ಸುಳ್ಯ, ಅ.೧೩: ವಿಶ್ವ ತುಳು ಸಮ್ಮೇಳನದ ಅಂಗವಾಗಿ ವಲಯ ಮಟ್ಟದ ಜಾನಪದ ಕ್ರೀಡಾಕೂಟವು ಅರಂತೋಡು ನೆಹರು ಸ್ಮಾರಕ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
ವಿಶ್ವ ತುಳು ಸಮ್ಮೇಳನ ಸಂಚಾಲನ ಸಮಿತಿ ಸಂಪಾಜೆ ಮತ್ತು ಸುಳ್ಯ ವಲಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ಮತ್ತು ಮಡಿಕೇರಿ ಇವುಗಳ ಆಶ್ರಯದಲ್ಲಿ ನಡೆದ ಕ್ರೀಡಾಕೂಟವನ್ನು ವಲಯ ಸಂಚಾಲನಾ ಸಮಿತಿ ಸಂಚಾಲಕ ಪಿ.ಬಿ.ದಿವಾಕರ ರೈ ಉದ್ಘಾಟಿಸಿ, ನಮ್ಮ ಭಾಷೆ ಮತ್ತು ಸಂಸ್ಕೃತಿಂiನ್ನು ಮುಂದಿನ ಪೀಳಿಗೆಗೆ ದಾಟಿಸಲು ತುಳು ಸಮ್ಮೇಳನ ಸಹಕಾರಿ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ನಿರ್ದೇಶಕ ಎ.ಶ್ರೀಹರಿ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಸದಸ್ಯ ಸತೀಶ್ ನಾಯಕ್, ಜನಜಾಗ್ರತಿ ವೇದಿಕೆಯ ಕೋಶಾಧಿಕಾರಿ ಭವಾನಿ ಶಂಕರ್ ಅಡ್ತಲೆ, ಯೋಜನಾಧಿಕಾರಿ ಆನಂದ ಸುವರ್ಣ, ತಾಲೂಕು ಸಂಚಲನ ಸಮಿತಿಯ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಕಾರ್ಯದರ್ಶಿ ಪದ್ಮನಾಭ ರೈ, ಪ್ರಾಂಶುಪಾಲ ಕೆ.ಆರ್. ಗಂಗಾಧರ್, ಬೂಡು ರಾಧಾಕೃಷ್ಣ ರೈ, ದೊಡ್ಡಣ್ಣ ಬರೆಮೇಲು ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಂಪಾಜೆ ವಲಯ ಮೇಲ್ವಿಚಾರಕಿ ವಾರಿಜಾ ವಿ.ಶೆಟ್ಟಿ, ಸುಳ್ಯ ವಲಯ ಮೇಲ್ವಿಚಾರಕ ಹರೀಶ್ ನೇತೃತ್ವ ವಹಿಸಿದ್ದರು.