ಕುವೈಟ್ : ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ |
ಪ್ರಕಟಿಸಿದ ದಿನಾಂಕ : 2008-08-13
ಸ್ವಾಗತ ಕೋರಿದ ಭಾರತೀಯ ರಾಯಭಾರಿ ಕಛೇರಿ
ಕುವೈಟ್, ಆಗಸ್ಟ್ 13: ಶುಕ್ರವಾರ ಆಗಸ್ಟ್ ಹದಿನೈದನೇ ತಾರೀಖು ಬೆಳಿಗ್ಗೆ ಏಳು ಘಂಟೆಗೆ ಸರಿಯಾಗಿ ಅರೇಬಿಯನ್ ಗಲ್ಫ್ ರಸ್ತೆಯಲ್ಲಿರುವ ಭಾರತೀಯ ದೂತಾವಾಸ ಕಟ್ಟಡದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆ ಬಳಿಕ ರಾಷ್ಟ್ರಪತಿಯವರ ಸಂದೇಶವನ್ನು ಭಾರತೀಯ ರಾಯಭಾರಿಗಳು ಓದಿ ಹೇಳಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಲಾಮಕ್ಕಳು ದೇಶಭಕ್ತಿಗೀತೆ ಹಾಡಲಿದ್ದಾರೆ. ಕಾರ್ಯಕ್ರಮದ ಬಳಿಕ ರಾಯಭಾರಿಗಳು ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಎಲ್ಲಾ ಭಾರತೀಯರನ್ನು ಭಾರತೀಯ ದೂತಾವಾಸ ಆಹ್ವಾನಿಸಿದೆ.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಸಮಾಚಾರ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-13
|
|
|