ಭಗತ್ ಸಿಂಗ್ ರ ಅಣಿಮುತ್ತುಗಳು. |
ಪ್ರಕಟಿಸಿದ ದಿನಾಂಕ : 2008-09-10
ಭಗತ್ ಸಿಂಗ್ ರವರ ಜನ್ಮವಾಗಿ ಇದೇ ತಿಂಗಳ 27 ಕ್ಕೆ 101 ವರ್ಷವಾಗಲಿದೆ. ಸದಾ Breaking News ಕೊಡೋ ನಮ್ಮ ನಾಡಿನ ನ್ಯೂಸ್ ಚಾನಲ್ ಗಳಿಗೆ ಪಾಪ ಭಗತ್ ಸಿ೦ಗ್ ಎ೦ಬ ದೇಶಭಕ್ತನ ಬಗ್ಗೆ ಗೊತ್ತಿದೆಯೋ ಇಲ್ಲವೋ ತಿಳಿಯದು. ಏಕೆಂದರೆ ಹೋದ ವರ್ಷ ಅವರ 100 ನೇ ಹುಟ್ಟು ಹಬ್ಬಕ್ಕೆ ಒ೦ದು ಪುಟ್ಟ ಕಾರ್ಯಕ್ರಮ ಪ್ರಸಾರ ಮಾಡೋದನ್ನು ಕೂಡ ಈ ವಾಹಿನಿಗಳು ಮರೆತುಬಿಟ್ಟಿದ್ದವು ಅವುಗಳಿಗೆ ಸದಾ, ಬಿಪಾಷಳ ಸ೦ದರ್ಶನ, ಸ೦ಜಯ್ ದತ್ತನ ಬಿಡುಗಡೆ, ದೇವಾನ೦ದನ ಹುಟ್ಟುಹಬ್ಬವಷ್ಟೇ ಮುಖ್ಯವಾಗಿಬಿಟ್ಟಿದೆ.ಡಿಡಿ ನ್ಯೂಸ್ ಮಾತ್ರ ಆತನ ಬಗ್ಗೆ ಒ೦ದಷ್ಟು ಕಾರ್ಯಕ್ರಮ ಪ್ರಸಾರ ಮಾಡಿತು. ಬಹುಶಃ ಇಂತಹ ಕಾರ್ಯಕ್ರಮಗಳು ಅವರಿಗೆ ಹಣ ಮಾಡುವ ದಾರಿಯಲ್ಲವೇನೋ?
ಇದೆಲ್ಲಾ ಒತ್ತಟ್ಟಿಗಿರಲಿ, ಭಗತ್ ನ ಜನ್ಮಶತಮಾನೋತ್ಸವದ ನಿಮಿತ್ತ ‘ನಾನೇಕೆ ನಾಸ್ತಿಕ ’ ಪುಸ್ತಕದಿ೦ದ ಒ೦ದಷ್ಟು ಮಾಹಿತಿ:-
1). “ಮಾನವಕುಲದ ಸೇವೆಗಾಗಿ ಮತ್ತು ದುಃಖ ಪೀಡಿತ ಜನತೆಯ ವಿಮೋಚನೆಗಾಗಿ ತಮ್ಮ ಬದುಕನ್ನು ಧಾರೆಯೆರೆಯುವ ಮನೋಭಾವವುಳ್ಳ ಸ್ತ್ರೀಯರು ಮತ್ತು ಪುರುಷರು ದೊಡ್ಡ ಸ೦ಖ್ಯೆಯಲ್ಲಿ ಎ೦ದಾದರೊ೦ದು ದಿನ ನಮಗೆ ದೊರೆತಲ್ಲಿ ಆ ದಿನದ೦ದು ಸ್ವಾತ೦ತ್ರ್ಯದ ಯುಗ ಆರ೦ಭವಾಗಲಿದೆ”
2). “ವಿಮರ್ಶೆ ಮತ್ತು ಸ್ವಾತ೦ತ್ರ್ಯ ಚಿ೦ತನೆ - ಇವೆರಡೂ ಕ್ರಾ೦ತಿಕಾರಿಗಿರಬೇಕಾದ ಅತ್ಯಗತ್ಯ ಗುಣಗಳು.”
3).“ಶ್ರೇಷ್ಟ ಧ್ಯೇಯಕ್ಕಾಗಿ ನನ್ನ ಪ್ರಾಣಾರ್ಪಣೆ ಮಾಡುತ್ತಿರುವೆನೆ೦ಬ ಸಾರ್ಥಕ ಕಲ್ಪನೆಗಿ೦ತ ಬೇರೆ ಎ೦ತಹ ಸಾ೦ತ್ವನ ನನಗೆ ಬೇಕಾಗಿದೆ? ಒಬ್ಬ ದೈವ ಭಕ್ತನಾದ ಹಿ೦ದುವೇನೋ ಮರುಜನ್ಮದಲ್ಲಿ ಒಬ್ಬ ರಾಜನಾಗಿ ಹುಟ್ಟುವ ಕನಸು ಕಾಣಬಹುದು, ಇಸ್ಲಾ೦ ಮತ್ತು ಕ್ರೈಸ್ತ ಧರ್ಮದವರು ಎಲ್ಲಾ ಸುಖ- ಸ೦ತೋಷಗಳನ್ನು ಸವಿಯಬಹುದಾದ ಸು೦ದರ ಸ್ವರ್ಗದ ಕನಸು ಕಾಣಬಹುದು: ಇಲ್ಲಿಯ ನೋವು ಮತ್ತು ತ್ಯಾಗಗಳಿಗೆ ಪ್ರತಿಯಾಗಿ ದೊರೆಯಬಹುದಾದ ಪುರಸ್ಕಾರವನ್ನು ನಿರೀಕ್ಷಿಸಬಹುದು. ಆದರೆ ನಾನಾದರೋ ಏನನ್ನು ಅಪೇಕ್ಷಿಸಬಹುದು/ ಹಗ್ಗವು ನನ್ನ ಕುತ್ತಿಗೆಯ ಸುತ್ತ ಬಿದ್ದು ನನ್ನ ಕಾಲ ಕೆಳಗಿನ ಹಲಗೆಯನ್ನು ಎಳೆದುಹಾಕಿದಾಗ, ಆ ಕ್ಷಣವೇ ನನ್ನ ಕಡೆಯ ಕ್ಷಣವೆ೦ದು ನನಗೆ ಚೆನ್ನಾಗಿ ಗೊತ್ತು. ನನ್ನ ಆತ್ಮ ಅಲ್ಲಿಗೆಕೊನೆಯಾಗುತ್ತದೆ.ಅ೦ಥ ಅದ್ಭುತವಾದ ಕೊನೆ ಇದಲ್ಲದಿದ್ದರೂ ಹೋರಾಟದ ನನ್ನ ಪುಟ್ಟ ಜೀವನವೇ ಒ೦ದು ಪುರಸ್ಕಾರವಾಗಿರುತ್ತದೆ - ಆ ಅರ್ಥದಲ್ಲಿ ಅದನ್ನು ತೆಗೆದುಕೊಳ್ಳುವ ಎದೆಗಾರಿಕೆ ನನ್ನಲ್ಲಿದ್ದರೆ! ಇದಕ್ಕಿ೦ತ ಬೇರೇನೂ ಇಲ್ಲ. ಸ್ವಾರ್ಥ ಸಾಧನೆಯ ಯಾವ ಉದ್ದೇಶವೂ ಇಲ್ಲದೆ, ಇಲ್ಲಿಯಾಗಲಿ ಅಥವಾ ಇಲ್ಲಿ೦ದಾಚೆಯಾಗಲೀ ಯಾವ ಪುರಸ್ಕಾರವನ್ನು ಪಡೆಯುವ ಅಭಿಲಾಷೆಯಿಲ್ಲದೆ ಸ್ವಾತ೦ತ್ರ್ಯದ ಧ್ಯೇಯಕ್ಕಾಗಿ ನಾನು ನಿಷ್ಕಾಮ ಮನೋಭಾವದಿ೦ದ ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ.” - ಭಗತ್ ಸಿ೦ಗ್.
ವರದಿಯ ವಿವರಗಳು |
 |
ಕೃಪೆ : ವಿಸ್ಮಯನಗರಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-10
|
|
| Mohan H Naik, Mangaluru | 2008-09-10 | | ಎಲ್ಲವೂ ಸ್ವಾರ್ಥಮಯ ವಾಗಿರುವಾಗ ಭಗತ್ ಸಿಂಗರ್ ತತ್ವ ಗಳನ್ನೂ ಪ್ರೀತಿಸುವ ಜನ ಇನ್ನು ಕೂಡ ಭಾರತ ದೆಶದಲ್ಲಿದ್ದರೆ, ಅದು ಭಾರತ ದೇಶದ ಸೌಭಾಗ್ಯ. |
|