ಮಕ್ಕಾ: ಹಿರಿಯ ಭಕ್ತರಿಗೆ ಸಹಾಯಹಸ್ತ ನೀಡುತ್ತಿರುವ ಸುರಕ್ಷಾ ಸಿಬ್ಬಂದಿ |
ಪ್ರಕಟಿಸಿದ ದಿನಾಂಕ : 2008-09-14
ತುಂಬಿತುಳುಕುತ್ತಿರುವ ನಗರ : ಪ್ರತಿ ನಮಾಜಿನಲ್ಲೂ ದಾಖಲೆ ಸಂಖ್ಯೆಯಲ್ಲಿ ಜನರು
ಮಕ್ಕಾ, ಸೆಪ್ಟೆಂಬರ್ 14: ಮಕ್ಕಾ ನಗರ ರಮಧಾನ್ ಪ್ರಯುಕ್ತ ಆಗಮಿಸಿದ ಭಕ್ತರಿಂದ ತುಂಬು ತುಳುಕುತ್ತಿದೆ. ನಗರದಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸಲು ಸರ್ಕಾರ ಹೆಚ್ಚಿನ ಸುರಕ್ಷಾ ಸಿಬ್ಬಂದಿಯನ್ನು ನೇಮಿಸಿದ್ದು ದಿನದ ಇಪ್ಪತ್ತನಾಲ್ಕು ಘಂಟೆ ಉಪಸ್ಥಿತರಿರುತ್ತಾರೆ. ಪ್ರತಿ ನಮಾಜಿನಲ್ಲೂ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರಕ್ಕೆ ಆಗಮಿಸಿದ್ದಾರೆ.
ಯುವಜನತೆಯಂತೆಯೇ ವೃದ್ಧರೂ ನಗರಕ್ಕೆ ಆಗಮಿಸಿದ್ದು ಅವರಿಗೆ ಬೇಕಾದ ಸಹಾಯವನ್ನು ನೀಡುವಲ್ಲಿ ಸುರಕ್ಷಾ ಸಿಬ್ಬಂದಿ ಹಿಂದೆ ಬಿದ್ದಿಲ್ಲ. ಜನಸಂದಣೆಯನ್ನು ನಿಯಂತ್ರಿಸಲು ಸುರಕ್ಷಾ ಸಿಬ್ಬಂದಿ ತೋರುತ್ತಿರುವ ಶ್ರದ್ಧೆ ಹಾಗೂ ಸೇವಾ ಮನೋಭಾವನೆ ಶ್ಲಾಘನೀಯವಾಗಿದೆ.
ವರದಿಯ ವಿವರಗಳು |
 |
ಕೃಪೆ : ಸೌದಿ ಗೆಜೆಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-14
|
|
|