ತುಳು ಸಮ್ಮೇಳನಕ್ಕೆ ಬಾರಕೂರು ಉತ್ಸವ |
ಪ್ರಕಟಿಸಿದ ದಿನಾಂಕ : 2009-10-21
ಬ್ರಹ್ಮಾವರ: ತುಳುವ ಸಂಸ್ಕೃತಿ ಪ್ರತಿಬಿಂಬಿಸಲು, ಹಿಂದಿನ ಗತವೈಭವ ಮರಳಿ ತರುವ ನಿಟ್ಟಿನಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನದ ಸಮಯದಲ್ಲಿ ಬಾರ ಕೂರಿನಲ್ಲಿ ಉತ್ಸವ ನಡೆಸಲು ಚಿಂತಿಸಲಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಅವರು ಬ್ರಹ್ಮಾವರದಲ್ಲಿ ಸೋಮವಾರ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾದ ವತಿಯಿಂದ ಆಯೋಜಿಸಲಾಗಿದ್ದ ಗೂಡುದೀಪ ಮತ್ತು ಗಾಳಿಪಟ ಹಾರಿಸುವ ಸ್ಫರ್ಧೆಯ ನ್ನು ಉದ್ಘಾಟಿಸಿ ಮಾತನಾಡಿದರು.
ಬಾರಕೂರಿನ ಮಹತ್ವವನ್ನು ಇಂದಿನ ಜನಾಂಗಕ್ಕೆ ತಿಳಿ ಹೇಳುವ ಅವಶ್ಯಕತೆಇದ್ದು ಈ ನಿಟ್ಟಿನಲ್ಲಿ ಇಲ್ಲಿ ಉತ್ಸವವನ್ನು ನಡೆಸಲು ನಿಶ್ಚಯಿಸಲಾಗಿದೆ. ತುಳುವ ಸಂಸ್ಕೃತಿಯ ಭವ್ಯ ಪರಂಪರೆ, ಕಲೆಯ ಬಗ್ಗೆ ಅನೇಕ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು ಈ ಬಗ್ಗೆ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ದೇಶೀ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಪರಿಸ್ಥಿತಿ ಇದೆ. ದೃಶ್ಯ ಮಾಧ್ಯಮಗಳ ಕಾರಣ ಇಂದಿನ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣದ ಕಾರಣ ಆಟ ಆಡಲು ಸ್ಥಳದ ಕೊರತೆ. ಇದರಿಂದಲೂ ಮಕ್ಕಳಿಗೆ ಹಿಂದಿನ ಆಟಗಳ ಅರಿವು ಆಗುವ ಪರಿಸ್ಥಿತಿ ಇಲ್ಲ. ಆದ್ದರಿಂದ ಬೇರೆ ಬೇರೆ ಕ್ರೀಡಾ ಸ್ಪರ್ಧೆಗಳನ್ನು ಸಂಘ ಸಂಸ್ಥೆಗಳು ಆಯೋಜಿಸಿ ಹಿಂದಿನ ನಮ್ಮ ಜಾನಪದ ಆಟೋಟ ಉಳಿಸುವ ಪ್ರಯತ್ನ ಆಗಬೇಕು ಎಂದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಸದಸ್ಯ ಬಿ.ಎನ್. ಶಂಕ ರ ಪೂಜಾರಿ, ಹಂದಾಡಿ ಗ್ರಾ.ಪಂ. ಅಧ್ಯಕ್ಷ ತುಕರಾಮ ನಾಯರಿ, ಬಿಜೆಪಿ ಯುವಮೋ ರ್ಚಾದ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾ ಯ್ತಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ, ಗ್ರಾಮಾಂತರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ನಿಶಾನ್ ರೈ, ಬಜರಂಗ ದಳ ಬ್ರಹ್ಮಾವರ ಘಟಕದ ಸಂಚಾಲಕ ಪ್ರಸಾದ್ ಭಂಡಾರಿ, ಧನಂಜಯ ಅಮೀನ್, ಪ್ರಸನ್ನ, ಅನಂತ ಪದ್ಮನಾಭ, ಕರುಣಾಕರ ಶೆಟ್ಟಿ, ರವಿ ಶೆಟ್ಟಿ ಇದ್ದರು.
ಪ್ರಥಮ ಬಾರಿಗೆ ಬ್ರಹ್ಮಾವದಲ್ಲಿ ನಡೆದ ಈ ಸ್ಫರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸ್ಥಳೀಯರಲ್ಲದೇ ಉಡುಪಿಯಿಂದಲೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಗಾಳಿಪಟ ಸ್ಫರ್ಧೆಯಲ್ಲಿ 20ಕ್ಕೂ ಹೆಚ್ಚು ಸ್ಫರ್ಧಾಳುಗಳು ಭಾಗವಹಿಸಿ ಪ್ರೀತೇಶ್ ಪ್ರಥಮ, ಪ್ರಥ್ವೀ ದ್ವಿತೀಯ, ವೈಭವ್ ತೃತೀಯ ಬಹುಮಾನ ಗಳಿಸಿದರು. ಗೂಡುದೀಪ ಸ್ಫರ್ಧೆಯಲ್ಲಿ ಯಾದವ್ ನಾಯಕ್ ಮೊದಲ ಬಹುಮಾನ ಗಳಿಸಿಕೊಂಡರೆ ಸಂತೋಷ್ ದ್ವಿತೀಯ, ಪ್ರವೀಣ್ ಹಂದಾಡಿ ತೃತೀಯ ಬಹುಮಾನ ಗಳಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-10-21 00:00:00
|
|
|