ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಗಂಡಸರೂ ಬಸುರಿ ಆಗುವುದಾಗಿದ್ದರೆ...?!

ಗಂಡಸರೂ ಬಸುರಿ ಆಗುವುದಾಗಿದ್ದರೆ...?!
(ಈ ಬರಹ ಆರಂಭಿಸುವ ಮೊದಲೇ ಒಂದು ಮಾತನ್ನು ಹೇಳಿಬಿಡುತ್ತೇನೆ. ಈ ಲೇಖನ ನನ್ನನ್ನು ಸ್ತ್ರೀವಾದಿಯನ್ನಾಗಿಸಬಹುದು. ಆದರೆ ನನಗಂತೂ ಯಾವುದೇ ವಾದಿತನದ ’ವ್ಯಾಧಿಯಿಲ್ಲ’. ವಾಸ್ತವಕ್ಕೆ ಸರಿಯಾಗಿ ಅಂಟಿಕೊಂಡು ಹೋಗುತ್ತೇನೆ)

ಬಾಳೇಹಳ್ಳಿ ಅಕ್ಷತಾ ಆತ್ಮಹತ್ಯೆ ಮಾಡಿಕೊಂಡಳಂತೆ. ಹಾಗಂತ ಗೆಳೆಯ ರಾಘು ಮೆಸೇಜ್ ಮಾಡಿದ್ದ. ನನಗೊಮ್ಮೆ ಹೃದಯ ಚುರ್ ಅಂದಂತಾಯಿತು. ಹೈಸ್ಕೂಲ್ ಓದುತ್ತಿರುವಾಗ ನನ್ನ ಸೀನಿಯರ್ ಆಗಿದ್ದ ಹುಡುಗಿಯವಳು. ವಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವಳು. ಅಬ್ಬಬ್ಬಾ ಅಂದರೆ 24 ವರ್‍ಷ ಆಗಿರಬಹುದು ಅವಳಿಗೆ. ಅಷ್ಟು ಕಿರಿ ವಯಸ್ಸಿನ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಎಂಬ ಸುದ್ದಿ ಕೇಳಿದಾಗ ನೋವಾಯಿತು.

ಊರಿನಿಂದ ಯಾರೋ ಫೋನ್ ಮಾಡಿದ್ದರು. ಹೀಗೆ ಮಾತಾಡುವಾಗ ಅಕ್ಷತಾ ಸಾವಿನ ಸುದ್ದಿ ಬಂತು. ಯಾರೋ ಇತರೆ ಪೈಕಿಯವನ ಜತೆ ಲವ್ ಇತ್ತಂತೆ ಅವಳಿಗೆ. ಸಂಬಂಧವೂ ಇತ್ತು ಅಂತಿದಾರೆ... ನನಗೆ ಕೋಪ ನೆತ್ತಿಗೇರಿತು.

ನಿಮ್ಮ ಈ ಚುಚ್ಚು ಮಾತುಗಳೇ ಅವಳನ್ನ ಸಾಯುವಂತೆ ಮಾಡಿದ್ದು. ಅವಳು ಯಾರಿಗೆ ಬಸುರಿಯಾದರೇನು? ಬಾಣಂತಿಯಾದರೇನು? ಅದರಿಂದ ನಿಮ್ಮ ಗಂಟೇನು ಖರ್‍ಚಾಗುತ್ತೆ... ರೇಗಿದೆ

ಅಲ್ಲಾ ಬಡವರ ಮನೆ ಕೂಸು ಹಂಗೆಲ್ಲಾ ಮಾಡಿಕೊಂಡರೆ ಅಪ್ಪಾ, ಅಮ್ಮ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುವುದ ಬ್ಯಾಡದಾ? ಅಂತಾ ರಾಗ ಶುರುವಿಟ್ಟರು.

ಹೌದು ನಮ್ಮ ಸಮಾಜದ ಇದೇ ಧೋರಣೆಯೇ ಅಂತಹ ಕಿರಿ ವಯಸ್ಸಿನ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿರುವುದು. ನನಗೆ ಇಷ್ಟು ವರ್‍ಷವಾದರೂ ’ಶೀಲ ಎಂಬುದು ದೇಹದಲ್ಲಿ ಅಡಗಿದೆಯಾ? ಅಂಗಾಂಗದಲ್ಲಿ ಅಡಗಿದೆಯಾ? ಮನಸ್ಸಲ್ಲಿ ಅಡಗಿದೆಯಾ? ಎಂಬ ಸಂಗತಿ ಅರ್‍ಥವಾಗಲಿಲ್ಲ!’ ’ಹೆಣ್ಣು ಬಸುರಿಯಾಗುತ್ತಾಳೆ ಎಂಬ ಒಂದೇ ಒಂದು ಕಾರಣಕ್ಕೆ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಾಳೆ.

ಸೆಕ್ಸ್ ಎಂಬುದು ಹೆಣ್ಣನ್ನು ಶೋಷಿಸಲು ಬಳಸುವ ವಸ್ತುವಾಗುತ್ತಿದೆ. ಇದು ನಮ್ಮ ಸಮುದಾಯದಲ್ಲಿ ಮಾತ್ರವಲ್ಲ, ಮುಸ್ಲಿಂ, ಕ್ರಿಶ್ಚಿಯನ್ ಸಮಾಜದಲ್ಲಿಯೂ ಹೆಣ್ಣಿನ ಸ್ಥಿತಿ ಇದಕ್ಕಿಂತ ಶೋಚನೀಯವಾಗಿದೆ’ ಅನ್ನುತ್ತಿದ್ದಳು ಅಕ್ಕ.

ಸಮಾಜದ ಎಷ್ಟೋ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಇದೇ ಕಾರಣಕ್ಕೆ. ವಯಸ್ಸಿನ ದೋಷದಿಂದಲೋ, ಅಚಾತುರ್‍ಯದಿಂದಲೋ ಯಾರ ಜೊತೆಗೋ ಸಂಬಂಧ ಬೆಳೆಸುತ್ತಾರೆ. ಅವರನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿಯುತ್ತಾರೆ. ಅಪ್ಪಾ, ಅಮ್ಮ ನೀನು ಆ ಹುಡುಗನನ್ನು ಮದುವೆಯಾಗುವುದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸುತ್ತಾರೆ. ಕೊನೆಗೆ ಬೇಸತ್ತ ಹೆಣ್ಣು ಮಗಳು ಶರಣಾಗುತ್ತಾಳೆ. ಹೆಚ್ಚಿನ ಆತ್ಮಹತ್ಯೆ ಹಿಂದಿರುವ ಕಥೆಯಿಷ್ಟೆ!

ಸತ್ತ ಮೇಲೆ ಸಮಾಜದ ಒಂದಿಷ್ಟು ಮಂದಿ ಛೇ ಅವಳು ಸಾಯಬಾರದಿತ್ತು. ಜನ್ಮ ಜನ್ಮಕ್ಕೂ ಇನ್ನು ಅನುಭವಿಸಬೇಕು. ಮಳ್ಳು ಕೂಸು ಬದುಕಿನಲ್ಲಿ ಏನು ಬಂದರೂ ಎದುರಿಸಬೇಕಿತ್ತು ಅಂತಾ ಪಶ್ಚಾತ್ತಾಪದ ಮಾತಾಡುತ್ತಾರೆ. ಇನ್ನೂ ಕೆಲವರು ಯಾರದ್ದೋ ಜೊತೆಗೆ ಸಂಬಂಧ ಇತ್ತಂತೆ, ಸತ್ತಳು ಅಂತಾ ಆಡಿಕೊಳ್ಳುತ್ತಾರೆ.

ಒಮ್ಮೆ ಅವಳು ಸಾಯದೇ ಬದುಕಿದ್ದರೆ ಈ ಸಮಾಜ ಅವಳನ್ನು ಹೇಗೆ ಸ್ವೀಕರಿಸುತ್ತಿತ್ತು ಎಂಬುದು ಮುಖ್ಯವಾದ ಪ್ರಶ್ನೆ. ಒಂದಿಷ್ಟು ದಿನ ಅವಳ, ಅಪ್ಪಾ ಅಮ್ಮನೂ ಅವಳನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಇಡೀ ಸಮಾಜ ಅವಳ ಎದುರಿಗೆ ಆಡಿಕೊಳ್ಳಬಾರದ ಮಾತುಗಳನ್ನೆಲ್ಲಾ ಆಡಿಕೊಳ್ಳುತ್ತಿತ್ತು.

ಇನ್ನೂ ನಮ್ಮ ಹಳ್ಳಿ ಹೆಂಗಸರಂತೂ.... ತಾವು ಎಷ್ಟು ಸರಿ ಇದ್ದೇವೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಗಂಡ ಊರಲ್ಲಿ ಇಲ್ಲದಿದ್ದಾಗ ಯಾರ್‍ಯಾರಿಗೋ ಫೋನ್ ಮಾಡಿ ಕರೆಸಿಕೊಂಡು ಸುಖ ತೆಗೆದುಕೊಳ್ಳುತ್ತೇವೆ ತಾವು ಎಂಬುದು ಕೆಲ ಹೆಂಗಸರಿಗೆ ಗೊತ್ತೇ ಇರುವುದಿಲ್ಲ! ನೀಲಗಿರಿ ಪ್ಲಾಂಟೇಶನ್ನಿಗೆ ಹೋಗಿ ಯಾರ ಜೊತೆಗೋ ಮೆಯ್ದು ಬರುವುದು ಆ ಹೆಂಗಸರಿಗೆ ನೆನಪೇ ಇರುವುದಿಲ್ಲ! ಆದರೆ ಇಂತಹ ಒಬ್ಬ ಹೆಣ್ಣು ಮಗಳು ಎದುರಿಗೆ ಸಿಕ್ಕರೆ ಆಡಬಾರದ ಮಾತುಗಳನ್ನೆಲ್ಲಾ ಆಡುತ್ತಾರೆ. ಹುಡುಗಿ ಶ್ರೀಮಂತರ ಮನೆ ಕೂಸಾಗಿದ್ದರೆ ಅವಳು ಆಚೆ ಹೋದ ನಂತರ ಆಡುತ್ತಾರೆ. ಬಡವರ ಮನೆ ಕೂಸಾದರೆ ಎದುರಿಗೆ ಆಡುತ್ತಾರೆ. ಇದು ನಮ್ಮ ಸಮಾಜದ ಸ್ಥಿತಿ. ಇವುಗಳನ್ನೆಲ್ಲಾ ಸಹಿಸಿಕೊಂಡು ಆ ಹೆಣ್ಣುಮಗಳು ಬದುಕಬೇಕು. ಇದನ್ನು ನೆನಸಿಕೊಂಡೇ ಎಷ್ಟೋ ಹೆಣ್ಣು ಮಕ್ಕಳು ನೇಣಿಗೆ ಶರಣಾಗುವುದು ಅನ್ನಿಸತ್ತೆ ನನಗೆ.

ಹಾಗಂತ ಹೆಣ್ಣು ಮಗಳು ಕಂಡ ಕಂಡ ಹುಡುಗನಿಗೆ ಬಸಿರಾಗುವುದು ಸರಿ ಎಂದು ವಾದಿಸುತ್ತಿಲ್ಲ. ತಾನು ಬಯಸಿದ ಹುಡುಗನ ಜತೆಗೆ ಸಂಬಂಧ ಹೊಂದಬೇಕಾದರೂ ಮದುವೆಯಾಗಲೇ ಬೇಕಾ? ಸಂಬಂಧ ಇಟ್ಟುಕೊಂಡರೂ ಅಪ್ಪಾ ಅಮ್ಮ ಕಟ್ಟಿದ ಹುಡುಗನನ್ನೇ ಮದುವೆಯಾಗಬೇಕಾ? ಹೆಣ್ಣಿಗೆ ವೈಯಕ್ತಿಕ ಬದುಕು ಅನ್ನುವುದೇ ಇಲ್ಲವಾ? ಎಂಬುದು ನನ್ನ ಪ್ರಶ್ನೆ. ಹೆಣ್ಣನ್ನು ನಾವು ಬಸಿರಾಗುತ್ತಾಳೆ ಎಂಬ ಕಾರಣದಿಂದ ಶೋಷಿಸುವುದಾದರೆ ಒಮ್ಮೆ ಗಂಡಸು ಬಸಿರಾಗುವುದಾಗಿದ್ದರೆ ಈ ಸಮಾಜದ ಸ್ಥಿತಿ ಹೇಗೆ ಆಗುತ್ತಿತ್ತು ಒಮ್ಮೆ ಅವಲೋಕಿಸಿ ನೋಡಿ.

ನಾವು ವೇಶ್ಯೆಯರನ್ನು, ಸೂಳೆಯರನ್ನು ಬೈಯ್ಯುತ್ತೇವೆ. ಅದೊಂದು ನೀಚ ವೃತ್ತಿ ಅನ್ನುತ್ತೇವೆ. ಗಂಡಸಿಗೆ ತೃಷೆ ಇಲ್ಲದಿದ್ದರೆ ವೇಶ್ಯಾವಾಟಿಕೆ ಏಕೆ ಹುಟ್ಟುತ್ತಿತ್ತು? ಒಮ್ಮೆ ಆಲೋಚಿಸಿ ನೋಡಿ. ಎಷ್ಟು ಗಂಡಂದಿರು ಹೆಂಡತಿಯ ಕಣ್ಣು ತಪ್ಪಿಸಿ ಯಾರ್‍ಯಾರ ಜೊತೆಗೋ ಮಲಗಿ ಬರುವುದಿಲ್ಲ ಹೇಳಿ? ಆದರೆ ಅದೇ ಕೆಲಸ ಹೆಣ್ಣು ಮಾಡಿದರೆ? ಅವಳಿಗೆ ಹೊಟ್ಟೆ ಮುಂದು ಬರುವುದರಿಂದ ಅವಳು ಅಂತಹ ಕೆಲಸ ಮಾಡಿದ್ದಾಳೆ ಎಂಬುದು ಗೊತ್ತಾಗಿ ಬಿಡುತ್ತದೆ! (ಇವತ್ತು ಕಾಲ ಬದಲಾಗಿದೆ. ಹೊಟ್ಟೆ ಮುಂದೆ ಬರದಂತೆಯೂ ಮಲಗೆದ್ದು ಬರಲು ಬರುತ್ತದೆ! ಬೆರಳೆಣಿಕೆ ಹೆಣ್ಣು ಮಕ್ಕಳು ಹಾಗೇ ಮಲಗೆದ್ದು ಬರುತ್ತಿದ್ದಾರೆ! ಆದರೆ ಗಂಡಸಿಗಿರುವಷ್ಟು ಚಟ ಹೆಣ್ಣಿಗಿಲ್ಲ ಎಂಬುದು ನನ್ನ ನಂಬಿಕೆ).

’ನಾವು ಎರಡು ಲಿಂಗಗಳ ಸಮ್ಮಿಲನದಿಂದಲೇ ಹುಟ್ಟಿದವರು. ಕಾಮ ಕ್ರಿಯೆಯ ಫಲವೇ ಪ್ರತಿಯೊಂದು ಜೀವಿಗಳು. ಹಾಗಾಗಿ ಪ್ರತಿ ಜೀವಕ್ಕೂ ಕಾಮದ ವಾಸನ, ತೃಷೆ ಸಹಜ. ಎಕ್ಸ್, ವೈ ಎಂಬ ಭಿನ್ನ ಕ್ರೋಮೋಸೋಮ್‌ಗಳು ಗಂಡಸಿನಲ್ಲಿ ಇರುವುದರಿಂದ ಅವನಿಗೆ ತೃಷೆ ಒಂಚೂರು ಹೆಚ್ಚು. ಆದರೆ ಹೆಣ್ಣಿನಲ್ಲಿ ಈ ಭಿನ್ನತೆಯ ಕ್ರೋಮಸೋಮ್ ಇಲ್ಲ. ಏಕತೆಯ ಕ್ರೊಮೋಸೋಮ್ ಹಾಗಾಗಿ ಅವಳಿಗೆ ಲೈಂಗಿಕ ಚಟ ಸ್ವಲ್ಪ ಕಡಿಮೆ‘ ಅನ್ನುತ್ತಾರೆ ಓಶೋ. ಅವರ ಮಾತು ಅಕ್ಷರಶಃ ನಿಜ. ಹಾಗಾಗಿ ಎಲ್ಲಾ ಜೀವಿಗಳಲ್ಲೂ ಸೆಕ್ಸ್ ಸಹಜ. ಸೆಕ್ಸ್ ಇಲ್ಲದಿದ್ದರೆ ಜೀವ ಸಂಕುಲದ ನಿರಂತರತೆ ಸಾಧ್ಯವಿತ್ತಾ?

ಏನೋ ನನಗಂತೂ ಈ ಸಮಾಜದ ಧೋರಣೆಯೇ ಅರ್‍ಥವಾಗುವುದಿಲ್ಲ. ಅನುಭವದಲ್ಲಿ ಕಿರಿಯವನಾದ್ದರಿಂದ ನನ್ನ ಆಲೋಚನೆಯೇ ಸರಿಯಿಲ್ಲದೆಯೂ ಇರಬಹುದು! ಆದರೂ ನನ್ನ ವಾರಗೆಯ, ಇನ್ನೂ ಬದುಕಿ ಬಾಳಬೇಕಾದವರೆಲ್ಲಾ ಸಾಯುತ್ತಾರೆ ಎಂದರೆ ನಿಜಕ್ಕೂ ನೋವಾಗುತ್ತೆ. ಆ ನೋವನ್ನು ಇಲ್ಲಿ ತೋಡಿಕೊಂಡೆ ಅಷ್ಟೆ.

ಅಕ್ಷರ ವಿಹಾರ ಕುರಿತು...
ಈ ಬ್ಲಾಗಿನ ಕುರಿತು ಬ್ಲಾಗಿಗ ಬರೆದು ಕೊಂಡದ್ದು ಹೀಗೆ.
ಅಕ್ಷರ ವಿಹಾರ... ಮಲೆನಾಡ ಮಡಿಲಿನಿಂದ ಹೊರಟ ವಾಕಿಂಗು.
ನಾನು ನಾನೆಂಬ ನಾಮಸ್ಮರಣೆಯೊಂದಿಗೆ...
ವಿನಾಯಕ ಕೋಡ್ಸರ, ಹುಟ್ಟಿದ್ದು ಮಲೆನಾಡಿನಲ್ಲಿ, ಓದಿದ್ದೆಲ್ಲಾ ತುಳುನಾಡಿನಲ್ಲಿ. ಬೆಂಗಳೂರೆಂಬ ಅಪ್ಪಟ ಕಾಂಕ್ರೀಟು ಜಂಗಲ್ಲಿನಲ್ಲಿನ ಸುದ್ದಿ ಮನೆಯೊಂದರಲ್ಲಿ ಪತ್ರಕರ್‍ತನೆಂಬ ಪಟ್ಟ ಕಟ್ಟಿಕೊಂಡು ಕೂತಿದ್ದೇನೆ.

(ಬ್ಲಾಗಾಯಣದ ಬ್ಲಾಗಿನ ಬರಹಗಳಲ್ಲಿ ವ್ಯಕ್ತವಾಗಿರುವ ಅಂಶಗಳು ಬ್ಲಾಗಿಗನದ್ದು. ಅದಕ್ಕೆ ನಾವು ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ. ಈ ಬರಹಗಳನ್ನು ಓದುಗರ ಅವಗಾಹನೆಗಾಗಿ ಮಾತ್ರ ಇಲ್ಲಿ ನೀಡಲಾಗಿದೆ.)

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡ ಪ್ರಭ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-20


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್
»ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು
»ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ
»ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು
»ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ!
»ಬಾಂಬ್ ಸೂಟ್ ಎಂಬ ರಕ್ಷಾ ಕವಚ
»ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್
»ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು?
» ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು
»ಸಡಿಲ ಪ್ಯಾಂಟ್ ಧರಿಸಿದರೆ ದಂಡ
»ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ?
»ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ...
»ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು
»ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ
»ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
»ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ
»ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ !
»ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ
»ಮೂರೂ ಬಿಟ್ಟವರ ಅಮೆರಿಕ ಯಾತ್ರೆ .......
»ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
»ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು
»ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!!
»ಅಮೆರಿಕೆಗಾಗಿ ದೇಶದ ಹಿತ ಬಲಿ
»ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್
»ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ?
»ಬಿಜೆಪಿಯ ದುರಂತಕ್ಕೆ ಪೀಠಿಕೆ .....?
»ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ
»ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ
»ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’
»ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ
»ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್!
»ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್
»ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ
»ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ
»ಹಣದುಬ್ಬರವೆಂದರೇನು ಗೊತ್ತಾ?
»ಹೊಳೆ ದಾಟಿದ ಮೇಲೆ...
»ಅಂತರಿಕ್ಷದಲ್ಲಿ ಮದುವೆ ಮಾಡಿಸುತ್ತದೆ ಈ ಸಂಸ್ಥೆ!
»ಜಿರಾಫೆಯನ್ನು ಬಂಧಿಸಿದ ಪೊಲೀಸರು
»ಆ ಸಿಗರೇಟು ಬಿಡಿ ಇ-ಸಿಗರೇಟು ಸೇದಿ
»ರೈತರ ಸರಣಿ ಆತ್ಮಹತ್ಯೆ : ದೊರಕದ ಸಹಾಯ
»ಪಠ್ಯಪುಸ್ತಕ ಬದಲಾವಣೆಗೆ ಸಚಿವರ ‘ಕೇಸರಿ ನಕಾಶೆ’
»’ಮೊಬೈಲ್’ ಗಾದೆಗಳು!!
»ಭಾರತೀಯ ಭಾಷಾ ಗಣಕಲೋಕದ ಪಿತಾಮಹ - ಶ್ರೀ ಕೆ.ಪಿ ರಾವ್
»ಒಂದು ಸಾವಿನ ಮನೆಯ ವೃತ್ತಾಂತ .....
»ಕನ್ನಡ ಕಲಿಸುವುದಕ್ಕೆ ಇಷ್ಟವಿರುವವರಿಗೆ ಅರ್ಪಣೆ
»ಅನಾಥ ಅಜ್ಜಿಗೆ ಸ್ಪೂರ್ಥಿಯ ಆಸರೆ
»ರಾಜಕೀಯ ಚದುರಂಗದಾಟದ ಕಾಯಿಗಳಾಗುತ್ತಿರುವ ರೈತರು
»ಅನ್ನ ತಿನ್ನುವವರು ನೀರುಳಿಸುವ ವಿಧಾನ
»ಗಂಗೆ ಅಂತರ್ಧಾನಳಾದಾಳೇ... !?
»ಚಿಕುನ್‌ಗುನ್ಯಾದಿಂದ ಕರಾವಳಿ ಕಲಿಯಬೇಕಾದ ಪಾಠ
»ಕಾಲ್ ಸೆಂಟರ್‌ಗಳಲ್ಲಿ ತೆರೆಯಲಿ ಏಡ್ಸ್ ಜಾಗೃತಿ ಅಂಗಡಿಗಳು
»ಕರಾವಳಿಯನ್ನು ಕಾಡುತ್ತಿದೆ ಕಮ್ಯುನಿಸ್ಟ್ ಕಳೆ
»ಗಣಿಗಾರಿಕೆ ರಾಷ್ಟ್ರೀಕರಣವಾಗಲಿ
»ಕಳೆ ಪಡೆಯುತ್ತಿರುವ ಹೊಳೆ ಮೀನುಗಾರಿಕೆ ....
» 'Housewives' out of fashion in metros!
»ನನ್ನಜ್ಜನಿಗೊಂದಾನೆಯಿತ್ತು !
»ಕೊಂಕಣಿ ರಾಜ್ಯದ ಕನಸು ಕಂಡಿದ್ದ ಕಾಮತರು
»ಪದ್ಮಪ್ರಿಯಾ ಪ್ರಕರಣದ ಸುತ್ತ...
»... ಆ ಒಂದು ಮುತ್ತಿನ ಕತೆ
»ಈ ಭೇಟಿ ನ್ಯಾಯವೇ?
»ಪಾಸ್‌ಪೋರ್ಟ್ ಅರ್ಜಿಗೆ ಕನ್ನಡ, ಇಂಗ್ಲಿಷ್‌ನ ವೆಬ್‌ಸೈಟ್
»some ಪದ ಕೇಡಿ
»ಈ-ಮೆಲ್ ರಚನೆಯ ಪರಿಚಯ
»ರೈತರಿಗೆ ಮಾತ್ರ ರಬ್ಬರ್ ಗುಂಡು: ಉಳಿದವರಿಗೆ?
»ಇ-ಮೇಲ್ ಅಕೌಂಟನ್ನು ತೆರೆಯುವುದು
»ನೀರಿನಿಂದ ಓಡುವ ಕಾರು!
»ನಾಡಿನ ಒಳಿತಿನ ಚುಕ್ಕಾಣಿ ಅರ್ಚಕನ ಕೈಗೆ?
»ಕೆಂಪಾಯಿತು ಯಡಿಯೂರಪ್ಪನವರ ಹೆಗಲಿನ ಹಸಿರು ಶಾಲು
»ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗೆ ಮೊದಲ ಬಲಿ ರೈತನೇ!
»ಮುದುಡಿದ ಮನದಲ್ಲ