ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮುದ್ರಿಸುವ ಮುನ್ನ ಯೋಚಿಸಿ...

ಈ ಪ್ರಕೃತಿಯನ್ನು, ಪರಿಸರವನ್ನು ನಮಗಾಗಿ ಮತ್ತು ಮುಂದಿನ ಪೀಳಿಗೆಗೆ ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಮರಗಿಡಗಳನ್ನು ಉಳಿಸಿಕೊಳ್ಳಬೇಕು, ನಾಶವಾಗುತ್ತಿರುವ ಕಾಡುಗಳನ್ನು ಕಾಪಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಪ್ರಾಣವಾಯುವಿನಿಂದ ಹಿಡಿದು ಮಳೆಯವರೆಗೆ ಮನುಷ್ಯನನ್ನೂ ಸೇರಿಸಿ ಇಡೀ ಪ್ರಾಣಿಕುಲ ಬದುಕಿರುವುದು ಅದೇ ಮರಗಿಡಗಳ ಸಹಾಯದಿಂದ. ಮರಗಿಡಗಳನ್ನು ಕಡಿಯುವುದು ಎಂದರೆ ನಮಗೆ ಬರಿಯ ಕಳ್ಳಸಾಗಣೆ,ರಸ್ತೆ ಅಗಲೀಕರಣ, ಜಲಾಶಯ, ವಿದ್ಯುತ್ ಸ್ಥಾವರ, ಗಣಿಗಾರಿಕೆ ಇತ್ಯಾದಿಗಳ ಕಡೆಗೇ ಗಮನ ಹರಿಯುತ್ತದೆ. ಆದರೆ ಅವುಗಳ end users ನಾವೇ ಆಗಿದ್ದು ನಮ್ಮ ಪೂರೈಕೆಗಾಗಿಯೇ ಮೇಲೆ ಹೇಳಿರುವ ಎಲ್ಲವೂ ನೆಡೆಯುತ್ತಿವೆ, ಪ್ರತಿನಿತ್ಯ ನಾವು ಬಳಸುವ ಎಷ್ಟೋ ವಸ್ತುಗಳು, ಸೇವೆಗಳು ಕೂಡ ಈ ಮರಗಿಡಗಳಿಂದ ದೊರೆತದ್ದು ಎಂಬುದನ್ನು ಮರೆತುಬಿಡುತ್ತೇವೆ. ಮನೆಯ ಕಿಟಕಿ ಬಾಗಿಲುಗಳಿಂದ ಹಿಡಿದು ಕಛೇರಿಯ ಮೇಜು, ಕಾಗದ ಕೂಡ ಮರದ ಉತ್ಪನ್ನಗಳೇ ಆಗಿವೆ.

  ಇದಿಷ್ಟು ಪೀಠಿಕೆಯಾಯಿತು. ಈಗ ವಿಷಯಕ್ಕೆ ಬಂದರೆ, ನಮ್ಮ ಆಫೀಸಿನಲ್ಲಿ ಉದ್ಯೋಗಿಗಳ ಬಳಕೆಗೆಂದು ಮೊದಲ ಮಹಡಿಗೆಲ್ಲಾ ಸೇರಿ ಒಂದು ಪ್ರಿಂಟರ್ ಇದೆ. ಆಫೀಸಿನ ಕೆಲಸಗಳಿಗೆ ಪ್ರಿಂಟಿಂಗ್ ಅವಶ್ಯಕತೆ ಇರುವುದರಿಂದ ಎಲ್ಲಾ ಕಂಪನಿಗಳಲ್ಲೂ ಇರುತ್ತದೆ. ನಾನು ಪ್ರತಿ ದಿನದ ಕೊನೆಯಲ್ಲಿ ಗಮನಿಸುತ್ತೇನೆ. ಏನಿಲ್ಲವೆಂದರೂ ದಿನವೂ ೫೦-೬೦ ಹಾಳೆಗಳು ಪ್ರಿಂಟರ್ ನಲ್ಲಿ ವ್ಯರ್ಥವಾಗಿ ಬಿದ್ದಿರುತ್ತವೆ. ಕೆಲವೊಮ್ಮೆ ಇನ್ನೂ ಜಾಸ್ತಿ! ಇದನ್ನು ಕಂಡಾಗ ವ್ಯಥೆಯಾಗುತ್ತದೆ. ಕೆಲವೊಂದು ಪ್ರಿಂಟ್ ಸರಿಯಾಗಿ ಬಂದಿರುವುದಿಲ್ಲ, ಇನ್ನೂ ಕೆಲವನ್ನು ಯಾರೂ ತೆಗೆದುಕೊಂಡು ಹೋಗುವುದೇ ಇಲ್ಲ. ಇನ್ನೂ ಕೆಲವರು ಅನವಶ್ಯಕವಾಗಿ ಪ್ರಿಂಟ್ ಗಳನ್ನು ಕೊಟ್ಟೂ ಕೊಟ್ಟೂ ವ್ಯರ್ಥ ಮಾಡುತ್ತಿರುತ್ತಾರೆ. ಸಿಕ್ಕಿದ್ದನ್ನೆಲ್ಲಾ ಮುದ್ರಿಸಿಕೊಂಡು ಇಟ್ಟುಕೊಳ್ಳುತ್ತಿರುತ್ತಾರೆ. ಇದು ಕೇವಲ ನನ್ನ ಕಛೇರಿಯ ಕತೆಯೊಂದೇ ಅಲ್ಲ. ಬಹುತೇಕ ಎಲ್ಲಾ ಕಛೇರಿಗಳಲ್ಲೂ ಕೂಡ ಇದೇ ರೀತಿಯ ಪರಿಸ್ಥಿತಿ ಇದೆ. ಹೇಳಲು ಹೋದರೆ ಇದು ಆಫೀಸಿನ ಪ್ರಿಂಟರ್, ಆಫೀಸಿನ ದುಡ್ಡು, ನಮ್ಮದೇನು ಹೋಗುವುದಿದೆ ಎಂದೋ ಅಥವಾ ನೀನೂ ಬೇಕಾದಷ್ಟು ಪ್ರಿಂಟ್ ತೆಗೆದುಕೋ ಎಂಬಂತೆ ಕೇವಲ ದುಡ್ಡಿನ ದೃಷ್ಟಿಯಿಂದ ಪರಿಗಣಿಸುತ್ತಾರೆಯೇ ವಿನಃ ಈ ರೀತಿ ಮಾಡುವುದರಿಂದ ನಮ್ಮ ಪ್ರಕೃತಿಯ ವಿನಾಶಕ್ಕೆ ನಾವೇ ಪರೋಕ್ಷವಾಗಿ ಕಾರಣರಾಗುತ್ತಿದ್ದೇವೆ ಎಂದು ತಿಳಿದುಕೊಳ್ಳುವುದಿಲ್ಲ. ಕೇವಲ ನನ್ನ ಆಫೀಸಿನ ಒಂದು ಪ್ರಿಂಟರಿನಲ್ಲಿಯೇ ದಿನಕ್ಕೆ ಇಷ್ಟು ಕಾಗದ ವ್ಯರ್ಥವಾಗುತ್ತಿದ್ದರೆ ಇನ್ನು ಎಲ್ಲಾ ಆಫೀಸುಗಳಲ್ಲಿ ಸೇರಿ ವ್ಯರ್ಥವಾಗುವ ಪ್ರಮಾಣ ಎಷ್ಟಿರಬಹುದು!

ಕಂಪ್ಯೂಟರ್ ಬಂದಮೇಲೆ ಕಾಗದ ರಹಿತ ಕಛೇರಿಗಳು ಇರುತ್ತವೆ ಎಂಬ ಕಲ್ಪನೆ ತಪ್ಪಾಗಿ ಕಾಗದದ ಬಳಕೆ, ದುರ್ಬಳಕೆ, ವ್ಯರ್ಥ ಮಾಡುವುದು ಜಾಸ್ತಿಯಾಗಿದೆ. ಆದ್ದರಿಂದ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡು ಸ್ವಲ್ಪ ಜವಾಬ್ದಾರಿಯಿಂದ ನೆಡೆದುಕೊಳ್ಳಬೇಕೆಂದು ಎಲ್ಲಾ ಆಫೀಸು ಜೀವಗಳಲ್ಲಿ ವಿನಂತಿ.

*ಕಛೇರಿಯ ಕೆಲಸಗಳಿಗೆ ಅಥವಾ ವೈಯಕ್ತಿಕ ಕೆಲಸಗಳಿಗೆ ನಿಜವಾದ ಅಗತ್ಯವಿದ್ದಾಗ, ಅಗತ್ಯವಿರುವಷ್ಟೆ ಪ್ರಿಂಟ್ ಮಾಡಿ.


ಹೇಗೆ ಕಾಣುತ್ತದೆ ಎಂದು ನೋಡಲು ಒಂದು ಪ್ರಿಂಟ್, ತಪ್ಪು ತಿದ್ದಿದ ಮೇಲೆ ಒಂದು ಪ್ರಿಂಟ್, ಫೈನಲ್ ಕಾಪಿ ಎಂದು ಮತ್ತೊಂದು ಪ್ರಿಂಟ್ ಕೊಡುವ ಬದಲು ಸಾಫ್ಟ್ ಕಾಪಿಯಲ್ಲಿಯೇ ಎಲ್ಲವನ್ನೂ ಫೈನಲೈಸ್ ಮಾಡಿಕೊಂಡು ನಂತರ ಮುದ್ರಿಸಿ.

*ಯಾವ ಯಾವ ಪುಟಗಳು ಬೇಕಾಗಿವೆ ಎಂದು ಮೊದಲೇ ನೋಡಿಕೊಂಡು ಅಷ್ಟನ್ನು ಮಾತ್ರ ಮುದ್ರಿಸಿಕೊಳ್ಳಿ. ಇಡೀ ಡಾಕ್ಯುಮೆಂಟನ್ನು ಮುದ್ರಿಸಿ ನಂತರ ಬೇಕಾದ ಪುಟಗಳನ್ನು ಮಾತ್ರ ಆರಿಸಿ ಇಟ್ಟುಕೊಳ್ಳುವ ಅಭ್ಯಾಸ ಬೇಡ.

*ಪ್ರಿಂಟ್ ಆಪ್ಷನ್ ಗಳನ್ನ ಸರಿಯಾಗಿ ತಿಳಿದುಕೊಳ್ಳಿ. ಮುದ್ರಿಸುವ ಮೊದಲು ಪ್ರಿಂಟರ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕೊಟ್ಟು, ಪ್ರಿಂಟ್ ಮುನ್ನೋಟವನ್ನು ನೋಡಿ ಖಾತ್ರಿಯಾದ ನಂತರವೇ ಪ್ರಿಂಟ್ ಕೊಡಿ. ಇದರಿಂದ ತಪ್ಪು ಪ್ರಿಂಟ್ ಗಳು ಬಂದು ವ್ಯರ್ಥವಾಗುವುದಿಲ್ಲ.

*ಸುಮ್ಮನೇ ರೆಫರೆನ್ಸ್ ಡಾಕ್ಯುಮೆಂಟ್ ಗಳನ್ನು ಹಾಗೂ ಡ್ರಾಫ್ಟ್ ಕಾಪಿಗಳನ್ನು ಪ್ರಿಂಟ್ ತೆಗೆದುಕೊಳ್ಳುವಾಗ ಹಾಳೆಯ ಎರಡೂ ಬದಿಯಲ್ಲಿ ಮುದ್ರಿಸಿ. ಒಂದೇ ಬದಿಯಲ್ಲಿದ್ದರೆ ನೋಡುವುದಕ್ಕೆ ಚೆನ್ನಾಗಿರುತ್ತದೆ, ಓದುವುದು ಅನುಕೂಲ ಇತ್ಯಾದಿ ಶೋಕಿಗಳು ಬೇಡ. ಒಂದು ಬದಿ ಬಳಸಿದ ಹಾಳೆಯಲ್ಲಿ ಪ್ರಿಂಟ್ ತೆಗೆದುಕೊಂಡರೆ ಇನ್ನೂ ಒಳ್ಳೆಯದು.

*ಎಷ್ಟು ಕಾಪಿಗಳು ಬೇಕೋ ಅಷ್ಟನ್ನು ಮಾತ್ರ ಮುದ್ರಿಸಿ. ಸುಮ್ಮನೇ ಯಾವುದಕ್ಕೂ ಇನ್ನೊಂದೆರಡು ಜಾಸ್ತಿ ಕಾಪಿಗಳು ಇರಲಿ ಎಂಬ ಧೋರಣೆ ಬೇಡ.

*ಹೇಗೂ ಉಚಿತ ಎಂದು ಸಿಕ್ಕಿದ್ದೆಲ್ಲಾ ಜೋಕುಗಳು, ಚಿತ್ರಗಳು, ಮೇಲ್ ಗಳು, ಡಾಕ್ಯುಮೆಂಟ್ ಗಳು, ಇ-ಬುಕ್ಸ್ ಎಲ್ಲವನ್ನೂ ಪ್ರಿಂಟ್ ತೆಗೆದಿಟ್ಟುಕೊಳ್ಳುವ ಮನಸ್ಥಿತಿ ಬಿಡಿ.

*ಕೇವಲ ಕಛೇರಿ ಒಳಗಿನ ಬಳಕೆಗೆ ಬೇಕಿದ್ದಾಗ, ನೆಡೆಯುತ್ತದೆ ಎಂದಿದ್ದಾಗ ಒಂದು ಬದಿ ಪ್ರಿಂಟ್ ಆಗಿರುವ ಹಾಳೆಗಳನ್ನು ಬಳಸಿ ಇನ್ನೊಂದು ಖಾಲಿ ಬದಿಯಲ್ಲಿ ಮುದ್ರಿಸಿಕೊಳ್ಳಿ. ಉದಾಹರಣೆಗೆ, ಡ್ರಾಯಿಂಗ್ ಗಳ ಕ್ವಾಲಿಟ್ ಚೆಕಿಂಗ್, ಡಾಕ್ಯುಮೆಂಟ್ ಗಳ/ಪತ್ರಗಳ ತಿದ್ದುವಿಕೆ ಮುಂತಾದವುಗಳಿಗೆ.

*ಅಗತ್ಯಕ್ಕಿಂತ ದೊಡ್ಡ ಫಾಂಟ್ ಗಳಿದ್ದಾಗ ಅದರ ಗಾತ್ರವನ್ನು ಕಡಿಮೆ ಮಾಡಿ ಮುದ್ರಿಸಿದರೆ ಕಡಿಮೆ ಹಾಳೆಗಳು ಸಾಕಾಗುತ್ತವೆ.

*ಪ್ರಿಂಟ್ ಡಾಕ್ಯುಮೆಂಟೇಶನ್ ಬದಲು ಎಲೆಕ್ಟ್ರಾನಿಕ್ ಡಾಕ್ಯುಮೆಂಟೇಷನ್ ಮಾಡಿ. ಅಂದರೆ ಆಫೀಸಿನ ಕೆಲಸದ ಕಮ್ಯುನಿಕೇಶನ್ ಮೇಲ್ ಗಳು, ಡಾಕ್ಯುಮೆಂಟ್ಸ್ ಮುಂತಾದವುಗಳ ಸಾಫ್ಟ್ ಕಾಪಿಯನ್ನು ಉಳಿಸಿಟ್ಟುಕೊಂಡು ಬಳಸಿಕೊಳ್ಳಿ.

*ಫೋಟೋಕಾಪಿ ಮತ್ತು ಸ್ಕಾನರ್ ಗಳನ್ನು ಬಳಸುವಾಗಲೂ ಅದರ ಆಪ್ಷನ್ ಮತ್ತು ಸೆಟ್ಟಿಂಗ್ ಗಳನ್ನು ಸರಿಯಾಗಿ ತಿಳಿದುಕೊಂಡು, ಅಗತ್ಯವಿರುವಷ್ಟೇ ಕಾಪಿಗಳನ್ನು ತೆಗೆದುಕೊಳ್ಳಿ.

ಇದಿಷ್ಟೂ ಕೇವಲ ಆಫೀಸುಗಳ ಪ್ರಿಂಟ್ ಕಾಗದದ ಬಗ್ಗೆ ಮಾತ್ರ. ಇದರ ಜೊತೆಗೆ ಆಫೀಸಿನಲ್ಲೇ ಬೇರೆ ಬೇರೆ ರೀತಿಯಲ್ಲಾಗುವ ಮತ್ತು ಶಾಲೆ ಇನ್ನಿತರ ಕಡೆಗಳಲ್ಲಾಗುವ ಕಾಗದದ ದುಂದುಬಳಕೆ ಬಗ್ಗೆ ಹೇಳಲು ಹೋದರೆ ಅದೇ ದೊಡ್ಡ ಕತೆಯಾಗುತ್ತದೆ.

ನೆನಪಿರಲಿ, ಕಾಗದವನ್ನು ತಯಾರಿಸಲು ಬೇಕಾಗುವ ಮೂಲವಸ್ತು ಮರ. ಕಾಗದ ತಯಾರಿಕೆಗಾಗಿಯೇ ಎಷ್ಟೆಲ್ಲಾ ಮರಗಳು ಕಡಿಯಲ್ಪಡುತ್ತವೆ ಮತ್ತು ಎಷ್ಟು ಶಕ್ತಿ, ಸಂಪನ್ಮೂಲಗಳು ವಿನಿಯೋಗಿಸಲ್ಪಡುತ್ತದೆ. ಒಳ್ಳೆ ಗುಣಮಟ್ಟದ ಒಂದು ಟನ್ ಪ್ರಿಂಟ್ ಕಾಗದ ಉತ್ಪಾದನೆಗೆ ಸುಮಾರು 17 ರಿಂದ 24 ಮರಗಳು ಬೇಕು. ಇಂತಿದ್ದ ಮೇಲೆ ಕಾಗದದ ಬಳಕೆಯನ್ನು ಸರಿಯಾಗಿ ಮಾಡಿ ವ್ಯರ್ಥವಾಗುವುದನ್ನು ತಪ್ಪಿಸಿ ಮರಗಿಡಗಳನ್ನು, ಪರಿಸರವನ್ನು ಉಳಿಸುವುದು ನೇರವಾಗಿ ನಮ್ಮ ಮೇಲೆ ಇದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಿಕಾಸವಾದ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-06


ಪ್ರತಿಸ್ಪಂದನ
Vijay Suvarna, Udupi
2008-10-18
Very meaningful and helpful articale. every one must think about that. writer has given fact things to the readers. one and all who working on PC they should think 10 times before giving any letters to print. thank you my dear to writing such article. and also request with feed back senders.... please dont write any words, if you dont understand the real meanings of atricle. it\'s really giving hurts to writers. thanks once again to the wariter of the article.
LK, LK
2008-09-07
ರೀ ಸ್ವಾಮಿ,ಸರ್ .nimage guts iddare sariyaada email nalli nimma svathaha ( hesariddare!)hesarinalli feedback ...kaLisi...Ithara LK haagu lk@gmail.com anta suLLu email nalli yaake bareyutheera swamy...
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್
»ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು
»ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ
»ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು
»ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ!
»ಬಾಂಬ್ ಸೂಟ್ ಎಂಬ ರಕ್ಷಾ ಕವಚ
»ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್
»ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು?
» ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು
»ಸಡಿಲ ಪ್ಯಾಂಟ್ ಧರಿಸಿದರೆ ದಂಡ
»ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ?
»ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ...
»ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು
»ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ
»ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
»ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ
»ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ !
»ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ
»ಮೂರೂ ಬಿಟ್ಟವರ ಅಮೆರಿಕ ಯಾತ್ರೆ .......
»ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
»ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು
»ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!!
»ಅಮೆರಿಕೆಗಾಗಿ ದೇಶದ ಹಿತ ಬಲಿ
»ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್
»ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ?
»ಬಿಜೆಪಿಯ ದುರಂತಕ್ಕೆ ಪೀಠಿಕೆ .....?
»ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ
»ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ
»ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’
»ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ
»ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್!
»ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್
»ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ
»ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ
»ಹಣದುಬ್ಬರವೆಂದರೇನು ಗೊತ್ತಾ?
»ಹೊಳೆ ದಾಟಿದ ಮೇಲೆ...
»ಅಂತರಿಕ್ಷದಲ್ಲಿ ಮದುವೆ ಮಾಡಿಸುತ್ತದೆ ಈ ಸಂಸ್ಥೆ!
»ಜಿರಾಫೆಯನ್ನು ಬಂಧಿಸಿದ ಪೊಲೀಸರು
»ಆ ಸಿಗರೇಟು ಬಿಡಿ ಇ-ಸಿಗರೇಟು ಸೇದಿ
»ರೈತರ ಸರಣಿ ಆತ್ಮಹತ್ಯೆ : ದೊರಕದ ಸಹಾಯ
»ಪಠ್ಯಪುಸ್ತಕ ಬದಲಾವಣೆಗೆ ಸಚಿವರ ‘ಕೇಸರಿ ನಕಾಶೆ’
»’ಮೊಬೈಲ್’ ಗಾದೆಗಳು!!
»ಭಾರತೀಯ ಭಾಷಾ ಗಣಕಲೋಕದ ಪಿತಾಮಹ - ಶ್ರೀ ಕೆ.ಪಿ ರಾವ್
»ಒಂದು ಸಾವಿನ ಮನೆಯ ವೃತ್ತಾಂತ .....
»ಕನ್ನಡ ಕಲಿಸುವುದಕ್ಕೆ ಇಷ್ಟವಿರುವವರಿಗೆ ಅರ್ಪಣೆ
»ಅನಾಥ ಅಜ್ಜಿಗೆ ಸ್ಪೂರ್ಥಿಯ ಆಸರೆ
»ರಾಜಕೀಯ ಚದುರಂಗದಾಟದ ಕಾಯಿಗಳಾಗುತ್ತಿರುವ ರೈತರು
»ಅನ್ನ ತಿನ್ನುವವರು ನೀರುಳಿಸುವ ವಿಧಾನ
»ಗಂಗೆ ಅಂತರ್ಧಾನಳಾದಾಳೇ... !?
»ಚಿಕುನ್‌ಗುನ್ಯಾದಿಂದ ಕರಾವಳಿ ಕಲಿಯಬೇಕಾದ ಪಾಠ
»ಕಾಲ್ ಸೆಂಟರ್‌ಗಳಲ್ಲಿ ತೆರೆಯಲಿ ಏಡ್ಸ್ ಜಾಗೃತಿ ಅಂಗಡಿಗಳು
»ಕರಾವಳಿಯನ್ನು ಕಾಡುತ್ತಿದೆ ಕಮ್ಯುನಿಸ್ಟ್ ಕಳೆ
»ಗಣಿಗಾರಿಕೆ ರಾಷ್ಟ್ರೀಕರಣವಾಗಲಿ
»ಕಳೆ ಪಡೆಯುತ್ತಿರುವ ಹೊಳೆ ಮೀನುಗಾರಿಕೆ ....
» 'Housewives' out of fashion in metros!
»ನನ್ನಜ್ಜನಿಗೊಂದಾನೆಯಿತ್ತು !
»ಕೊಂಕಣಿ ರಾಜ್ಯದ ಕನಸು ಕಂಡಿದ್ದ ಕಾಮತರು
»ಪದ್ಮಪ್ರಿಯಾ ಪ್ರಕರಣದ ಸುತ್ತ...
»... ಆ ಒಂದು ಮುತ್ತಿನ ಕತೆ
»ಈ ಭೇಟಿ ನ್ಯಾಯವೇ?
»ಪಾಸ್‌ಪೋರ್ಟ್ ಅರ್ಜಿಗೆ ಕನ್ನಡ, ಇಂಗ್ಲಿಷ್‌ನ ವೆಬ್‌ಸೈಟ್
»some ಪದ ಕೇಡಿ
»ಈ-ಮೆಲ್ ರಚನೆಯ ಪರಿಚಯ
»ರೈತರಿಗೆ ಮಾತ್ರ ರಬ್ಬರ್ ಗುಂಡು: ಉಳಿದವರಿಗೆ?
»ಇ-ಮೇಲ್ ಅಕೌಂಟನ್ನು ತೆರೆಯುವುದು
»ನೀರಿನಿಂದ ಓಡುವ ಕಾರು!
»ನಾಡಿನ ಒಳಿತಿನ ಚುಕ್ಕಾಣಿ ಅರ್ಚಕನ ಕೈಗೆ?
»ಕೆಂಪಾಯಿತು ಯಡಿಯೂರಪ್ಪನವರ ಹೆಗಲಿನ ಹಸಿರು ಶಾಲು
»ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗೆ ಮೊದಲ ಬಲಿ ರೈತನೇ!
»