ವಿಶ್ವ ತುಳು ಸಮ್ಮೇಳನದ ಚಪ್ಪರ ಮೂಹೂರ್ತಕ್ಕೆ ಡಿ.ವೀರೇಂದ್ರ ಹೆಗ್ಗಡೆ ಚಾಲನೆ; 25ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಹಾಗೂ ಭವ್ಯವಾದ ವೇದಿಕೆ |
ಪ್ರಕಟಿಸಿದ ದಿನಾಂಕ : 2009-11-08
ಬೆಳ್ತಂಗಡಿ, ನ.೭: ಉಜಿರೆಯಲ್ಲಿ ಡಿ.10 ರಿಂದ 13ರ ವರೆಗೆ 4 ದಿನಗಳ ಕಾಲ ನಡೆಯಲಿರುವ ವಿಶ್ವತುಳು ಸಮ್ಮೇಳನದ ಪ್ರಧಾನ ವೇದಿಕೆ ಹಾಗೂ ಸಭಾಂಗಣದ ಚಪ್ಪರ ಮೂಹೂರ್ತ ಉಜಿರೆಯ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
ಇಂದು ಬೆಳಗ್ಗೆ ನಡೆದ ಕಾರ್ಯಕ್ರಮ ದಲ್ಲಿ ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ತುಳುನಾಡಿನ, ತುಳುವರ ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ಬೆಳಗುವ ಈ ಸಮ್ಮೇಳನ ಯಶ ಸಾಧಿಸಲಿ ಎಂದು ಹಾರೈಸಿದರು.
ಸಮ್ಮೇಳನಕ್ಕಾಗಿ ನಿರ್ಮಾಣ ಗೊಳ್ಳುತ್ತಿರುವ ಚಪ್ಪರದಲ್ಲಿ ಸುಮಾರು 25ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಹಾಗೂ ಭವ್ಯವಾದ ವೇದಿಕೆ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭ ಹಷೇಂದ್ರಕುಮಾರ್, ಪ್ರೊ.ಪ್ರಭಾಕರ, ಡಾ.ಬಿ.ಯಶೋ ವರ್ಮಾ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಧನ್ಯ ಕುಮಾರ್ ರೈ, ಎಲ್.ಎಚ್. ಮಂಜುನಾಥ, ಮಹಾರ ಅಜ್ರಿ, ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು. ಧರ್ಮಸ್ಥಳದ ಅರ್ಚಕ ರಾಧಾಕೃಷ್ಣ ಕುದ್ರೆತ್ತಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-11-08 00:00:00
|
|
|