ಅಮೆರಿಕಕ್ಕೆ ತೆರಳಿದ 'ಸಿಎಂ ದಂಡು' |
ಪ್ರಕಟಿಸಿದ ದಿನಾಂಕ : 2008-08-28
ಬೆಂಗಳೂರು, ಗುರುವಾರ, 28 ಆಗಸ್ಟ್ 2008 ಅಮೆರಿಕದ ಚಿಕಾಗೋದಲ್ಲಿ ಆ.29ರಿಂದ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕರ ತಂಡ ಗುರುವಾರ ಬೆಳಿಗ್ಗೆ ರಾಜಧಾನಿಯಿಂದ ಚಿಕಾಗೋಗೆ ತೆರಳಿದರು.
ರಾಜ್ಯದಲ್ಲಿ ಪ್ರವಾಹ ಮತ್ತು ಬರಗಾಲದ ಪರಿಸ್ಥಿತಿಯಿದ್ದರೂ ಕೂಡ ಮುಖ್ಯಮಂತ್ರಿಯ ಹಾಗೂ ಶಾಸಕರ ದಂಡು ಮೋಜು, ಮೇಜವಾನಿಗಾಗಿ ಅಮೆರಿಕಕ್ಕೆ ತೆರಳುತ್ತಿರುವುದಾಗಿ ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿದ್ದವು. ಅಲ್ಲದೇ ವಿದೇಶ ಪ್ರವಾಸಕ್ಕೆ ಸಂಬಂಧಿಸಿ ದಂತೆ ಸಾರ್ವಜನಿಕ ಹಿತಾಸಕ್ತಿಯ ದೂರನ್ನು ಕೂಡ ಹೈಕೋರ್ಟ್‌ನಲ್ಲಿ ದಾಖಲಿಸ ಲಾಗಿತ್ತು.
ಆದರೆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿಎಂ ಮತ್ತು ಶಾಸಕರು ಸ್ವಂತ ಖರ್ಚಿನಲ್ಲಿ ಹೋಗುತ್ತಿರುವುದಾಗಿ ಪ್ರತ್ಯುತ್ತರ ನೀಡಿದ ಕಾರಣ ವಿದೇಶ ಪ್ರಯಾಣಕ್ಕೆ ನ್ಯಾಯಾಲಯ ಅಸ್ತು ಎಂದಿತ್ತು.
ಇಂದು ಬೆಳಿಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಅವರನ್ನು ಪುತ್ರರಾದ ವಿಜಯೇಂದ್ರ,ರಾಘುವೇಂದ್ರ ಹಾಗೂ ಪುತ್ರಿಯರು ಶುಭ ಹಾರೈಸಿ ಬೀಳ್ಕೊಟ್ಟರು.
ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುವ ನಿಟ್ಟಿನಲ್ಲಿ ಕೈಗಾರಿಕೋದ್ಯಮಿಗಳಲ್ಲಿ ಮಾತುಕತೆ ನಡೆಸಿ, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯ ವೃದ್ದಿಸುವುದೇ ಅಮೆ ರಿಕ ಪ್ರವಾಸದ ಮೂಲ ಉದ್ದೇಶವಾಗಿದೆ ಎಂದು ಅಮೆರಿಕಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : webdunia ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-28
|
|
|