ಮಂಗಳೂರಿನಲ್ಲಿ ಡಾ| ಡಿ. ವಿರೇಂದ್ರ ಹೆಗ್ಡೆಯವರ ಸಾರಥ್ಯದಲ್ಲಿ ನಡೆದ ಆಕರ್ಷಣೀಯ”ತುಳುವೆರೆ ಪೆರ್ಮೆದ ನಡಪು’ |
ಪ್ರಕಟಿಸಿದ ದಿನಾಂಕ : 2009-10-31
ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಅ. ೩೧: ವಿಶ್ವ ಸಮ್ಮೇಳನದ ಅಂಗವಾಗಿ ಅ ೩೧ ರಂದು ಮಂಗಳೂರು ಟಿ.ವಿ. ರಮಣ್ ಪೈ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಲ್ಲಿದ್ದು ಆ ಪ್ರಯುಕ್ತ ನಗರದ ಕರಾವಳಿ ಉತ್ಸವ ಮೈದಾನದಿಂದ ವಿಚಾರಗೋಷ್ಠಿ ನಡೆಯುವ ಸಭಾಂಗಣ ತನಕ " ತುಳುವೆರೆ ಪೆರ್ಮೆದ ನಡಪು" (ತುಳುವರ ಹೆಮ್ಮೆಯ ನಡಿಗೆ) ಇಂದು ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವಿರೇಂದ್ರ ಹೆಗ್ಡೆಯವರ ನೇತ್ರತ್ವದಲ್ಲಿ ನಡೆದ ಈ "ತುಳುವೆರೆ ಪೆರ್ಮೆದೆ ನಡಪು" ಗೆ ಮೇಯರ್ ಶಂಕರ್ ಭಟ್ ಚಾಲನೆ ನೀಡಿದರು.
ಹಿರಿಯ ವಿದ್ವಾಂಸರು, ಜನಪ್ರತಿನಿಧಿಗಳು, ನಗರದ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ ಈ ನಡಿಗೆಯಲ್ಲಿ ಕಟೀಲು ದೇವಸ್ಥಾನದ ವೇದ ಮೂರ್ತಿ ಶ್ರೀ ಲಕ್ಷೀ ನಾರಾಯಣ ಅಸ್ರಣ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಶಾಸಕ ಯು.ಟಿ.ಖಾದರ್, ಕಾಂಗ್ರೇಸ್ ಜಿಲ್ಲಾ ಉಪಾಧ್ಯಾಕ್ಷ ಐವನ್ ಡಿ’ಸೋಜ, ಬಿ.ಎ.ಮೊಯ್ದಿನ್ ಬಾವ, ಹರಿಕ್ರಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಮೋನಪ್ಪ ಭಂಡಾರಿ, ಮಂಜುನಾಥ್ ರೇವಣ್ಕರ್, ರತ್ನಕರ್ ಜೈನ್, ಪುಷ್ಪಕರ್ ಜೈನ್, ಮನಾಪ ಆಯುಕ್ತ ಡಾ| ವಿಜಯ ಪ್ರಕಾಶ್ ಮೊದಲಾದವರು ಪಾಲ್ಗೊಂಡಿದ್ದರು.
ತುಳು ಸಂಸ್ಕ್ರತಿಯನ್ನು ಬಿಂಬಿಸುವ ಕಳಸ ಹಿಡಿದ ಮಹಿಳೆಯರು, ಕೊಂಬು, ಕಹಳೆ, ವಾದ್ಯಾ ಬ್ಯಾಂಡು, ಚೆಂಡೆ, ನಾಸಿಕ್ ಬ್ಯಾಂಡ್, ಶಿಲ್ಪ ಬೊಂಬೆ, ಪಲ್ಲಕ್ಕಿ ಮೆರವಣಿಗೆ, ಅನೆಯಲ್ಲಿ ಕುಳಿತ ಸ್ವಾಮೀಜಿ, ಕಂಬಳ ಕೋಣ, ಬಸವ, ಕಾಡುಮನುಷ್ಯರ ನರ್ತನ, ಯಕ್ಷಗಾನದ ವೇಷಧಾರಿಗಳು, ಹುಲಿವೇಷ ಕುಣಿತ, ದೊಡ್ಡ ಕಳಸ, ಮೇರೆವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು.
ರಸ್ತೆಯುದ್ದಕ್ಕೂ ಚಲಿಸಿದ ತುಳು ವೈಭವ ಸಾರುವ ಈ ನಡಿಗೆಯನ್ನು ಸಾವಿರಾರು ಜನರು ವಿಕ್ಷೀಸಿದರು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಎಸ್ ಶೆಟ್ಟಿ.ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2009-10-31 00:00:00
|
|
|