ಆ. 29ರಿ೦ದ 31ರವರೆಗೆ ಉಡುಪಿಯಲ್ಲಿ ‘ಯಕ್ಷವರ್ಣ’ ಪ್ರದರ್ಶನ |
ಪ್ರಕಟಿಸಿದ ದಿನಾಂಕ : 2008-08-27
ಉಡುಪಿ:ಆ,26. ಇಲ್ಲಿನ ಯಕ್ಷಗಾನ ಕಲಾಕೇಂದ್ರ ಆಶ್ರಯದಲ್ಲಿ ಇಕಾರ್ಡ್ ನೇತೃತ್ವದಲ್ಲಿ ಉಡುಪಿ ಹಾಗೂ ದ. ಕ. ಜಿಲ್ಲೆಯ ಯುವ ಕಲಾವಿದರಿಂದ ಸ್ಥಳೀಯ ಸಿಟಿಬಸ್ ನಿಲ್ದಾಣ ಬಳಿಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಯಕ್ಷಗಾನ ಕುರಿತ ಯಕ್ಷ ವರ್ಣ ಚಿತ್ರಕಲೆ ಪ್ರದರ್ಶನ ಈ ತಿಂಗಳ 29ರಿಂದ 31ರ ವರೆಗೆ ನಡೆಯಲಿದೆ ಎಂದು ಕಲಾವಿದ ಹಾಗೂ ಇಕಾರ್ಡ್ ಅಧ್ಯಕ್ಷ ವಸಂತ ರಾವ್ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಕ್ಷಗಾನದ ವಿವಿಧ ಆಯಾಮಗಳನ್ನು ಚಿತ್ರಕಲೆಯಲ್ಲಿ ಬಿಂಬಿಸಲಾಗುವುದು. ಪ್ರದರ್ಶನದೊಂದಿಗೆ ಮಾರಾಟವೂ ಇದ್ದು ಅದರಿಂದ ಲಭಿಸುವ ಹಣವನ್ನು ಯಕ್ಷ ನಿಧಿಗೆ ನೀಡಲಾಗುವುದು ಎಂದರು.

29 ರ ಬೆಳಿಗ್ಗೆ 10.30ಕ್ಕೆ ಶಾಸಕ ರಘುಪತಿ ಭಟ್ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಉಡುಪಿ ಚಿತ್ರಕಲಾ ಮಂದಿರ ನಿರ್ದೇಶಕ ಡಾ. ಯು. ಸಿ. ನಿರಂಜನ ಅಧ್ಯಕ್ಷತೆ ವಹಿಸುವರು. ಉದ್ಯಮಿ ಮೀನಾಕ್ಷನಿ ಅಡ್ಯಂತಾಯ ಹಾಗೂ ಎಸ್. ಎಸ್. ಶೆಟ್ಟಿ ಅಭ್ಯಾಗತರಾಗಿ ಆಗಮಿಸುವರು. ಪ್ರದರ್ಶನ 31ರ ವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದೆ.

ಕಲಾವಿದರಾದ ವಸಂತ ರಾವ್, ಬಸವರಾಜ ಕುತ್ನಿ, ಪ್ರವೀಣಕುಮಾರ್, ಪ್ರಸಾದ್ ರಾವ್, ಗಣೇಶ ಕೆ., ಸುಬ್ರಹ್ಮಣ್ಯ ಆರ್. ಕೆ., ಪೆರ್ಮುದೆ ಮೋಹನ ಕುಮಾರ್, ರಾಜೇಂದ್ರ ಕೇದಿಗೆ, ದಿನೇಶ ಹೊಳ್ಳ, ಪಿ. ಎನ್. ಆಚಾರ್ಯ, ಶ್ರೀನಾಥ ಮಣಿಪಾಲ, ಜಯವಂತ, ವೆಂಕಟರಮಣ ಕಾಮತ್, ಸುಲೋಚನಾ ವೇಣುಗೋಪಾಲ್, ಜಿ. ಕಂದನ್, ಜೀವನ್ ಎ. ಎಸ್., ಮನೋಜ್ ಕಿಣಿ, ಪುಷ್ಪರಾಜ್, ಶೈಲೇಶ್ ಕೋಟ್ಯಾನ್, ಅಶೋಕ ಶೇಟ್ ಭಾಗವಹಿಸುವರು ಎಂದವರು ವಿವರವಿತ್ತರು.

ಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2008-08-27
|
|
|