ಗುರುವಾರ, 20-11-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!

ಅಂದು ಕ್ರಾಂತಿಯ ಹೋರಾಟದ ಪಂಜುಗಳು ಒಂದೆಡೆಯಿಂದ ಆಂಗ್ಲರನ್ನು ಸುಡುತ್ತಿದ್ದರೆ, ಅಹಿಂಸೆಯ ಹೋರಾಟದ ಹಣತೆಗಳು ದೇಶದ ಜನಕ್ಕೆ ಏಳಿಗೆಯ ಹಾದಿಯ ಭರವಸೆಯ ಬೆಳಕಿನ ದಾರಿದೀವಿಗೆಯಂತೆ ಕಾಣತೊಡಗಿದ್ದವು. ನಾನಾ ಭಾಷೆಗಳ, ನಾನಾ ಆಡಳಿತಕ್ಕೆ ಸೇರಿದ, ನಾನಾ ಸಂಸ್ಥಾನಗಳಿಗೆ ಸೇರಿದ ೫೬೫ ಪ್ರದೇಶಗಳಿಗೆಲ್ಲ ಒಟ್ಟಿಗೆ 1947ರ ಆಗಸ್ಟ್ 15ರಂದು ಸ್ವತಂತ್ರ ಬಂತು.

ಆಗ ಬ್ರಿಟೀಷರು ಈ ಪ್ರದೇಶಗಳಿಗೆ ಭಾರತದಲ್ಲಿ ವಿಲೀನವಾಗುವ ಆಯ್ಕೆಯನ್ನು ನೀಡಿದ್ದರು. ಒಂದು ದೇಶವನ್ನಾಗಿ ಭಾರತವನ್ನು ಕಟ್ಟಲು ಪ್ರತಿ ಪ್ರಾಂತ್ಯಕ್ಕೆ ನೀಡಬೇಕಾದ ಒಳ ಸ್ವಾತಂತ್ರ, ಆಯಾ ಭಾಷೆ, ಸಂಸ್ಕೃತಿಗಳನ್ನು ಕಾಪಾಡಿಕೊಳ್ಳುವುದನ್ನು ಸಂವಿಧಾನದ ಆಶಯವನ್ನಾಗಿಸುವ ಭರವಸೆಯೊಂದಿಗೆ ಭಾರತ ದೇಶ ಒಗ್ಗೂಡಿ 'ಇಂಡಿಯನ್ ಯೂನಿಯನ್' ಉದಯವಾಯಿತು. ಇದೀಗ 62ನೆಯ ಸ್ವತಂತ್ರ ದಿನಾಚರಣೆ ಮುಗಿದಿದೆ.

ಸ್ವತಂತ್ರ ಮತ್ತು ಹಿಂದಿ!

ನಮಗೆ ಪರಕೀಯರ ಆಳ್ವಿಕೆಯಿಂದ ಬಿಡುಗಡೆ ಸಿಕ್ಕಿದೆ. ಇನ್ನು ನಮ್ಮನ್ನು ನಾವೇ ಆಳಿಕೊಳ್ಳುತ್ತೇವೆ, ನಮ್ಮ ಏಳಿಗೆಯ ದಿನಗಳು ಹತ್ತಿರವಾದವು ಎಂದು ಕನ್ನಡಿಗರು ಎಲ್ಲ ಭಾರತೀಯರಂತೆಯೇ ಭರವಸೆಯ ಅಲೆಯಲ್ಲಿ ತೇಲತೊಡಗಿದರು. ನಮ್ಮ ಮನೆ ಮಕ್ಕಳಿಗೆ ಇನ್ನು ಮುಂದೆ ಹೊಸ ಹೊಸ ಕೆಲಸಗಳು ದೊರೆಯುತ್ತವೆ. ಬಿಳಿಯರ ಸರ್ಕಾರದ ಕರುಣೆಯಿರದ ಶೋಷಣೆ ಮುಗಿದುಹೋಗುತ್ತದೆ ಎನ್ನುವ ಹೊಸ ಭರವಸೆಗಳು ತುಂಬಿದ್ದವು. ಆದರೆ ಆದದ್ದೇನು? ಭಾರತ ಒಂದು ದೇಶವಾಗಿರೋ ಕಾರಣದಿಂದ ಇದಕ್ಕೊಂದು ದೇಶಭಾಷೆ ಬೇಕು, ಅದನ್ನು ಪ್ರತಿಯೊಬ್ಬ ಭಾರತೀಯ ಕಲಿಯಲೇ ಬೇಕು ಅನ್ನೊ ತಪ್ಪು ಕಲ್ಪನೆಯಿಂದ ಮೊದಲ ದಿನದಿಂದಲೇ ಹಿಂದಿಯೆನ್ನುವ ಒಂದು ಭಾಷೆಯನ್ನು ಕನ್ನಡಿಗರ ಮೇಲೆ ಹೇರಲು ಆರಂಭವಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ಪ್ರಯತ್ನಗಳು ನಡೆದವು. ಅದನ್ನು ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡಿನಂತಹ ಪ್ರದೇಶಗಳು ವಿರೋಧಿಸಿದಾಗ ಹಿಂಬಾಗಿಲ ಮೂಲಕ ಹಿಂದಿಯನ್ನು ಹೇರಲು ಆರಂಭಿಸಿದರು. ಹಿಂದಿಗೆ ರಾಜ್ ಭಾಷಾ ಎನ್ನುವ (ಅಧಿಕೃತ ಆಡಳಿತ ಸಂಪರ್ಕ ಭಾಷೆ) ಪಟ್ಟ ಕಟ್ಟಲಾಯಿತು. ಮೊದಲಿಗೆ ಹದಿನೈದು ವರ್ಷ ಎಂದಿದ್ದವರು ದಕ್ಷಿಣ ಭಾರತದ 1965ರ ಹಿಂದಿ ವಿರೋಧಿ ಚಳವಳಿಗೆ ತುಸು ಬಗ್ಗಿ ಕಣ್ಣೊರೆಸುವ ತಂತ್ರವಾಗಿ ಎಲ್ಲ ಪ್ರದೇಶಗಳು ಹಿಂದಿಯನ್ನು ಒಪ್ಪುವ ತನಕ ಇಂಗ್ಲಿಷ್ ಗೆ ಪೂರಕ ರಾಜ್ ಭಾಷೆ ಎನ್ನಲಾಯಿತು.

ಈ ವಿಷ್ಯದಲ್ಲಿ ನಮ್ಮ ಭಾರತ ಸರ್ಕಾರದ ಘೋಷಿತ ನಿಲುವು ನೋಡಿ . . .

It has been the policy of the Government of India that progressive use of Hindi in the official work may be ensured through persuasion, incentive andgoodwill.

ಇದು ಅಧಿಕೃತವಾಗಿ ನಡೆಯುತ್ತಿರುವ ದಬ್ಬಾಳಿಕೆಯಾದರೆ... ಇನ್ನು ಬ್ಯಾಂಕು ರೈಲ್ವೇ ಉದ್ಯೋಗಗಳಲ್ಲಿ ಹಿಂದಿ ಬಾರದೆನ್ನುವವರಿಗೆ ಕೆಲಸ ಇಲ್ಲವೆನ್ನುವ ಮೂಲಕ ಕನ್ನಡಿಗರಿಗೆ ವಂಚನೆ ಮಾಡಲಾಗುತ್ತಿದೆ. ಬೆಂಗಳೂರಿನಂತಹ ಕನ್ನಡ ನಾಡಿನ ಪ್ರದೇಶದಲ್ಲೇ ಹಿಂದಿ ಕಲಿಯದೆ ಉದ್ಯೋಗವಿಲ್ಲ ಎನ್ನುವ ಪರಿಸ್ಥಿತಿ ಹುಟ್ಟುಹಾಕಲಾಗುತ್ತಿದೆ. ಇನ್ನು ಶಾಲಾ ಮಕ್ಕಳನ್ನೂ ಬಿಡದೆ ಎಳೆವೆಯಿಂದಲೇ ಕಡ್ಡಾಯವಾಗಿ ಹಿಂದಿಯನ್ನು ಬೋಧಿಸ ಲಾಗುತ್ತಿದೆ.

ಸ್ವತಂತ್ರವೆಂದರೆ ಬಿಡುಗಡೆ ಮಾತ್ರವಲ್ಲ!

ಪರತಂತ್ರ ಅಂದರೆ ಬೇರೆಯವರ ಅಧೀನವಾಗಿರೋದು ಅಂತ ಅರ್ಥ. ಅಂದರೆ ಹೊರದೇಶದವರ ಅಡಿಯಾಳಾಗಿರುವುದು. ನಮ್ಮ ಬದುಕು ಮತ್ತು ಬದುಕಿನ ಪ್ರತಿ ನಡೆಯನ್ನು, ನಮ್ಮ ವ್ಯವಸ್ಥೆಗಳನ್ನು ರೂಪಿಸಿ, ನಿರ್ದೇಶಿಸಿ, ಪರಾಮರ್ಶಿಸುವವರು ಹೊರದೇಶದವರು. ಅಂದರೆ ಆಗ ಬ್ರಿಟೀಷರು. ಬ್ರಿಟೀಷರು ನಮ್ಮ ಮೇಲೆ ಸ್ಥಾಪಿಸಿದ್ದ ಎಲ್ಲ ಹಕ್ಕುಗಳನ್ನು ಬಿಟ್ಟುಕೊಟ್ಟು ಹೋದಕೂಡಲೆ ನಮಗೆ ಸಿಕ್ಕಿದ್ದುದು ಸ್ವತಂತ್ರ ಆಗಲಿಲ್ಲ. ಅದು ಬಿಡುಗಡೆ ಮಾತ್ರ. ಅವರು ಬಿಟ್ಟುಕೊಟ್ಟದ್ದು ಇದೀಗ ದಿಲ್ಲಿ ದೊರೆಗಳ ಪಾಲಾಗಿರುವಾಗ ಅದು ಮತ್ತೆ ಪರತಂತ್ರವೇ ಅಲ್ವಾ ಗುರು?

ನಮ್ಮ ಆಡಳಿತವೆಲ್ಲಾ ದಿಲ್ಲಿಯ ಹಿಡಿತದಲ್ಲಿ!

ಭಾರತ ಸಂವಿಧಾನದ ಆಧಾರದ ಮೇಲೆ ಆಡಳಿತದ ಅನುಕೂಲಕ್ಕಾಗಿ ಮೂರು ಪಟ್ಟಿಗಳನ್ನು ಮಾಡಲಾಗಿದೆ. ಮೊದಲ ಪಟ್ಟಿ Union list ಅಂದರೆ ಕೇಂದ್ರದ ಹಿಡಿತದ ಪಟ್ಟಿ. ಇದರಲ್ಲಿ 97 ವಿಷಯಗಳಿದ್ದರೆ, state list ಅಂದ್ರೆ ರಾಜ್ಯ ಪಟ್ಟಿಯಲ್ಲಿ 66 ವಿಷಯಗಳು ಇವೆ. ಇನ್ನೊಂದು ಕನ್ ಕರೆಂಟ್ ಪಟ್ಟಿ ಅಂತ ಇದೆ.

ಅದರಡಿಯಲ್ಲಿ ರಾಜ್ಯ ಕಾನೂನು ಮಾಡಬಹುದಾದರೂ ಕೇಂದ್ರಕ್ಕೆ ಪರಮಾಧಿಕಾರವಿದೆ. ಈ ಪಟ್ಟಿಯಲ್ಲಿ 47 ವಿಷಯಗಳಿವೆ. ಅಂದರೆ ಒಟ್ಟು ಇರುವ 210 ವಿಷಯಗಳಲ್ಲಿ 66 ಮಾತ್ರ ನಮ್ಮ ಕೈಯ್ಯಲ್ಲಿ. ಉಳಿದ 144 ಕೇಂದ್ರದ ಕೈಯ್ಯಲ್ಲಿ. ಇದು ಅಂಕಿಗಳ ಲೆಕ್ಕಾಚಾರ ಅಷ್ಟೇ ಅಲ್ಲ. ಕೇಂದ್ರದ ಹಿಡಿತದಲ್ಲಿ ರಕ್ಷಣೆ, ವಿದೇಶಿ ಸಂಬಂಧಗಳ ತರಹದ ವಿಷಯ ಇರೋದೇನೋ ಸರಿ.

ಈಗಿನ ವ್ಯವಸ್ಥೆಯಲ್ಲಿ ಪ್ರಮುಖವೂ ಪ್ರಮುಖವಲ್ಲದವೂ ಕೂಡಾ ಕೇಂದ್ರದ ಅಧೀನವೇ. ಒಂದು ತಮಾಶೆ ಅಂದ್ರೆ ಇರೋ 210ರಲ್ಲಿ 66 ಆದ್ರೂ ನಮ್ಮ ಕೈಯ್ಯಲ್ಲಿ ಇದೆ ಅಂತ ಖುಷಿ ಪಡೋಣ ಅನ್ನಕ್ಕೂ ಆಗಲ್ಲ. ಯಾಕಂದ್ರೆ ಆ ಅಧಿಕಾರ ಇರೋ ನಮ್ಮ ವಿಧಾನ ಸಭೆ, ವಿಧಾನ ಪರಿಷತ್ ಗಳು ಇರೋದು ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿ. ಪ್ರತಿ ನಿರ್ಧಾರಕ್ಕೂ ಹೈಕಮಾಂಡ್ ಅಂತ ಡೆಲ್ಲಿ ಕಡೆ ಇವು ನೋಡ್ತಿವೆ. ಇದರ ಅರ್ಥ ಏನು? ನಮ್ಮನ್ನು ಪೂರ್ತಿಯಾಗಿ ಆಳ್ತಿರೋದು ದೆಹಲಿ ಮಂದಿ. ಹ್ಯಾಗೇ ಅಂತೀರಾ?

ಕೇಂದ್ರ ಸರ್ಕಾರವೆಂಬ ಸೂತ್ರ-ದಾರ!

ಇಂದಿನ ಭಾರತದ ವ್ಯವಸ್ಥೆಯಲ್ಲಿ ಕನ್ನಡಿಗರು ನಮ್ಮ ನೆಲದಲ್ಲಿ ಬೇರೆ ಭಾಷಾ ಸಿನಿಮಾಗಳು, ಎಫ್.ಎಂಗಳು ಬೇಡ ಅಂತ ಹೇಳೋ ಹಾಗಿಲ್ಲ. ಬೇರೆ ಭಾಷೆ ಚಿತ್ರಗಳಿಗೆ ಹೆಚ್ಚು ತೆರಿಗೆ ಹಾಕಿ ನಮ್ಮದನ್ನು ಕಾಪಾಡ್ಕೋತೀವಿ ಅನ್ನೋ ಹಾಗಿಲ್ಲ. ಕೇಂದ್ರದ ಅಪ್ಪಣೆಯಿಲ್ಲದೆ ನಮ್ಮ ಊರಿನ ಕೆರೆಗಳ ಹೂಳು ಎತ್ತೋ ಹಾಗಿಲ್ಲ. ನಮ್ಮ ಜನ ಪ್ರತಿನಿಧಿಗಳು ನಮ್ಮವರೇ ಆಗಿರಬೇಕು ಅನ್ನೋ ಹಾಗಿಲ್ಲ. ವೆಂಕಯ್ಯ ನಾಯ್ಡು, ರಾಜೀವ್ ಚಂದ್ರಶೇಖರ್ ಥರದ ಕನ್ನಡಿಗರ ಹಿತದ ಬಗ್ಗೆ ಕಾಳಜಿಯನ್ನೇ ತೋರದ ಪರಭಾಷಿಕರು ಇಲ್ಲಿ ಚುನಾವಣೆಗೆ ನಿಂತರೂ, ಗೆದ್ದರೂ ಅದನ್ನು ನಾವು ತಡೆಯಲಾರೆವು. ನಮ್ಮ ವಿಮಾನ ನಿಲ್ದಾಣಕ್ಕೆ ಬೇಕಾದ ಹೆಸರು ಇಡೋ ಹಕ್ಕಿಲ್ಲ. ನಮ್ಮ ಬೆಂಗಳೂರನ್ನು ಬ್ಯಾಂಗಲೂರ್ ಅಲ್ಲ ಬೆಂಗಳೂರು ಅಂತ ಕರೀಬೇಕು ಅನ್ನೋಕ್ಕೂ ನಮಗೆ ಸ್ವತಂತ್ರ ಇಲ್ಲ. ನಮ್ಮೂರಲ್ಲಿ ಸಂಚಾರಿ ನಿಯಮ ಮುರಿಯೋರಿಗೆ ಎಷ್ಟು ದಂಡ ವಿಧಿಸಬೇಕು ಅನ್ನೋದಕ್ಕೂ ದಿಲ್ಲಿ ಅಪ್ಪಣೆ ಬೇಕು ಗುರು! ಹೀಗೆ ಪ್ರಮುಖವಾದ ಮತ್ತು ಪ್ರಮುಖವಲ್ಲದ ಎಲ್ಲ ವಿಷಯಗಳಲ್ಲೂ ನಾವು ಕೇಂದ್ರ ಸರ್ಕಾರದ ಅಪ್ಪಣೆಗೆ ಕಾಯಬೇಕು. ಅಂದರೆ ನಾವೀಗಲೂ ಪರಾಧೀನ!

ದೊಡ್ಡ ರಾಜ್ಯದೋರಿಗೆ ದೊಡ್ಡಪಾಲು

ಕೇಂದ್ರದಲ್ಲೂ ಇಲ್ಲಿನ ಪ್ರತಿನಿಧಿಗಳಿರ್ತಾರಲ್ಲಾ ಅಂದರೆ, ಇಂದಿನ ಭಾರತದ ವ್ಯವಸ್ಥೆಯಲ್ಲಿ ಅತಿಹೆಚ್ಚು ಸಂಸದರನ್ನು ದೆಹಲಿಗೆ ಕಳಿಸೋ ಉತ್ತರದ ದೇಶವೇ ಬಲಿಷ್ಟ. ಸಂಸತ್ತಿನಲ್ಲಿ ಒಂದೆರಡು ಸ್ಥಾನವಿರೋ ರಾಜ್ಯಗಳ ಹಿತರಕ್ಷಣೆ ಗೋವಿಂದ. 39 ಸಂಸದರ ತಮಿಳು ನಾಡಿನ ಮುಂದೆ 28 ಸಂಸದರ ಕರ್ನಾಟಕ ಸದಾ ಬಲಹೀನ. ಪ್ರತಿ ವಿಷಯ ದಲ್ಲೂ ಸೋಲು. 48  ಸಂಸದರ ಮಹಾರಾಷ್ಟ್ರದ ಬಾಯ್ಬಲ, ತೋಳ್ಬಲ, ಲಾಬಿಗಳ ಬಲದ ಮುಂದೆ 28 ಸಂಸದರ ಕರ್ನಾಟಕ ಸದಾ ಮೂಲೆಗುಂಪು. 28 ಸದಸ್ಯರ ಕರ್ನಾಟಕದ ಪಾಡೇ ಹೀಗಾದರೆ ಒಬ್ಬಿಬ್ಬ ಸಂಸದರನ್ನು ಹೊಂದಿರೋ ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶಗಳ ಥರದ ರಾಜ್ಯಗಳ ಪಾಡೇನು ಗುರು! ಸಂಸತ್ತಿನಲ್ಲಿ ಇವರ ಸಮಸ್ಯೆಗಳಿಗೆ ಸ್ಪಂದಿಸೋರು ಯಾರು?

ನಿಜವಾದ ಸ್ವತಂತ್ರ... ಅಧಿಕಾರ ವಿಕೇಂದ್ರಿಕರಣದಿಂದ ಸಾಧ್ಯ!

ನಮ್ಮ ದೇಶ ನಿಜವಾದ ಒಕ್ಕೂಟವಾಗಬೇಕಾದರೆ, ನಮಗೆ ನಿಜವಾದ ಸ್ವತಂತ್ರ ಸಿಗ ಬೇಕಾದರೆ ನಮ್ಮನ್ನು ನಮ್ಮನ್ನು ಆಳಿಕೊಳ್ಳುವ ಅಧಿಕಾರ ವಿಕೇಂದ್ರಿಕರಣ ಆಗಬೇಕು. ನಮ್ಮ ಅನುಕೂಲದ, ಏಳಿಗೆಗೆ ಬೇಕಾದ ವ್ಯವಸ್ಥೆಯ ನಿರ್ಮಾಣ ಮತ್ತು ನಿರ್ವಹಣೆ ನಮ್ಮ ಕೈಯಲ್ಲಿರಬೇಕು. ನಮ್ಮ ನಾಡಿನ ವೈವಿಧ್ಯತೆಯನ್ನು ಹಾಳುಗೆಡವುವ ಎಲ್ಲ ನೀತಿಗಳನ್ನು ಕೈಬಿಡಬೇಕು. ಹಿಂದಿ ಹೇರಿಕೆಯನ್ನು ಕೈ ಬಿಡಬೇಕು. ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ ಜಾರಿಯಾಗಬೇಕು. ನಮ್ಮ ಕಲಿಕೆ, ಉದ್ಯೋಗ, ಮನೋರಂಜನೆ, ಬದುಕು... ಎಲ್ಲವೂ ನಮ್ಮ ನಮ್ಮ ತಾಯ್ನುಡಿಯಲ್ಲಿ ದೊರಕುವಂತೆ ಆಗಬೇಕು. ಭಾರತ ದೇಶದ ಅಧಿಕೃತ ಸಂಪರ್ಕ ಭಾಷೆಯಾಗಿ ಎಲ್ಲ ಭಾರತೀಯ ಭಾಷೆಗಳಿಗೂ ಸಮಾನ ಸ್ಥಾನಮಾನ ಕೊಡಬೇಕು ಗುರು!

ತಂತ್ರಜ್ಞಾನ ಮುಂದುವರೆದಿರೋ ಈ ದಿನಗಳಲ್ಲಿ ಇದು ಸುಲಭ ಸಾಧ್ಯ. ಆಯಾ ಪ್ರದೇಶಗಳಲ್ಲಿ ಆಡಳಿತ ಭಾಷೆ ಆಯಾ ಪ್ರದೇಶದ ಭಾಷೇನೆ ಆಗಬೇಕು. ಹಿಂದಿ ಪ್ರಚಾರಕ್ಕೆ ಪ್ರತಿವರ್ಷ ಸರ್ಕಾರ ಖರ್ಚು ಮಾಡುತ್ತಿರುವ ಸಾವಿರಾರು ಕೋಟಿ ರೂಪಾಯಿ ಗಳಷ್ಟು ಹಣವನ್ನು ಎಲ್ಲ ಭಾಷೆಗಳ ಏಳಿಗೆಗಾಗಿ ಸಮಾನವಾಗಿ ಹಂಚಬೇಕು.

ಆಗ ಭಾರತಕ್ಕೆ ಬಂದಿರುವ ಸ್ವಾತಂತ್ರ್ಯಕ್ಕೂ ಸಾರ್ಥಕತೆ ಸಿಗುತ್ತೆ ಗುರು! ಇಲ್ದಿದ್ರೆ ಹೊರದೇಶದ ಆಂಗ್ಲರ ಆಳ್ವಿಕೆಯಿಂದ ಹಿಂದಿ ಭಾಷಿಕರ ಆಳ್ವಿಕೆಗೆ ಬಿದ್ದ ಹಾಗಾಗುತ್ತದೆ ಅಷ್ಟೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಏನ್ಗುರು
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-23


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಮಾರ್ಲಮಿ ಹಬ್ಬದಂದು ಮಟನ್ ತಿನ್ನುತ್ತಾ.............
»ಎದ್ದೇಳು ನಂಜುಂಡು ಎಷ್ಟೊತ್ತು ಸುಖನಿದ್ರೆ?
»'ಧರ್ಮ ರಾಜಕೀಯ' ಬೇಡ, ರಾಜಕೀಯ ಧರ್ಮ ಇರಲಿ
»ಅದ್ಭುತ ಲೋಕದತ್ತ ಬಣ್ಣಬಣ್ಣದ ಖಾಸಗಿ ಬಸ್‌ಗಳೆಂಬ ಬಾಲ್ಯ ಸ್ನೇಹಿತರು
»ನಮ್ಮ ನೆಲದ ಸತ್ವದಲ್ಲಿ ಹುಟ್ಟಿ,ಬೆಳೆದು,ಬೆಳಕಾದವರು:ದಯಾನ೦ದ ಪೈ
»ವಿಶ್ವದ ಅತಿ ದೊಡ್ಡ ದ್ವೀಪ ಫ್ರೇಸರ್
»ಬರಲಿದೆ ಹಾರುವ ಕಾರು!
»ಮದುವೆ ಮುರಿದ ಮೊಡವೆಯ ಗೊಡವೆ !
»ಕಾಂಡೋಮ್ ಗೆ ಆಯುರ್ವೇದದಲ್ಲಿ ಏನಂತಾರೆ?
»ವೀಣಾಧರಿ ಎ೦ಬ ಮಹಾನ್ ವ್ಯಕ್ತಿಯ ನೆನಪಲ್ಲಿ ಇ೦ದಿಗೆ ಒಂದು ವರ್ಷ
»ಮನಕ್ಕೆ ಮುದ ನೀಡುವ ಬೊನ್ಸಾಯ್
»ಈ ಗ್ರಾಮದಲ್ಲಿ ಬಹುತೇಕರಿಗೆ ಇಬ್ಬರು ಹೆಂಡಿರು!
»ವಧು ಬೇಕಾಗಿದ್ದಾಳೆ : ಡಬ್ಲಿನ್ ಮೂಲದ, ಮೈಸೂರು ವಾಸಿ ವರ
»ಬರಲಿದೆ - ಗಂಟೆಗೆ ಸಾವಿರ ಮೈಲಿ ಕ್ರಮಿಸುವ ಕಾರು !
»ವಿನಾಶದತ್ತ ನಕ್ಸಲ್ ಚಳವಳಿ
»ಸಂಸ್ಕೃತ ದಿನಪತ್ರಿಕೆ - ಸುಧರ್ಮ
»ಅವ್ಯಾಹತ ಕ್ರಿಸ್ತೀಕರಣ: ಎಸ್.ಎಲ್.ಭೈರಪ್ಪ
»ಮರಾಠಿಗರ ಗದ್ದಲವಲ್ಲ ಠಾಕ್ರೆ ಪರಿವಾರದ ಗದ್ದಲ
»ಉಗ್ರರನ್ನು ವಿರೋಧಿಸೋಣ ತಮಿಳರನ್ನು ರಕ್ಷಿಸೋಣ
»ಆರದಿರಲಿ ಬೆಳಕು...
»ನಲುಗಿದ ಬದುಕು... ಮಂಕಾದ ಅರಿವಿನ ಮುಗಿಲು
»ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಕ್ಷೀರ ಮಥನ
»ಸೈಕಲ್ ರಿಕ್ಷಾಗೆ ಸೌರಶಕ್ತಿ
»ಪರಿಸರ ಪ್ರಿಯರ ನೆಚ್ಚಿನ ತಾಣ ಕುಳಗಿ ನಿಸರ್ಗಧಾಮ
»ಭಯ`ಉತ್ಪಾದನೆ'ಯ ಹಲವಾರು ಮುಖಗಳು
»ಒಂದು ಕಲಿತವನಿಗೆ ಇನ್ನೊಂದು ಸುಲಭ
»ಎನರ್ಜಿ ಡ್ರಿಂಕ್ ಹಿಂದಿನ ಸತ್ಯ
»ಸ್ಫೂರ್ತಿ ಒಂದು ಅನರ್ಘ್ಯ ರತ್ನ
»2008 ನಲ್ಲಿ ಕಾಲ್ತುಳಿತಕ್ಕೆ 360 ಕ್ಕೂ ಹೆಚ್ಚು ಬಲಿ , ಬಾಂಬ್ ಸ್ಪೋಟಕ್ಕೆ 156
»ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..??
»The dilemma of an educated Muslim youth
»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್
»ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು
»ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ
»ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು
»ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ!
»ಬಾಂಬ್ ಸೂಟ್ ಎಂಬ ರಕ್ಷಾ ಕವಚ
»ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್
»ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು?
» ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು
»ಸಡಿಲ ಪ್ಯಾಂಟ್ ಧರಿಸಿದರೆ ದಂಡ
»ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ?
»ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ...
»ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು
»ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ
»ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
»ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ
»ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ !
»ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ
»ಮೂರೂ ಬಿಟ್ಟವರ ಅಮೆರಿಕ ಯಾತ್ರೆ .......
»ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
»ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು
»ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!!
»ಅಮೆರಿಕೆಗಾಗಿ ದೇಶದ ಹಿತ ಬಲಿ
»ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್
»ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ?
»ಬಿಜೆಪಿಯ ದುರಂತಕ್ಕೆ ಪೀಠಿಕೆ .....?
»ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ
»ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ
»ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’
»ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ
»ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್!
»ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್
»ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ
»ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ
»