ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಸಬಕೋ ಸನ್ಮತಿ ದೇ ಭಗವಾನ್ .....

ಯು.ಆರ್. ಅನಂತಮೂರ್ತಿಯವರ ಚಿಂತನೆಗಳು

ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ-ಅವರು ಯಾವ ದೇವರಲ್ಲಿ ಪ್ರಾರ್ಥಿಸುತ್ತಿದ್ದರೂ - ದಾಳಿ ಮಾಡುವುದು ಅನಾಗರಿಕ ಮಾತ್ರವಲ್ಲ, ಅಧಾರ್ಮಿಕ ಕೂಡ. ಆದರೆ ಧರ್ಮ ರಕ್ಷಣೆಯ ಹೆಸರಿನಲ್ಲೇ ಸಂಘ ಪರಿವಾರದ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ ದಾಳಿ ನಡೆಸಿದ್ದಾರೆ.

’ಯಾವ ದೇವರನ್ನು ಪ್ರಾರ್ಥಿಸಿದರೂ ಅದು ಕೇಶವನನ್ನು ತಲುಪುತ್ತದೆ’ ಎಂದು ನಂಬುವ ಹಿಂದೂ ಆದವನು ಹೀಗೆ ವರ್ತಿಸುವುದು ಹೇಯವಾದುದ್ದು. ಇಂಥ ದಾಳಿಗಳು ಹಿಂದೂ ನಾಗರಿಕತೆಯನ್ನು ನಾಶಗೊಳಿಸುತ್ತಿವೆ.

ಕ್ರೈಸ್ತರು ಹೊಸಗನ್ನಡದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆಗಳನ್ನು ನೀಡಿದ್ದಾರೆ. ರೆವೆರೆಂಡ್ ಫಾದರ್ ಫರ್ಡಿನಾಂಡ್ ಕಿಟೆಲ್ ಮೊದಲ ಕನ್ನಡ ನಿಘಂಟನ್ನು ರಚಿಸಿದವರು. ಕರ್ನಾಟಕದ ಅಭಿವೃದ್ಧಿಯಲ್ಲಿಯೂ ಕ್ರೈಸ್ತರ ಪಾತ್ರ ಅನನ್ಯ. ಸರಕಾರ ತಲುಪಲೂ ಆಗದಿರುವ ಅನೇಕ ಕಡೆಗಳಲ್ಲಿ ಅವರು ಈಗಲೂ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ.

ಈಗ ಕರ್ನಾಟಕದಲ್ಲಿ ನಡೆಯುತ್ತಿರುವುದು ಅಧಿಕಾರದಲ್ಲಿರುವ ಸರಕಾರದ ಚುನಾವಣಾ ಸಿದ್ಧತೆಯ ಸಿನಿಕ ತಂತ್ರವಲ್ಲದೆ ಬೇರೇನೂ ಅಲ್ಲ. ನಮ್ಮ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ತಕ್ಷಣ ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡುವುದಾಗಿ ಹೇಳಿದ್ದರು. ಅಂದರೆ ಅವರಿಗೆ ಗುಜರಾತ್‌ನ ನರೇಂದ್ರ ಮೋದಿಯೇ ಆದರ್ಶ. ನಾನು ಹುಟ್ಟಿ ಬೆಳೆದ ಜಿಲ್ಲೆಯವರೇ ಆಗಿರುವ ರೈತ ನಾಯಕ ಬಿ.ಎಸ್ ಯಡಿಯೂರಪ್ಪ ಈಗ ಕರ್ನಾಟಕದ ಮೋದಿಯಾಗಲು ಹೊರಟಿದ್ದಾರೆ.!

ಕುವೆಂಪು, ಶಾಂತವೇರಿಯಂತಹವರನ್ನು ಪಡೆದ ಜಿಲ್ಲೆಯಲ್ಲಿ ಬೆಳೆದ ನಮ್ಮ ಯಡ್ಯೂರಪ್ಪ ನವರು ಹೀಗಾಗಿರುವುದು ಒಂದು ದುರಂತ

ಮಂಗಳೂರು ಮತ್ತು ಉಡುಪಿಯಲ್ಲಿ ಅಲ್ಪಸಂಖ್ಯಾತ ಕ್ರೈಸ್ತರ ಮತಗಳು ತಮಗೆ ದೊರೆಯುವುದಿಲ್ಲ ಎಂಬುದು ಬಿಜೆಪಿಗೆ ತಿಳಿದಿದೆ. ಇದೇ ಕಾರಣಕ್ಕೆ ಅದು ಕ್ರೈಸ್ತರ ಮೇಲಿನ ದಾಳಿಗಳ ಕುರಿತು ಕಣ್ಣು ಮುಚ್ಚಿಕೊಂಡಿದೆ. ಈ ದಾಳಿಗಳು ತಮ್ಮ ಹಿಂದೂ ಮತ ಬ್ಯಾಂಕನ್ನು ಇನ್ನಷ್ಟು ಖಚಿತ ಪಡಿಸುತ್ತದೆಂದು ಸರಕಾರ ನಡೆಸುವವರೂ ಭಾವಿಸುವುದು ಸಿನಿಕತನದ ಪರಮಾವಧಿ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರಕಾರವು, ಚರ್ಚ್‌ಗಳು ಮತ್ತು ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಯನ್ನು ’ಬಲವಂತದ ಮತಾಂತರ’ ಎಂಬ ವಾದವನ್ನು ಬಳಸಿಕೊಂಡು ಸಮರ್ಥಿಸುವುದು ಬೇಜವಾಬ್ದಾರಿಯ ದ್ಯೋತಕ.

ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವವರು ಯಾರು? ಕೆಳ ಜಾತಿಗಳಿಂದ ಬಂದವರು; ತಮ್ಮ ಜಾತಿ ಯಾವುದೆಂದು ಹೇಳಿಕೊಳ್ಳಲೇ ನಾಚಿಕೊಳ್ಳುವವರು. ಇದಕ್ಕೆ ಕಾರಣರಾದವರು ಹಿಂದೂಗಳಾದ ನಾವೇ ಅಲ್ಲವೆ?. ಕ್ರೈಸ್ತ ಧರ್ಮ ಅವರಿಗೊಂದು ಗೌರವಯುತ ಅನನ್ಯತೆಯನ್ನು ನೀಡುತ್ತದೆ. ಉದ್ಯೋಗ ಹಾಗೂ ಶಿಕ್ಷಣದ ಭರವಸೆಯೂ ಅವರನ್ನೂ ಇದರತ್ತ ಆಕರ್ಷಿಸಿರಬಹುದು. ಧರ್ಮದ ಪರಿವರ್ತನೆ ಹೃದಯದ ಪರಿವರ್ತನೆಯೂ ಆಗಿರಬೇಕೆಂಬುದು ಕ್ರೈಸ್ತರಿಗೆ ತಿಳಿದಿದೆ. ಕೇವಲ ಲೌಕಿಕ ಕಾರಣಕ್ಕಾಗಿ ಮತಪರಿವರ್ತನೆಯನ್ನು ಮಾಡುವುದು ತಮ್ಮ ಧರ್ಮಕ್ಕೇ ಅಪಚಾರವೆಸಗಿದಂತೆ ಎಂಬುದು ಮದರ್ ಥೆರೇಸಾರಂತಹ ಮಹಾತಾಯಿಗೂ ಗೊತ್ತಿತ್ತು

ಕೆಳ ಜಾತಿಯಲ್ಲಿ ಹುಟ್ಟಿದ್ದ ಕೇರಳದ ನಾರಾಯಣ ಗುರು ಜಾತೀಯತೆಯಿಂದ ನಾಶದತ್ತ ಸಾಗುತ್ತಿದ್ದ ಹಿಂದೂ ಸಮಾಜವನ್ನು ಸುಧಾರಣೆಗೆ ಒಳಪಡಿಸಿದರು. ಅಂಥವರು ಈಗಲೂ ಇದ್ದಿದ್ದರೆ ಕೆಳ ಜಾತಿಯ ಹಿಂದೂಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಬೇಕಾದ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ನಾರಾಯಣ ಗುರುಗಳು ಒಬ್ಬ ಅದ್ವೈತಿ; ಬಹುಶಃ ತಾತ್ವಿಕವಾಗಿ ಅದ್ವೈತದಲ್ಲಿ ನಂಬಿದ್ದ ಆದಿ ಶಂಕರಾಚಾರ್ಯರ ನಂತರದಲ್ಲಿ ವಾಸ್ತವದಲ್ಲೂ ಮಹಾ ಅದ್ವೈತಿಯಾಗಿದ್ದವರೆಂದರೆ ಇವರೇ ಇರಬೇಕು.

ಆಡಳಿತಾರೂಢ ಬಿಜೆಪಿ ಸರಕಾರದ ಅಧೀನದಲ್ಲಿರುವ ಪೊಲೀಸರು ಈಗ ನಡೆಯುತ್ತಿರುವ ದಾಳಿಗಳ ಬಗ್ಗೆ ಕುರುಡಾಗಿದ್ದಾರೆ. ಪೊಲೀಸರು ಈ ದಾಳಿಗಳನ್ನು ನೇರವಾಗಿ ಬೆಂಬಲಿಸದೇ ಇದ್ದರೂ ದಾಳಿ ನಡೆಸುವವರು ಮತ್ತು ಪೊಲೀಸರ ಮಧ್ಯೆ ಅನೈತಿಕ ಒಪ್ಪಂದವೊಂದಿರುವಂತೆ ಕಾಣಿಸುತ್ತದೆ. ಗುಜರಾತ್ ನ ಹಿಂಸೆಯ ನಾಟಕ ಇಲ್ಲಿ ಮರುಪ್ರದರ್ಶನಗೊಳ್ಳುತ್ತಿದೆ. ಹಿಂದೂ ಮತಾಚರಣೆಗಳನ್ನು ಕಟುವಾಗಿ, ನಿಷ್ಠುರವಾಗಿ ಟೀಕಿಸಲು ಹಿಂಜರಿಯದ ವೀರಶೈವ ವಚನಕಾರರನ್ನೂ, ವೈಷ್ಣವ ದಾಸರನ್ನೂ , ಈ ಎಲ್ಲರಿಗೂ ಹಿಂದೆ ಬುದ್ಧಗುರುವನ್ನೂ, ನಮ್ಮ ಕಾಲದಲ್ಲೇ ಕುವೆಂಪು, ರವೀಂದ್ರನಾಥ ಠಾಕೂರರನ್ನೂ, ಶಿವರಾಮ ಕಾರಂತರನ್ನೂ ಪಡೆದ ನಾವು ಸಂಘಪರಿವಾರದವರ ನಂಜಿನ ಹಿಂದೂ ಕಲ್ಪನೆಯಿಂದ ತಲೆ ತಗ್ಗಿಸಬೇಕಾಗಿದೆ.

"ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು,
ಹಾವ್ಗಳಿಗೆ ಹಾಲೆರೆದು ಪೋಷಿಸಾಯ್ತು,
ಬಿಸಲು ಮಳೆ-ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು,
ದಾಸರನು ಪೂಜಿಸಿಯೇ ದಾಸ್ಯವಾಯ್ತು."

ಈ ಮಾತು ಕುವೆಂಪುರವರದು; ಯಾವ ಹಿಂದೂ ದ್ವೇಷಿ ಪಾದ್ರಿಯದೂ ಅಲ್ಲ.

"ವೇದವೆಂಬುದು ಓದಿನ ಮಾತು
ಶಾಸ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಟಿ,
ತರ್ಕವೆಂಬುದು ತಗರ ಹೋರಟೆ
ಬಕುತಿ ಎಂಬುದು ತೋರುಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು

ಇದು ನಮ್ಮ ಅಲ್ಲಮನ ಮಾತು; ಯಾವ ಮುಸ್ಲಿಮ್ ಮೌಲ್ವಿಯದೂ ಅಲ್ಲ.

ನಮ್ಮ ಬಿಜೆಪಿ ಆಡಳಿತದಲ್ಲಿ ಇವೆಲ್ಲವೂ ಕಾನೂನು ಬಾಹಿರ. ಕುವೆಂಪು ಮತ್ತು ಅಲ್ಲಮ ಶಿಕ್ಷಾರ್ಹರು. ಯಾಕೆಂದರೆ ಅವರು ನಾವು ನಂಬುವ ದೇವರನ್ನು ಹೀಗೆಳಿದಿದ್ದಾರೆ.

ನಾರಾಯಣ ಗುರು ನಮ್ಮ ನಾಲ್ಕು ವೇದಗಳ ಕಲ್ಪನೆಯನ್ನೇ ಬದಲಾಯಿಸಿಕೊಳ್ಳ ಬೇಕೆಂದು ಅಭಿಪ್ರಾಯ ಪಟ್ಟಿದ್ದರು. ಅವರು ಹೇಳುವಂತೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದಗಳೆಂಬವು ಅವುಗಳ ಕಾಲಕ್ಕೆ ನಾಲ್ಕು ವೇದಗಳಾಗಿದ್ದವು. ಈಗ ಅರಿವು ವಿಸ್ತರಿಸಿದೆ. ಈ ನಾಲ್ಕು ವೇದಗಳನ್ನು ಒಂದು ವೇದವಾಗಿಯೂ ಬೈಬಲ್, ಕುರಾನ್ ಹಾಗೂ ಬೌದ್ಧ ಗ್ರಂಥಗಳನ್ನು ಇನ್ನುಳಿದ ಮೂರು ವೇದಗಳನ್ನಾಗಿಯೂ ಪರಿಗಣಿಸಬೇಕು.

ಯಾವ ಕ್ರೈಸ್ತ ಪಾದ್ರಿಯೂ ನಮ್ಮ ಭಾರತೀಯ ಸಂತ ಪರಂಪರೆ, ಸಾಹಿತ್ಯ ಪರಂಪರೆ ಟೀಕಿಸಿದಷ್ಟು ಕಟುವಾಗಿ, ಆಳವಾಗಿ ಹಿಂದೂ ಆಚರಣೆಗಳನ್ನು ಟೀಕಿಸಲಾರರು. ಸತತ ವಿಮರ್ಶೆಯ ಅಗ್ನಿದಿವ್ಯದಲ್ಲಿ ತನ್ನ ಚೈತನ್ಯವನ್ನು ಜೀವಂತಗೊಳಸಿಕೊಳ್ಳುವ ನಮ್ಮ ಹಿಂದೂ ನಾಗರಿಕತೆಯನ್ನು, ಕಾಪಾಡುವ ನೆವದಲ್ಲಿ, ಸಂಘಪರಿವಾರದವರು ನಾಶಮಾಡುತ್ತ ಇದ್ದಾರೆ. (ಒಂದು ಕಥೆಯಿದೆ: ವಿವೇಕಾನಂದರು ಕಾಶ್ಮೀರದಲ್ಲಿ ದೇವಿಯ ಎದುರು ನಿಂತು ಹಲಬುತ್ತಾರೆ: ’ತಾಯಿ, ನಿನ್ನನ್ನು ನಾನು ಕಾಪಾಡಲಾರದೇ ಹೋದೆನಲ್ಲ!’ ಆಗ ದೇವಿ ಹೀಗೆ ಉತ್ತರಿಸುತ್ತಾಳೆ:  "ನೀನು ನನ್ನನ್ನು ಕಾಪಾಡುವುದೊ? ಅಥವಾ ನಾನು ನಿನ್ನನ್ನು ಕಾಪಾಡಬೇಕಾದವಳೊ?’)

ದೇವರ ಅಗತ್ಯವನ್ನೇ ದಾಟಿಬಿಡಲು ಹವಣಿಸುವ ಆಧ್ಯಾತ್ಮಿಕ ಅನುಭಾವದ ಈ ನಾಡಿನ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಿಜೆಪಿಯ ರಾಜ ಕಾರಣದ ಕ್ಷುದ್ರತೆಯನ್ನು ಅಲ್ಪತೆಯನ್ನು ನಾವೆಲ್ಲರೂ ಗಾಂಧೀಜಿ ತೋರಿದ ದಾರಿಯಲ್ಲಿ ನಡೆದು ತೊರೆಯಬೇಕು. ಯಾಕೆಂದರೆ ಸಂಘಪರಿವಾರ ಬಿತ್ತಲು ಯತ್ನಿಸುವ ವಿಷದ ಬೀಜ ನಮ್ಮಲ್ಲಿ ಹಲವರಲ್ಲಿ ಗುಪ್ತವಾದ ಭಾವನೆಯಾಗಿರಬಹುದು ಎಂಬ ಅನುಮಾನ ನನಗೆ ಇದೆ.

ಕ್ರೈಸ್ತಧರ್ಮ, ಹಾಗೂ ಇಸ್ಲಾಂ ಧರ್ಮ ನಮ್ಮ ಭಾರತವನ್ನು ಶ್ರೀಮಂತಗೊಳಿಸಿ, ನಮ್ಮ ಮಾನವೀಯ ಅನುಕಂಪವನ್ನು ವಿಶಾಲಗೊಳಿಸಿವೆ ಎಂದೇ ಹಿಂದೂಗಳಾದ ನಾವೆಲ್ಲರೂ ಕೃತಜ್ಷತೆಯಲ್ಲಿ ತಿಳಿಯಬೇಕು. ತಾವು ನಂಬುವ ದೇವರಲ್ಲಿ ಗಾಂಧಿಯಂತೆ ಎಲ್ಲರೂ ಪ್ರಾರ್ಥಿಸಬೇಕು: ಸಬಕೋ ಸನ್ಮತಿ ದೇ ಭಗವಾನ್

ಎಲ್ಲ ಬಗೆಯ ಭಯೋತ್ಪಾದಕತೆಯನ್ನು, ಅದು ಇಸ್ಲಾಮ್ ಹೆಸರಿನಲ್ಲಿ ಇರಬಹುದು, ಹಿಂದೂ ಸಂಘಟನೆಯ ಹೆಸರಿನಲ್ಲಿ ಇರಬಹುದು, ನಾವು ಈ ನೆಲದಿಂದ ಉಚ್ಛಾಟಿಸ ಬೇಕು. ಯಾಕೆಂದರೆ ಈ ಟೆರರಿಸಂ ಧರ್ಮ ವಿರೋಧಿ; ಜೀವ ವಿರೋಧಿ. ಅಭಯ ದಲ್ಲಿ ನಾವೆಲ್ಲರೂ ಬದುಕಬೇಕೆಂಬುದು ನಮ್ಮ ಉಪನಿಷತ್ತಿನ ಪ್ರಾರ್ಥನೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಋಜುವಾತು
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-21


ಪ್ರತಿಸ್ಪಂದನ
Ullekh hegde, Dubai
2008-10-05
Mr. Ananthamoorty i hope you must have read the news about bangladeshi migrants killing the tribals in assam. so now are you going to assam to protest and pray god to give these bangladeshi illegal migrants. when these bangaldeshi migrants were entering india and when the so called "communal" people(according to you and your intellectual community) started demanding to throw them out people like you protested arguing about their human rights. now where has the human rights of the people who have died in the riots gone. they have lost their right to live and that too because they were born in india and they are not muslims or christians. now area you people happy. i know nobody from your human rights or intellectual community will step forward to say one word about these atrocities committed by these bangladeshis. now you people must be happy. i would only pray god to give "sanmathi" to people like you who are only interested in cheap publicity but not in national interest.
Ullekh hegde, Dubai
2008-09-30
manya anathamoorthiyavara samajadha bagge kaalaji hosadhenalla.aadare adhu avara prachaarakke maathra. avaru yaavagalu hindu samaja haagu hindu smaaajada sangatanegalannu heeyalisuvudharalle khushi paduvavaru. moothiyavare illi neevu hindu devera avaamanavannu yaake marethubittidheera?? neevu devarige pooje maadadha naasthikaragirabahudu aadhare naavu devarannu nambuva haagu gouravisuva aasthikaru. bari hindugalige shanthi mantra helikoduvudhannu nillisi. naavu hindugalu namma dharmada aagiruva thappugalanu oppikondu adhannu thidduva svbhavadhavaru.. aadhare nammannu avaamaanisuva janarannu ashtu sulabhavagi mareyalu sadhyavilla. poorva raajyagalalli khristharu hindugalannu samharisi thamma dharma prachaaara maduvaaga nimmantha vicharavaadhiglau malgiruthare yaakendare alli nimage bekhaadha prachara dhoreuvudilla allave??swalpa aathmashodhane maadi moorthiyavare..kaiyalli lekhani idheyendhu manasige bandha haaage bareuvudhannu nillisi. hindugalu eegagale echethidhaare. modi maadidha olle abhivrdhi kelasa nimage khaanuvudhe illa.innu mundhe aadharu swalpa yochisi aamele bareyiri.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»2008 ನಲ್ಲಿ ಕಾಲ್ತುಳಿತಕ್ಕೆ 360 ಕ್ಕೂ ಹೆಚ್ಚು ಬಲಿ , ಬಾಂಬ್ ಸ್ಪೋಟಕ್ಕೆ 156
»ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..??
»The dilemma of an educated Muslim youth
»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್
»ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು
»ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ
»ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು
»ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ!
»ಬಾಂಬ್ ಸೂಟ್ ಎಂಬ ರಕ್ಷಾ ಕವಚ
»ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್
»ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು?
» ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು
»ಸಡಿಲ ಪ್ಯಾಂಟ್ ಧರಿಸಿದರೆ ದಂಡ
»ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ?
»ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ...
»ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು
»ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ
»ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
»ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ
»ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ !
»ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ
»ಮೂರೂ ಬಿಟ್ಟವರ ಅಮೆರಿಕ ಯಾತ್ರೆ .......
»ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
»ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು
»ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!!
»ಅಮೆರಿಕೆಗಾಗಿ ದೇಶದ ಹಿತ ಬಲಿ
»ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್
»ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ?
»ಬಿಜೆಪಿಯ ದುರಂತಕ್ಕೆ ಪೀಠಿಕೆ .....?
»ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ
»ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ
»ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’
»ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ
»ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್!
»ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್
»ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ
»ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ
»ಹಣದುಬ್ಬರವೆಂದರೇನು ಗೊತ್ತಾ?
»ಹೊಳೆ ದಾಟಿದ ಮೇಲೆ...
»ಅಂತರಿಕ್ಷದಲ್ಲಿ ಮದುವೆ ಮಾಡಿಸುತ್ತದೆ ಈ ಸಂಸ್ಥೆ!
»ಜಿರಾಫೆಯನ್ನು ಬಂಧಿಸಿದ ಪೊಲೀಸರು
»ಆ ಸಿಗರೇಟು ಬಿಡಿ ಇ-ಸಿಗರೇಟು ಸೇದಿ
»ರೈತರ ಸರಣಿ ಆತ್ಮಹತ್ಯೆ : ದೊರಕದ ಸಹಾಯ
»ಪಠ್ಯಪುಸ್ತಕ ಬದಲಾವಣೆಗೆ ಸಚಿವರ ‘ಕೇಸರಿ ನಕಾಶೆ’
»’ಮೊಬೈಲ್’ ಗಾದೆಗಳು!!
»ಭಾರತೀಯ ಭಾಷಾ ಗಣಕಲೋಕದ ಪಿತಾಮಹ - ಶ್ರೀ ಕೆ.ಪಿ ರಾವ್
»ಒಂದು ಸಾವಿನ ಮನೆಯ ವೃತ್ತಾಂತ .....
»ಕನ್ನಡ ಕಲಿಸುವುದಕ್ಕೆ ಇಷ್ಟವಿರುವವರಿಗೆ ಅರ್ಪಣೆ
»ಅನಾಥ ಅಜ್ಜಿಗೆ ಸ್ಪೂರ್ಥಿಯ ಆಸರೆ
»ರಾಜಕೀಯ ಚದುರಂಗದಾಟದ ಕಾಯಿಗಳಾಗುತ್ತಿರುವ ರೈತರು
»ಅನ್ನ ತಿನ್ನುವವರು ನೀರುಳಿಸುವ ವಿಧಾನ
»ಗಂಗೆ ಅಂತರ್ಧಾನಳಾದಾಳೇ... !?
»ಚಿಕುನ್‌ಗುನ್ಯಾದಿಂದ ಕರಾವಳಿ ಕಲಿಯಬೇಕಾದ ಪಾಠ
»ಕಾಲ್ ಸೆಂಟರ್‌ಗಳಲ್ಲಿ ತೆರೆಯಲಿ ಏಡ್ಸ್ ಜಾಗೃತಿ ಅಂಗಡಿಗಳು
»ಕರಾವಳಿಯನ್ನು ಕಾಡುತ್ತಿದೆ ಕಮ್ಯುನಿಸ್ಟ್ ಕಳೆ
»ಗಣಿಗಾರಿಕೆ ರಾಷ್ಟ್ರೀಕರಣವಾಗಲಿ
»ಕಳೆ ಪಡೆಯುತ್ತಿರುವ ಹೊಳೆ ಮೀನುಗಾರಿಕೆ ....
» 'Housewives' out of fashion in metros!
»ನನ್ನಜ್ಜನಿಗೊಂದಾನೆಯಿತ್ತು !
»ಕೊಂಕಣಿ ರಾಜ್ಯದ ಕನಸು ಕಂಡಿದ್ದ ಕಾಮತರು
»ಪದ್ಮಪ್ರಿಯಾ ಪ್ರಕರಣದ ಸುತ್ತ...
»... ಆ ಒಂದು ಮುತ್ತಿನ ಕತೆ
»ಈ ಭೇಟಿ ನ್ಯಾಯವೇ?
»