ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?

ಈ ಪ್ರಶ್ನೆಯನ್ನು ಇಲ್ಲಿಯವರೆಗೆ ಕಡಿಮೆಯೆಂದರೂ ನೂರು ಜನರಾದರೂ ನನ್ನ ಬಳಿ ಕೇಳಿದ್ದಾರೆ. ಅದೆಂತದೋ ಪ್ರಾಜೆಕ್ಟ್ ಅಂತಾರಲ್ಲ, ಕೋಡ್ ಬರೆಯೋದು ಹಾಗಂದ್ರೇನು, ಪ್ರೋಗ್ರಾಮ್ ಅಂದ್ರೆ ಏನು… ಹೀಗೆ ಸಾಫ್ಟ್‌ವೇರ್ ಜಗತ್ತಿನ ಬಗ್ಗೆ ಕುತೂಹಲದಿಂದ ಪ್ರಶ್ನೆ ಕೇಳಿದವರು ಅನೇಕ ಮಂದಿ ಇದ್ದಾರೆ. ಅಸಲಿಗೆ ಹಗಲು-ರಾತ್ರಿ ಕೆಲಸ ಕೆಲಸ ಅಂತ ಸಾಫ್ಟ್‌ವೇರ್ ಮಂದಿ ಮಾಡುವ ಕೆಲಸ ಯಾವ ಸ್ವರೂಪದ್ದು ಅನ್ನುವ ಕುರಿತಾದ ಬಹುತೇಕರ ಪ್ರಶ್ನೆಗೆ ಸರಳವಾಗಿ ವಿವರಿಸಲು ಯಾಕೆ ಪ್ರಯತ್ನಿಸಬಾರದೆಂದು ಇದನ್ನು ಬರೆಯಲು ಹೊರಟಿದ್ದೇನೆ. ಆದಷ್ಟು ಕಡಿಮೆ ತಾಂತ್ರಿಕ ಪದಗಳನ್ನು ಬಳಸಲು ಯತ್ನಿಸುತ್ತೇನೆ.

ಇದನ್ನು ಬರೀ ವಾಕ್ಯಗಳಲ್ಲಿ ವಿವರಿಸುವುದಕ್ಕಿಂತ, ಒಂದು ಸರಳ ಉದಾಹರಣೆಯೊಂದಿಗೆ ನೋಡಿದರೆ ಅರ್ಥೈಸಿಕೊಳ್ಳಲು ಸುಲಭ. ಒಂದು ಇನ್ಶೂರೆನ್ಸ್ ಕಂಪೆನಿಯ ಉದಾಹರಣೆ ಗಮನಿಸೋಣ. ಇಲ್ಲಿಯ ತನಕ ಅವರ ವಿವಿಧ ಯೋಜನೆಗಳು, ಅದರ ಪ್ರೀಮಿಯಂ ನಿರ್ಧಾರ… ಮೊದಲಾದ ಕಾರ್ಯಗಳೆಲ್ಲಾ ಲೆಡ್ಜರ್‌ಗಳಲ್ಲಿ ಮಾಹಿತಿ ಸಂಗ್ರಹಿಸುವುದರ ಮೂಲಕ ಹಾಗೂ ಪೆನ್ನು, ಪೇಪರ್, ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಹಾಕುವುದರ ಮೂಲಕ ನಿರ್ವಹಿಸುತ್ತಿದ್ದರು. ಈಗ ತನ್ನ ವ್ಯವಹಾರಗಳನ್ನೆಲ್ಲ ಸುಗಮವಾಗಿ ನಿರ್ವಹಿಸಲು ಒಂದು ಕಂಪ್ಯೂಟರ್ ಸಾಫ್ಟ್‌ವೇರ್ ಒಂದು ಬೇಕೆಂದು ನಿರ್ಧರಿಸಿತು ಅಂತಿಟ್ಟುಕೊಳ್ಳೋಣ. ಅದಕ್ಕಾಗಿ ಅನೇಕ ಸಾಫ್ಟ್‌ವೇರ್‌ ಕಂಪೆನಿಗಳನ್ನು ಸಂಪರ್ಕಿಸಿ, ಯಾರು ಅತೀ ಕಡಿಮೆ ಅವಧಿಯಲ್ಲಿ, ಅತೀ ಕಡಿಮೆ ಖರ್ಚಿನಲ್ಲಿ ಅಂತಹ ಸಾಫ್ಟ್‌ವೇರ್ ನಿರ್ಮಿಸಿಕೊಡಲು ಒಪ್ಪುತ್ತಾರೋ ಅವರಿಗೆ ಈ ಕೆಲಸ ವಹಿಸಿಕೊಡಲಾಗುತ್ತದೆ. ( ಕೆಲವೊಮ್ಮೆ ನಿರ್ಮಾಣ ವೆಚ್ಚ ಹೆಚ್ಚಾಗಿದ್ದರೂ ಕೂಡಾ ಕಂಪೆನಿಯ ಬ್ರ್ಯಾಂಡ್ ನೇಮ್ ನೋಡಿ ನಿರ್ಧಾರವಾಗುವುದೂ ಇದೆ). ಹೀಗೆ ಕಸ್ಟಮರ್ ಒಬ್ಬರಿಂದ ಸಾಫ್ಟ್‌ವೇರ್ ಕಂಪೆನಿ ಪಡೆಯುವ ಈ ಕೆಲಸದ ಆರ್ಡರ್ ‘ಪ್ರಾಜೆಕ್ಟ್’. ಈ ಪ್ರಾಜೆಕ್ಟ್ ಮುಗಿಸಿಕೊಡುವ ಕೊನೆಯ ದಿನಾಂಕದ ಕುರಿತು ಮೊದಲೇ ಕರಾರು ನಡೆದಿರುತ್ತದೆ. ಹಾಗಾಗಿಯೇ ಸಾಫ್ಟ್‌ವೇರ್ ಮಂದಿ ಸದಾ ಈ ಡೆಡ್‌ಲೈನ್‌ನ ಬಿಸಿಗೆ ಕುಂಡೆಸುಟ್ಟ ಬೆಕ್ಕಿನಂತಾಡುವುದು.

ಈಗ ಪ್ರಾಜೆಕ್ಟ್ ಏನೋ ಬಂತು. ಅದನ್ನು ಯಶಸ್ವಿಯಾಗಿ ಪೂರೈಸುವುದು ಹೇಗೆ? ಮೊಟ್ಟ ಮೊದಲನೆಯದಾಗಿ ಇನ್ಶೂರೆನ್ಸ್ ಕಂಪೆನಿಯು ತನ್ನ ಸಾಫ್ಟ್‌ವೇರ್‌ನಲ್ಲಿ ಯಾವ ಯಾವ ಅಂಶಗಳು ಇರಲು ಬಯಸುತ್ತದೆ ಅನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕಲ್ಲ. ಹಾಗಾಗಿ ಅವರ ಬೇಡಿಕೆ/ಅಗತ್ಯಗಳ (ರಿಕ್ವಾಯರ್‌ಮೆಂಟ್) ಕುರಿತು ಮಾಹಿತಿ ಸಂಗ್ರಹಿಸುವುದು ಪ್ರಾಜೆಕ್ಟ್‌ನ ಮೊದಲ ಹಂತ. ಈ ಪ್ರಕ್ರಿಯೆಯಲ್ಲಿಯೇ ಪರಿಣಿತರಾಗಿರುವ ‘ರಿಕ್ವಾಯರ್‌ಮೆಂಟ್ ಅನಲಿಸ್ಟ್’ ಅಥವಾ ‘ಬ್ಯುಸಿನೆಸ್ ಅನಲಿಸ್ಟ್’ಗಳು ಈ ಕಾರ್ಯಕ್ಕೆ ನಿಯೋಜಿಸಲ್ಪಡುತ್ತಾರೆ. ಇನ್ಶೂರೆನ್ಸ್ ಕಂಪೆನಿಯ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿ, ಅವರು ನೀಡುವ ಮಾಹಿತಿಗಳನ್ನು, ಅವರ ಬೇಡಿಕೆಗಳನ್ನೆಲ್ಲಾ ವ್ಯವಸ್ಥಿತವಾಗಿ ದಾಖಲಿಸಲಾಗುತ್ತದೆ. ಒಂದು ಪ್ರಾಜೆಕ್ಟ್‌ನ ಯಶಸ್ಸಿನಲ್ಲಿ ಈ ಹಂತ ತುಂಬಾ ಪ್ರಮುಖವಾಗಿದ್ದು, ಇಲ್ಲೇನಾದರೂ ತಪ್ಪು ನುಸುಳಿಕೊಂಡರೆ ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದಂತಾಗುತ್ತದೆ. ಹಾಗಾಗಿ ಇಡೀ ಪ್ರಾಜೆಕ್ಟ್‌ನ ಒಟ್ಟು ಅವಧಿಯಲ್ಲಿ ಕಾಲು ಭಾಗ ಈ ಪ್ರಕ್ರಿಯೆಗೇ ಮೀಸಲಾಗಿರುತ್ತದೆ.

ಕೆಲವೊಮ್ಮೆ ಈ ಪ್ರಕ್ರಿಯೆಗೆ ಪೂರಕವಾಗಿ ಅಂತಿಮ ಹಂತದಲ್ಲಿ ಆ ತಂತ್ರಾಂಶವು ಹೇಗೆ ಕಾಣಿಸುತ್ತದೆ ಅನ್ನೋದನ್ನು ತೋರಿಸಲು ‘ಪ್ರೊಟೋಟೈಪ್’ ಒಂದನ್ನು ಸಿದ್ಧಪಡಿಸಿ ಕಸ್ಟಮರ್‌ಗೆ ತೋರಿಸಲಾಗುತ್ತದೆ. ಇದಕ್ಕೊಂದು ಸಾದೃಶ್ಯ ಕೊಡುವುದಾದರೆ, ಮನೆ ಕಟ್ಟುವ ಮುನ್ನ ಅದು ಹೇಗೆ ಕಾಣಿಸಬಹುದೆಂದು ಅದರ ಪುಟ್ಟ ಪ್ರತಿಕೃತಿ ಅಥವಾ ಡ್ರಾಯಿಂಗ್ ಅನ್ನು ಇಂಜಿನಿಯರ್ ತೋರಿಸ್ತಾರಲ್ಲ ಹಾಗೆ.

ಹೀಗೆ ಮಾಹಿತಿ/ಬೇಡಿಕೆ/ಅಗತ್ಯಗಳನ್ನೆಲ್ಲಾ ಕಲೆಹಾಕಿ ದಾಖಲಿಸಿಟ್ಟ ಬಳಿಕ ಅನಾಲಿಸಿಸ್ ಮತ್ತು ಡಿಸೈನ್ ಶುರುವಾಗುತ್ತೆ. ಮೊದಲ ಈ ಕ್ರಿಯೆಯಲ್ಲಿ ವಿಶೇಷ ಪರಿಣತಿಯುಳ್ಳ ತಂಡವೊಂದು ಈ ಕೆಲಸಕ್ಕಾಗಿ ನಿಯೋಜಿಸಲ್ಪಡುತ್ತದೆ. ಸಿದ್ಧಪಡಿಸಬೇಕಾದ ಸಾಫ್ಟ್‌ವೇರ್‌ನಲ್ಲಿರಬೇಕಾದ ಅಂಶಗಳು, ಲಕ್ಷಣಗಳಿಗೆ ಅನುಗುಣವಾಗಿ ಅದನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿ, ಪ್ರತೀ ವಿಭಾಗವೂ ಮಾಡುವ ಕೆಲಸ, ಅದನ್ನು ರಚಿಸುವುದು ಹೇಗೆ ಅನ್ನುವುದನ್ನು ಈ ಹಂತದಲ್ಲಿ ನಿರ್ಧರಿಸಲಾಗುತ್ತದೆ. ಇನ್ಶೂರೆನ್ಸ್ ಕಂಪೆನಿಯ ಉದಾಹರಣೆಯನ್ನು ಗಮನಿಸುವುದಾದರೆ ಅದರಲ್ಲಿ ಗ್ರಾಹಕರನ್ನು ಸೇರಿಸಲು/ ತೆಗೆದು ಹಾಕಲು ಒಂದು ವಿಭಾಗ, ಪ್ರಿಮಿಯಂ ಲೆಕ್ಕ ಹಾಕಲು ಒಂದು ವಿಭಾಗ, ಕಟ್ಟಿದ ಪ್ರಿಮಿಯಂಗಳ ದಾಖಲಾತಿಗೆ ಒಂದು…ಹೀಗೆ ಅನೇಕ ವಿಭಾಗಗಳನ್ನಾಗಿ ವಿಂಗಡಿಸಿ, ಪ್ರತೀ ವಿಭಾಗವು ಮಾಡುವ ಕೆಲಸ, ಆ ವಿಭಾಗವನ್ನು ಹೇಗೆ ರಚಿಸಬೇಕು ಅನ್ನುವುದನ್ನು ನಿರ್ಧರಿಸಲ್ಲಗುತ್ತದೆ. ಈ ಕಾರ್ಯದಲ್ಲಿ ಇದಕ್ಕೆಂದೇ ರಚಿತವಾದ ಅನೇಕ ವಿಶೇಷ ತಂತ್ರಾಶ(ಸಾಫ್ಟ್‌ವೇರ್)ಗಳನ್ನು ಬಳಸಲಾಗುತ್ತದೆ. ಡೆಸೈನ್ ಪ್ರಕ್ರಿಯೆಯನ್ನು ಸ್ಥೂಲವಾಗಿ ಕಟ್ಟಡದ ನೀಲನಕ್ಷೆ ಹಾಗು ಅದಕ್ಕೆ ಸಂಬಂಧಿಸಿದ ಡ್ರಾಯಿಂಗ್‌ಗಳಿಗೆ ಹೋಲಿಸಬಹುದು._ಈ ಹಂತಕ್ಕೂ ಕೂಡಾ ಹೆಚ್ಚು ಕಡಿಮೆ ಕಾಲು ಭಾಗದಷ್ಟು ಸಮಯ ಮೀಸಲಾಗಿರುತ್ತದೆ.

ಡಿಸೈನ್ ಹಂತ ಮುಗಿಯುವಷ್ಟರಲ್ಲಿ ( ಕೆಲವೊಮ್ಮೆ ಮೊದಲೇ) ಈ ಸಾಫ್ಟ್‌ವೇರ್ ನಿರ್ಮಾಣದಲ್ಲಿ ಬಳಸಬೇಕಾದ ತೋತ್ರಜ್ಞಾನ, ತಂತ್ರಾಂಶಗಳನ್ನು ನಿರ್ಧರಿಸಲಾಗುತ್ತದೆ. ಇದರಲ್ಲಿ ಸ್ಥೂಲವಾಗಿ ಎರಡು ವಿಭಾಗಗಳಿರುತ್ತವೆ. ಮಾಹಿತಿ ಸಂಗ್ರಹಣೆಗೆ ಬಳಸುವ ಡೇಟಾಬೇಸ್ ಮತ್ತು ಕಾರ್ಯನಿರ್ವಹಿಸಲು ಕಂಪ್ಯೂಟರ್‌ಗೆ ಆದೇಶ ನೀಡಲು ಬಳಸುವ ಭಾಷೆ. (ವಾಸ್ತವವಾಗಿ ಇದು ಇಲ್ಲಿ ಹೇಳಿದಷ್ಟು ನೇರ ಮತ್ತು ಸರಳವಾಗಿಲ್ಲ. ಸುಮ್ಮನೆ ಸ್ಥೂಲವಾಗಿ ವಿವರಿಸಿದ್ದೇನೆ ಅಷ್ಟೆ)

ಈ ಭಾಷೆಯನ್ನು ‘ಪ್ರೊಗ್ರಾಮಿಂಗ್ ಲಾಂಗ್ವೇಜ್’ ಎಂದೂ, ಇದನ್ನು ಬಳಸಿ ಬರೆಯುವ ಸಂಕೇತ/ಆದೇಶಗಳ ಸಮೂಹವನ್ನು ‘ಪ್ರೋಗ್ರಾಮ್’ / ಕೋಡ್’ ಎಂದೂ ಕರೆಯಲಾಗುತ್ತದೆ.

ಈ ಕೆಲಸವನ್ನು ನಿರ್ವಹಿಸಲು ಪ್ರೋಗ್ರಾಮಿಂಗ್ ಭಾಷೆಯಲ್ಲಿ ಪರಿಣತಿಯನ್ನು ಪಡೆದ ತಂಡವನ್ನು ಕಟ್ಟಲಾಗುತ್ತದೆ. ತಂಡದ ವಿವಿಧ ಸದಸ್ಯರಿಗೆ ಡಿಸೈನ್‌ನಲ್ಲಿ ಸೂಚಿಸಿದ ಪ್ರಕಾರ ವಿವಿದ ವಿಭಾಗಗಳನ್ನು ನಿರ್ಮಿಸಲು ಕೊಡಲಾಗುತ್ತದೆ. ಈ ಪ್ರಕ್ರಿಯೆಗೆ ‘ಕೋಡಿಂಗ್’ ಅಂತ ಹೆಸರು. ತಮಗೆ ನಿಗದಿಪಡಿಸಿದ ಅವಧಿಯೊಳಗೆ, ಡಿಸೈನ್‌ಗೆ ಅನುಗುಣವಾಗಿ ಮಾಡ್ಯುಲ್‌ಗಳನ್ನು ಮುಗಿಸಬೇಕಾಗುತ್ತದೆ. ಪ್ರತಿಯೊಬ್ಬನೂ ತಾನು ನಿರ್ಮಿಸಿದ ಪ್ರೋಗ್ರಾಂ/ಘಟಕವನ್ನು ಬಿಡಿ ಬಿಡಿಯಾಗಿ ಟೆಸ್ಟ್ ಮಾಡುತ್ತಾನೆ. ಉದಾಹರಣೆಗೆ ಇನ್ಶೂರೆನ್ಸ್ ಕಂಪೆನಿಯ ಪ್ರಿಮಿಯಂ ಲೆಕ್ಕ ಹಾಕುವ ಮಾಡ್ಯೂಲನ್ನು ಗಮನಿಸಿದರೆ, ಅದು ಕೊಟ್ಟ ಮಾಹಿತಿಗಳನ್ನೆಲ್ಲಾ ಬಳಸಿ, ಸರಿಯಾದ ಪ್ರಿಮಿಯಂ ಲೆಕ್ಕ ಹಾಕಿ ಕೊಡಬೇಕು. ಅದನ್ನು ಇನ್ಶೂರೆನ್ಸ್ ಕಂಪೆನಿ ನೀಡಿದ ಮಾಹಿತಿಯೊಂದಿಗೆ ತಾಳೆ ಹಾಕಿ ತಪ್ಪಿದ್ದಲ್ಲಿ ಅದನ್ನು ಹುಡುಕಿ ಸರಿಪಡಿಸಬೇಕು.

ಹೀಗೆ ಬಿಡಿಬಿಡಿಯಾಗಿ ರಚಿತವಾದ ಮಾಡ್ಯೂಲ್‌ಗಳನ್ನೆಲ್ಲಾ ಒಟ್ಟಾಗಿಸಿ ಒಂದೇ ಸಾಫ್ಟ್‌ವೇರ್ ಘಟಕವನ್ನಾಗಿಸಲಾಗುತ್ತದೆ. ಇದಕ್ಕೆ ಇಂಟಿಗ್ರೇಶನ್ ಅನ್ನುತ್ತಾರೆ. ಹೀಗೆ ತಯಾರಾದ ಸಾಫ್ಟ್‌ವೇರ್ ಇನ್ನೆರಡು ಹಂತದ ಟೆಸ್ಟಿಂಗ್‌ಗೆ ಒಳಗಾಗುತ್ತದೆ. ಅದೆಂದರೆ ‘ಇಂಟಿಗ್ರೇಶನ್ ಟೆಸ್ಟಿಂಗ್’ಹಾಗೂ ‘ಸಿಸ್ಟಮ್ ಟೆಸ್ಟಿಂಗ್’.

‘ಸಿಸ್ಟಮ್ ಟೆಸ್ಟಿಂಗ್’ ಹಂತದಲ್ಲಿ ಕಸ್ಟಮರ್ ಸಲ್ಲಿಸಿದ ಬೇಡಿಕೆಗನುಗುಣವಾಗಿ ತಂತ್ರಾಂಶವು ಕಾರ್ಯ ನಿರ್ವಹಿಸುತ್ತಿದೆಯೇ ಅನ್ನುವುದನ್ನು ಪರೀಕ್ಷಿಸಲಾಗುತ್ತದೆ. ಈ ಯಾವುದೇ ಹಂತದಲ್ಲಿ ದೋಷಗಳೇನಾದರೂ ಬಂದಲ್ಲಿ ಅದನ್ನು ಸರಿಪಡಿಸಿ ಮತ್ತೆ ಪರೀಕ್ಷೆಗೊಳಪಡಿಸಲಾಗುತ್ತದೆ.

ಇಷ್ಟೆಲ್ಲಾ ಮುಗಿದ ಬಳಿಕ ಸಾಫ್ಟ್‌ವೇರ್ ಬಳಕೆಗೆ ನೆರವಾಗುವ ಕೈಪಿಡಿಯೊಂದನ್ನು ಸಿದ್ಧಪಡಿಸಿ, ಅದನ್ನು ಕಸ್ಟಮರ್‌ಗೆ ರವಾನಿಸಲಾಗುತ್ತದೆ. ಈ ಪ್ರಕ್ರಿಯೆಗೆ ‘ಡೆಲಿವರಿ’ ಅನ್ನಲಾಗುತ್ತದೆ. ಹೀಗೆ ರಚಿತವಾದ ಸಾಫ್ಟ್‌ವೇರ್‌ನ ಕಾರ್ಯವಿಧಾನವನ್ನು ಇನ್ಶೂರೆನ್ಸ್ ಕಂಪೆನಿಯವರು ಪರೀಕ್ಷೆಗೆ ಒಳಪಡಿಸಿ ದೋಷವಿದ್ದರೆ, ಅಥವಾ ಬದಲಾವಣೆ ಬೇಕಿದ್ದರೆ ಅದನ್ನು ಸೂಚಿಸುತ್ತರೆ. ಪುನಹ ಬದಲಾವಣೆ ಮಾಡಿ ಕಳಿಸಲಾಗುತ್ತದೆ. ಈ ಪ್ರಕ್ರಿಯೆಯು ಕಸ್ಟಮರ್‌ಗೆ ಅದರ ಕಾರ್ಯವಿಧಾನದ ಕುರಿತು ತೃಪ್ತಿಯಾಗುವವರೆಗೆ ಪುನರಾವ್ರ್ತನೆಯಾಗುತ್ತಲಿರುತ್ತದೆ.

ಅಂತೂ ಕೊನೆಗೂ ಸಾಫ್ಟ್‌ವೇರ್ ಬಳಕೆಗೆ ಸಿದ್ಧವಾಗುತ್ತದೆ. ಬಳಕೆ ಶುರುವಾದ ೩-೬ ತಿಂಗಳವರೆಗೆ ಕರಾರಿನಂತೆ ಅದರ ನಿರ್ವಹಣೆ( ಮೇಂಟೆನೆನ್ಸ್) ಜವಾಬ್ದಾರಿಯಿರುತ್ತದೆ. ಬಳಾಕೆಯ ವೇಳೆ ಯಾವುದಾದರೂ ದೋಷ ಬಂದಲ್ಲಿ ಅದನ್ನು ಸರಿಪಡಿಸಿ ಅಂತೂ ಕೊನೆಗೂ ಸಾಫ್ಟ್‌ವೇರ್ ರಚನೆಯ ಪ್ರಕ್ರಿಯೆ ಮುಕ್ತಾಯವಾಗುತ್ತದೆ.

ಇದು ನೋಡಿ ಸ್ವಾಮಿ ನಾವು ಮಾಡೋ ಕೆಲಸದ ಒಂದು ಕಿರು ಪರಿಚಯ. ಇಲ್ಲಿ ಮಾಹಿತಿಯನ್ನು ಸರಳಗೊಳಿಸುವ ಸಲುವಾಗಿ ಮುಖ್ಯವಾದ ಅಂಶಗಳನ್ನಸ್ಟೇ ಇಲ್ಲಿ ಹೇಳಿದ್ದೇನೆ. ಇದು ಪೂರ್ಣವಾದ ಪರಿಚಯ ಅಲ್ಲವಾದರೂ ಸಾಫ್ಟ್‌ವೇರ್ ಜಗತ್ತಿನ ಬಗ್ಗೆ ಒಂದು ಇಣುಕು ನೋಟ ನಿಮಗೆ ಸಿಕ್ಕಿದಲ್ಲಿ ನಾನು ಬರೆದಿದ್ದೂ ಸಾರ್ಥಕ.

-ವಿಜಯರಾಜ್

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಿಜಯಕನ್ನಥ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-05


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್
»ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು
»ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ
»ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು
»ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ!
»ಬಾಂಬ್ ಸೂಟ್ ಎಂಬ ರಕ್ಷಾ ಕವಚ
»ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್
»ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು?
» ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು
»ಸಡಿಲ ಪ್ಯಾಂಟ್ ಧರಿಸಿದರೆ ದಂಡ
»ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ?
»ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ...
»ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು
»ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ
»ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
»ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ
»ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ !
»ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ
»ಮೂರೂ ಬಿಟ್ಟವರ ಅಮೆರಿಕ ಯಾತ್ರೆ .......
»ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
»ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು
»ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!!
»ಅಮೆರಿಕೆಗಾಗಿ ದೇಶದ ಹಿತ ಬಲಿ
»ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್
»ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ?
»ಬಿಜೆಪಿಯ ದುರಂತಕ್ಕೆ ಪೀಠಿಕೆ .....?
»ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ
»ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ
»ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’
»ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ
»ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್!
»ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್
»ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ
»ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ
»ಹಣದುಬ್ಬರವೆಂದರೇನು ಗೊತ್ತಾ?
»ಹೊಳೆ ದಾಟಿದ ಮೇಲೆ...
»ಅಂತರಿಕ್ಷದಲ್ಲಿ ಮದುವೆ ಮಾಡಿಸುತ್ತದೆ ಈ ಸಂಸ್ಥೆ!
»ಜಿರಾಫೆಯನ್ನು ಬಂಧಿಸಿದ ಪೊಲೀಸರು
»ಆ ಸಿಗರೇಟು ಬಿಡಿ ಇ-ಸಿಗರೇಟು ಸೇದಿ
»ರೈತರ ಸರಣಿ ಆತ್ಮಹತ್ಯೆ : ದೊರಕದ ಸಹಾಯ
»ಪಠ್ಯಪುಸ್ತಕ ಬದಲಾವಣೆಗೆ ಸಚಿವರ ‘ಕೇಸರಿ ನಕಾಶೆ’
»’ಮೊಬೈಲ್’ ಗಾದೆಗಳು!!
»ಭಾರತೀಯ ಭಾಷಾ ಗಣಕಲೋಕದ ಪಿತಾಮಹ - ಶ್ರೀ ಕೆ.ಪಿ ರಾವ್
»ಒಂದು ಸಾವಿನ ಮನೆಯ ವೃತ್ತಾಂತ .....
»ಕನ್ನಡ ಕಲಿಸುವುದಕ್ಕೆ ಇಷ್ಟವಿರುವವರಿಗೆ ಅರ್ಪಣೆ
»ಅನಾಥ ಅಜ್ಜಿಗೆ ಸ್ಪೂರ್ಥಿಯ ಆಸರೆ
»ರಾಜಕೀಯ ಚದುರಂಗದಾಟದ ಕಾಯಿಗಳಾಗುತ್ತಿರುವ ರೈತರು
»ಅನ್ನ ತಿನ್ನುವವರು ನೀರುಳಿಸುವ ವಿಧಾನ
»ಗಂಗೆ ಅಂತರ್ಧಾನಳಾದಾಳೇ... !?
»ಚಿಕುನ್‌ಗುನ್ಯಾದಿಂದ ಕರಾವಳಿ ಕಲಿಯಬೇಕಾದ ಪಾಠ
»ಕಾಲ್ ಸೆಂಟರ್‌ಗಳಲ್ಲಿ ತೆರೆಯಲಿ ಏಡ್ಸ್ ಜಾಗೃತಿ ಅಂಗಡಿಗಳು
»ಕರಾವಳಿಯನ್ನು ಕಾಡುತ್ತಿದೆ ಕಮ್ಯುನಿಸ್ಟ್ ಕಳೆ
»ಗಣಿಗಾರಿಕೆ ರಾಷ್ಟ್ರೀಕರಣವಾಗಲಿ
»ಕಳೆ ಪಡೆಯುತ್ತಿರುವ ಹೊಳೆ ಮೀನುಗಾರಿಕೆ ....
» 'Housewives' out of fashion in metros!
»ನನ್ನಜ್ಜನಿಗೊಂದಾನೆಯಿತ್ತು !
»ಕೊಂಕಣಿ ರಾಜ್ಯದ ಕನಸು ಕಂಡಿದ್ದ ಕಾಮತರು
»ಪದ್ಮಪ್ರಿಯಾ ಪ್ರಕರಣದ ಸುತ್ತ...
»... ಆ ಒಂದು ಮುತ್ತಿನ ಕತೆ
»ಈ ಭೇಟಿ ನ್ಯಾಯವೇ?
»ಪಾಸ್‌ಪೋರ್ಟ್ ಅರ್ಜಿಗೆ ಕನ್ನಡ, ಇಂಗ್ಲಿಷ್‌ನ ವೆಬ್‌ಸೈಟ್
»some ಪದ ಕೇಡಿ
»ಈ-ಮೆಲ್ ರಚನೆಯ ಪರಿಚಯ
»ರೈತರಿಗೆ ಮಾತ್ರ ರಬ್ಬರ್ ಗುಂಡು: ಉಳಿದವರಿಗೆ?
»ಇ-ಮೇಲ್ ಅಕೌಂಟನ್ನು ತೆರೆಯುವುದು
&r