ದೋಹಾ: ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲ |
ಪ್ರಕಟಿಸಿದ ದಿನಾಂಕ : 2008-08-27
ಎರೆಡು ರಿಯಾಲ್ ಗೆ ಒಂದು ಚೀಲ : ಪರಿಸರ ಉಳಿಸಲು ಸಾರ್ವಜನಿಕರ ಪ್ರೋತ್ಸಾಹ
ದೋಹಾ, ಆಗಸ್ಟ್ 27: ನಗರದಲ್ಲಿನ ಹಲವು ಸುಪರ್ ಮಾರ್ಕೆಟ್ ಹಾಗೂ ಹೈಪರ್ ಮಾರ್ಕೆಟ್ ಗಳು ವಸ್ತುಗಳನ್ನು ತುಂಬಿಕೊಡಲು ವಿಶೇಶ ಪರಿಸರಸ್ನೇಹಿ ಪ್ಲಾಸ್ಟಿಕ್ ಚೀಲಗಳನ್ನು ವಿತರಿಸಲು ಪ್ರಾರಂಭಿಸಿವೆ. ವಿಶ್ವದ ಎಲ್ಲೆಡೆಯಂತೆ ಕತರಿನಲ್ಲೂ ಪಿಡುಗಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಡಿಮೆಗೊಳಿಸಲು ಪ್ರಮುಖ ಹೈಪರ್ ಮಾಕೆಟ್ ಗಳು ಉತ್ಕೃಷ್ಟ ಮಟ್ಟದ ಬಯೋಡೀಗ್ರೇಡೇಬಲ್ ಪ್ಲಾಸ್ಟಿಕ್ ಉಪಯೋಗಿಸಿದ ಚೀಲಗಳನ್ನು ಬಳಸತೊಡಗಿವೆ.
ನಗರದ ಕನಿಷ್ಟ ಮೂರು ಹೈಪರ್ ಮಾರ್ಕೆಟ್ಟುಗಳು ಈಗಾಗಲೇ ಈ ಚೀಲಗಳನ್ನು ವಿತರಿಸುತ್ತಿದ್ದು ಇನ್ನುಳಿದವರು ಶೀಘ್ರದಲ್ಲಿಯೇ ಅನುಸರಿಸಲಿದ್ದಾರೆ.
ಈ ಚೀಲಗಳನ್ನು ಜನಪ್ರಿಯಗೊಳಿಸಲು ಹಲವು ಪ್ರದರ್ಶನಗಳನ್ನೂ ನಗರದಲ್ಲಿ ಏರ್ಪಡಿಸಲಾಗಿದೆ. ಉತ್ತಮ ಗುಣಮಟ್ಟದ ಚೀಲವೊಂದನ್ನು ಕೇವಲ ಎರೆಡು ಕತರಿ ರಿಯಾಲ್ ನಲ್ಲಿ ವಿತರಿಸುತ್ತಿರುವ ಕ್ಯಾರೆಫೋರ್ ಹೈಪರ್ ಮಾರ್ಕೆಟ್ ಇತರರಿಗೆ ಮಾದರಿಯಾಗಿದೆ.
ವರದಿಯ ವಿವರಗಳು |
 |
ಕೃಪೆ : ದ ಪೆನಿನ್ಸುಲಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-27
|
|
| N.Prasad , K.R.Nagar | 2008-09-11 | | Its good |
|