ಕಂದಾಯ ಕಾರ್ಯದರ್ಶಿ ಆದೇಶಕ್ಕೂ ಸಿಗದ ಮನ್ನಣೆ ಜಿಲ್ಲಾಡಳಿತ ವರದಿ ಕಡೆಗಣಿಸಿ ದೇಗುಲ ಹಸ್ತಾಂತರಿಸಿದ ಸರ್ಕಾರ! |
ಪ್ರಕಟಿಸಿದ ದಿನಾಂಕ : 2008-08-26
(ಉತ್ತರ ಕನ್ನಡ ಜಿಲ್ಲಾಧಿಕಾರಿ ಮುನೀಷ ಮೌದ್ಗಿಲ್ ಅವರು ಧಾರ್ಮಿಕ ಇಲಾಖೆಯ ಆಯುಕ್ತರಿಗೆ ಫೆ.೨೦ರಂದು ಸರ್ಕಾರಕ್ಕೆ ನೀಡಿರುವ ವರದಿಯ ಪ್ರತಿ.)
ಗೋಕರ್ಣ ದೇವಸ್ಥಾನವನ್ನು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಲು ಜಿಲ್ಲಾಡಳಿತ ನಿರಾಕರಿಸಿದ್ದ ಅಂಶ ಇದೀಗ ಬಹಿರಂಗಗೊಂಡಿದೆ. ಇದರಿಂದಾಗಿ ಹಸ್ತಾಂತರ ವಿವಾದ ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದು, ಪರ-ವಿರೋಧಿ ಹೇಳಿಕೆಗಳು ಹೆಚ್ಚಾಗಿವೆ. ಇದರಿಂದಾಗಿ ಗೊಕರ್ಣದಲ್ಲಿ ಧಾರ್ಮಿಕ ವಾತಾವರಣ ಕಲುಷಿತಗೊಂಡಿದೆ.
ಕಾರವಾರ: ದೇಗುಲದ ಆಡಳಿತ ಮತ್ತು ವಹಿವಾಟನ್ನು ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಿಗೆ ವಹಿಸಿಕೊಡಲು ಗೋಕರ್ಣದ ಉಪಾಧಿ ಮಂಡಳದ ಕೆಲ ಸದಸ್ಯರು ಸ್ಲಲಿಸ್ದಿದ ಮನವಿಯನ್ನು ಉಲೇಖಿಸಿ, ‘ಎಲ್ಲ ಅಂಶಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯ ಪಡೆದು ವರದಿ ಸಲ್ಲಿಸಬೇಕು’ ಎಂದು ಧಾರ್ಮಿಕ ದತ್ತಿನಿಧಿ ಇಲಾಖೆಯ ಆಯುಕ್ತರು ಇದೇ ವರ್ಷ ಫೆಬ್ರವರಿ ೨೦ ರಂದು ಜ್ಲಿಲಾಡಳಿತಕ್ಕೆ ಪತ್ರ ಬರೆದ್ದಿದರು.
ಆದರೆ, ಇಲಾಖೆಯ ಮನವಿಯನ್ನು ತಿರಸ್ಕರಿಸಿದ್ದ ಆಗಿನ ಜ್ಲಿಲಾಧಿಕಾರಿ ಮುನೀಷ ಮೌದ್ಗಿಲ್, ‘ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವು ಸಾರ್ವಜನಿಕ ದೇವಸ್ಥಾನವಾಗಿದ್ದರಿಂದ ಈ ದೇಗುಲದ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಡುವುದು ಸೂಕ್ತ ಅಲ್ಲ’ ಎಂದು ಏಪ್ರಿಲ್ ೧, ೨೦೦೮ರಂದು ಸರ್ಕಾರಕ್ಕೆ ವರದಿ ಸ್ಲಲಿಸ್ದಿದರು.
ಆದರೆ, ಈ ವರದಿಯನ್ನು ಕಡೆಗಣಿಸಿರುವ ಬಿಜೆಪಿ ಸರ್ಕಾರ ಆಗಸ್ಟ್ ೧೨ರಂದು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಆಗ ಜಿಲ್ಲಾಧಿಕಾರಿಗಳಾಗ್ದಿದ ಮುನೀಷ ಮೌದ್ಗಿಲ್, ಮಹಾಬಲೇಶ್ವರ ಹಾಗೂ ಅದರ ಪರಿವಾರದ ೬೦ ದೇವಸ್ಥಾನಗಳು ಮುಂಬೈ ಪಬ್ಲಿಕ್ ಟ್ರಸ್ಟ್ ಕಾಯ್ದೆಯ ಪ್ರಕಾರ ನೋಂದಣಿ ಆಗಿರುವ ದೇವಸ್ಥಾನಗಳಾಗ್ದಿದು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಅಧಿನಿಯಮ ೧೯೯೭ರಂತೆ ಸರ್ಕಾರ ಹೊರಡಿಸಿದ ಅಧಿಸೂಚಿತ ಪಟ್ಟಿಯ್ಲಲಿ ಇರುತ್ತದೆ ಎಂದು ವರದಿಯಲ್ಲಿ ನಮೂದಿಸ್ದಿದರು.
ಇದಲ್ಲದೇ, ಕರ್ನಾಟಕ ಹಿಂದೂಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ೧೯೯೭ರಂತೆ ಸರ್ಕಾರದ ಅಧಿಸೂಚಿತ ಪಟ್ಟಿಯಲ್ಲಿ ಗೋಕರ್ಣ ಇದೆ. ಈ ನಿಯಮ ಹಾಗೂ ೨೦೦೨ರಲ್ಲಿ ರಚಿತವಾದ ನಿಯಮವನ್ನು ಪರಿಶೀಲಿಸಿದಾಗ ಸರ್ಕಾರದ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳನ್ನು ಯಾವುದೇ ಕಾರಣಕ್ಕೂ ಸಹ ಖಾಸಗಿ ಸಂಸ್ಥೆಗಳಿಗೆ ಹಾಗೂ ಮಠಗಳಿಗೆ ವಹಿಸಲು ಸಾಧ್ಯವಿಲ್ಲ ಎಂದೂ ವರದಿಯಲ್ಲಿ ನಮೂದಿಸಿದ್ದರು.
ಇದಿಷ್ಟೇ ಅಲದೇ, ಶಿವಮೊಗ್ಗ ಜ್ಲಿಲೆಯ ಹೊಸನಗರದ್ಲಲಿರುವ ರಾಮಚಂದ್ರಾಪುರ ಮಠ ಒಂದು ಸಮಾಜಕ್ಕೆ ಸೇರಿದ ಖಾಸಗಿ ಮಠವಾಗಿದ್ದರಿಂದ ಗೋಕರ್ಣದ ಮಹಾಬಲೇಶ್ವರ ಮಠ ಹಾಗೂ ಪರಿವಾರದ ದೇವಸ್ಥಾನವನ್ನು ನೀಡಲು ಸಾಧ್ಯವಿಲ್ಲ. ಇದು ಸೂಕ್ತವಾದ್ದದೂ ಅಲ ಎಂದು ತಿಳಿಸಿದ್ದರು.
ಈ ಬೆಳವಣಿಗೆ ನಂತರ ರಾಮಚಂದ್ರಾಪುರ ಮಠ ೨೦೦೮ರ ಏಪ್ರಿಲ್ ೧೭ರಂದು ಸರ್ಕಾರಕ್ಕೆ ಪತ್ರ ಬರೆದು, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ತಮಗೆ ನೀಡಿದರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿತ್ತು.
ಈ ಒಂದೇ ಒಂದು ಪತ್ರದ ಆಧಾರದ ಮೇಲೆ ಯಾವುದೇ ದಾಖಲೆ ಪರಿಶೀಲಿಸದೇ ಹಾಗೂ ಜಿಲ್ಲಾಧಿಕಾರಿಗಳ ಪತ್ರಕ್ಕೂ ಮನ್ನಣೆ ನೀಡದೇ ಮಠಕ್ಕೆ ಹಸ್ತಾಂತರದ ಆದೇಶ ನೀಡ್ದಿದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಕೈಬಿಟ್ಟಿದ್ದು ಹೇಗೆ?:
ಜಿಲ್ಲಾಡಳಿತವೇ ಈ ದೇವಸ್ಥಾನ ಅಧಿಸೂಚಿತ ಪಟ್ಟಿಯಲ್ಲಿ ಇದರಿಂದ ಮಠಕ್ಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ, ಧಾರ್ಮಿಕ ದತ್ತಿನಿಧಿ ಇಲಾಖೆಯ ಆಯುಕ್ತರು, ಮಹಾಬಲೇಶ್ವರ ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಯಿಂದ ಈ ದೇವಸ್ಥಾನವನ್ನು ಕೈಬಿಟ್ಟಿದ್ದಾರೆ. ಅದು ಹೇಗೆ? ಒಂದು ದೇವಸ್ಥಾನವನ್ನು ಯಾವಾಗಬೇಕಾದರೂ ಸಹ ಅಧಿಸೂಚಿತ ಪಟ್ಟಿಯಿಂದ ಕೈಬಿಡಬಹುದೇ? ಎಂಬ ಪ್ರಶ್ನೆ ಎದುರಾಗಿದೆ.
ಯಾವುದೇ ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಯಿಂದ ಬಿಡಬಾರದು ಎಂದು ಮೇ ೧೪, ೨೦೦೮ರಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಟಿ.ಎನ್.ಸೀತಾರಾಂ, ದತ್ತಿನಿಧಿ ಆಯುಕ್ತ ಶ್ಯಾಂಭಟ್‌ರಿಗೆ ಸೂಚನೆ ನೀಡಿದ್ದರಲ್ಲದೆ, ಮುಂದಿನ ದಿನಗಳಲ್ಲಿ ಯಾವುದೇ ದೇವಸ್ಥಾನಗಳನ್ನೂ ಸಹ ಅಧಿಸೂಚಿತ ಪಟ್ಟಿಯಿಂದ ಕೈಬಿಡುವ ಕುರಿತಾದ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳಿಸಬಾರದು ಎಂದು ತಾಕೀತು ಮಾಡಿದ್ದರು. ಆದರೆ, ಇದನ್ನೂ ಸಹ ಸರ್ಕಾರ ಉಲಂಘಿಸಿ ಗೋಕರ್ಣವನ್ನು ಅಧಿಸೂಚಿತ ಪಟ್ಟಿಯಿಂದ ಕೈಬಿಡುವ ಮೂಲಕ ರಾಮಚಂದ್ರಾಪುರ ಮಠಕ್ಕೆ ಧಾರೆ ಎರೆದಿದೆ.
ಈ ಮಧ್ಯೆ, ೨೦೦೩ರ ಮಾರ್ಚ್ ೩೧ರಂದು ಉಪಾದಿ ಮಂಡಳದ ಸದಸ್ಯರು ದೇವಸ್ಥಾನವನ್ನು ವಹಿಸಿಕೊಳ್ಳುವಂತೆ ಮಠಕ್ಕೆ ಬರೆದ ಪತ್ರದಲ್ಲಿ, ‘ಎಲ್ಲ ಸದಸ್ಯರು ೨೦೦೩ರ ಮಾರ್ಚ್ ೩೦ರಂದು ಸಭೆ ಸೇರಿ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಪತ್ರದಲ್ಲಿ ಉಲೇಖಿಸಲಾಗಿದೆ. ಆದರೆ, ಈ ಕುರಿತು ಮಾಡಿರುವ ಠರಾವು ಪ್ರತಿಯನ್ನು ಎಲಿಯೂ ಲಗತ್ತಿಸಿಲ್ಲದಿರುವುದು ಸಂಶಯಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಗೋಪಾಲ ಅಡಿ, ‘ಯಾವುದೇ ಸಭೆಯನ್ನು ಉಪಾದಿ ಮಂಡಳದ ಸದಸ್ಯರು ಸೇರಿಲ್ಲ ಎಂದರಲ್ಲದೇ, ಸಾಕಷ್ಟು ನಕಲಿ ಸಹಿಗಳನ್ನು ಮಾಡಿದ್ದಾರೆ ಎಂದು ಆರೋಪಿಸಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ವರದಿಯ ವಿವರಗಳು |
 |
ಕೃಪೆ : ಲಕ್ಷ್ಮಣ ಟಿ. ನಾಯ್ಕ | ಪ್ರಜಾವಾಣಿ ವಾರ್ತೆ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-26
|
|
|