ವಿಶ್ವ ತುಳು ಸಮ್ಮೇಳನಕ್ಕೆ ತುಳು ಅಕಾಡಮಿಯ ಸಹಕಾರ: ಡಾ.ಪಾಲ್ತಾಡಿ |
ಪ್ರಕಟಿಸಿದ ದಿನಾಂಕ : 2009-10-28
ಉಡುಪಿ, ಅ.೨೭: ಡಿಸೆಂಬರ್ ತಿಂಗಳ ಎರಡನೆ ವಾರದಲ್ಲಿ ನಡೆಯುವ ಪ್ರಥಮ ವಿಶ್ವ ತುಳು ಸಮ್ಮೇಳನ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಂಪೂರ್ಣ ಸಹಕಾರ ಹಾಗೂ ಸಹಭಾಗಿತ್ವದೊಂದಿಗೆ ನಡೆಯುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾ ಡಮಿಯ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಹೇಳಿದ್ದಾರೆ.
ತುಳು ಸಾಹಿತ್ಯ ಅಕಾಡಮಿ, ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ನಗರದ ಹಿಂದಿ ಪ್ರಚಾರ ಸಭಾಭವನದಲ್ಲಿ ಕಾಲೇಜು ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಂಡ ಎರಡು ದಿನಗಳ ಕವಿತೆ ರಚನಾ ಕಮ್ಮಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿಶ್ವ ತುಳು ಸಮ್ಮೇಳನವೊಂದನ್ನು ನಡೆಸುವ ಬಗ್ಗೆ ಸಲಹೆಯೊಂದನ್ನು ಅಕಾಡಮಿಯ ಅಧ್ಯಕ್ಷನಾಗಿ ತಾನೇ ಪ್ರಥಮವಾಗಿ ಡಾ.ವೀರೇಂದ್ರ ಹೆಗ್ಗಡೆಯವರ ಮುಂದಿರಿಸಿದ್ದೆ. ಅಲ್ಲ ದೇ ತಾನು ಸಮ್ಮೇಳನ ಸ್ವಾಗತ ಸಮಿತಿಯ ಉಪಾಧ್ಯಕ್ಷನೂ ಆಗಿದ್ದೇನೆ. ಅಕಾಡಮಿಯ ಎಲ್ಲ ಸದಸ್ಯರು ಇದರಲ್ಲಿದ್ದು, ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿ ದ್ದೇವೆ ಎಂದ ಅವರು, ಸಮ್ಮೇಳನಕ್ಕೆ ಅಕಾಡಮಿ ಸಹಕರಿಸುತ್ತಿಲ್ಲ ಎಂದು ಕೆಲವು ವಲಯ ಗಳಲ್ಲಿ ಕೇಳಿಬಂದ ಟೀಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉಜಿರೆಯಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನಕ್ಕೆ ಪೂರಕವಾಗಿ ಹಲವು ಕಾರ್ಯಕ್ರಮ ಗಳನ್ನು ಅಕಾಡಮಿ ಎರಡು ಜಿಲ್ಲೆಗಳಲ್ಲಿ ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಕಾರ್ಕಳ ಮುಂ ತಾದೆಡೆಗಳಲ್ಲಿ ಕೆಲವು ಕಾರ್ಯಕ್ರಮಗಳು ನಡೆದಿದ್ದು, ಮುಂದಿನ ವಾರ ಪ್ರಾಥಮಿಕ, ಪ್ರೌ ಢ, ಪದವಿ ಪೂರ್ವ,ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ೨೫ ವಿಷಯಗಳಲ್ಲಿ ಹಲವು ಹಂತದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.
`ಕಬಿತೆ ಮುಡೆಪುನ ಕಜ್ಜಕೊಟ್ಯ'ವನ್ನು ದೀಪ ಬೆಳಗಿಸುವ ಮೂಲಕ ವಿಮರ್ಶಕ ಹಾಗೂ ಸಾಹಿತಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಬಡಗುಬೆಟ್ಟು ಸಹಕಾರಿ ಸಂಘದ ಜನರಲ್ ಮ್ಯಾನೇಜರ್ ಜಯಕರ ಶೆಟ್ಟಿ ಇಂದ್ರಾಳಿ ಮು ಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿ ಯೂರಿನ ಉಪನ್ಯಾಸಕ ಡಾ.ಗಣನಾಥ ಎಕ್ಕಾರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಡಾ.ದುಗ್ಗಪ್ಪ ಕಜೆಕಾರ್ ವಂದಿಸಿದರು. ಡಾ.ಪದ್ಮನಾಭ ಕೇಕುಣ್ಣಾ ಯ ಕಾರ್ಯಕ್ರಮ ನಿರ್ವಹಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-10-28
|
|
|