| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ವಿಶ್ವ ತುಳು ಸಮ್ಮೇಳನೋ-09: ತುಳು ಸಂಪ್ರದಾಯೊ ಬುಲೆಪಾವುನ ಎಡ್ಡೆ ಮನಸ್ ಉರ‍್ಕಡ್; ಜಾನಪದ ಕ್ರೀಡಾಕೂಟದ ಕಾಪು ವಲಯ ಸಮಿತಿಯ ಸಭೆಯಲ್ಲಿ ಇಂದ್ರಾಳಿ ಜಯಕರ ಶೆಟ್ಟಿ |
ಪ್ರಕಟಿಸಿದ ದಿನಾಂಕ : 2009-10-31
ಕಟಪಾಡಿ,ಅ.೩೦: ‘ನಮ್ಮ ತುಳು ಗ್ರಾಮೊಲೆಡ್ ನಡಪುನ ತುಳುವೆರೆ ಗೊಬ್ಬುದ ಪರ್ಬೊಡು ತುಳು ಬಾಸೆ, ತುಳುವೆರೆ ಪಿರಾಕ್‌ದ ಸಂಪ್ರ ದಾಯೊಲೆನೆ ಒರಿಪಾದ್ ಬುಲೆಪಾವುನ ಎಡ್ಡೆ ಮನಸ್ ಮಾತೆರೆಡಲಾ ಉರ‍್ಕದ್ ಬರಡ್’ (ನಮ್ಮ ತುಳು ಗ್ರಾಮಗಳಲ್ಲಿ ನಡೆಯುವ ತುಳುವರ ಗ್ರಾಮೀಣ ಕ್ರೀಡಾಕೂಟದ ಹಬ್ಬದಲ್ಲಿ ತುಳು ಭಾಷೆ, ಪುರಾತನ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಸಹೃದಯ ಎಲ್ಲರಲ್ಲೂ ಉಕ್ಕಿ ಬರಲಿ) ಎಂದು ‘ವಿಶ್ವ ತುಳು ಸಮ್ಮೇಳನೋ’ದ ಉಡುಪಿ ತಾಲೂಕು ಸಮಿತಿ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ಹೇಳಿದ್ದಾರೆ.
‘ವಿಶ್ವ ತುಳು ಸಮ್ಮೇಳನೋ-೨೦೦೯’ದ ಅಂಗವಾಗಿ ನ.೮ರಂದು ಕಟಪಾಡಿಯಲ್ಲಿ ನಡೆಯಲಿರುವ ಗ್ರಾಮೀಣ ಜಾನಪದ ಕ್ರೀಡಾಕೂಟದ ಕಾಪು ವಲಯ ಸಮಿತಿಯ ವಿಶೇಷ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವಿಶ್ವ ತುಳು ಸಮ್ಮೇಳನಕ್ಕೆ ಪೂರಕವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ತುಳುವರ ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದ್ದು, ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಆಯಾ ವಲಯ ಗಳು ತಾಲೂಕು ಸಮಿತಿಗಳಿಂದ ಮಾರ್ಗದರ್ಶನ ಪಡೆದುಕೊಳ್ಳಬಹುದು ಎಂದರು.
ಗ್ರಾಮೀಣ ಕ್ರೀಡಾಕೂಟ ಸಂಯೋಜನೆಯ ಕಾಪು ವಲಯ ಸಮಿತಿಯ ಅಧ್ಯಕ್ಷ ಕೆ.ಸತ್ಯೇಂದ್ರ ಪೈ ಮಾತನಾಡಿ, ಕಾಪು ವಲಯ ಮಟ್ಟದ ತುಳು ಜಾನಪದ ಕ್ರೀಡಾಕೂಟವನ್ನು ಕಟಪಾಡಿಯ ಪಳ್ಳಿಗುಡ್ಡೆಯ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಉಡುಪಿ ತಾಲೂಕು ಸಮಿತಿ ಕಾರ್ಯದರ್ಶಿ ಈಶ್ವರ್ ಚಿತ್ಪಾಡಿ ಮಾಹಿತಿ ನೀಡಿದರು.
ಕಾಪು ವಲಯ ಸಮಿತಿ ಗೌರವ ಸಲಹೆಗಾರ ಡಾ.ಎ. ರಂದ್ರನಾಥ್ ಶೆಟ್ಟಿ, ಕಾರ್ಯದರ್ಶಿ ವೈ.ರಂಜನ್ ಹೆಗ್ಡೆ, ಕೋಶಾಧಿಕಾರಿ ಶಿಕರ ಅಂಚನ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯೆ, ಲೇಖಕಿ ಕ್ಯಾಥರಿನ್ ರೊಡ್ರಿಗಸ್, ತಾ.ಪಂ. ಸದಸ್ಯ ನನ್ ಅಮೀನ್ ಶಂಕರಪುರ, ಕಟಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಡಿ.ಜಿ. ಬಂಗೇರ, ಪ್ರಚಾರ ಸಮಿತಿಯ ಸುಧೀರ್ ಬಂಗೇರ, ವೇದಿಕೆ ಮತ್ತು ಸಾಂಸ್ಕತಿಕ ಸಮಿತಿ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಪ್ರಶಾಂತ್ ಸ್ವಾಗತಿಸಿದರು. ರಾಘವೇಂದ್ರ ರಾವ್ ವಂದಿಸಿದರು.
ಗೊಬ್ಬುನಕ್ಲೆಗ್ ಸಜ್ಜಿಗೆಬಜಿಲ್, ಕುಡುತ್ತಸಾರ್!
ನ.೮ರಂದು ಕಟಪಾಡಿ ಪಳ್ಳಿಗುಡ್ಡೆ ನೆಹರೂ ಮೈದಾನದಲ್ಲಿ ನಡೆಯುವ ವಲಯಮಟ್ಟದ ಗ್ರಾಮೀಣ ಜಾನಪದ ಕ್ರೀಡಾಕೂಟದಲ್ಲಿ ಭಾಗವ ಹಿಸುವ ಸ್ಫರ್ಧಾಳುಗಳಿಗೆ ವಿಶೇಷವಾಗಿ ತುಳುವರ ತಿನಿಸುಗಳಾದ ಸಜ್ಜಿಗೆ ಬಜಿಲ್-ಪಾನಕ ಮತ್ತು ಮಧ್ಯಾಹ್ನದ ಭೋಜನಕ್ಕೆ ಕುಡುತ್ತಸಾರ್ (ಹುರುಳಿಸಾರು) ಗಂಜಿಊಟ ನೀಡಲು ಸಮಿತಿಯು ನಿರ್ಧರಿಸಿದೆ ಎಂದು ಕಾಪು ವಲಯ ಸಮಿತಿಯ ಅಧ್ಯಕ್ಷ ಕೆ.ಸತ್ಯೇಂದ್ರ ಪೈ ತಿಳಿಸಿದ್ದಾರೆ.
ಇಡೀ ಮೈದಾನದಲ್ಲಿ ಏಕಕಾಲದಲ್ಲಿ ವಿವಿಧ ತುಳುವರ ಗ್ರಾಮೀಣ ಜಾನಪದ ಕ್ರೀಡೆಗಳಾದ ಕುಟ್ಟಿದೊಣ್ಣೆ, ಲಗೋರಿ, ಬಚ್ಚಾ, ಜುಬಿಲಿ, ಕಲ್ಲಾಟ, ಟೊಂಕ, ಲಗೋರಿ, ಬೆರ್ಚೆಂಡ್, ಟೊಂಕ, ಚೆನ್ನಮಣೆ, ಕೊತ್ತಲಿಗೆ ಕ್ರಿಕೆಟ್ ಪಂದ್ಯಾಟ ಪ್ರತ್ಯೇಕ ವಿಭಾಗ ಗಳಲ್ಲಿ ನಡೆಯಲಿವೆ. ಕಾಪು ವಲಯದ ಸ್ಪರ್ಧಾಳು ಗಳು ನ.೩ರೊಳಗೆ ಹೆಸರು ನೋಂದಾಯಿಸ ಬಹುದು ಎಂದು ಅಧ್ಯಕ್ಷ ಕೆ.ಸತ್ಯೇಂದ್ರ ಪೈ ಪತ್ರಿಕಾ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-10-31 00:00:00
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|