ಪೇಜಾವಾರ ಮಠದಲ್ಲಿ ಸಂಭ್ರಮೋಲ್ಲಾಸದ ಶ್ರೀಕೃಷ್ಣಾಸ್ಟಮಿ ಮತ್ತು ವಿಟ್ಲಪಿಂಡಿ ಆಚರಣೆ |
ಪ್ರಕಟಿಸಿದ ದಿನಾಂಕ : 2008-08-26
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಪೇಜಾವರ ಮಠ, ಮುಂಬಯಿ ಹಾಗೂ ಧರ್ಮ ಸಂಸ್ಕೃತಿ ಪ್ರತಿಷ್ಠಾನ, ಮುಂಬಯಿ ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ (ವಿಟ್ಲಪಿಂಡಿ) ಇಂದು ರವಿವಾರ ಸಂಜೆ ಸಾಂತಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಅದ್ದೂರಿಂಂದ ಜರುಗಿಸಲಾಯಿತು.
ಪೇಜಾವರ ಮಠ, ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರವರಿಂದ ಆಶೀರ್ವಚನ ಬಾಳಗಾರು ಮಠ ಶ್ರೀ ಶ್ರೀ ರಘುಭೂಷಣ ತೀರ್ಥ ಶ್ರೀಪಾದರವರ ದಿವ್ಯ ಉಪಸ್ಥಿತಿಂiಲ್ಲಿ ವಿಟ್ಲಪಿಂಡಿ (ಮೊಸರು ಕುಡಿಕೆ)ಯ ಕಾರ್ಯಕ್ರಮವು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಜಾನಪದ ಕಾರ್ಯಕ್ರಮಗಳು ವಿಜೃಂಭ್ಹಣೆಯಿಂದ ಜರಗಲಾಯಿತು.
ಶ್ರೀ ವಿಶ್ವೇಶತೀರ್ಥ ಶ್ರೀಪಾದರವರಿಂದ ಭಾಗವತ ಪ್ರವಚನ, ಕೀರ್ತನ ಕೇಸರಿ ಸಂತ ಭದ್ರಗಿರಿ ಶ್ರೀ ಅಚ್ಯುತದಾಸರಿಂದ ಶ್ರೀಕೃಷ್ಣಲೀಲೋತ್ಸವ ಹರಿಕಥೆ, ಕಲಾಸೌರಭ ಮುಂಬಯಿ, ಮದ್ವೇಶ ಭಜನಾ ಮಂಡಳಿ ಮತ್ತು ರಾಘವೇಂದ್ರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ. ಖ್ಯಾತ ಬಾಲ ಕಲಾವಿದೆಯರಿಂದ ಪೂಜಾ ನೃತ್ಯ, ಭರತನಾಟ್ಯ, ಮುದ್ದು ಕೃಷ್ಣ ವೇಷ ಸ್ಪರ್ದೆ ಆಯೋಜಿಸಲಾಗಿತ್ತು.
ಶೇಖರ ಶೆಟ್ಟಿ, ಫಣಿಯೂರು ಮತ್ತು ಮುದರಂಗಡಿ ಸಂತೋಷ್ ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳ ಸಂಚಾಲಕತ್ವದಲ್ಲಿ ವಿವಿಧ ವೇಷಭೂಷಣ, ವೇದಘೋಷಣ, ವಾದ್ಯಗೋಷ್ಠಿ, ಪೂರ್ಣ ಕುಂಭ, ಭಗವಾಧ್ವಜ ಸಹಿತ ಭವ್ಯ ಮೆರವಣೆಗೆದೊಂದಿಗೆ ಶ್ರೀಗಳವರ ಸಾನ್ನಿಧ್ಯದಲ್ಲಿ ಶ್ರೀ ಕೃಷ್ಣ ದೇವರಿಗೆ ರಥೋತ್ಸವ ಸಂಭ್ರಮ ನಡೆಸಲಾಯಿತು. ಬಾಳಗಾರು ಮಠ ಶ್ರೀ ಶ್ರೀ ರಘುಭೂಷಣ ತೀರ್ಥ ಶ್ರೀಪಾದರವರ ದಿವ್ಯ ಉಪಸ್ಥಿತಿಂiಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಜಾನಪದ ಕಾರ್ಯಕ್ರಮಗಳೊಂದಿಗೆ ವಿಟ್ಲಪಿಂಡಿ (ಮೊಸರು ಕುಡಿಕೆ)ಯ ಕಾರ್ಯಕ್ರಮವು ವಿಜೃಂಭ್ಹಣೆಯಿಂದ ಜರುಗಿದವು.
ನಡೆಸಲಾದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಗರ್ ಗ್ರೂಪ್ ಆಫ್ ಡೆವಲಪರ್ಸ್ ದಿವಾಕರ್ ಡಿ ಶೆಟ್ಟಿ, ಮುದ್ರಾಡಿ ಉಪಸ್ಥಿತರಿದ್ದು, ಮುದ್ದು ಕೃಷ್ಣ ವೇಷ ಸ್ಪರ್ದೆಯ ವಿಜೇತರಿಗೆ ಶ್ರೀ ವಿಶ್ವೇಶತೀರ್ಥರು ಬಹುಮಾನಗಳನ್ನೀಡಿ ಆಶೀರ್ವಾಚಿಸಿ ದರು. ಮಠದ ಆಡಳಿತಾಧಿಕಾರಿ ರಾಮದಾಸ್ ಉಪಾಧ್ಯಾಯ ಸ್ವಾಗತ ಭಾಷಣಗೈದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.ಕಳತ್ತೂರು ವಿಶ್ವನಾಥ ಶೆಟ್ಟಿ ಧನ್ಯವಾದ ಸಮರ್ಪಣೆಗೈದರು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-26
|
|
|