಿದೇಶೀಯರ ಪರಿಚಯ ಮಾಡಿಕೊಡುತ್ತಾ ಇವರು ಅದ್ಯಾವುದೋ ದೇಶದಿಂದ ಬಂದಿದ್ದಾರೆ, ಅವರನ್ನು ದೇವರೇ ಕಳಿಸಿದ್ದಾನೆ ನಮಗೋಸ್ಕರ, ನಮ್ಮ ಉದ್ಧಾರಕ್ಕೋಸ್ಕರ ಎಂದು ಅವರ ಗುಣಗಾನ ಮಾಡಿದ. ಸೇರಿದ್ದ ಜನರೆಲ್ಲರೂ ಅದೇನೋ ಕೂಗಿದರು. ನಮಗೇನೂ ಅರ್ಥವಾಗಲಿಲ್ಲ. ಅನಂತರ ವಿದೇಶೀಯರ ಕೈಗೆ ಮೈಕು ಕೊಡಲಾಯಿತು. ಅವ ಇಂಗ್ಲೀಷಿನಲ್ಲಿ ಏನೋ ಹೇಳಲು ಶುರು ಮಾಡಿದ. ಅದರ ಅನುವಾದವನ್ನು ಕನ್ನಡದಲ್ಲಿ ಮೊದಲು ಮಾತಾಡಿದ ವ್ಯಕ್ತಿ ಮಾಡುತ್ತಿದ್ದ. ಪೂರ್ತಿ ಸಭೆಯಲ್ಲಿ ದಿವ್ಯ ಮೌನ. ನಾವೂ ಉಸಿರು ಬಿಗಿ ಹಿಡಿದು ಕುಳಿತಿದ್ದೆವು.
ಈಗ ಇವರು ದೇವರ ಜೊತೆ ಸಂಪರ್ಕ ಹೊಂದುತ್ತಾರೆ. ನೀವು ಎಲ್ಲರೂ ದೇವರನ್ನು ಪ್ರಾರ್ಥಿಸಿಕೊಳ್ಳಿ. ನಂತರ ಯಾರಿಗೆ ಏನು ತೊಂದರೆ ಇದ್ದರೂ ವೇದಿಕೆಗೆ ಬಂದು ಹೇಳಿಕೊಳ್ಳಬಹುದು ಎಂದರು. ವೇದಿಕೆಯಲ್ಲಿ ಬೆಳಕು ಮಂಕಾಯಿತು. ಆ ನಾಲ್ವರೂ ವಿದೇಶೀಯರಿಂದ ಅದೇನೇನೋ ಹಾವಭಾವ, ಏನೇನೋ ಮಾತುಗಳು.. ಕ್ಷಣ ಕ್ಷಣಕ್ಕೂ ಜನ ಭಾವ ಪರವಶರಾಗುತ್ತಾ ಹೋದರು. ನಮಗೇನೂ ಅರ್ಥವಾಗದಿದ್ದರೂ ಆತಂಕವಾಗುತ್ತಿತ್ತು.
ಅದಾದ ನಂತರ ಜನರ ಕಷ್ಟ ಪರಿಹರಿಸುವ ಕೆಲಸ. ವೇದಿಕೆ ಹಿಂದಿನಿಂದ ಒಬ್ಬನನ್ನು ಕರೆತರಲಾಯಿತು. ಅವನಿಗೆ ಕಣ್ಣು ಕಾಣುತ್ತಿರಲಿಲ್ಲವಂತೆ. ನಿನ್ನೆ ಇದೇ ಕಾರ್ಯಕ್ರಮದಲ್ಲಿ ಅವನಿಗೆ ದೇವರ ಕೃಪೆ ಕೊಡಿಸಿದ್ದರಂತೆ. ಅವನನ್ನು ವಿದೇಶೀಯರು ಏನೋ ಮಾತಾಡಿಸಿದರು. ಮತ್ತೊಬ್ಬ ಕನ್ನಡದಲ್ಲಿ ಅದನ್ನೇ ಕೇಳಿದ. ಈಗ ಕಣ್ಣು ಕಾಣ್ತಾ ಇದೆಯಾ ನಿನಗೆ? ಅವನು ಮಸುಕು ಮಸುಕಾಗಿ ಕಾಣ್ತಾ ಇದೆ ಸ್ವಾಮಿ ಅಂದ.ಆ ವಿದೇಶೀಯರು ಮತ್ತೆ ದೇವರಿನ ಸಂಪರ್ಕಕ್ಕೆ ಹೋದರು. ೨ ನಿಮಿಷಕ್ಕೆ ಮರಳಿ ಬಂದರು. ನಿನಗೆ ಇನ್ನು ಸ್ವಲ್ಪ ದಿನದಲ್ಲಿ ಪೂರ್ತಿ ಕಣ್ಣು ಕಾಣುತ್ತೆ, ದೇವರು ಕೃಪೆ ತೋರಿಸಿದ್ದಾರೆ. ಅವನಿಗೆ ಶರಣು ಹೋಗು ಅಂತ ತಿಳಿಹೇಳಲಾಯಿತು. ವೇದಿಕೆಯಲ್ಲಿದ್ದವರು ಅದೇನೋ ಕೂಗಿದರು. ಜನರೆಲ್ಲರೂ ಜೋರಾಗೀ ಅದನ್ನೇ ಕೂಗಿದರು. ನಂತರ ಕಾಲಿಲ್ಲದವಳು ಬಂದಳು, ಅವಳಿಗೆ ಸ್ವಾಮಿ ಕೃಪೆಯಿಂದ ಕಾಲು ಬಂದಿತ್ತು, ಸೊಂಟ ಬಿದ್ದೋದ ಮುದುಕಪ್ಪ ನೊಬ್ಬನಿಗೆ ಸೊಂಟ ಬಂದಿತ್ತು, ಬಡವನೊಬ್ಬನಿಗೆ ಹಣ ಸಿಕ್ಕಿತ್ತು, ಇನ್ನೂ ಏನೇನೋ ಪರಮಾಶ್ಚರ್ಯದ ಘಟನೆಗಳು ನಡೆದವು. ಸುಮಾರು ಜನರಿಗೆ ಕುತ್ತಿಗೆಗೆ ಅದೇನೋ ಇದ್ದ ಸರ ತೊಡಿಸಲಾಯಿತು. ದೇವರೊಡನೆ ಸಂಪರ್ಕದಲ್ಲಿದ್ದ ಬಿಳಿಯರು ಅದೆನೇನೋ ಮಾತಾಡುತ್ತಲೇ ಇದ್ದರು, ಇನ್ನೊಬ್ಬ ಕನ್ನಡದಲ್ಲಿ ಹೇಳುತ್ತಲೇ ಇದ್ದ, ಜನ ಭಕ್ತಿಯಿಂದ ಥರಗುಡುತ್ತಲೆ ಇದ್ದರು. ನೀವೆಲ್ಲರೂ ಕೂಡ ದೇವರ ಶರಣು ಬನ್ನಿ, ಸ್ವಾಮಿ ಎಲ್ಲರನ್ನೂ ಕಾಪಾಡುತ್ತಾನೆ, ನಿಮ್ಮ ಸುತ್ತ ಮುತ್ತಲಿನ ಎಲ್ಲಾ ಸೋದರ ಸೋದರಿಯರನ್ನೂ ಸ್ವಾಮಿಯ ಕೃಪೆಗೆ ಪಾತ್ರರನ್ನಾಗಿ ಮಾಡಿ ಎಂದು ಹೇಳಿದರು. ಎಲ್ಲಾ ಆದ ಮೇಲೆ ಏನೋ ಒಂದು ಹಾಡು ಹಾಡಿದರು.. ನಾವು ನಿಧಾನಕ್ಕೆ ಕಳಚಿಕೊಂಡೆವು.
ಮನೆಗೆ ಬಂದು ಯೋಚಿಸುತ್ತಲೇ ಇದ್ದೆ, ಅದು ಹೇಗೆ ಅವರು ದೇವರೊಡನೆ ಸಂಪರ್ಕ ಸಾಧಿಸುತ್ತಾರೆ, ಅದು ಹೇಗೆ ಕೈ, ಕಾಲು ಸರಿಯಾಗಿಬಿಡುತ್ತದೆ, ಕುರುಡು ಕಣ್ಣಿಗೆ ಬೆಳಕು ಬರುತ್ತದೆ, ಅದ್ಯಾಕೆ ವೇದಿಕೆ ಮೇಲೆ ಕೆಲ ಜನರಿಗೆ ಅದೇನೇನೋ ವಿದೇಶಿ ಹೆಸರುಗಳನ್ನಿಡಲಾಯಿತು. ಅಲ್ಲಿರುವ ಜನರ್ಯಾಕೆ ಅದ್ಯಾವುದೋ ಅರ್ಥವಾಗದ ಭಾಷೆಯಲ್ಲಿ ಅದೆನೋ ಜೋರಾಗಿ ಕೂಗುತ್ತಿದ್ದರು? ಏನೊಂದೂ ತಿಳಿಯಲಿಲ್ಲ. ಕದ್ದು ಹೋಗಿದ್ದರಿಂದ ಮನೆಯಲ್ಲಿ ಕೇಳಲೂ ಧೈರ್ಯವಾಗಲಿಲ್ಲ.
*******************
ಮತ್ಯಾವಾಗಲೋ ಕ್ಲಾಸಿನಲ್ಲಿ ಹುಡುಗನೊಬ್ಬ ’ಅವರ’ ದೇವರನ್ನು ಎದ್ವಾ ತದ್ವಾ ಹೊಗಳಿ ಬೈಬಲ್ ಪುಸ್ತಕವೊಂದನ್ನು ಓದಲು ಕೊಟ್ಟಾಗ ಕತೆ ಪುಸ್ತಕದಂತೆ ಅರ್ಥವಾದಷ್ಟು ಓದಿ ವಾಪಸ್ಸು ಕೊಟ್ಟಿದ್ದೆ. ಡ್ರಾಯಿಂಗಿಗೋ, ಕ್ರಾಫ್ಟಿಗೋ ಯಾವುದಕ್ಕೋ ಬರುತ್ತಿದ್ದ ಟೀಚರೊಬ್ಬರು ಕ್ಲಾಸಿನಲ್ಲಿ ಯಾವಾಗಲೂ ಆ ಸ್ವಾಮಿ ನಿಮ್ಮನ್ನು ಕಾಪಾಡ್ತಾನೆ, ನೀವೆಲ್ಲಾ ಅವನನ್ನು ಪ್ರಾರ್ಥಿಸಬೇಕು ಎಂದು "ಶುಭಸಂದೇಶ" ಎಂಬ ಪುಸ್ತಕ ಹಂಚಿದಾಗ ಅದರಲ್ಲಿರುವುದೇನೂ ಗೊತ್ತಾಗದೇ ಬ್ಯಾಗೊಳಗಿಟ್ಟುಕೊಂಡಿದ್ದೆವು.
**********************
ಕೆಲ ವರ್ಷಗಳ ನಂತರ ತಿಳಿಯಿತು. ನಾನು ಆವಾಗ ಹೋಗಿದ್ದ ಆ ಸಭೆಯಲ್ಲಿ ಆ ವಿದೇಶೀಯರು ಸಂಪರ್ಕಿಸಿದ್ದು ಏಸುವನ್ನ, ವೇದಿಕೆ ಮೇಲೆ ಕರೆತರುತ್ತಿದ್ದುದು ಬಡ ಹಿಂದೂಗಳನ್ನ, ಅವರಿಗೆ ತೊಡಿಸುತ್ತಿದ್ದುದು ’ಕ್ರಾಸ್’ ಮತ್ತು ಅಲ್ಲಿ ನೆಡೆಯುತ್ತಿದ್ದ ಕೆಲಸ ಮತಾಂತರ. ಎಲ್ಲರೂ ಎದ್ದು ನಿಂತು ಕೂಗುತ್ತಿದ್ದುದು ’ಅಲ್ಲೆಲೂಯ’....... ’ಆಮೀನ್’ ಎಂದು!
************
ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ, ಇನ್ನಿತರ ಕಡೆಗಳಲ್ಲಿ ನೆಡೆಯುತ್ತಿರುವ ಘಟನೆಗಳನ್ನೆಲ್ಲಾ ಕೇಳಿ ಇವೆಲ್ಲವನ್ನೂ ಹೇಳಿಕೊಳ್ಳಬೇಕೆನಿಸಿತು. ನಮ್ಮೂರಿನಲ್ಲೂ ಮೊದಮೊದಲು ಒಳಾಂಗಣದಲ್ಲಿ ನೆಡೆಯುತ್ತಿದ್ದ ಇಂತಹ ಮತಾಂತರಗಳು ನಂತರ ಮೈದಾನದಲ್ಲಿ ರಾಜಾರೋಷವಾಗಿ ನೆಡೆಯಲಾರಂಭಿಸಿ ವಿರೋಧವನ್ನೆದುರಿಸಿ ಮತ್ತೆ ಒಳಗೆ ಹೋಯಿತು. ಈಗ ಊರಿನ ಹೊರವಲಯದಲ್ಲೆಲ್ಲಾ ಭವ್ಯವಾದ ಚರ್ಚುಗಳು!. ಊರಲ್ಲೆಲ್ಲಾ ಏಸುದಾಸ, ಆರೋಗ್ಯಸ್ವಾಮಿ, ಸ್ಯಾಮುಯೆಲ್, ಥಾಮಸ್, ವಿಕ್ಟರ್, ಮೇರಿಗಳು. ಮೊದಲಿಂದಲೂ ಅವರ ಶಾಲೆಗಳಲ್ಲಿ ಕನ್ನಡ ಮಾತಾಡಿದರೆ ದಂಡ, ಕುಂಕುಮ ಇಟ್ಟಿದ್ದರೆ, ಹೂವು ಮುಡಿದಿದ್ದರೆ ಗೆಟ್ಟೌಟು!.
ವರದಿಯ ವಿವರಗಳು |
 |
ಕೃಪೆ : ವಿಕಾಸವಾದ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-22
|
|
| Suresh S.R., Mangalooru | 2008-10-03 | | ಪ್ರೀತಿಯ ರೋನಾಲ್ಡ್‌ರವರೇ, ಇಷ್ಟೆಲ್ಲ ಉದಾಹರಣೆಗಳನ್ನು ಒದಗಿಸಿದ ಮೇಲೆ, ದಿನದಿಂದ ದಿನಕ್ಕೆ, ಅನಿಸಿಕೆ ವ್ಯಕ್ತಪಡಿಸುವುದರಲ್ಲೂ, ಸುಧಾರಿಸಿದ್ದೀರಿ. ಸಂತೋಷ ಪಡಲೇಬೇಕಾದ, ಸ್ವಾಗತಿಸಲೇಬೇಕಾದ ಆರೋಗ್ಯಕರ ಬೆಳವಣಿಗೆ. ೧. ಕರ್ನಾಟಕ, ನೆರೆಯ ಕೇರಳದಲ್ಲೂ, ದೇವರೊಡನೆ ನೇರ ಸಂಪರ್ಕಹೊಂದುವವರು ಬಹಳಷ್ಟು ಜನರಿದ್ದಾರೆ. ಡೊಂಟ್ ಸೆ, ಐ ಹ್ಯಾವ್ ನೊ ಐಡಿಯಾ ಮಾಧ್ಯಮದ ಬಗ್ಗೆ ಇಷ್ಟೆಲ್ಲಾ ಒಲವಿರುವ ನಿಮಗೆ ಈ ಮಾತು ಶೋಭಿಸುವುದಿಲ್ಲ. ಕೆಲವೇ ವರ್ಷಗಳ ಹಿಂದೆ ವಿದೇಶಿ ಬಬ್ಬ ಬೆಂಗಳೂರಿಗೆ ಬಂದು ದೇವರೊಡನೆ ಸಂಪರ್ಕನೆಡೆಸಿ, ಎಲ್ಲರ ಅನಾರೋಗ್ಯ ಸರಿಪಡಿಸುತ್ತೇನೆ ಎಂದು ಹೇಳಿಲ್ಲವೇ?(ಅದರ ಹಿಂದಿನ ಉದ್ದೇಶವೇನು ಎಂದು ಜನ ಅರಿತಿದ್ದರು. ಸರಕಾರ ಕೂಡ ನಿನ್ನ ದೇಶದಲ್ಲಿ ಕುಳಿತು ಸಂಪರ್ಕ ಸಾಧಿಸು ಎಂದು ಹೇಳಿತ್ತಲ್ಲ) ೨. ಇದೇನು? ಕುಂಬಳ ಕಾಯಿ.... ಅಂದ ಹಾಗೆ ನೀವ್ಯಾಕೆ ನಿಮ್ಮಷ್ಟಕ್ಕೆ ಮತಾಂತರದ ಜವಾಬ್ದಾರಿಯನ್ನು ಸುಖಾಸುಮ್ಮನೆ ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ?ಲೇಖಕರ ಆನುಭವಕ್ಕೆ, ನನ್ನ ಅನಿಸಿಕೆಗೆ, ನೀವು ಬರೆದ ಪ್ರತಿಕ್ರಿಯೆಯಿಂದ ಸಮಾನಮನಸ್ಕರಾದ ನಮ್ಮಿಬ್ಬರಲ್ಲಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ, ಆರೋಗ್ಯಕರ ಚರ್ಚೆ ನೆಡೆಯುತ್ತಿದೆ ಎಂದುಕೊಳ್ಳುತ್ತಿದ್ದೇನೆ. ನೀವು ಹೇಗೆ ತಿಳಿಯುತ್ತೀರೊ ನನಗೆ ತಿಳಿದಿಲ್ಲ. ಮೇಡ್ ಪಾರ್ ಇಚ್ ಆದರ್ ಬ್ಯಾಡ್ ಟೇಸ್ಟ್ ಟು ರಾಕ್ ದ ಬೋಟ್ ಶಿಸ್ತಿನ ವಿರೋಧಿ ಮತಾಂತರದ ಬಗ್ಗೆ ನಿಮಗೆ ತಿಳುವಳಿಕೆಯೇ ಇಲ್ಲದಿರುವುದು ಬ್ರಿಟಿಷ್ ಪ್ರೇಮ ನಿಮ್ಮ ಈ ಎಲ್ಲ ಉತ್ತರಗಳಿಂದ ಚರ್ಚೆ ಇನ್ನೂ ಮುಂದುವರಿಯುತ್ತಿದೆ. ೩. ಸಮ್ ಪೀಪಲ್ಸ್ ಆಕ್ಟ್ ಸಮ್‌ವೇರ್ ಅಲ್ಲ ಸ್ವಾಮಿ, ವರ್ಷದ ಹಿಂದೆ ಉಡುಪಿ ಜಿಲ್ಲೆಯಲ್ಲಿ, ಮತಾಂತರ ಹಗರಣ ನೆಡೆದು, ಧಾರ್ಮಿಕ ಮುಖಂಡರ ಮೇಲೆ ತಳ್ಳಾಟ, ಎಳೆದಾಟ ನೆಡೆದಾಗಲೆ, ಮತಾಂತರವನ್ನು ನಿಲ್ಲಿಸಿದ್ದರೆ, ಈಗ ಪರಿಸ್ಥಿತಿ ಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲ್ಲಿಲ್ಲ. ಆಗ ಬಿ.ಜೆ.ಪಿ. ಸರಕಾರವೂ ಇರಲಿಲ್ಲವಲ್ಲ??!!! ೪. ಅವಹೇಳನದ ಬರಹಗಳ ಬಗ್ಗೆ, ಪೋಲಿಸ್ ಕಾರ್ಯಾಚರಣೆ ಮೇಲೆ ನಿಮಗಿಲ್ಲದಿದ್ದರೂ, ನನಗೆ ನಂಬಿಕೆ ಇದೆ. ೫. ಮನೆ ಮತ್ತು ಪ್ರಾರ್ಥನಾ ಸ್ಥಳ ಬಿಟ್ಟು, ಧರ್ಮ, ಜಾತಿ ಹೊರ ಕಾರ್ಯಕ್ಕೆ ಮುಂದಾಗಬಾರದು ಎನ್ನುವ ನಿಮ್ಮ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ. ಪರ ಧರ್ಮದ, ದೇವರ ಅವಹೇಳನ, ಬಯಲಿಗೆ, ಮೈದಾನಕ್ಕೆ ಬಂದಿರುವ ಆಮಿಷದ, ಒತ್ತಾಯದ, ಮತಾಂತರವನ್ನು ಹಿಂದೂಗಳ ಜೊತೆ ಜೊತೆಗೆ, ಬಹಳಷ್ಟು ಕ್ರೈಸ್ತರು, ಹಲವಾರು ನನ್ನ ಕ್ರೈಸ್ತಧರ್ಮೀಯ ಸ್ನೇಹಿತರು ಖಂಡಿಸುತ್ತಿದ್ದಾರೆ. ೬. ತನ್ನ ಪೂರ್ವಜರು ಮಾಡಿದ ತಪ್ಪುಗಳಿಗೆ, ಬ್ರಿಟಿಷ್ ಪ್ರಜೆಯೊಬ್ಬರು, ಕುದುರೆಮೇಲೆ ಕುಳಿತು, ಹಿಮಾಲಯದಿಂದ ಕನ್ಯಾಕುಮಾರಿ ತನಕ, ಕೈ ಜೋಡಿಸಿ, ಈ ದೇಶದ ಜನರಲ್ಲಿ ಕ್ಷಮೆಕೇಳುತ್ತಿದ್ದರೂ, ಬ್ರಿಟಿಷರೇ ಗ್ರೇಟ್ ಎನ್ನುವವರು ಇನ್ನೂ ಇರುವುದು ಎಂತಹ ವಿಪರ್ಯಾಸವಲ್ಲವೇ?? ೭. ಕೊನೆಯಲ್ಲಿ ನಿಮ್ಮ ವ್ಯಂಗ್ಯಪ್ರಶ್ನೆ ನೋಡಿ ಬಹಳಷ್ಟು ಮೆಚ್ಚುಗೆಯಾಯಿತು. ಸ್ವಾಮಿ, ಕಂಪ್ಯೂಟರ್ ತಂತ್ರಜ್ಜ್ನಾನ, ವೈದ್ಯಕೀಯಕ್ಷೇತ್ರ, ವಿಜ್ಜ್ನಾನಕ್ಷೇತ್ರದಲ್ಲಿ, ಭಾರತೀಯರು ಪ್ರಪಂಚದಲ್ಲೇ ಹೆಸರುಪಡೆದಿದ್ದಾರೆ. ಬ್ರಿಟಿಷ್ ವೀಸಾದ ಗ್ಗೆ ಬರೆದಿರುವ ನೀವು, ಚಿನ್ಮಯ ಅಮೇರಿಕ, ನಿತ್ಯಾನಂದ ದುಬೈ, ವಿನ್ಸೆಂಟ್ ಇಸ್ರೇಲ್ ರವರಲ್ಲಿ ವಿಚಾರಿಸಿ, ಯಾಕೆ ಅವರು ಅಲ್ಲಿ ಇದ್ದಾರೆ ಎಂದು?? ಯಾಕೆಂದರೆ, ಭಾರತೀಯರು ಕಠಿಣಪರಿಶ್ರಮ, ವಿಶ್ವಾಸಕ್ಕೆ ಆರ್ಹರಾದವರು, ಕಡಿಮೆ ಸಂಬಳಕ್ಕೂ ದುಡಿಯುತ್ತಾರೆ. ಎಲ್ಲಕ್ಕೂ ಮಿಗಿಲಾಗಿ, ಬೇರೆ ದೇಶದವರು ಮತ್ತು ಅದೇ ದೇಶದವರಿಗಿಂತ ಕಡಿಮೆ ಸೋಮಾರಿಗಳು ಎಂಬ ಕಾರಣಕ್ಕಾಗಿ. ನನ್ನ ಕುಟುಂಬದವರು, ಸಂಬಂದಿಕರು ಸೇರಿದಂತೆ ಬ್ರಿಟಿಷ್ ಕೌಂಟಿಗಳಲ್ಲಿ ಸೇವೆಸಲ್ಲಿಸುತ್ತಿರುವ ಹಲವಾರು ವೈದ್ಯರುಗಳನ್ನು, ಕ್ರೈಸ್ತಧರ್ಮದ ನರ್ಸ್‌ಗಳನ್ನು ಬ್ರಿಟಿಷ್ ಸರಕಾರವೇ ಭಾರತೀಯರ ಸೇವೆ ನಮಗೆ ಬೇಕು ಎಂದು ವೀಸಾಕೊಟ್ಟು, ಕಾನೂನುಪ್ರಕಾರ ಕರೆಸಿಕೊಂಡಿದೆಯೆ ಹೊರತು, ಬ್ರಿಟಿಷ್‌ರಂತೆ ವ್ಯಾಪಾರದ ನೆಪದಲ್ಲಿ ಬಂದು ಈ ದೇಶದ ಜನ, ಧರ್ಮ, ಜಾತಿ, ಭಾಷೆ ಹಾಗೂ ಸಂಸ್ಕೃತಿ ಮೇಲೆ ದಾಳಿ ಮಾಡಿಲ್ಲ, ಲಕ್ಷಾಂತರ ಜನರನ್ನು ಕೊಂದಿಲ್ಲ ಎನ್ನುವುದನ್ನು ಕೋಟಿ ಕೋಟಿ ಬಾರಿ ನೆನಪಿಸಿಕೊಳ್ಳಿ. ಬೀ-ಲೈನ್ ಎಂದು ಭಾರತೀಯರಲ್ಲಿ ಕೀಳರಿಮೆ ಹುಟ್ಟಿಸಬೇಡಿ. ಪ್ರೀತಿಯ ವಿನ್ಸೆಂಟ್ ಬೆನ್ನಿಸ್ ಬಂಟ್ವಾಳ, ನೌ ಇನ್ ಇಸ್ರೇಲ್ ರವರೆ, ನಿಮ್ಮ ಬೆನ್ನಿಸ್ ಹೆಸರು ಕೇಳಿದ ತಕ್ಷಣ, ಯಾಕೊ ಎನೊ ಗೊತ್ತಿಲ್ಲ, ಬೆಂಗಳೂರಿಗೆ ಬರಬೇಕೆಂದಿದ್ದ ಮೇಲೆ ತಿಳಿಸಿದ ಆ ವಿದೇಶಿಯನ ನೆನಪಾಗುತ್ತಿದೆ. (ತಪ್ಪಾಗಿ ಅರ್ಥ ಮಾಡಿಕೊಂಡಿದ್ದರೆ ದಯವಿಟ್ಟು ಕ್ಷಮಿಸಿ.) ಕ್ರಿಶ್ಚಿಯನ್ ಶಾಲೆಯ ವಿಷಯದ ಬಗ್ಗೆ, ಈಗಾಗಲೆ ರೋನಾಲ್ಡ್‌ರವರಿಗೆ ಉತ್ತರಿಸಿದ್ದೇನೆ. ಉತ್ತರ ಅಲ್ಲಿಯೆ ಇದೆ. ಆಮೂಲಾಗ್ರವಾಗಿ ಓದಿ, ವಿಷಯ ಮನನ ಮಾಡಿಕೊಂಡು, ಅಭಿಪ್ರಾಯ ವ್ಯಕ್ತಪಡಿಸಬೇಕೆ ಹೊರತು, ತಾನೂ ಎನಾದರೂ ಹೇಳಲೇಬೇಕೆಂಬ ಬಾಯಿಚಪಲ, ಹಟದಿಂದ ಹೇಳುವುದಲ್ಲ. ಲೇಖಕರು ಮತ್ತು ನನ್ನ ಸ್ವಾನುಭವ, ನಮಗಾದ ಆಮಿಷಗಳು, ಪುರುಷೋತ್ತಮ ಮಂಗಳೂರು, ಚಿನ್ಮಯ ಅಮೇರಿಕಾ, ರಂತಯ ಹಲವಾರು ಜನರ ಪ್ರತಿಕ್ರಿಯೆಗಳು ನಿಮ್ಮ ಅಭಿಪ್ರಾಯದಲ್ಲಿ ಬೆಂಕಿಯ ಮೇಲೆ ತುಪ್ಪ ಸುರಿಸುವುದು ಎನ್ನುವ ಮಹಾನುಭಾವರೆ, ನೀವೇಕೆ ಈ ಸಮಾಜದ ಪಿಡುಗಾದ ಶಿಕ್ಷಣ, ಉದ್ಯೋಗದ ಆಮಿಷದ, ಒತ್ತಾಯದ, ಬಡತನದ, ಅಸಾಹಾಯಕತೆಯ ದುರುಪಯೋಗ ಪಡಿಸಿಕೊಂಡು ಮಾಡುತ್ತಿರುವ ಮತಾಂತರ, ಹೆಂಗಸರು, ಹೆಣ್ಣ್ಮಕ್ಕಳ್ಳೆ ಇರುವಾಗ ಮನೆಗೆ ಬಂದು, ಹಿಂದೂ ದೇವರ ಫ಼ೋಟೊಗಳನ್ನಿಡಬೇಡಿ, ಪೂಜೆ ಮಾಡಬೇಡಿ, ನಮ್ಮ ಧರ್ಮಕ್ಕೆ ಬಂದರೆ ಎಲ್ಲ ಸವಲತ್ತು ಒದಗಿಸುತ್ತೇವೆ ಎಂದು ಹೇಳಿ ಬ್ರೈನ್ ವಾಷ್ ಮಾಡುವವರ ಬಗ್ಗೆ, ಹೀಲಿಂಗ್ ಕ್ಯಾಂಪ್ ಹಾಗು ಅದೇ ರೀತಿಯ ಇತರ ಹೆಸರಿನ ಸಭೆಗಳಲ್ಲಿ, ದೇವರೊಡನೆ ಸಂಪರ್ಕ ಸಾಧಿಸಿ, ಕಾಯಿಲೆ ಗುಣಪಡಿಸುತ್ತೇವೆ ಎನ್ನುವವರ ಬಗ್ಗೆ, ಖಂಡಿಸದೆ, ತುಟಿಪಿಟಕ್ಕೆನ್ನದೆ, ಜಾಣಮೌನ ವಹಿಸಿರುವುದು?? ಇದು ಎನನ್ನು ಸೂಚಿಸುತ್ತದೆ??? ಈ ಮೂಲಕ ಗಲ್ಫ್‌ಕನ್ನಡಿಗ ಸಂಪಾದಕಮಂಡಳಿಗೂ, ಈ ಲೇಖನದ ಲೇಖಕ/ಲೇಖಕಿಗೂ, ಅನಿಸಿಕೆ, ಅಭಿಪ್ರಾಯ ವ್ಯಕ್ತಪಡಿಸಿದ ರೋನಾಲ್ಡ್ ಉಡುಪಿ, ಪುರುಷೋತ್ತಮ ಮಂಗಳೂರು, ಚಿನ್ಮಯ ಅಮೇರಿಕಾ, ವಿನ್ಸೆಂಟ್ ಬೆನ್ನಿಸ್, ನಿತ್ಯಾನಂದ ಉಡುಪಿ ದುಬೈ, ದೇಶ, ವಿದೇಶದ ಲಕ್ಷಾಂತರ ಓದುಗರಿಗೆ, ಇವರೆಲ್ಲರಿಗೂ ನನ್ನ ಕೃತಜ್ನತೆಗಳು. ಈ ಲೇಖನದ ಮೂಲಕ ತಪ್ಪಿತಸ್ಥರು ತಮ್ಮ ತಪ್ಪನ್ನು ತಿದ್ದಿಕೊಳ್ಳಲಿ, ಪರಧರ್ಮ ಸಹಿಸ್ಣುತೆ ಬೆಳಸಿಕೊಳ್ಳಲಿ, ಸಾಮಾಜಿಕ ಕಳಕಳಿ ಮೂಡಲಿ ಎಂಬುದೆ ನನ್ನ ಹಾರೈಕೆ. ||ಲೋಕಾ: ಸಮಸ್ತಾ ಸುಖಿನೋ ಭವಂತು:|| ||ಓಂ ಶಾಂತಿ: ಶಾಂತಿ: ಶಾಂತಿ:||
|
| RAO, KUWAIT | 2008-10-03 | | ಶಾಲೆಯಲ್ಲಿ ಕುಂಕುಮ ಇಟ್ಟರೆ ಗೆಟ್ ಔಟ್ ಇದು ಸರಿಯಾದ ಕ್ರಮ ಯಾಕಂದರೆ ಶಾಲೆಯಲ್ಲಿ ಸಮವಸ್ತ್ರ,ಮೇಲು ಕೀಳು ಎನ್ನುವ ಬೇದವಿಲ್ಲದೆ ಬೆಳೆಯುವದು ನಮ್ಮ ಮುಂದಿನ ಸಮಾಜಕ್ಕೆ ಒಳ್ಳೆಯದು
ಸಮವಸ್ತ್ರ :-ಯುನಿಫಾರ್ಮ್ ಎಲ್ಲರು ಒಂದು, ಕೇವಲ ಹೆಸರಲ್ಲಿ ಮಾತ್ರ ಕಂಡು ಹಿಡಿಯಬೇಕು ಶಾಲೆಯಲ್ಲಿ ವಿಧ್ಯಾರ್ಥಿಗಳನ್ನು. ಶಾಲೆಯಲ್ಲಿ ನಮ್ಮ ಅಲಂಕಾರ,ನಮ್ಮ ಅಂತಸ್ತನ್ನು ತೋರಿಸಲು ಹೋಗಬಾರದು. ನಮ್ಮ ಮಕ್ಕಳು ಚೆನ್ನಾಗಿ ಇರಬೇಕೆನ್ನುವದು ಎಲ್ಲರಿಗು ಆಸೆ ಇರುತ್ಹದೆ. ನಾವು ಶಾಲೆಯಲ್ಲಿ ಮಕ್ಕಳಿಗೆ ಸಮಾನತೆ ಏಕತೆ, ಗೌರವ ವಿದ್ಯಾ ಇವನ್ನು ಕಲಿಯಲು ಕಲಿಸಿಕೊಡಬೇಕು ಎಸ್ಟೋ ಮಹಾನುಬಾವರು ಕ್ರಿಸ್ಟಿಯನ್ ಶಾಲೆಯಲ್ಲಿ ಓದಿ ದೊಡ್ಡವರಾಗಿ, ಅದೇ ಶಾಲೆಗೆ,ಅವರಿಗೆ ಸಂಬಂದಪಟ್ಟ ಸಂಸ್ಥೆಗಳಿಗೆ ಕಲ್ಲೆಸೆಯುತಿದ್ದಾರೆ. ಇದು ಅವರವರ ಸಂಸ್ಕೃತಿ. ಕುಂಕುಮ,ಹೂವು, ಒಡವೆ,ಬೆಲೆಬಾಳುವ ವಸ್ತ್ರ, ಇವುಗಳ್ನು ಹಾಕಿ ಸಂತೋಷ ಪದಬೇಕಾದರೆ ಕ್ರಿಸ್ತರ ಶಾಲೆಗೆ ಕಳುಹಿಸದೆ ಇರುವದು ಒಳ್ಳೆಯದು. ಇದು ನನ್ನ ಅಭಿಪ್ರಾಯ. ............ಆಚಾರ್ಯ ದೇವೋಭವ .... |
| ನಿತ್ಯಾನ೦ದ ಬೆಸ್ಕೂರ್, ಉಡೂಪಿ, ದುಬೈ | 2008-10-03 | | ಮತಾ೦ತಾರ ತಪ್ಪು ,ಬಡವರಿಗೆ ಉಪಕಾರ ಮಾಡಿ,ಅವರವರ ದೆವರ ಬಗ್ಗೆ ಜ್ನಾನೊದಯ ಮಾಡಿ,ಯೇಸು,ಅಲ್ಲಾ,ಬ್ರಹ್ಮ , ಅ೦ತ ಜಗಳ ಮಾಡಬೇಡಿ.ನಿಮ್ಮ್ಹತ್ರ ಹಣಾ ಇದ್ದರೆ ಎಲ್ಲರಿಗೆ ಹ೦ಚಿ. |
| VINCENT BENNIS, BANTWAL NOW IN ISRAEL | 2008-10-02 | | Hello Suresh s r ravare benkiya mele yaake tuppa surisuva kelasa madutira nimage nimma samajakke christian shaleyalli kaliudaaekke yaaru ottya maduttare?Beda BIDI NIMMA MAKKALANNU SARAKARI SALEYALLI KALIYALI? |
| Ronald, Udupi | 2008-10-02 | | Dear Mr. Suresh,
I have no idea about the people having direct contact with God. I have no desire nor curiosity to know more about them since I'm happy with my belief. Do not impose your opinion and methods of induced conversions on me. Do not impose responsibility on me for some peoples acts somewhere. I have better things to do in life than reading about conversion and religion.
About offensive litrature, I think our capable(?) police should catch the culprits behind it and should put them behind bars.
In my opinion, religion will be at its best when it is confined to home and place of worship.
It will be even better if religion is seperated from politics and politicians so that resources can be utilised for the growth of nation.
Last, Many talk ill about British, when it comes to higher education and employment, Bee -line for visa eh? |
| Suresh S.R., Mangalooru | 2008-10-02 | | ರೋನಾಲ್ಡ್‌ರವರೇ, ವಿಷಯಪಲ್ಲಟ ಮಾಡುವುದರಲ್ಲಿ ನೀವು ನಿಸ್ಸೀಮರು ಎಂದು ಸಾಬೀತು ಪಡಿಸಿದ್ದೀರಿ. ಎಲ್ಲಿಯ ಅಡ್ವಾಣಿ ರಥಯಾತ್ರೆ?? ಎಲ್ಲಿಯ ಬಾಬರಿ ಮಸೀದಿ?? ಎಲ್ಲಿಯ ನಾವು ಈಗ ಚರ್ಚೆ ಮಾಡುತ್ತಿರುವ ಆಮಿಷದ, ಒತ್ತಾಯದ ಮತಾಂತರ??? ಬಹುಶ: ನೀವು ಈ ಲೇಖನ ಮತ್ತು ನನ್ನ ಅನಿಸಿಕೆ ಯನ್ನು ಸರಿಯಾಗಿ ಓದುತ್ತಿಲ್ಲ ಅಥವಾ ಎಲ್ಲ ವಿಷಯ ಗೊತ್ತಿದ್ದು, ಅನಗತ್ಯ ವಿಷಯಗಳನ್ನು ತುರುಕಿಸುತ್ತಿದ್ದೀರಿ. ಚರ್ಚಿಸುತ್ತಿದ್ದೀರಿ.!!! ನಿಮ್ಮಂತಯೆ, ನಾನು ಕೂಡಾ ಹಲವು ಚರ್ಚ್‌ಗಳನ್ನು ಸಂದರ್ಶಿಸಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಧರ್ಮದ ಬಗ್ಗೆ ನನ್ನ ವಿರೋಧವಿಲ್ಲ. ವಿರೋಧವಿರುವುದು ಹಲವಾರು ಅಸಹಾಯಕತೆ ಯನ್ನು ಬಳಸಿಕೊಂಡು ಮಾಡುವ ಆಮಿಷದ, ಅನ್ಯಾಯದ, ಕಾನೂನು ಬಾಹಿರವಾದ ಮತಾಂತರದ ಬಗ್ಗೆ. 1. ಎಷ್ಟು ಕ್ರೈಸ್ತ ಶಾಲೆಗಳಲ್ಲಿ ಕನ್ನಡ ಮಾತನಾಡಲು, ಬಳೆ, ಕುಂಕುಮ, ಹೂವು ಮುಡಿಯುವುದಕ್ಕೆ ಅವಕಾಶ ನೀಡಲಾಗುತ್ತಿದೆ? 2. ನೀವೆ ಹೇಳಿದಂತೆ, ನೀವು ಕಲಿತ ಹಿಂದೂ ಆಡಳಿತ ಶಾಲೆಯಲ್ಲಿ ನಿಮ್ಮ ಧರ್ಮದ ಬಗ್ಗೆ, ಧರಿಸುವ ಕ್ರಾಸ್ ಬಗ್ಗೆ ವಿರೋಧವಿತ್ತೆ? 3. ನೀವೆ ತಿಳಿಸಿದಂತೆ, ನಿಮ್ಮ ಶಾಲಾ, ಕಾಲೇಜು ಜೀವನದಲ್ಲಿ ಬೇರೆ ಧರ್ಮದ ಬಗ್ಗೆ ಇರದಿದ್ದ ಇಲ್ ಫೀಲಿಂಗ್ಸ್ ಈಗೇಕೆ? ಇಲ್ಲದಿದ್ದರೆ ನೀವು ವಿಷಯಪಲ್ಲಟ ಮಾಡುತ್ತಿರಲಿಲ್ಲ. 5. ನಿಮ್ಮದೆ ಹಿಂದಿನ ಅನಿಸಿಕೆಯನ್ನು ಪುನ: ಓದಿಕೊಳ್ಳಿ. ನಿಮಗೇ ಸೃಷ್ಟವಾಗಬಹುದು ಬ್ರಿಟಿಷ್ ಲವರ್ ಬಗ್ಗೆ, ಪುರುಷೋತ್ತಮ್ ಕೂಡಾ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವೆ ಹೇಳಿದ ವಿಷಯವನ್ನು ನೀವೇ ಅಲ್ಲಗಳೆಯುತ್ತಿದ್ದೀರಿ??!! 5. ಕ್ವಾಲಿಟಿ ಆಫ್ ಇನ್‌ಫ್ರಾಸ್ಟ್ರಕ್ಚರ್ ಈಗ ಜಪಾನ್ ನವರು ಪ್ರಪಂಚದಲ್ಲೆ ಮುಂದುವರಿದಿದ್ದಾರೆ. ಹಾಗಂತ ನೀವೇಕೆ ಜಪಾನ್ ನವರಿಗೆ ಕೂಡಾ ಹೇಳಬಾರದು? ಬ್ರಿಟಿಷ್‌ರಂತೆ ನೀವು ಈ ದೇಶದಲ್ಲಿ ಜನ, ಧರ್ಮ, ಜಾತಿ, ಭಾಷೆ ಹಾಗೂ ಸಂಸ್ಕೃತಿ ಮೇಲೆ ದಾಳಿ ಮಾಡಿ, ನನಗೆ ನಿಮ್ಮ ಭಾಷೆ ಕಲಿಸಿ ಎಂದು?? ಅಥವಾ, ಇಟೆಲಿ, ಇಸ್ರೇಲ್‌ಗೆ ಹೇಳಬಹುದೇನೋ!! ಅಲ್ಲವೇ ರೋನಾಲ್ಡ್?? 6. ಸತ್ಯ ದರ್ಶಿನಿ ಪುಸ್ತಕ ಪ್ರಕಟಿಸಿ, ಹಿಂದೂ ದೈವ, ದೇವರುಗಳನ್ನು ಅವಹೇಳನಗೊಳಿಸಬೇಕಿತ್ತೆ??? ಯಾಕೆ ಮುಸ್ಲಿಂ ಧರ್ಮದ ಬಗ್ಗೆ ಎನೂ ಹೇಳುತ್ತಿಲ್ಲ?? ಯಾಕೆಂದರೆ ಹಿಂದೂಗಳು ಅಷ್ಟು ಬೇಗ ಒಗ್ಗಟ್ಟಾಗಿ ವಿರೋಧಿಸುವುದಿಲ್ಲ ಅಲ್ಲವೆ?? ಎಷ್ಟು ಮುಸಲ್ಮಾನರನ್ನು ಮತಾಂತರಗೊಳಿಸಲು ಸಾಧ್ಯವಾಗಿದೆ?? 7. ಫಾಸ್ಟರ್ ಬ್ರದರ್ ಮಾಡಿಸುತ್ತೇನೆ ಎಂದು ಹಿಂದುಗಳನ್ನು ಮತಾಂತರ ಗೊಳಿಸಬೇಕಿತ್ತೆ?? 8. ಶಿಕ್ಷಣ, ಉದ್ಯೋಗದ ಆಮಿಷದ, ಒತ್ತಾಯದ, ಬಡತನದ, ಅಸಾಹಾಯಕತೆಯ ದುರುಪಯೋಗ ಪಡಿಸಿಕೊಂಡು ಮತಾಂತರ ಮಾಡುವುದು ಸರಿಯೇ?? 9. ಆಮಿಷದ ಮತಾಂತರ ಮಾಡಿಸಿ ಕೂಡ, ನಿಮ್ಮ ಧರ್ಮಕ್ಕೆ ಒಪ್ಪಿಸಿಕೊಳ್ಳದೆ, ದಲಿತ ಕ್ರೈಸ್ತರು ಎಂದು ಹಣೆಪಟ್ಟಿ ಕಟ್ಟುವಿಕೆ ಅವರ ಯಾವ ಪುರುಷಾರ್ಥಕ್ಕೆ?? 10. ಲೇಖಕರು, ಪುರುಷೋತ್ತಮ ಮತ್ತು ನನ್ನ ಸ್ವಾನುಭವ, ನನಗೆ ಮಾಡಿರುವ ಮತಾಂತರದ ಆಮಿಷವನ್ನು ಕೂಡಾ ಎಲ್ಲ ವಿಷಯ ತಿಳಿದು ತಿಳಿದೂ, ನಿಮ್ಮ ಮೊಂಡುವಾದ ದಿಂದ ಅಲ್ಲಗಳೆಯಬಹುದು. ಬಾರಿ ಬಾರಿಗೂ ನಿಮ್ಮ ಪ್ರತ್ತ್ಯುತ್ತರ, ನನಗಿಷ್ಟವಿಲ್ಲದಿದ್ದರೂ, ನನ್ನನ್ನು ಇನ್ನಷ್ಟು ವಿಷಯ ತಿಳಿಸುವಂತೆ ಮಾಡುತ್ತಿದೆ. 11.ನಿಮಗೊಂದು ಜೀವಂತ ಉದಾಹರಣೆ ಕೊಡುತ್ತಿದ್ದೇನೆ. ಸೌಮ್ಯ ಸ್ವಭಾವದ ಮನುಎನ್ನುವ ನನ್ನ ಸ್ನೇಹಿತನೊಬ್ಬನನ್ನು ಹಣ ಮತ್ತು ಪಾಶ್ಚಾತ್ಯ ದೇಶದ ಉದ್ಯೋಗದ ಆಮಿಷ ಒಡ್ಡಿ ಇಮ್ಯಾನ್ಯುಲ್ ಹೆಸರಿಟ್ಟು ಮತಾಂತರಗೊಳಿಸಿ, ಈಗ ಅವನ ಸ್ಥಿತಿ ದೇವರಿಗೆ ಪ್ರೀತಿ. ಅವನ ಗತಿ ಲಿಂಗ ಬದಲಾವಣೆ ಮಾಡಿಕೊಂಡ ಮನುಷ್ಯನಿಗಿಂತ ಕಡೆಯಾಗಿದೆ. ಯಾವ ದೇವರನ್ನು ನಂಬುವುದು?? ಯಾವ ಪ್ರಾರ್ಥನೆ ಮಾಡುವುದು?? ಸಂಸಾರ, ಸಮಾಜದಿಂದ ದೂರವಾಗಿದ್ದಾನೆ. ಮಾನಸಿಕವಾಗಿ ಕೊರಗುತ್ತಿದ್ದಾನೆ. ಇಂತಹ ಹಲವಾರು ಉದಾಹರಣೆ ಗಳಿವೆ. ಮತಾಂತರದ ಹೆಸರಿನಲ್ಲಿ ಇನ್ನೆಷ್ಟು ಸಂಸಾರಗಳನ್ನು ಹಾಳುಗೆಡವಬೇಕೆಂದಿದ್ದಾರೆ ಇವರು?? 12. ವಿದೇಶಗಳಿಂದ ಹರಿದು ಬರುತ್ತಿರುವ ಮಿಲಿಯಗಟ್ಟಲೆ ಹಣ, ಹೊಸ ಪ್ರಾರ್ಥನಾಕ್ರಮ ಕಂಡುಹಿಡಿದು, ಒಂದೊಂದು ಪಂಗಡ, ಒಂದೊಂದು ಗುಂಪುಗಳಿಗೆ, ತಾನು ಧಾರ್ಮಿಕ ಮುಖಂಡನಾಗಬೇಕೆಂದು ಬೇರೆ ಗುಂಪು ಕಟ್ಟಿಕೊಳ್ಳುವವರು, ತಮ್ಮ, ತಮ್ಮ ಗುಂಪು, ಪಂಗಡಗಳಲ್ಲಿನ ಸಂಖ್ಯಾಬಲ ಹೆಚ್ಚಿಸಬೇಕೆಂದು ಆಮಿಷ ಒಡ್ಡಿ ಮತಾಂತರಗೊಳಿಸಲು ಸುಲಭದಲ್ಲಿ ಇವರಿಗೆ ಸಿಗುವವರು ಪಾಪದ ಹಿಂದೂ ಭಾಂದವರು!!! ಅಲ್ಲವೇ??? 13.ಮನೆಯಲ್ಲಿ ಗಂಡಸರು ಇಲ್ಲದೆ ಇರುವಾಗ, ಹೆಂಗಸರು, ಹೆಣ್ಣುಮಕ್ಕಳಲ್ಲಿ, ಹಿಂದೂ ದೇವರ ಫೋಟೊಗಳನ್ನಿಡಬೇಡಿ, ಪೂಜೆ ಮಾಡಬೇಡಿ, ನಮ್ಮ ಧರ್ಮಕ್ಕೆ ಬಂದರೆ ಎಲ್ಲ ಸವಲತ್ತು ಒದಗಿಸುತ್ತೇವೆ ಎಂದು ಹೇಳಿ ಬ್ರೈನ್ ವಾಷ್ ಮಾಡುವವರು ಹಿಂದೂಗಳೆ ರೋನಾಲ್ಡ್??? 14. ಹೀಲಿಂಗ್ ಕ್ಯಾಂಪ್ ಹಾಗು ಅದೇ ರೀತಿಯ ಇತರ ಹೆಸರಿನ ಸಭೆಗಳಲ್ಲಿ ಮೂಗ ಮಾತನಾಡುವುದು, ಕೈ, ಕಾಲು ಸರಿಯಾಗುವುದು, ದೃಷ್ಟಿ ಬರುವುದು, ಬಡ ಹಿಂದೂಗಳಿಗೆ ಕ್ರಾಸ್ ತೊಡಿಸಿ, ಎಸುದಾಸ, ವಿಕ್ಟರ್, ಆರೋಗ್ಯಮಾತೆ, ಸಾಮ್ಯುವೆಲ್, ಥಾಮಸ್, ಮೇರಿ, ವಿಕ್ಟರ್, ಆರೋಗ್ಯಸ್ವಾಮಿ ಹೆಸರಿಸಿ, ಮತಾಂತರ ಮಾಡುತ್ತಿರುವವರು ಹಿಂದೂಗಳಾಗಿರಬಹುದು ಅಲ್ಲವೇ ರೋನಾಲ್ಡ್?? 15.ಸಮಾಜಸೇವೆಯ ಮನಸ್ಸಿದದ್ದೇ ಹೌದಾದರೆ, ಶಿಕ್ಷಣ ಕೊಡಿಸಿ, ಮಾನವೀಯತೆಯ ನೆಲೆಯಲ್ಲಿ ಸಹಾಯಮಾಡಿ. ಧರ್ಮದ, ದೇವರ ಅವಹೇಳನ, ಆಮಿಷದ, ಒತ್ತಾಯದ, ಮತಾಂತರ ಯಾಕೆ ಬೇಕು??? ಇನ್ನೆಷ್ಟು ದಿನ ಹಿಂದೂ ಭಾಂದವರು ಇದನ್ನು ಸಹಿಸುತ್ತಿರಬೇಕು?? ಓ ದೇವರೆ, ಅವರಿಗೆ ತಾವೇನು ತಪ್ಪು ಮಾಡುತ್ತಿದ್ದೇವೆಂದು ತಿಳಿದಿಲ್ಲ, ಅವರನ್ನು ಕ್ಷಮಿಸು ಲೋಕ: ಸಮಸ್ತಾ ಸುಖಿನೋ ಭವಂತು: ಓ ಶಾಂತಿ: ಶಾಂತಿ: ಶಾಂತಿ: |
| Ronald, Udupi | 2008-10-01 | | Dear Mr. Suresh,
I have studied in Catholic institutions from 7th to 12th and am not aware of anything like Kumkumavittare Getout and Conversion. Non Catholics attended Moral Science conducted by Hindu Teachers and we attended our religion classes once a week.
Prior to that from grade 1 to 7 I went to Hindu Mgt School. Once a week, immeterial of religion, we attended Bhajane. We used to enjoy it. Nor my parents had any objections to it. Nobody had second thought about it. All my school and college life, we never had any ill feelings about each others religion. (I think change started couple of decades ago with Advani\'s Ratha Yathra and Babri Masjid demolision.)
Do not brand me a British lover and so on. It is your imagination and so also several of your questions. I only appreciated quality of infrastructure during British era compared to the present one where technology is much higher level now |
| Chinmaya K.H., USA | 2008-10-01 | | ಶ್ರೀ ಸುರೇಶ್ ರವರ ಅನುಭವ ವಿಷಯ ಪ್ರಸ್ತಾಪ ಮಾಡುವ ರೀತಿ ನೋಡಿದರೆ ಕವಿ ವಾಣಿ ನೆನಪಾಗುತ್ತಿದೆ...’ನುಡಿದರೆ ಮುತ್ತಿನ ಹಾರದಂತಿರ ಬೇಕು ’ ’ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು’. ಇದು ರೋನಾಲ್ಡ್ ಪಾಲಿಗೆ ಸ್ಪಟಿಕದ ಸಲಾಖೆಯೆ ಸೈ. ಕೊಟ್ಟಿರುವ ಪ್ರೀತಿಯ ಹೊಡೆತವನ್ನು ಅಲ್ಲಲ್ಲಿ ಮುಟ್ಟಿನೋಡಿಕೊಳುತ್ತಿರಬೇಕು ರೋನಾಲ್ಡ್ ರವರು. What Mr.Suresh telling is perfectly correct. |
| Suresh S. R. , Mangalooru | 2008-10-01 | | Mr. Ronald, Udupi.,
1.) News from the writer and comments from me in Kannada. You started in English,!! because you like British too much.!! As per my opinion, you are still struggling to understand Kannada. Better you learn Kannada first.
2.) There is not even single answer for any of my questions. That shows your lack of knowledge about present issues.!!! And more than that, you are not fit for a healthy debate.
3.) Now, come to your point of my style of writing(Ekavachana), Ronald may be you didn’t observe my first line.!! I wrote ‘Swami Ronaldravare,’ ‘Swami’ is the most respectable word.
4.) But, while giving answer to your comments, while looking at your reply, I don’t know myself; you are go on loosing my respect towards you. Because of defending the conversion and your love and affection towards British. As per you, British are great! British did great things to India.!! Taught English to you.!!!
5.) If you that much fond of respect, can I ask why you gave the reply in English?? Ronald, don’t forget, in English from a kid to your own father who gave birth to you, you are using ‘YOU’ disrespecting the respect. So, as per me, knowing this, your narrow minded thinking, you gave reply in English.!!
6.) For your kind information, like this writer, I also had a bad experience about conversion approach in Mangalore in 1992-93 in the name of ‘Leadership development camp’ in a Christian institution and a same approach in different name of a function in Mumbai. If you need I will give you details with all books, handbills everything. That time this ‘New life’ was not there and not much active. Ronald, what is your reply about this matter??? I know you don’t have any answer. !!!
7.) If you can’t answer my questions. Just give answer to Mr. Purushotham, or I doubt, you will give same answer as before you gave me, ‘writer of this article and comments of Suresh S.R. made for each other’ now your readymade answer will be ‘comments from Purushotham and Suresh S.R. made for each other’ isn’t it Ronald???
8.) Ronald, you know what is the truth.!! what is going on in front of your eyes. As a proverb ‘cat drinking milk closing its eyes’ if you cant answer, don’t defend in future, what you are defending right now. You know yourself what you are telling is cent percent wrong. So, my request to you is, keep cool.... . Now it’s in English. Hope you can understand the theme.
9.) Last and not for the least, right now also I am telling you, I am not opposing religion or community. What I am opposing is illegal conversion.!!! Here I am chanting “Oh god, they don’t know what they doing, please forgive them” including this one also “love your neighbors and love your enemies”.
Thanking you Mr. Ronald,
Yours ever loving,
Suresh S. R.
Mangalore.
|
| Ronald, Udupi | 2008-09-30 | | Mr. Suresh, you can not pick one positive point! Besides, your style of writing(Ekavachana) do not deserve my respect and reply from my opinion. |
| ಪುರುಷೋತ್ತಮ್ , ಮಂಗಳೂರು | 2008-09-30 | | ಲೇಖಕರ ತಮ್ಮ ಸ್ವಾನುಭವವನ್ನು ವಿಸ್ತ್ರತವಾಗಿ ತೆರೆದಿಟ್ಟಿದ್ದಾರೆ. ಇದೆ ಅನುಭವ, ಅನಿಸಿಕೆ ಹಲವರಿಗಿದೆ. ಈ ಲೇಖನಕ್ಕೆ ಸುರೇಶ್ ಎಸ್ ಆರ್ , ಮಂಗಳೂರು ಬರೆದ ಪೂರಕ ಪ್ರತಿಕ್ರೀಯೆ ಕೂಡ ಅಷ್ಟೆ ಸೊಗಸಾಗಿದೆ. ನಮ್ಮಲ್ಲಿ ಕೆಲವರು ಬ್ರಿಟಿಷರಿಂದಲೇ ಭಾರತೀಯರ ಉದ್ದಾರ ಆಯಿತೆಂದು ದಿನದ ಇಪ್ಪತ್ನಾಲ್ಕು ಗಂಟೆ ಬಡಾಯಿ ಕೊಚ್ಚಿಕೊಳ್ಳುತ್ತಾ ಕಾಲಕಳೆಯುತ್ತಿರುತ್ತಾರೆ. ಅವರಿಗೆ ತಕ್ಕ ಉತ್ತರ ಸುರೇಶ್ ನೀಡಿದ್ದಾರೆ. ಈಗೀಗ ಬ್ರಿಟಿಷ್ ಹೆಸರಿಟ್ಟುಕೊಂಡು ಆಂಗ್ಲರ ರೀತಿ ವರ್ತಿಸುವ ಜನರ ಪೂರ್ವಜರು, ಇದೆ ಮಣ್ಣಿನಲ್ಲಿ ಹುಟ್ಟಿದ ಧರ್ಮದವರಾಗಿದ್ದರು ಎಂಬುದನ್ನು ಆಂಗ್ಲ ಪ್ರಿಯರು ಮರೆತಿದ್ದಾರೆ. ಅವರುಗಳಿಗೆ ಹೇಗೆ ಬ್ರಿಟಿಷ್ ಹೆಸರುಗಳು ತಗಲಿಕೊಂಡವು ಎಂದು ಅವರ ಹಿರಿಯರನ್ನು ಕೇಳಿದರೆ ಉತ್ತರ ಸಿಗುತ್ತದೆ. ಸ್ವಾತಂತ್ರ, ಗಾಂಧಿಜಿ ಬಗ್ಗೆ ಮಾತನಾಡುವ ಇವರುಗಳು ಸ್ವಾತಂತ್ರ ಸಂಗ್ರಾಮದಲ್ಲಿ ಇವರುಗಳ ಪಾಲೆಷ್ಟು ಮತ್ತು ಭಾರತೀಯ ಹಿಂದೂ, ಮುಸಲ್ಮಾನರು ಗಾಂಧೀಜಿಯ ಹೆಗಲಿಗೆ ಹೆಗಲುಕೊಟ್ಟು ಬ್ರಿಟಿಷರ ವಿರುದ್ದ ಹೋರಾಡುತ್ತಿದ್ದಾಗ ಇವರು ಎಷ್ಟು ಗೋಣಿ ಕಡಲೆ ತಿಂದರು ಮತ್ತು ಎಷ್ಟು ಬ್ರಿಟಿಷರಿಗೆ ಸರಬರಾಜು ಮಾಡಿ ಹೋರಾಟವನ್ನು ದೂರದಿಂದಲೇ ನೋಡಿ ನಗುತ್ತ ಕಾಲ ಕಳೆದೆರೆಂದು ನಮಗೆ ತಿಳಿದಿದೆ. ಗಾಂಧಿಜಿ ಕೈಗೆ ಬಿಯರ್, ಬೀಫ್ ಬರ್ಗರ್ ನೀಡಿ ಅಲ್ಲಿ ಆನಂದಿಸುತ್ತಿದ್ದರೆ ಇಲ್ಲಿನ ಗಾಂಧೀ ಭಕ್ತರಿಗೆ ಕೇವಲ ಚರ್ಚ್ಗಳ ಮೇಲಿನ ದಾಳಿ ಮಾತ್ರ ತೋರುತ್ತಿದೆ. ಯಾಕೆಂದರೆ ಇಂದಿನ ಜಾತ್ಯತಿತರಿಗೆ ಗಾಂಧೀ ಎಂದರೆ ಕೇವಲ ಇಟ್ಯಾಲಿಯನ್ ಸಂಜಾತೆ ಸೋನಿಯಾ ಮಾತ್ರ. |
| Suresh S. R., Mangalore | 2008-09-30 | | ಸ್ವಾಮಿ, ರೋನಾಲ್ಡ್‌ರವರೇ, ನಿಮಗೆ, ನಿಮ್ಮ ಇಂಗ್ಲೀಷ್‌ಗೆ, ಬ್ರಿಟಿಷ್‌ರ ಮೇಲಿನ ನಿಮ್ಮ ಪ್ರೇಮಕ್ಕೆ ನಮಸ್ಕಾರಗಳು. ಪ್ರಪ್ರಥಮವಾಗಿ ಅಂಕಣ, ಬರಹ, ವರದಿ, ಸ್ವಾನುಭವ ಲೇಖನ ಮತ್ತು ಅನಿಸಿಕೆ(ಪ್ರತಿಸ್ಪಂದನೆ)ಯ ವ್ಯತ್ಯಾಸ ಸರಿಯಾಗಿ ತಿಳಿದುಕೊಳ್ಳಿ. ಸಾಧ್ಯವಾದರೆ ಕನ್ನಡ ಕಲಿಯಿರಿ. ಅದು ವಿಕಾಸವಾದ ಹೆಸರಲ್ಲಿ ಪ್ರಕಟವಾದ ಲೇಖಕರ ಸ್ವಂತ ಅನುಭವ. ಅವರು ಯಾರು ಎನ್ನುವುದು ನನಗೆ ತಿಳಿದಿಲ್ಲ. (ವರದಿಗಾರ ಅರ್ಷದ್ ಹುಸೇನ್‌ರಿಗೆ ತಿಳಿದಿರಬಹುದು) ಅದರ ಕೆಳಗೆ ಪ್ರಕಟವಾದದ್ದು ನನ್ನ ಅನಿಸಿಕೆ. ಸತ್ಯ ವರದಿಯನ್ನು ಖಂಡಿಸಬೇಕೆನ್ನುವ ಏಕೈಕ ದುರುದ್ದೇಶ ದಿಂದ ನನಗೂ, ಆವರಿಗೂ ಸಂಬಂಧ ಕಲ್ಪಿಸಿಬಿಟ್ಟಿರಿ. ಅವರ ಲೇಖನ ಮತ್ತು ನನ್ನ ಅನಿಸಿಕೆ ಕನಿಷ್ಟ ಹತ್ತು ಬಾರಿ ಹಾಗೂ ನೀವೇನು ಬರೆದಿದ್ದೀರಿ ಎಂದು ಕನಿಷ್ಟ ನೂರು ಬಾರಿ ಓದಿ. ನಿಮ್ಮ ಪ್ರತಿಯೊಂದು ವಾಕ್ಯಕ್ಕೂ ನನ್ನ ಪ್ರಶ್ನೆಗಳಿವೆ. ಈ ಕೆಳಗಿನ ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
1. ನಾನು ಮತ್ತು ಲೇಖಕ ನಿಮ್ಮ ಯಾವ ಅರ್ಥದಲ್ಲಿ ಮೇಡ್ ಫಾರ್ ಇಚ್ ಅದರ್? ಅದೇ ಒಂದು ವೇಳೆ ನಿಮ್ಮಂತೆ ದುರುದ್ದೇಶದಿಂದ ಖಂಡಿಸಿ ಬರೆದಿದ್ದರೆ, ಆಗ ನಾನು ಮತ್ತು ರೋನಾಲ್ಡ್ ಮೇಡ್ ಫಾರ್ ಇಚ್ ಅದರ್???. 2. ಬ್ಯಾಡ್ ಟೇಸ್ಟ್ ಟು ರಾಕ್ ದ ಬೋಟ್- ಇದಕ್ಕೆ ಪತ್ರಿಕಾರಂಗದ ಭಾಷೆಯಲ್ಲಿ ಪೂರ್ವಗ್ರಹಪೀಡಿತ ಬರಹ ಅನ್ನುವುದಿಲ್ಲವೇ ರೋನಾಲ್ಡ್??.
3. ಈ ಲೇಖನದ ಲೇಖಕರು ಕೂಡಾ ಕ್ರೈಸ್ತ ಶಾಲೆಯಲ್ಲೆ ಓದಿದ್ದಾರೆ ಅನ್ನಿಸುದಿಲ್ಲವೇ ರೋನಾಲ್ಡ್? ಚಿಕ್ಕಂದಿನಲ್ಲಿ, ಕ್ಲಾಸಿನ ಹುಡುಗಕೊಟ್ಟ ಬೈಬಲ್, ಟೀಚರ್ ಕೊಟ್ಟ ಶುಭಸಂದೇಶ ಪುಸ್ತಕ, ಒತ್ತಾಯದ ಬೇರೆ ಪ್ರಾರ್ಥನೆ. ಎನೊಂದು ಅರಿಯದೆ, ಅದನ್ನು ವಿರೋಧಿಸಲಿಕ್ಕಾಗದೆ, ಮನೆಯಲ್ಲೂ ಮತಾಂತರ ಸಭೆಯ ವಿಷಯ ಕೇಳಲಾಗದೆ, ಇಷ್ಟು ವರ್ಷದ ತನಕ ಕೊರಗಿ, ಈಗ ಸ್ವಂತ ಅನುಭವ ಬರೆದಿಲ್ಲವೆ??.
೪. ಡಿಸಿಪ್ಲೀನ್ ಎಂಡ್ ಪ್ರೊಸ್ಪರಿಟಿ - ಅದೆಷ್ಟು ಜನ ವಿದ್ಯಾರ್ಥಿಗಳು ಈ ಶಿಸ್ತಿನ ಹೆಸರಲ್ಲಿ, ಕನ್ನಡ ಮಾತನಾಡಲಾಗದೆ, ಕುಂಕುಮವಿಡಲಾಗದೆ, ಬಳೆ, ಹೂವು ಮುಡಿಯಲಾಗದೆ, ಮನ ನೋಯುತ್ತಿಲ್ಲ?? ೫. ಈ ದೇಶದ ಎಲ್ಲ ಶಾಲಾ ಕಾಲೇಜು ಗಳು, ಅನುದಾನ/ಅನುದಾನ ರಹಿತ ವಾದರೂ ಕೂಡ ಸರಕಾರದ ನಿಯಮ, ನಿಭಂದನೆಗಳಿಗೊಳಪಟ್ಟು ಆಡಳಿತ ನೆಡೆಸಬೇಕೆಂಬುದು ನಿಮ್ಮ ಮಂದ ಬುದ್ಧಿಗಿನ್ನೂ ತಿಳಿದಂತಿಲ್ಲ??!!.
೬. ಬ್ರಿಟಿಷರು ಭಾರತಕ್ಕೆ ಬಂದದ್ದುರಿಂದ ನಿನಗೆ ಇಂಗ್ಲೀಷ್ ಕಲಿಯುವುದಕ್ಕೆ ಆಯಿತು ಅಂತ ಹೇಳುವ ನಿನ್ನಂತಹವನನ್ನು ಪಡೆದ ಆ ಭಾರತಾಂಬೆ ಧನ್ಯೆ. ಜಗತ್ತಿನಲ್ಲಿ ಇನ್ನು ಹಲವಾರು ಭಾಷೆ, ದೇಶಗಳಿವೆ. ನೀನ್ಯಾಕೆ ಹೇಳಬಾರದು?? ಮೊಘಲರು, ಬ್ರಿಟಿಷ್‌ರಂತೆ ನೀವು ಈ ದೇಶದಲ್ಲಿ ಜನ, ಧರ್ಮ, ಜಾತಿ, ಭಾಷೆ ಹಾಗೂ ಸಂಸ್ಕೃತಿ ಮೇಲೆ ದಾಳಿ ಮಾಡಿ, ನನಗೆ ನಿಮ್ಮ ಭಾಷೆ ಕಲಿಸಿ ಎಂದು??
7. ರೈಲ್ವೆ, ರಸ್ತೆ, ಸೇತುವೆಗಳು, ಬ್ರಿಟಿಷರದ್ದಲ್ಲ. ಅದಕ್ಕಾಗಿರುವ ಹಣ, ತಂತ್ರಜ್ಙಾನ, ಪರಿಶ್ರಮ, ಭಾರತೀಯರದ್ದು ಎನ್ನುವುದು ನೆನಪಿರಲಿ. ನಿನಗೆ ಇತಿಹಾಸದ ಪರಿಚಯ ವಿಲ್ಲವೇ?? ಅಥವಾ, ನಿನ್ನ ಯೋಚನಾಲಹರಿ ಕೆಲವೇ ಮಿತಿಗಳನ್ನು ಹೊಂದಿದೆಯೆ??/.
8. ನಿನ್ನ ತರ್ಕದಲ್ಲೆ ನಿನಗೆ ವಿಶ್ವಾಸವಿಲ್ಲ. ಒಮ್ಮೆ ಬ್ರಿಟಿಷ್ ಒಳ್ಳೆಯವರೆಂದು, ಒಮ್ಮೆ ಕೆಟ್ಟವರೆನ್ನುತ್ತಿಯಲ್ಲ?? ಬ್ರಿಟಿಷರ ಒಡೆದು ಆಳುವ ನೀತಿಯಿಂದಲೆ ಇಂದು ಪಾಕಿಸ್ತಾನ, ಬಾಂಗ್ಲಾದೇಶ, ಬೂತಾನ್, ನೇಪಾಳ ಬೇರೆ ಬೇರೆ ಯಾಗಿರುವುದಲ್ಲವೆ??
9. ವ್ಯಾಪಾರಕ್ಕೆಂದು ಬಂದು ಈ ಭವ್ಯದೇಶದಲ್ಲಿ ಕಾಲೂರಿದ ಬ್ರಿಟಿಷರು, ಮೋಸದಿಂದಲೆ ನಮ್ಮನ್ನು ಗೆದ್ದದ್ದು, ಜಲಿಯನ್‌ವಾಲಾಬಾಗ್ ನಂತಹ ಲಕ್ಷಾಂತರ ಸ್ವಾಂತತ್ರಯೋಧರನ್ನು ಮಾರಣಹೋಮ ಮಾಡಿ, ಇಲ್ಲಿನ ಸಂಪತ್ತು ಕೊಳ್ಳೆಹೊಡೆದಿಲ್ಲವೆ?? ಅಂತಹ ಬ್ರಿಟಿಷರು ನಿನಗೆ ಇಂಗ್ಲೀಷ್ ಕಲಿಸಿದ್ದರಿಂದ ಗ್ರೇಟಾ?? ಬ್ರಿಟಿಷರನ್ನು ಅಂದ ಕೂಡಲೆ ನಿನಗೇಕೆ ಉರಿಯಬೇಕು ರೋನಾಲ್ಡ್??
10. ರಾಜಕಾರಣಿ ಗಳನ್ನೇಕೆ ದೂಷಿಸುತ್ತಿ? ಅವರಲ್ಲ, ಹೊಸ ಜಾತಿ, ಹೊಸ ದೇವರು, ಹೊಸ ಪ್ರಾರ್ಥನಾಕ್ರಮ ಕಂಡು ಹಿಡಿದು, ಒಂದೊಂದು ಪಂಗಡ, ಒಂದೊಂದು ಗುಂಪು ಗಳಿಗೆ, ತಾನು ಧಾರ್ಮಿಕ ಮುಖಂಡನಾಗಬೇಕೆಂದು ಬೇರೆ ಗುಂಪು ಕಟ್ಟಿಕೊಳ್ಳುವವರಿಗೇಕೆ ದೂಷಿಸುವುದಿಲ್ಲ?? ಹಾಗೆ ಕಟ್ಟಿಕೊಂಡರೂ ನಮಗೆ ಚಿಂತೆಯಿಲ್ಲ, ನ್ಯೂಲೈಪ್ ನಂತಹ ಸಂಸ್ಥೆಯಂತೆ ಬೇರೆ ಕ್ರೈಸ್ತಧರ್ಮದ ಸಂಘಟನೆಗಳು ಹಿಂದೂ ದೈವ, ದೇವರುಗಳನ್ನು ಅವಹೇಳನಗೊಳಿಸುವುದು, ಶಿಕ್ಷಣ, ಉದ್ಯೋಗದ ಆಮಿಷದ, ಒತ್ತಾಯದ, ಬಡತನದ, ಅಸಾಹಾಯಕತೆಯ ದುರುಪಯೋಗ ಪಡಿಸಿಕೊಂಡು ಮತಾಂತರ ಮಾಡುವುದು ಸರಿಯೇ?? ಹಾಗಿದ್ದರೆ, ನೀನ್ಯಾಕೆ ನ್ಯೂಲೈಫ್ ಗೆ ಮತಾಂತರವಾಗಬಾರದು?? ಯಾಕೆ ಇವರನ್ನು ಕೆಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ವಿರೋಧಿಸುತ್ತಾರೆ?? ಇವರಿಂದ ಎಷ್ಟು ಮುಸಲ್ಮಾನರನ್ನು ಮತಾಂತರಗೊಳಿಸಲು ಸಾಧ್ಯವಾಗಿದೆ?? ದೇವರೊಡನೆ ಸಂಪರ್ಕ ಸಾಧಿಸುತ್ತೇವೆ ಎಂದು ಹೇಳುವ ಈ ಮಹಾನುಭಾವರು ಎಲ್ಲಿದ್ದಾರೆ?? ಈ ಬಗ್ಗೆ ಎನು ಹೇಳುತ್ತಾರೆ?? ಈ ಮೊದಲೆ ನಾನು ಹೇಳಿದ್ದೆ. ಧರ್ಮದ ಬಗ್ಗೆ ನನ್ನ ವಿರೋಧವಿಲ್ಲ. ವಿರೋಧವಿರುವುದು ಹಲವಾರು ಅಸಹಾಯಕತೆ ಯನ್ನು ಬಳಸಿಕೊಂಡು ಮಾಡುವ ಆಮಿಷದ, ಅನ್ಯಾಯದ, ಕಾನೂನು ಬಾಹಿರವಾದ ಮತಾಂತರದ ಬಗ್ಗೆ. ಮೊನ್ನೆ ನೆಡೆದ ಹಿಂದೂ, ಮತ್ತು ಕ್ರೈಸ್ತ ಮುಖಂಡರುಗಳು ನೆಡೆಸಿದ ಶಾಂತಿ ಸಭೆಯಲ್ಲಿ ಮತಾಂತರಕ್ಕೆ ತಡೆ, ಕ್ರೈಸ್ತ ಶಾಲಾ ಕಾಲೇಜುಗಳಲ್ಲಿ ಬಳೆ, ಕುಂಕುಮ, ಹೂವು ಮುಡಿಯುವುದಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ ಎಂದು ಕೇಳಿ ತಿಳಿದಿದ್ದೇನೆ. ಈ ಬೆಳವಣಿಗೆಯನ್ನು ಸ್ವಾಗತಿಸುತ್ತೇನೆ. ರೋನಾಲ್ಡ್, ಮೇಲಿನ ವಿಷಯಗಳು ನಿಮಗೆ ಅರ್ಥವಾಗಬಹುದು ಎಂದು ತಿಳಿದಿದ್ದೇನೆ. ಇನ್ನೂ ಅರ್ಥವಾಗದಿದ್ದರೆ ತಿಳಿಸಿರಿ. ನಿನ್ನ ಗ್ರೇಟ್ ಬ್ರಿಟಿಷರ ಗ್ರೇಟ್ ಇಂಗ್ಲೀಷ್ ನಲ್ಲೇ ತಿಳಿಸುತ್ತೇನೆ.
|
| Ronald, Udupi | 2008-09-29 | | This article and Comment of Suresh SR is made for each other. This article is written with bad taste to rock the boat. You may hardly find some one who admits the above who studied in Catholic institutions. So many non Christians said in the past, they studied in Christian institutions and they did not feel anything of above and conversion.
One thing is true, when there is discipline and prosperity in the institution, some can not digest it.
If you do not like Catholic school make use of other schools or govt schools, do not be envy on good things.
Do not blame everything on British. Because of British, India is English literate. We have railways, some roads and bridges built by British are still life line in India. Structures built by our contractors...less said better.If not British, there would have been 25 countries from Kashmir to Kanyakumari.
British have also done bad to India, thats why Ghandiji fought for Indipendence. India should have been lot better after 60 years. Whom to blame? Politicians discovered (invented?) more and more about religion and God. Above types of articles fuelling the downfall. |
| Suresh S. R., Mangalore | 2008-09-26 | | ದಯವಿಟ್ಟು ಆಸ್ಪತ್ರೆಗಳನ್ನೆಲ್ಲ ಮುಚ್ಚಿಸಿ, ರೋಗಿಗಳನ್ನೆಲ್ಲ ಇಂತಹ ಸಭೆಗಳೆನ್ನುವ ಮತಾಂತರದ ಅಡ್ಡೆಗಳಿಗೆ ಕಳುಹಿಸಿ. ಇವರಿಗೆ ಸಿಗುವುದು ದಲಿತರು, ಅನಾಥರು, ಬಡವರು, ಅಸಾಹಾಯಕರೆನ್ನುವ ಹಿಂದುಭಾಂದವರು. ಎಷ್ಟು ಮುಸಲ್ಮಾನರನ್ನು ಇವರಿಂದ ಮತಾಂತರಗೊಳಿಸಲು ಸಾಧ್ಯವಾಗಿದೆ? ವ್ಯಾಪಾರಕ್ಕೆಂದು ಬಂದು ಈ ಭವ್ಯದೇಶದಲ್ಲಿ ಕಾಲೂರಿದ ಬ್ರಿಟಿಷ್‌ರಾದಿಯಾಗಿ ಎಲ್ಲರಿಂದ ದೇಶ, ಧರ್ಮ, ಜಾತಿ, ಭಾಷೆ ಹಾಗೂ ಸಂಸ್ಕೃತಿ ಮೇಲೆ ಸತತ ಅತ್ಯಾಚಾರ ನೆಡೆಯುತ್ತಿದೆ. ಇದನ್ನೆಲ್ಲ ವಿರೋಧಿಸುವ ಮನಗಳು ಅಲ್ಲಲ್ಲಿ ಹರಡಿಕೊಂಡಿವೆ. ಒಗ್ಗಟ್ಟಾಗಿಲ್ಲ, ಹೀಗೆ ಹೇಳಿದ ತಕ್ಷಣ ಕೆಲವೇ ಕೆಲವರ ದೃಷ್ಟಿಯಲ್ಲಿ ನಾನು ತಪ್ಪಿತಸ್ಥ ಆಗಬಹುದು. ದಕ್ಷಿಣಕನ್ನಡ, ಗೋವಾ, ಮುಂಬಯಿಯ ಹಲವಾರು ಚರ್ಚ್‌ಗಳನ್ನು ನಾನು ಸಂದರ್ಶಿಸಿದ್ದೇನೆ. ಬಹಳಷ್ಟು ಕ್ರೈಸ್ತಧರ್ಮದ ಸ್ನೇಹಿತರಿದ್ದಾರೆ. ಧರ್ಮದ ಬಗ್ಗೆ ನನ್ನ ವಿರೋಧವಿಲ್ಲ. ವಿರೋಧವಿರುವುದು ಹಿಂದೂ ದೈವ ದೇವರುಗಳನ್ನು ಅವಹೇಳನಗೊಳಿಸುವುದು, ಶಿಕ್ಷಣ, ಉದ್ಯೋಗದ ಆಮಿಷದ, ಒತ್ತಾಯದ, ಬಡತನದ, ಅಸಾಹಾಯಕತೆಯ ದುರುಪಯೋಗ ಪಡಿಸಿಕೊಂಡು ಮತಾಂತರ ಮಾಡುವುದರ ಬಗ್ಗೆ ಮತ್ತು ಶಿಸ್ತಿನ ಹೆಸರಲ್ಲಿ, ಕ್ರೈಸ್ತ ಶಾಲಾ ಕಾಲೇಜುಗಳಲ್ಲಿ ಕನ್ನಡ ಮಾತನಾಡಿದರೆ ದಂಡ, ಕುಂಕುಮವಿಟ್ಟರೆ, ಹೂವು ಮುಡಿದರೆ ಗೆಟ್ಟೌಟ್ ಎಂದು ಬಾಲ್ಯದಲ್ಲೆ ಮಕ್ಕಳಿಗೆ ಭಾಷೆ, ಧರ್ಮದ ಬಗ್ಗೆ ತಪ್ಪುನೀತಿ ತಿಳಿಸಿ, ಪರಧರ್ಮದ ಬಗ್ಗೆ ಆಕರ್ಷಿಸುವುದು, ಶಾಲಾ ಪ್ರಾರ್ಥನೆ ನೆಪದಲ್ಲಿ, ಬೇರೆ ಪ್ರಾರ್ಥನೆ ಗಳನ್ನು ಮಕ್ಕಳ ಮೇಲೆ ಹೇರುವುದು. ಮತಾಂತರ ಮಾಡುವವರು, ತಮ್ಮ ಆತ್ಮಸಾಕ್ಷಿಯನ್ನು ಒಪ್ಪದಿದ್ದರೂ, ದೇವರೊಡನೆ ಸಂಪರ್ಕ ಸಾಧಿಸುತ್ತೇವೆ ಎಂದು ಹೇಳುವ ಈ ಮಹಾನುಭಾವರು ಆ ದೇವರೊಡನೆ ತಾವು ಮಾಡುತ್ತಿರುವ ಇಂತಹ ಕುಕೃತ್ಯಗಳು ಸಹ್ಯವೇ ಎಂದು ಕೇಳಲಿ. |
|
|
ಎಲ್ಲಾ ವರದಿಗಳು [ವಿಶಿಷ್ಟ ಬರಹ] |
| »2008 ನಲ್ಲಿ ಕಾಲ್ತುಳಿತಕ್ಕೆ 360 ಕ್ಕೂ ಹೆಚ್ಚು ಬಲಿ , ಬಾಂಬ್ ಸ್ಪೋಟಕ್ಕೆ 156 | | »ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..?? | | »The dilemma of an educated Muslim youth | | »ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ | | »ಕುಂಕುಮವಿಟ್ಟರೆ ಗೆಟ್ ಔಟ್! | | »ಸಬಕೋ ಸನ್ಮತಿ ದೇ ಭಗವಾನ್ ..... | | »ಟಾಪ್ ಸಿ.ಎಮ್ | | »ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ | | »ಅಪ್ಪಿಕೋ ಚಳವಳಿ ನೆನಪಿನ ಹಬ್ಬ | | »ಮನೆಯೊಳಗೆ ಬೇರುಗಳ ಸುಂದರ ಲೋಕ | | »ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ? | | »ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು! | | »ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು | | »ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ... | | »ಕೋಮು ದ್ವೇಷದ ಸುಗ್ಗಿಯ ಕುಯಿಲು... | | »ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ | | »ಮಧ್ಯ ಬೆರಳಿನ ಪುರಾಣ - History of the Middle Finger | | »ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ | | »ಹೋದವರು ಮತ್ತೆ ಬರಲಾರರು | | »ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ | | »ಕಂದನ ನಗು ಕಸಿದಹೃದಯ ಬೇನೆ ..... | | »ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು | | »ಭಗತ್ ಸಿಂಗ್ ರ ಅಣಿಮುತ್ತುಗಳು. | | »ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು | | »ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು | | »ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ! | | »ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..! | | »ವಾರದಲ್ಲಿ ಹೊಸಮನೆ ರೆಡಿ | | »ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ... | | »ಮುದ್ರಿಸುವ ಮುನ್ನ ಯೋಚಿಸಿ... | | »ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…? | | »ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ... | | »ಮಳೆಗೆ ನಾವೆಷ್ಟು ಸಿದ್ಧ? | | »ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ | | »ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ | | »Virginity: A virtue or a curse? | | »ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ | | »ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ! | | »ನೋವಿಗೆಷ್ಟು ಕಾಸು! | | »ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು! | | »ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು | | »ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ! | | »ಕೆಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ | | »ಗಂಡಸರೂ ಬಸುರಿ ಆಗುವುದಾಗಿದ್ದರೆ...?! | | »ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ | | »ಪ್ರಚಂಡ ಸವಾಲು | | »ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು.......... | | »ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ | | »ಛಿದ್ರವಾಗುವ ಮುನ್ನ ಭದ್ರವಾಗೋಣ | | » ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..? | | »ವಿಶ್ವಾಸದ ಮೂರು ಮುಖಗಳು .... | | »ನೀರಿನ ಹೆಸರಿನಲ್ಲಿ ಕಣ್ಣೀರು..... | | »‘ಅರಣ್ಯ’ ರೋದನ..... | | »ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ | | »ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ | | »ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್ | | »ಮರುಪೂರಣದಿಂದ ಹತ್ತಡಿ ಏರಿದ ನೀರು | | »ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ | | »ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ | | »ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ! | | »ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ | | »ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ | | » |
|