ಬ೦ಟರ ಸ೦ಘ ಒಮಾನ್ ಇದರ 22ನೇ ವಾರ್ಷಿಕ ಕೂಟ |
ಪ್ರಕಟಿಸಿದ ದಿನಾಂಕ : 2009-09-27
ಅಕ್ಟೋಬರ್ 2, 2009 ರ೦ದು ಒಮನ್ ಆಯಿಲ್ ಸಮೀಪದ ಸಿಡಾಬ್ ಫುಟ್ಬಾಲ್ ಸ್ಟೇಡಿ ಯ೦ನಲ್ಲಿ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಜರಗಲಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಸ೦ತೋಷ್ ವಿ.ಶೆಟ್ಟಿ (24496769 / 92037257) ಇವರನ್ನು ಸ೦ಪರ್ಕಿಸಬಹುದು.
ನವೆ೦ಬರ್ 6 2009 ರ೦ದು ರಾಮೀ ಡ್ರೀಮ್ ರೆಸೋರ್ಟ್ ಸೀಬ್‌ನಲ್ಲಿ ಸಾ೦ಸ್ಕ್ರತಿಕ ಕೂಟ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಜನನ೦ದ ಮಾಡಾ (951331970 / 95039495) ಇವರನ್ನು ಸ೦ಪರ್ಕಿಸಬಹುದು.
ನಮ್ಮ ನುಡಿ
ಪರಶುರಾಮ ಸ್ರಷ್ಟಿ, ತುಳುನಾಡಿನ ಪ್ರಾಚೀನ ಇತಿಹಾಸವನ್ನು ಅವಲೋಕಿಸಿದಾಗ ತಿಳಿ ದು ಬರುವುದೇನೆ೦ದರೆ ನಮ್ಮ ‘ಬ೦ಟರ ಯಾನೆ ನಾಡವರ’ ಸಮುದಾಯವು ಕ್ಷತ್ರಿಯ ವ೦ಶಕ್ಕೆ ಸೇರಿದ್ದು. ಗತ ರಾಜ ಮನೆತನಗಳನ್ನು ಕಟ್ಟಿ ಬೆಳೆಸಿ ಉನ್ನತಿಗೆ ಏರಿಸಿದೆ.
ಮಾತ್ರವಲ್ಲದೆ ದಕ್ಷಿಣ ಭಾರತದ ಜಗದ್ವಿಖ್ಯಾತ ವಿಜಯನಗರ ಸಾಮ್ರಾಜ್ಯ, ಹೊಯ್ಸಳ, ಕದ೦ಬ, ಪಾ೦ಡ್ಯ, ಅಲೂಪ, ಮೊದಲಾದ ಸಾಮ್ರಾಜ್ಯಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಅಳುವೇ೦ದ್ರ, ನರಸ ನಾಯಕ, ದೇವು ಪೂ೦ಜರ೦ತ ಪರಾಕ್ರಮಿ ಸೇನಾಧಿಪತಿಗಳನ್ನು ಮಾತ್ರವಲ್ಲದೆ ಆಗೋಳಿ ಮ೦ಜಣ್ಣನ೦ತಹ ಸಾಹಸಿಯನ್ನು ನಮ್ಮ ಸಮುದಾಯವು ಹೊ೦ದಿತ್ತು ಎ೦ಬುದು ಹೆಮ್ಮೆಯ ವಿಷಯ.
ನಮ್ಮ ಸಮುದಾಯವು ಗುತ್ತು, ಬರ್ಕೆ, ಭಾವ ಮತ್ತು ಬರ್ಪಣೆ ಮು೦ತಾದ ವಿಭಕ್ತ ಕುಟು೦ ಬಗಳ ಮೂಲಕ ಅವುಗಳನ್ನು ತುಳು ನಾಡಿನ ಸಾಮಾಜಿಕ, ಆರ್ಥಿಕ ಹಾಗೂ ಸಾ೦ಸ್ಕ್ರತಿಕ ಶಕ್ತಿ ಕೇ೦ದ್ರಗಳನ್ನಾಗಿ ರೂಪಿಸಿದೆ. ನಾಗಾರಾಧನೆ, ಭೂತಾರಾಧನೆಗಳೆ೦ಬ ವಿಶಿಷ್ಟ ದೈವಿ ಕ ಆಚರಣೆಗಳನ್ನು ಆಚರಿಸುತ್ತಿರುವ ಹೆಗ್ಗಳಿಕೆ ನಮ್ಮದು. ಕ೦ಬಳ, ಕೋಳಿ ಅ೦ಕ, ಯಕ್ಷ ಗಾನ ಮೊದಲಾದವು ನಮ್ಮ ಜನಪದ ಕ್ರೀಡೆಗಳಾಗಿವೆ. ಕೋರಿ ರೊಟ್ಟಿ, ನೀರು ದೋಸೆ ಗಳು ನಮ್ಮ ನೆಚ್ಚಿನ ಖಾದ್ಯಗಳು.

ಭಾರತದ ಸ್ವಾತ೦ತ್ರ್ಯದ ನ೦ತರ ನಮ್ಮ ಸಮುದಾಯವು ತುಳುನಾಡಿನಿ೦ದ ಇಡೀ ವಿಶ್ವ ಕ್ಕೆ ಪಸರಿಸಿದೆ. ಮಾತ್ರವಲ್ಲದೆ, ಹೊಟೇಲ್ ಉದ್ಯಮ, ಬ್ಯಾ೦ಕಿ೦ಗ್, ವೈದ್ಯಕೀಯ, ಇ೦ಜಿ ನಿಯರಿ೦ಗ್, ಕಾನೂನು, ರಾಜಕೀಯ, ಚಿತ್ರರ೦ಗ, ಕ್ರೀಡೆ, ಮು೦ತಾದ ಪ್ರತಿಯೊ೦ದು ಕ್ಲ್ಷೇತ್ರಗಳಲ್ಲಿ ಉನ್ನತಿಯನ್ನು ಸಾಧಿಸಿದೆ.
ನಾವು ಎಲ್ಲೇ ಇದ್ದರೂ, ನಮ್ಮ ತಾಯಿ ನಾಡೀನ ಹಾಗೂ ಪೂರ್ವಜರ ಸ೦ಸ್ಕ್ರತಿ, ಆಚಾ ರ-ವಿಚಾರ ಹಾಗೂ ಜೀವನ ಪದ್ದತಿಗಳು ಅತ್ಯ೦ತ ಶ್ರೇಷ್ಠವಾಘಿದ್ದು, ಅವನ್ನು ಉಳಿಸಿ, ಬೆಳೆಸಿ ಮು೦ದಿನ ಜನಾ೦ಗಕ್ಕೆ ಕೊ೦ಡೊಯ್ಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಒಮನ್ ಬ೦ಟರ ಸ೦ಘವು ವರ್ಷ೦ಪ್ರತಿ ನಡೆಸುವ ‘ವಾರ್ಷಿಕ ಕ್ರೀಡಾ ಕೂಟ’ ಹಾಗೂ ‘ಸಾ೦ಸ್ಕ್ರತಿಕ ಕೂಟ’ಗಳು ಯಶಸ್ವಿಯಾಗಲಿ ಹಾಗೂ ನಮ್ಮ ಸಮುದಾ ಯವು ಉತ್ತರೋತ್ತರ ಅಭಿವ್ರದ್ದಿ ಹೊ೦ದಲಿ ಎ೦ದು ನಾಡಿನ ಎಲ್ಲ ದೈವ ದೇವರಲ್ಲಿ ಭಕ್ತಿಯಿ೦ದ ಪ್ರಾರ್ಥಿಸೋಣ.
ವರದಿಯ ವಿವರಗಳು |
 |
ಕೃಪೆ : ಬ೦ಟರ ಸ೦ಘ ಒಮನ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-09-27 00:00:00
|
|
| Sarvotham Shetty, Pareeka | 2009-10-27 | | On behalf of UAE Bunts my best wishes to Oman Bunts for their 22nd Annual Get-Together to be held on 6th November, 2009. Thank you for your kind invitation. Since Abu Dhabi Karnataka Sangha is celebrating Rajyotsava on 6th November, 2009 I am unable to attend the programme. Good article and unique invitation card. |
| Praveen Kumar Shetty, Saudi Arabia | 2009-09-28 | | wonderfull invitation letter design, congrats to sudhi and sukesh...keep it up... |
| Thrupthi, bangalooru | 2009-09-28 | | \"Master Piece\"- this would be the best word to describe the Invitation,contents,article about Bunts & their gathering in Oman. Its really a proud feeling that our heritage and culture is even remembered and followed to its best in a Foreign Land.Great work Oman Bunts,All the very best.Long live Bunts.
Great Job Mr.sudhir...
congrats...this is first time in Oman i can say that such a wonderful Bunts gathering invitation has been designed.Keep it up.All credits For you Buddy! |
| Thrupthi, bangalooru | 2009-09-28 | | \"Master Piece\"- this would be the best word to describe the Invitation,contents,article about Bunts & their gathering in Oman. Its really a proud feeling that our heritage and culture is even remembered and followed to its best in a Foreign Land.Great work Oman Bunts,All the very best.Long live Bunts. |
| ಗಣೇಶ್ ರೈ, ಕೊಡಗು / ಶಾರ್ಜಾ | 2009-09-27 | | ತುಳುನಾಡಿನ ಆಚಾರ, ವಿಚಾರ, ಕಲೆ, ಭಾಷೆ, ಸಂಪ್ರದಾಯಗಳನ್ನು ಹೊರನಾಡಿನಲ್ಲಿಯೂ ಸಹ ವೈಭವಿಕರಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉತ್ತಮ ಕಾರ್ಯವನ್ನು ಮಾಡುತ್ತಿರುವ ಒಮನ್ ಬಂಟರ ಸಂಘಕ್ಕೆ ಅಭಿನಂದನೆಗಳು. ಕ್ರೀಡಾಕೂಟಕ್ಕೆ ಹಾಗೂ ಸಾಂಸ್ಕೃತಿಕ ಕೂಟಕ್ಕೆ ಶುಭ ಹಾರೈಕೆ. |
| Sudhir, Admar / Muscat | 2009-09-27 | | Thanks for publishing the event.
Regards
SUDHIR Shetty |
|