| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬಂಟ್ವಾಳ: ಗಾದೆಗಳ ಉಳಿವಿಗಾಗಿ ‘ತುಳು ಸಮ್ಮೇಳನೋ’- ಡಿ.ವಿರೇಂದ್ರ ಹೆಗ್ಗಡೆ |
ಪ್ರಕಟಿಸಿದ ದಿನಾಂಕ : 2009-10-03
ಬಂಟ್ವಾಳ, ಅ.೨: ತುಳುನಾಡಿನ ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಗಾದೆಗಳು, ಎದುರುಕತೆಗಳ ಉಳಿವಿಗಾಗಿ ವಿಶ್ವತುಳು ಸಮ್ಮೇಳನೋ ಆಯೋಜಿಸಲಾಗಿದ್ದು, ತುಳುನಾ ಡಿನಲ್ಲಿ ಬಳಕೆಯಲ್ಲಿದ್ದ ಶಬ್ದಗಳು, ಕುಲಕಸುಬುಗಳನ್ನು ಮುಂದಿನ ಜನಾಂಗಕ್ಕೆ ಪರಿಚಯ ಮಾಡಿಕೊಡುವ ಪ್ರಯತ್ನ ಇದಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ರೇಂದ್ರ ಹೆಗ್ಗಡೆ ಹೇಳಿದ್ದಾರೆ.
‘ವಿಶ್ವ ತುಳು ಸಮ್ಮೇಳನೋ-೨೦೦೯’ರ ಅಂಗವಾಗಿ ಬಂಟ್ವಾಳ ಪ್ರಾದೇಶಿಕ ಕಾರ್ಯಕ್ರಮಗಳು ನಡೆಯಲಿರುವ ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಅವರು ಮಾತನಾಡುತ್ತಿದ್ದರು.
ತುಳುನಾಡಿನ ಕುಲಕಸುಬು, ಗಾದೆಗಳು, ಎದುರು ಕತೆಗಳು ‘ಕೋಡೆ- ಇನಿ-ಎಲ್ಲೆ’ ಎಂಬ ವಿಚಾರದಲ್ಲಿ ವಿಚಾರ ಗೋಷ್ಠಿ- ಪ್ರದರ್ಶನ- ಪ್ರಾತ್ಯಕ್ಷಿತೆ, ಸ್ಪರ್ಧೆಗಳು ಅ.೧೦ರಂದು ಕೇಂದ್ರದಲ್ಲಿ ನಡೆಯಲಿದ್ದು, ಈ ಬಗೆಗಿನ ಪೂರ್ವ ತಯಾರಿ ಯನ್ನು ರೇಂದ್ರ ಹೆಗ್ಗಡೆ ಪರಿಶೀಲಿಸಿದರು.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ಭಾಗವಹಿಸಬೇಕು ಎಂದ ಅವರು, ಇದು ಅವರ ಮುಂದಿನ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಬಲ್ಲದು. ತುಳುನಾಡಿನ ಬಗೆಗಿನ ಸಮಗ್ರ ಮಾಹಿತಿ ಅವರಿಗೆ ಇಲ್ಲಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ತುಳುನಾಡಿನಲ್ಲಿ ರೂಢಿಯಲ್ಲಿದ್ದ ಗಾದೆಗಳು ಇಲ್ಲಿನ ಜನ ಜೀವನಕ್ಕೆ ನೀತಿ ಒದಗಿಸಿಕೊಟ್ಟಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಸಮಿತಿ ಸಂಚಾಲಕ ಎ.ಸಿ. ಭಂಡಾರಿ, ಸುದರ್ಶನ್ ಜೈನ್, ಪ್ರೊ.ತುಕರಾಂ ಪೂಜಾರಿ, ತಾಲೂಕು ಸಮಿತಿಯ ಪ್ರಮುಖರಾದ ಬಿ. ತಮ್ಮಯ್ಯ, ರುಕ್ಮಯ ಪೂಜಾರಿ, ಡಿ.ಎಂ.ಕುಲಾಲ್, ರಾಧಾಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-10-03
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|