ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........

ಅಣ್ಣ ತಂಗಿಯರಿಗೊಂದು ದಿನ!!! ದಶಕಗಳ ಹಿಂದೆ ಯಾವುದೇ ದಿನವನ್ನು  ಢಾಣಾ ಡಂಗೂರವಿಲ್ಲದೆ ಅವರವರ ಮನೆಗಳಲ್ಲಿ ಸಂಭ್ರಮದಿಂದ ಆಚರಿ ಸುತ್ತಿದ್ದರು. ಅದನ್ನು ‘ಇಂತಹ’ ದಿನ ಎಂದೇನೂ ಲೇಬಲ್ ಹಚ್ಚುತ್ತಿರಲಿಲ್ಲ - ಆದರೆ, ಹಬ್ಬದಂದು ಆಚರಿಸುತ್ತಿದ್ದೆವು. ಶ್ರಾವಣ ಮಾಸದ ಐದನೇ ದಿನವೇ (ಗರುಡ ಪಂಚಮಿ) ಅಣ್ಣ ತಂಗಿಯರ ಹಬ್ಬದ ದಿನ. ಇತ್ತೀಚೆಗೆ ಭಾರತದಾದ್ಯಂತ ರಾಖಿ ಹಬ್ಬ ಅಥವಾ ರಕ್ಷಾಬಂಧನವನ್ನೂ ಅಣ್ಣ ತಂಗಿಯರ ಹಬ್ಬವಾಗಿ ಆಚರಿಸುತ್ತಾರೆ ...... ಇದು ಉತ್ತರ ಭಾರತದಿಂದ ಬಂದ ಆಚರಣೆ. ಇಂದು ಆಗಸ್ಟ್ 16 - ರಕ್ಷಾ ಬಂಧನ ದಿನ. 

 ನಾಲ್ಕು ದಶಕಗಳ ಹಿಂದೆ ನಾವೆಲ್ಲಾ ಪುಟ್ಟವರಾಗಿದ್ದಾಗ ನಮ್ಮ ಅಣ್ಣಂದಿರೊಂದಿಗೆ ಒಡನಾಡಿದ ದಿನಗಳನ್ನು ಒಮ್ಮೆ ಸ್ಮುತಿಪಟಲದ ಮುಂದೆ ತಂದುಕೊಂಡಾಗ ....... 

ಸರ್ಕಾರಿ ನೌಕರಿಯಲ್ಲಿದ್ದ ಅಪ್ಪ ಆ ಊರಿಗೆ ವರ್ಗವಾಗಿ ಬಂದಾಗ ನನಗೆ ಎಂಟು ಹಾಗೂ ನನ್ನಣ್ಣನಿಗೆ ಹತ್ತು ವರ್ಷ. ಹೊಸ ಶಾಲೆಗೆ ಮೊದಲ ಬಾರಿ ಹೋಗುವಾಗ ನನ್ನ ಅಣ್ಣ ನನಗೆ ಧೈರ್ಯ ತುಂಬಿದ ರೀತಿ ನೆನಸಿಕೊಂಡರೆ ಅಚ್ಚರಿ ಎನಿಸುತ್ತದೆ. ನಮ್ಮಿಬ್ಬರದೂ ಬೇರೆ ಬೇರೆ ಶಾಲೆಗಳು. ಎರಡು ಶಾಲೆಗಳ ನಡುವೆ ಹತ್ತು ಹದಿನೈದು ನಿಮಿಷದ ನಡಿಗೆಯ ಅಂತರ ಮಧ್ಯಾಹ್ನ ಊಟದ ಬಿಡುವಿನಲ್ಲಿ ಯಾರೊಡನೆ ಊಟ ಮಾಡಲಿ? ಆ ಶಾಲೆಯಲ್ಲಿ ಯಾರೂ ಪರಿಚಿತರಿಲ್ಲವಲ್ಲ ಎಂಬುದು ನನ್ನ ಚಿಂತೆ. ಅದಕ್ಕೆ ನನ್ನಣ್ಣ ಸೂಚಿಸಿದ ಪರಿಹಾರ - ಎರಡು ಶಾಲೆಗಳ ನಡುವಿರುವ ಒಂದು ದೊಡ್ಡ ಮರದ ಕಟ್ಟೆಯ ಮೇಲೆ ಕುಳಿತು ಊಟ ಮಾಡುವುದೆಂದು - ಇಬ್ಬರೂ ಮಧ್ಯಾಹ್ನದ ಬೆಲ್ ಆದ ಕೂಡಲೇ ಆ ಜಾಗದ ಬಳಿ ಬಂದು ಊಟ ಮುಗಿಸುತ್ತಿದ್ದೆವು.

ಕಡೆಗೊಮ್ಮೆ ಇದನ್ನು ಪ್ರತಿದಿನ ಗಮನಿಸಿದ ನಮ್ಮ ಟೀಚರ್ ಕರೆದು ಹಾಗೆಲ್ಲಾ ಶಾಲೆಯಾಚೆ ಹೋಗಬಾರದೆಂದು ಹೇಳಿ ಇತರ ಮಕ್ಕಳೊಡನೆ ನಾನು ಬೆರೆಯುವಂತೆ ಮಾಡ್ದಿದರು. ಹೊಸ ಶಾಲೆ ನಮಗೆಷ್ಟು ಭಯ ಹುಟ್ಟಿಸಿತ್ತೋ ಅವನಿಗೂ ಅವನ ಶಾಲೆ ಭಯ ಹುಟ್ಟಿಸಿತ್ತೆಂಬುವ ವಿಷಯ ದೊಡ್ಡವಳಾದ ಮೇಲೆಯೇ ನನಗೆ ತಿಳಿದದ್ದು!! 

ಎಂಟು ವರ್ಷಗಳ ನಂತರ ವಿದ್ಯಾಭ್ಯಾಸ ಮುಂದುವರೆಸಲು ನಾನು ಬೆಂಗಳೂರಿಗೆ ಬಂದಾಗ ನನಗಿಂತ ಒಂದು ವರ್ಷ ಮುಂಚೆ ಬಂದ್ದಿದ ಅದೇ ಅಣ್ಣ ಮತ್ತೆ ನನಗೆ ಧೈರ್ಯ ತುಂಬಿ ಹಾಸ್ಟೆಲ್, ಕಾಲೇಜ್ ಎಲವನ್ನೂ ತೋರಿಸಿ ಬಸ್ ಪಾಸ್ ಮಾಡಿಸಿಕೊಟ್ಟು ಕಾಲೇಜಿನ ಮೊದಲ ದಿನ ತರಗತಿಯವರೆಗೂ ಕರೆದೊಯ್ದ. ಅಷ್ಟೇ ಅಲ ಪ್ರತಿ ಬಾರಿಯೂ ಪರೀಕ್ಷೆ ಪ್ರಾರಂಭವಾಗುವ ಮೊದಲ ದಿನ ಬೆಸ್ಟ್ ಆಫ್ ಲಕ್ ಹೇಳಲು ಪರೀಕ್ಷಾ ಕೊಠಡಿಯ ಬಳಿ ಬರುವಾಗ ತಪ್ಪದೆ ಬಾದಾಮಿ ಹಲ್ವಾ ತರುತ್ತಿದ್ದ.   

ಆದರಿಂದಲೇ ಪರೀಕ್ಷೆಯ ದಿನ ನನ್ನ ಸುತ್ತ ಗೆಳತಿಯರ ಗುಂಪೇ ಇರುತ್ತಿತ್ತು!!! ಅಣ್ಣನ ಇಂತಹ ವಾತ್ಸಲ್ಯ, ಪ್ರೋತ್ಸಾಹ ತಂಗಿಯರಿಗೆ ಎಷ್ಟೊಂದು ಹೆಮ್ಮೆ.  ನಮ್ಮ ಬಾಲ್ಯದಲ್ಲಿ ಪಂಚಮಿ ಹಬ್ಬದಂದು ಮನೆಯ್ಲಲಿರುವ ಅಣ್ಣ ತಂಗಿಯರಿಗ್ಲೆಲಾ ಸಂಭ್ರಮ. ಬೆಳಿಗ್ಗೆ ಸ್ನಾನ ಮಾಡಿ ಪೂಜೆಯಾದ ಮೇಲೆ ಅಣ್ಣ ತಮ್ಮಂದಿರೆಲ್ಲಾ ಸಾಲಾಗಿ ಮಣೆಯ ಮೇಲೆ ಕುಳಿತರೆ ಅಕ್ಕ ತಂಗಿಯರು ಅವರ ಬೆನ್ನಿಗೆ ಹಾಲು ಸವರಿ ತಣ್ಣಗೆ ಮಾಡುವ ಆ ವಿಶಿಷ್ಟ ಹಬ್ಬವನ್ನು ಎಂದಿಗೂ ಮರೆಯುವಂತಿಲ್ಲ. ಸೋದರಿಯರು ಸೋದರರಿಗೆ ಅಕ್ಷತೆ ಕೊಟ್ಟು ನಮಸ್ಕರಿಸಿದಾಗ, ಅಣ್ಣ ತಮ್ಮಂದಿರ ಕೈಯಿಂದ ಉಡುಗೊರೆ ಕೊಡಿಸುತಿದ್ದ. ಸಂಪ್ರದಾಯ ಎಷ್ಟೊಂದು ಅರ್ಥಪೂರ್ಣ!!  

ಆ ರೀತಿ ಬೆಳೆದ ಸೋದರರಿಗೆ ತಮ್ಮ ಅಕ್ಕ ತಂಗಿಯರನ್ನು ನೋಡಿಕೊಳ್ಳಬೇಕಾದ್ದು ತಮ್ಮ ಜವಾಬ್ದಾರಿ ಎಂಬ ಅರ್ಥಪೂರ್ಣ ಸಂದೇಶ ಯಾವುದೇ ಅಬ್ಬರವಿಲ್ಲದೆ ರವಾನೆಯಾಗುತ್ತಿತ್ತು. ಹಾಗೆಯೇ ತಂದೆ ತಾಯಿಯರ ನಂತರ ಅಣ್ಣನ ಮನೆಯೇ ತವರು ಮನೆ ಎಂಬ ಭಾವ ಹೆಣ್ಣುಮಕ್ಕಳಲ್ಲಿ ಮೂಡುತ್ತಿತ್ತು. ಆ ಕಾಲದ ಪುಟ್ಟ ಮಕ್ಕಳು ಈಗ ಹಿರಿಯ ನಾಗರಿಕರಾದರೂ ಈಗಲೂ ಪಂಚಮಿ ಹಬ್ಬದ ದಿನ ಅದನ್ನು ಪರಿಪಾಲಿಸಿ ಕೊಂಡು ಬರುತ್ತಿದ್ದರೆ ಅಚ್ಚರಿ ಇಲ.

ಈಗಲೂ ಸಹ ದೂರದೂರುಗಳ್ಲಲಿರುವ ನನ್ನ ಅಕ್ಕ ತಂಗಿಯರು ನಮ್ಮ ಸಹೋದರರಿ ಗೆಲ್ಲಾ ಈ ಹಬ್ಬಕ್ಕೆ ಅಕ್ಷತೆಯನ್ನು ಪೋಸ್ಟ್ ಮೂಲಕ ಕಳಿಸಿ ಆಶೀರ್ವಾದ ಪಡೆಯುವ ಸಂಪ್ರದಾಯ ಉಳಿಸಿಕೊಂಡು ಬಂದಿದ್ದಾರೆ. 

ಆಗಿನ ಮಕ್ಕಳು ‘ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರೂ ಎಂದೆಂದೂ ......’ ಎಂದೋ ‘ಏಕ್ ದೋ ತೀನ್ ಚಾರ್ ಭೈಯ್ಯಾ ಭೈಯ್ಯ ಹೋಷಿಯಾರ್ ......’ ಎಂದು ಹಾಡಿಕೊಳ್ಳುತ್ತಾ ಬೆಳೆದವರು.

ಆದರೆ ಈ ಕಾಲದ ಮಕ್ಕಳಿಗೆ ಬಾಂಧವ್ಯಗಳ ಅರ್ಥ ಹೇಗೆ ತಾನೇ ಆಗಲು ಸಾಧ್ಯ? ಮನೆಯಲ್ಲಿ ಒಂದೋ ಎರಡೋ ಮಕ್ಕಳು. ಮನೆಯಲ್ಲಿರುವ ತಾಯಿ ತಂದೆಯರಿಗೆ ಮಕ್ಕಳ ಭವಿಷ್ಯ ರೂಪಿಸುವ ಅಗಾಧ ಜವಾಬ್ದಾರಿ!!!?   ಅದಕ್ಕಾಗಿಯೇ ಹಗಲಿರುಳು ದುಡಿಯುವ ಅವರಿಗೆ ಮಕ್ಕಳೊಡನೆ ಮಾತನಾಡಲು ಪುರುಸೊತ್ತಿರುವುದ್ಲಿಲ!!! ಇನ್ನು ಮಕ್ಕಳಿಗೋ ಒಂದು ಹೊರೆ ಹೋಮ್ ವರ್ಕ್!! ಪ್ರಾಜೆಕ್ಟ್‌ವರ್ಕ್ ಇದರ ಮಧ್ಯೆ ಪ್ರೀತಿ, ಬಾಂಧವ್ಯ ಎಂಬ ಸೆಂಟಿಮೆಂಟ್‌ಗಳಿಗ್ಲೆಲಾ ಸಮಯವೆಲ್ಲಿ? ಈಗ ಅನೇಕ ರೀತಿಯ ಬೆಲೆಬಾಳುವ ಆಟದ ಸಾಮಾನುಗಳಷ್ಟೇ ಏಕೆ ವಿದ್ಯುನ್ಮಾನ ಆಟಿಕೆಗಳನ್ನು ಹೊಂದ್ದಿದರೂ ಸೋದರ ಸೋದರಿಯರ ಬಾಂಧವ್ಯ ನೀಡುವ ಸಂತೋಷವನ್ನು, ತಾಯಿ ತಂದೆಯರ ಟೆನ್ಷನ್‌ರಹಿತ ಪ್ರೀತಿಯ ಸಾಮೀಪ್ಯದ ಆನಂದವನ್ನೂ ಸವಿಯಲಾಗದ, ಪ್ರೀತಿಯ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ಕಂಡರೆ ಅಯ್ಯೋ ಎನಿಸುತ್ತದೆ.  

ಬದುಕಿನ ದೊಡ್ಡ ದೊಡ್ಡ ಗುರಿಗಳ ಬೆನ್ನೇರಿ ಸವಾರಿ ಮಾಡುವವರಿಗೆ, ಉತ್ಕೃಷ್ಟವಾದ ಸಣ್ಣ ಸಣ್ಣ ಸಂತೋಷ ಕೊಡುವ ಗಳಿಗೆಗಳು ಮತ್ತೆಂದೂ ತಿರುಗಿ ಬರದಂತೆ ತಮ್ಮ ಕಾಲ ಬುಡದಲ್ಲಿಯೇ ಜಾರಿಹೋಗುತ್ತಿದ್ದರೆ ಅದರ ಪರಿವೆಯೇ ಇರುವುದಿಲ್ಲ.

ಹಿಂದಿನ ತಲೆಮಾರಿನವರಿಗೆ ತಮ್ಮ ಇಳಿವಯಸ್ಸಿನ್ಲಲಿ ನೆನಪಿಸಿಕೊಳ್ಳಲು ಅನೇಕ ಸಿಹಿ ಕಹಿ ಘಟನೆಗಳಿವೆ. ಆದರೆ ಇಂದಿನ ಮಕ್ಕಳಿಗೆ ಭವಿಷ್ಯದಲ್ಲಿ ಯಾವ ಸುಂದರ ನೆನಪುಗಳಿರಲು ಸಾಧ್ಯ? 

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಎಸ್. ಚಂದ್ರಕಾಂತ |ಪ್ರಜಾವಾಣಿ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-16


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್
»ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು
»ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ
»ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು
»ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ!
»ಬಾಂಬ್ ಸೂಟ್ ಎಂಬ ರಕ್ಷಾ ಕವಚ
»ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್
»ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು?
» ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು
»ಸಡಿಲ ಪ್ಯಾಂಟ್ ಧರಿಸಿದರೆ ದಂಡ
»ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ?
»ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ...
»ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು
»ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ
»ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
»ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ
»ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ !
»ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ
»ಮೂರೂ ಬಿಟ್ಟವರ ಅಮೆರಿಕ ಯಾತ್ರೆ .......
»ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
»ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು
»ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!!
»ಅಮೆರಿಕೆಗಾಗಿ ದೇಶದ ಹಿತ ಬಲಿ
»ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್
»ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ?
»ಬಿಜೆಪಿಯ ದುರಂತಕ್ಕೆ ಪೀಠಿಕೆ .....?
»ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ
»ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ
»ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’
»ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ
»ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್!
»ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್
»ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ
»ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ
»ಹಣದುಬ್ಬರವೆಂದರೇನು ಗೊತ್ತಾ?
»ಹೊಳೆ ದಾಟಿದ ಮೇಲೆ...
»ಅಂತರಿಕ್ಷದಲ್ಲಿ ಮದುವೆ ಮಾಡಿಸುತ್ತದೆ ಈ ಸಂಸ್ಥೆ!
»ಜಿರಾಫೆಯನ್ನು ಬಂಧಿಸಿದ ಪೊಲೀಸರು
»ಆ ಸಿಗರೇಟು ಬಿಡಿ ಇ-ಸಿಗರೇಟು ಸೇದಿ
»ರೈತರ ಸರಣಿ ಆತ್ಮಹತ್ಯೆ : ದೊರಕದ ಸಹಾಯ
»ಪಠ್ಯಪುಸ್ತಕ ಬದಲಾವಣೆಗೆ ಸಚಿವರ ‘ಕೇಸರಿ ನಕಾಶೆ’
»’ಮೊಬೈಲ್’ ಗಾದೆಗಳು!!
»ಭಾರತೀಯ ಭಾಷಾ ಗಣಕಲೋಕದ ಪಿತಾಮಹ - ಶ್ರೀ ಕೆ.ಪಿ ರಾವ್
»ಒಂದು ಸಾವಿನ ಮನೆಯ ವೃತ್ತಾಂತ .....
»ಕನ್ನಡ ಕಲಿಸುವುದಕ್ಕೆ ಇಷ್ಟವಿರುವವರಿಗೆ ಅರ್ಪಣೆ
»ಅನಾಥ ಅಜ್ಜಿಗೆ ಸ್ಪೂರ್ಥಿಯ ಆಸರೆ
»ರಾಜಕೀಯ ಚದುರಂಗದಾಟದ ಕಾಯಿಗಳಾಗುತ್ತಿರುವ ರೈತರು
»ಅನ್ನ ತಿನ್ನುವವರು ನೀರುಳಿಸುವ ವಿಧಾನ
»ಗಂಗೆ ಅಂತರ್ಧಾನಳಾದಾಳೇ... !?
»ಚಿಕುನ್‌ಗುನ್ಯಾದಿಂದ ಕರಾವಳಿ ಕಲಿಯಬೇಕಾದ ಪಾಠ
»ಕಾಲ್ ಸೆಂಟರ್‌ಗಳಲ್ಲಿ ತೆರೆಯಲಿ ಏಡ್ಸ್ ಜಾಗೃತಿ ಅಂಗಡಿಗಳು
»ಕರಾವಳಿಯನ್ನು ಕಾಡುತ್ತಿದೆ ಕಮ್ಯುನಿಸ್ಟ್ ಕಳೆ
»ಗಣಿಗಾರಿಕೆ ರಾಷ್ಟ್ರೀಕರಣವಾಗಲಿ
»ಕಳೆ ಪಡೆಯುತ್ತಿರುವ ಹೊಳೆ ಮೀನುಗಾರಿಕೆ ....
» 'Housewives' out of fashion in metros!
»ನನ್ನಜ್ಜನಿಗೊಂದಾನೆಯಿತ್ತು !
»ಕೊಂಕಣಿ ರಾಜ್ಯದ ಕನಸು ಕಂಡಿದ್ದ ಕಾಮತರು
»ಪದ್ಮಪ್ರಿಯಾ ಪ್ರಕರಣದ ಸುತ್ತ...
»... ಆ ಒಂದು ಮುತ್ತಿನ ಕತೆ
»ಈ ಭೇಟಿ ನ್ಯಾಯವೇ?
»ಪಾಸ್‌ಪೋರ್ಟ್ ಅರ್ಜಿಗೆ ಕನ್ನಡ, ಇಂಗ್ಲಿಷ್‌ನ ವೆಬ್‌ಸೈಟ್
»some ಪದ ಕೇಡಿ
»ಈ-ಮೆಲ್ ರಚನೆಯ ಪರಿಚಯ
»ರೈತರಿಗೆ ಮಾತ್ರ ರಬ್ಬರ್ ಗುಂಡು: ಉಳಿದವರಿಗೆ?
»ಇ-ಮೇಲ್ ಅಕೌಂಟನ್ನು ತೆರೆಯುವುದು
»ನೀರಿನಿಂದ ಓಡುವ ಕಾರು!
»ನಾಡಿನ ಒಳಿತಿನ ಚುಕ್ಕಾಣಿ ಅರ್ಚಕನ ಕೈಗೆ?
»ಕೆಂಪಾಯಿತು ಯಡಿಯೂರಪ್ಪನವರ ಹೆಗಲಿನ ಹಸಿರು ಶಾಲು
»ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗೆ ಮೊದಲ ಬಲಿ ರೈತನೇ!
»ಮುದುಡಿದ ಮನದಲ್ಲಿ ನಗುವೊಂದು ಅರಳಿದಾಗ..
»ಇಲ್ಲಿದೆ ಬ್ರಿಟಿಷರ ಕಾಲದ ನ್ಯಾಯಪೀಠ !
»ಸುವರ್ಣ ಗಣಕನ್ನಡ
»