ಮುಂಬಯಿ: ವಿಶ್ವ ತುಳು ಸಮ್ಮೇಳನದಲ್ಲಿ ಪಾಲ್ಗೊಳ್ಳಿ: ಡಾ| ಹೆಗ್ಗಡೆ ಕರೆ |
ಪ್ರಕಟಿಸಿದ ದಿನಾಂಕ : 2009-10-16
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ. ೧೫: ಡಿಸೆಂಬರ್ ನಲ್ಲಿ ನಡೆಯಲಿರುವ ತುಳು ಸಮ್ಮೇಳನ ಕೇವಲ ತುಳು ಭಾಷೆಯ ಬಗ್ಗೆ ಮಾತ್ರ ಅಲ್ಲ. ಅದು ತೌಳವ ಸಂಸ್ಕೃತಿಯನ್ನು ಸಮಗ್ರವಾಗಿ ಒಳಗೊಂಡಿರುತ್ತದೆ. ತುಳು ನಿನ್ನೆ, ಇಂದು ಮತ್ತು ನಾಳೆ ಎಂಬ ಆಶಯದೊಂದಿಗೆ ಈ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಮುಂಬಯಿಯ ಎಲ್ಲ ತುಳುವರು ಈ ಸಮ್ಮೇಳನ ದಲ್ಲಿ ಪಾಲ್ಗೊಳ್ಳಬೇಕೆಂದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇಂದಿಲ್ಲಿ ಹೇಳಿದರು.
ಅಂಧೇರಿ ಪೂರ್ವದ ದಿ ಸುಪ್ರಿಮೊ ಆಕ್ಟಿವಿಟಿ ಸೆಂಟರ್‌ನ ಮಹಾರಾಜ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ಜರಗಿದ ವಿಶ್ವ ತುಳು ಸಮ್ಮೇಳನದ ವಿಚಾರ ವಿನಿಮಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಳಿವ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮುಂಬಯಿಯ ತುಳುವರು ಮಾತೃಭಾಷೆಯನ್ನು ಇನ್ನೂ ಮರೆಯದೆ ಉಳಿಸಿಕೊಂಡಿರುವುದು ಅಭಿಮಾನದ ವಿಚಾರ. ಮಕ್ಕಳಿಗೂ ತುಳು ಕಲಿಸಿ ಭಾಷೆಯನ್ನು ಉಳಿಸಿದ್ದಾರೆಂದು ಹೆಗ್ಗಡೆಯವರು ಹೇಳಿದರು.
ತುಳು ಸಮ್ಮೇಳನದ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷ ಧರ್ಮಪಾಲ ದೇವಾಡಿಗ ಅವರನ್ನು ಪುಷ್ಪಗುಚ್ಛವಿತ್ತು ಗೌರವಿಸಿದರು. ಡಾ| ಮೋಹನ್ ಆಳ್ವ, ಡಾ| ಕೆ. ಪಿ. ಪುತ್ತೂರಾಯ ಮತ್ತು ಶಾಸಕ ಗೋಪಾಲ ಶೆಟ್ಟಿ ಅವರು ವೇದಿಕೆಯಲ್ಲಿದ್ದರು. ಜಯಕೃಷ್ಣ ಶೆಟ್ಟಿ ಮತ್ತು ಐಕಳ ಹರೀಶ್ ಶೆಟ್ಟಿ ಅವರು ಅವರನ್ನು ಗೌರವಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆ ಅವರಿಗೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಭರದ ಸ್ವಾಗತ

ಇಂದಿಲ್ಲಿ (೧೫.೧೦.೨೦೦೯) ಗುರುವಾರ ಮಹಾನಗರಿಯಲ್ಲಿ ವಿಶ್ವ ತುಳು ಸಮ್ಮೇಳನೊ ೨೦೦೯ ಪೂರ್ವಭಾವಿ ತಯಾರಿ ಸಲುವಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳ ಲು ಬೃಹನ್ಮುಂಬಯಿಗೆ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆ ಇವರನ್ನು ವಿಶ್ವ ತುಳು ಸಮ್ಮೇಳನ-೨೦೦೯ರ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಇವರು ಪುಷ್ಫಗುಪ್ಛಗಳನ್ನಿತ್ತು ಗೌರವಪೂರ್ವಕವಾಗಿ ಬರಮಾಡಿ ಕೊಂಡರು.
ಮುಂಬಯಿಯ ಸಾಂತಾಕ್ರೂಜ್‌ನಲ್ಲಿನ ರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಡಾ| ಡಿ. ವಿರೇಂದ್ರ ಹೆಗ್ಗಡೆ ಇವರ ಜೊತೆ ತುಳು ಸಮ್ಮೇಳನ-೨೦೦೯ರ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಡಾ| ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಿಣ್ಣರಬಿಂಬ ಸಂಸ್ಥೆಯ ರೂವಾರಿ ಪ್ರಕಾಶ್ ಬಿ. ಭಂಡಾರಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಯು. ಮಾಡ, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ಬಾಲಕೃಷ್ಣ ಪಿ.ಭಂಡಾರಿ, ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ಜಿ.ಟಿ ಆಚಾರ್ಯ, ಪ್ರದೀಪ್ ರಾವ್, ಉದ್ಯಮಿ ರಾಮುಶೇಠ್ ಹೆಬ್ಬಳ್ಳಿ, ಧನಂಜಯ್ ಅಧಿಕಾರಿ ವಿಜಯ್ ಶೆಟ್ಟಿ ಸಹಾರ್, ಡಾ| ಪ್ರೊ| ಕೆ.ಪಿ ಪುತ್ತುರಾಯ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ / ವರದಿ : ರೋನ್ಸ್ ಬಂಟ್ವಾಳ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-10-16
|
|
|