ವಿಶ್ವ ತುಳುಸಮ್ಮೇಳನದಂಗವಾಗಿ ‘ವರ್ಣಮುಡಿ’ ಚಿತ್ರಕಲಾ ಶಿಬಿರಕ್ಕೆ ಆಳ್ವರಿಂದ ಚಾಲನೆ |
ಪ್ರಕಟಿಸಿದ ದಿನಾಂಕ : 2009-11-02
ಮಂಗಳೂರು, ನ.೧: ಉಜಿರೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಅಂಗವಾಗಿ ಕರಾವಳಿ ಚಿತ್ರ ಕಲಾವಿದರ ಸಹಯೋಗದಲ್ಲಿ ಕುಡ್ಲ ಕಲಾವಳಿ ಸಮಿತಿ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ‘ವರ್ಣಮುಡಿ’ ಚಿತ್ರಕಲಾ ಶಿಬಿರಕ್ಕೆ ಇಂದು ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ. ಮೋಹನ್ ಆಳ್ವ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಡಾ.ಆಳ್ವ, ಈ ಚಿತ್ರಕಲಾ ಪ್ರದರ್ಶನ ತುಳುವಿನ ಅಭಿವೃದ್ಧಿಯ ನಿಟ್ಟಿನಲ್ಲಿ ಮೌನ ಕ್ರಾಂತಿ ಎಂದು ಹೇಳಿದ ಅವರು, ಶಿಬಿರದಲ್ಲಿ ಕಲಾವಿದ ರಿಂದ ಸೃಜನಶೀಲ ಕೃತಿಗಳು ಮೂಡಿಬರಲಿ ಎಂದು ಹಾರೈಸಿದರು.
ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಅಭಿವ್ಯಕ್ತಗೊಂಡ ಕಲಾಕೃತಿಗಳು ವಿಶ್ವ ತುಳು ಸಮ್ಮೇಳನದಲ್ಲಿ ಪ್ರದರ್ಶಗೊಳ್ಳಲಿದೆ. ಮಾತ್ರವ ಲ್ಲದೆ, ಈ ಕಲಾಕೃತಿಗಳು ಶಾಶ್ವತ ಕಲಾ ಸಂಪತ್ತಿನ ದಾಖಲೆಗಳಾಗಿ ಉಳಿಯಲಿವೆ.

ಪಿ.ಪಿ.ಕಾರಂತ್, ಪಿ.ಎಸ್. ಪುಣಿಂಚಿತ್ತಾಯ, ರಾಮ್‌ದಾಸ್ ಅಡ್ಯಂತಾಯ, ಕೆ.ಎಲ್. ಭಟ್, ಗಣೇಶ ಸೋಮಯಾಜಿ, ರಮೇಶ್ ರಾವ್, ಎನ್.ಎಸ್.ಪತ್ತಾರ್, ಮೋಹನ್ ಸೋನಾ, ಪಿ.ಎನ್.ಆಚಾರ್ಯ, ಕಂದನ್ ಜಿ., ಮಧುಸೂದನ್, ರಾಜೇಂದ್ರ ಕೇದಿಗೆ, ಪುರುಷೋತ್ತಮ ಅಡ್ವೆ, ಪೆರ್ಮುದೆ ಮೋಹನ್‌ಕುಮಾರ್, ಪಾಂಡುರಂಗ ರಾವ್, ಡಾ.ಅಕ್ತರ್ ಹುಸನ್, ದಿನೇಶ್ ಹೊಳ್ಳ, ಶಬ್ಬೀರ್ ಅಲಿ, ಅನಿಲ್ ದೇವಾಡಿಗ, ಸುಲೋಚನಾ ವೇಣುಗೋಪಾಲ, ಸಯದ್ ಆಸಿಫ್ ಅಲಿ, ಆನಂದ ಬೆದ್ರಾಳ, ಜಗದೀಶ ಅಮ್ಮುಂಜೆ, ಬಿ.ಪಿ. ಮೋಹನ್ ಕುಮಾರ್, ಶರತ್ ಹೊಳ್ಳ, ಜಯವಂತ್, ಗಣೇಶ್ ಮಂದಾರ, ಹರೀಶ್ ಆಚಾರ್ಯ, ರವಿ ಎಂ.ಆರ್., ವಿಶ್ವಾಸ್ ಎಂ.ಮಂಜೇಶ್ವರ, ಜೀವನ್ ಸಾಲ್ಯಾನ್, ತಾರನಾಥ ಕೈರಂಗಳ, ಹರೀಶ್ ಕೊಡಿಯಾಲ್‌ಬೈಲ್, ರಮೇಶ್ ಕಿದಿಯೂರು, ವಸಂತ ರಾವ್, ಜನಾರ್ದನ ಹಾವಂಜೆ, ವಿ.ಕೆ. ವಿಟ್ಲ, ಎ.ಕೆ. ಝುಬೇರ್, ಬಾಲಕೃಷ್ಣ ಶೆಟ್ಟಿ ಸೇರಿದಂತೆ ಇನ್ನಿತರ ಹಲವಾರು ಯುವ ಕಲಾವಿದರು ಭಾಗವಹಿಸುತ್ತಿದ್ದಾರೆ.
ಮೇಯರ್ ಶಂಕರ್ ಭಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದ ಪಿ.ಎಸ್. ಪುಣಿಂಚಿತ್ತಾಯ, ರಾಜೇಂದ್ರಕುಮಾರ್ ಹೆಗ್ಗಡೆ, ವರ್ಣಮುಡಿ ಸಮನ್ವಯಕಾರ ಗಣೇಶ ಸೋಮಯಾಜಿ, ಕುಡ್ಲ ಕಲಾವಳಿ ಸಮಿತಿಯ ಅಧ್ಯಕ್ಷ ಜಗದೀಶ್ ಅಮ್ಮುಂಜೆ, ಸಮಿತಿಯ ಕೋಶಾಧಿಕಾರಿ ಕರುಣಾಕರ ಎಂ.ಎಚ್., ಪ್ರಧಾನ ಸಂಚಾಲಕ ಎನ್.ಎಸ್.ಪತ್ತಾರ್, ಎಸ್‌ಡಿಎಂ ವ್ಯವಹಾರಾಡಳಿತ ಕಾಲೇಜು ಪ್ರಾಂಶುಪಾಲ ದೇವರಾಜ್, ಮೊದಲಾದವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-11-02 00:00:00
|
|
|