ಜೆದ್ದಾ: ಬಿಹಾರ ನೆರೆಪೀಡಿತರಿಗೆ ನೆರವು : ಐಐಎಸ್ ಜೆ ಯಲ್ಲಿ ಸಂಗ್ರಹಾ ಘಟಕ ಸ್ಥಾಪನೆ |
ಪ್ರಕಟಿಸಿದ ದಿನಾಂಕ : 2008-09-11
ವಸ್ತುಗಳನ್ನು ದಾನ ಮಾಡಲು ಆಗ್ರಹ : ನಗದು ಹಣ ನೇರವಾಗಿ ಪ್ರಧಾನಿಗಳ ಪರಿಹಾರ ನಿಧಿಗೆ
ಜೆದ್ದಾ, ಸೆಪ್ಟೆಂಬರ್ 11: ಇತ್ತೀಚೆಗೆ ಭಾರತದ ಬಿಹಾರ್ ರಾಜ್ಯದಲ್ಲಿ ನೆರೆಯಿಂದಾಗಿ ಸಂಭವಿಸಿದ ನಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾದಲ್ಲಿರುವ ಭಾರತೀಯರು ಅಗತ್ಯವಸ್ತುಗಳನ್ನು ಭಾರತಕ್ಕೆ ಕಳುಹಿಸುವ ಉದ್ದೇಶದಿಂದ ಐ.ಐ.ಎಸ್.ಜೆ.(ಇಂಟರ್ನ್ಯಾಶನಲ್ ಇಂಡಿಯನ್ ಸ್ಕೂಲ್ ಜೆದ್ದಾ) ಶಾಲೆಯ ಆವರಣದಲ್ಲಿ ತಾತ್ಕಾಲಿಕ ಘಟಕವೊಂದನ್ನು ಸ್ಥಾಪಿಸಿದ್ದಾರೆ. ಬಿಹಾರದ ಅಂಜುಮಾನ್ ಸಂಸ್ಥೆಯ ಸಹಯೋಗದಲ್ಲಿ ಸೌದಿ ಅರೇಬಿಯಾದಿಂದ ಸಂಗ್ರಹಿಸಿದ ಅಗತ್ಯವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಭಾರತೀಯ ದೂತಾವಾಸ ಸೌದಿ ಅರೇಬಿಯಾದ ಭಾರತೀಯ ನಿವಾಸಿಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವಸ್ತುಗಳನ್ನು ದಾನ ಮಾಡಲು ಆಗ್ರಹಿಸಿದೆ.
ನಗದು ಹಣವನ್ನು ಈ ಘಟಕದಲ್ಲಿ ಸ್ವೀಕರಿಸಲಾಗುವುದಿಲ್ಲ, ಬದಲಿಗೆ ಪ್ರಧಾನಿಗಳ ನಿಧಿಗೆ ನೇರವಾಗಿ ಕಳುಹಿಸಬಹುದು ಎಂದು ದೂತಾವಾಸ ಪ್ರಕಟಿಸಿದೆ. ನಗದು ಹಣವನ್ನು ‘The Prime Minister’s National Relief Fund’ (PMNRF) ಹೆಸರಿನಲ್ಲಿ ಬ್ಯಾಂಕ್ ಡ್ರಾಫ್ಟ್ ಮೂಲಕ ಪ್ರಧಾನಮಂತ್ರಿಗಳ ಕಛೇರಿಗೆ ನೇರವಾಗಿ ಕಳುಹಿಸಲು ಕೋರಲಾಗಿದೆ. ವಿಳಾಸ ಈ ಕೆಳಗಿನಂತಿದೆ
Prime Minister’s Office, South Block, New Delhi 110001.
ಜೆದ್ದಾ ಘಟಕದಲ್ಲಿ ಗುರುವಾರ ರಾತ್ರಿ ಒಂಭತ್ತರಿಂದ ಮಧ್ಯರಾತ್ರಿ ಒಂದು ಘಂಟೆಯವರೆಗೆ ಹಾಗೂ ಶುಕ್ರವಾರ ಸಂಜೆ ನಾಲ್ಕರಿಂದ ಮಧ್ಯರಾತ್ರಿ ಹನ್ನೆರೆಡು ಘಂಟೆಯವರೆಗೆ ಈ ಘಟಕದಲ್ಲಿ ಸಾರ್ವಜನಿಕರಿಂದ ಅಗತ್ಯವಸ್ತುಗಳನ್ನು ಸ್ವೀಕರಿಸಲಾಗುವುದು ಎಂದು ಬಿ.ಎ. ಗ್ರೂಪ್ ಅಧಿಕಾರಿ ಖಾಲಿದ್ ಹಾಶ್ಮಿಯವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಸೌದಿ ಗೆಜೆಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-11
|
|
|