ಬುಕರ್ ಅಂತಿಮ ಸ್ಪರ್ಧೆಯಲ್ಲಿ ಕನ್ನಡಿಗ ಅರವಿಂದ ಅಡಿಗ |
ಪ್ರಕಟಿಸಿದ ದಿನಾಂಕ : 2008-09-10
ಪಿಟಿಐ, ಲಂಡನ್, ಸೆ.೯- ಕರ್ನಾಟಕ ಮೂಲದ ಲೇಖಕ ಅರವಿಂದ ಅಡಿಗ ಪ್ರತಿಷ್ಠಿತ ಬುಕರ್ ಸಾಹಿತ್ಯ ಪ್ರಶಸ್ತಿಯ ಅಂತಿಮ ಸುತ್ತಿನ ಸ್ಪರ್ಧೆಗೆ ಪ್ರವೇಶಿಸಿದ್ದಾರೆ. ಇದಲ್ಲದೆ, ಭಾರತೀಯ ಮೂಲದ ಲೇಖಕ ಅಮಿತಾವ್ ಘೋಷ್ ಅವರೂ ಅಡಿಗ ಜತೆ ಸ್ಪರ್ಧೆಯಲ್ಲಿ ಇದ್ದಾರೆ. ಆದರೆ, ಭಾರತದವರೇ ಆದ ಪ್ರಖ್ಯಾತ ಬರಹಗಾರ ಸಲ್ಮಾನ್ ರಷ್ದಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ಮಂಗಳವಾರ ಅಂತಿಮ 6 ಸ್ಪರ್ಧಾಳುಗಳನ್ನು ಘೋಷಿಸಲಾಗಿದ್ದು, ಅದರಲ್ಲಿ ಕನ್ನಡಿಗ ಅರವಿಂದ ಅಡಿಗ ಇರುವುದು ವಿಶೇಷ.
ಅಡಿಗ ಅವರ ‘ದ ವೈಲ್ಡ್ ಟೈಗರ್’ ಕಾದಂಬರಿ ಸ್ಪರ್ಧೆಯಲ್ಲಿದೆ.
ಅಂತಿಮ ಸುತ್ತಿನ 6 ಸ್ಪರ್ಧಾಳುಗಳಲ್ಲಿ 34 ವರ್ಷದ ಅಡಿಗ ಅವರೇ ಅತ್ಯಂತ ಕಿರಿಯ ಎಂಬುದು ಇನ್ನೊಂದು ವೈಶಿಷ್ಟ್ಯ. ಸ್ಪರ್ಧೆಯಲ್ಲಿರುವ ಘೋಷ್‌ರ ಕೃತಿ ‘ಸೀ ಆಫ್ ಪಾಪೀಸ್’.
ವರದಿಯ ವಿವರಗಳು |
 |
ಕೃಪೆ : kannada prabha ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-10
|
|
|