ಕುವೈಟ್: ಆರ್ಥಿಕವಾಗಿ ಹಿಂದುಳಿದ ಅನಿವಾಸಿ ಮಕ್ಕಳಿಗೆ ವಿದ್ಯಾರ್ಥಿವೇತನ |
ಪ್ರಕಟಿಸಿದ ದಿನಾಂಕ : 2008-08-26
ಮನೆಯಲ್ಲಿ ಮೂವರಿಗಿಂತ ಹೆಚ್ಚು ಸದಸ್ಯರಿರುವುದು ಹಾಗೂ ಕಡಿಮೆ ಆದಾಯವಿರುವುದು ಅಗತ್ಯ
ಕುವೈಟ್, ಆಗಸ್ಟ್ 26: ಆರ್ಥಿಕವಾಗಿ ಹಿಂದಿರುಳಿದಿರುವ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕುವೈಟ್ ಶಿಕ್ಷಣ ಸಚಿವಾಲಯದ ವಾರ್ಷಿಕ ದತ್ತಕ ನಿಧಿ (The Ministry of Education's (MoE) annual charity fund) ವಿದ್ಯಾರ್ಥಿವೇತನಗಳನ್ನು ನೀಡಲಿದೆ. ಈ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಗಳನ್ನು ಸೆಪ್ಟೆಂಬರ್ 7 ರಿಂದ ರಮಧಾನ್ ಅಂತ್ಯದವರೆಗೆ ಸಲ್ಲಿಸಬಹುದಾಗಿದೆ.
ಈ ಅರ್ಜಿಗಳು ಸಲ್ಮಿಯಾದಲ್ಲಿರುವ ಖಾಸಗಿ ಶಿಕ್ಷಣ ವಿಭಾಗದ ಕಟ್ಟಡದಲ್ಲಿ ಲಭ್ಯವಾಗಲಿದೆ. ಈ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಯ ಮನೆಯಲ್ಲಿ ಮೂವರಿಗಿಂತ ಹೆಚ್ಚು ಸದಸ್ಯರಿರುವುದು ಹಾಗೂ ಕುಟುಂಬದ ಆದಾಯ ಕನಿಷ್ಟ ಮಟ್ಟಕ್ಕಿರುವುದು ಅವಶ್ಯವಾಗಿದೆ. ಈ ಅಭಿಯಾನದಲ್ಲಿ ಶಿಕ್ಷಣ ಸಚಿವಾಲಯ ಜಕಾತ್ ಹೌಸ್ ಮತ್ತು ಆಂತರಿಕ ಸಚಿವಾಲಯಗಳ ಸಹಯೋಗದೊಂದಿಗೆ ಐದು ಮಿಲಿಯನ್ ಕುವೈಟಿ ದಿನಾರ್ ಗಳನ್ನು ಪ್ರಾಯೋಜಿಸಿದೆ.
ಈ ಸೌಲಭ್ಯವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳನ್ನು ಆರಿಸಲು ಮೂರು ಸರ್ಕಾರಿ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವರು ಪ್ರತಿ ಅರ್ಜಿಯನ್ನು ಪರಿಶೀಲಿಸಿ ಅರ್ಹರಿಗೆ ಮಾತ್ರ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಲಿದ್ದಾರೆ.
ಕುವೈಟಿನಲ್ಲಿ ಖಾಸಗಿ ಶಿಕ್ಷಣ ವಿಭಾಗದ ಉಪಕಾರ್ಯದರ್ಶಿಯಾಗಿರುವ ಫಹದ್ ಅಲ್ ಘಾಯಿಸ್ ಈ ಸಮಿತಿಯ ಮುಖ್ಯಸ್ಥರಾಗಿದ್ದು ವಿದ್ಯಾರ್ಥಿಯ ಪಾಲಕರ ಆರ್ಥಿಕ, ಸಾಮಾಜಿಕ ಮತ್ತು ಕುಟುಂಬದ ಒಡೆಯನ ಬ್ಯಾಂಕ್ ಖಾತೆ ಮತ್ತು ಉದ್ಯೋಗದ ವಿವರಗಳನ್ನು ಕೂಲಂಕುಶವಾಗಿ ಪರಿಶೀಲಿಸಿಲಿವೆ. ಪರಿಶೀಲನೆಯ ಬಳಿಕ ಅರ್ಹರೆಂದು ಕಂಡುಬಂದ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನ ಲಭ್ಯವಾಗಲಿದೆ.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-26
|
|
|