ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮರುಪೂರಣದಿಂದ ಹತ್ತಡಿ ಏರಿದ ನೀರು

ಕಡು ಬೇಸಿಗೆ. ಸುತ್ತೆಲ್ಲಾ ಭಣಭಣ. ನಲ್ಲಿಯಲ್ಲಿ ಅರ್ಧ ಗಂಟೆ ನೀರು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲೂ ಪುತ್ತೂರಿನ ಆದರ್ಶ ಆಸ್ಪತ್ರೆ ಬಳಿಯ ರಾಜರತ್ನಂ ಅವರ ಬಾವಿಯಲ್ಲಿ ಹತ್ತಡಿ ನೀರಿಗೆ ತೊಂದರೆಯಿಲ್ಲ. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ್ದರ ಫಲ.

ಇವರದು ಹಳೆ ಬಾವಿ. ಮೃದು ಮಣ್ಣು. ಒರತೆ ಕಡಿಮೆ. ಕೆಲವೊದು ಸಲ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮಳೆ ಬಂದಾಗ ಮೇ ಕೊನೆ ವರೆಗೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಸುಮಾರು ಎಂಭತ್ತರ ಹೊತ್ತಿಗೆ ಬಾವಿ ಒಮ್ಮೆ ಬತ್ತಿತ್ತು. ಆಗ ದೂರದಿಂದ ನೀರನ್ನು ತಂದ ಸಾಹಸ ರಾಜರತ್ನಂ ಅವರಿಗೆ ನೆನಪಿದೆ. ಆಮೇಲಿನ ದಿವಸಗಳಲ್ಲಿ ಮನೆಬಳಕೆಗೆ ಬಳಸಲು ತೊಂದರೆಯಾಗುತ್ತಿರಲಿಲ್ಲ.


೨೦೦೦ ಸುಮಾರಿಗೆ ಮೇ-ಜೂನ್‌ನಲ್ಲಿ ಬಾವಿ ಪೂರ್ತಿ ಬತ್ತಿತ್ತು. ಕುಡಿನೀರಿಗೂ ತತ್ವಾರ. ನೀರಿನಾಪತ್ತಿನಲ್ಲಿ ನೀರೊದಗಿಸುತ್ತಿದ್ದ ವೆಲಾರಿಯನ್ ಡಿಸೋಜ ಅವರ ಬಾವಿಯಲ್ಲೂ ನೀರು ತಳಕಾಣುತ್ತಿತ್ತು. ಆಗ ನೆರವಿಗೆ ಬಂದವರು ಆದರ್ಶ ಆಸ್ಪತ್ರೆಯ ಡಾ.ಪ್ರಸಾದ ಭಂಡಾರಿ. ತಮ್ಮ ಆಸ್ಪತ್ರೆಯ ಕೊಳವೆ ಬಾವಿಯಿಂದ ನೀರು ಬಳಸಲು ಅವಕಾಶ. ಆಸ್ಪತ್ರೆಗೂ ಮನೆಗೂ ಸುಮಾರು ಒಂದು ಫಲಾಂಗ್ ದೂರ. ಇಷ್ಟು ದೂರ ಪೈಪ್ ತರುವುದೆಂದರೆ ದುಬಾರಿ. ಸುಮಾರು ಅರ್ಧ ದೂರದ ತನಕ ಪೈಪಲ್ಲಿ ನೀರು ತಂದು, ಅಲ್ಲಿಂದ ಮನೆಮಂದಿ ಎಲ್ಲರಿಂದಲೂ ಕರಸೇವೆ! ಪಾತ್ರೆಪಗಡಿಗಳಲ್ಲಿ ಸಂಗ್ರಹ.
ಇಷ್ಟಕ್ಕೆಲ್ಲಾ ಕಾರಣ ಸುತ್ತೆಲ್ಲಾ ಹೆಚ್ಚಾದ ಕೊಳವೆಬಾವಿಗಳು. ಹತ್ತು ವರುಷದಲ್ಲಿ ಸುಮಾರು ಆರೇಳು ಕೊಳವೆಬಾವಿಗಳಾದುವು. ಇದರಿಂದ ಅಂತರ್ಜಲ ಕುಸಿದು ಬಾವಿನೀರು ಆರಿದೆ ಎಂಬ ಸತ್ಯವನ್ನು ಹೇಳುವ ರಾಜರತ್ನಂ, ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದುದರಿಂದ ನೀರಿನ ಕೆಲಸವೂ ಹಗುರವಾಗುತ್ತಿತ್ತು ಎನ್ನುತ್ತಾರೆ. ಆಗ ಮಾಧ್ಯಮಗಳಲ್ಲಿ ಬರುತ್ತಿದ್ದ ನೀರಿನ ಕತೆ ಇವರನ್ನು ಸೆಳೆದಿತ್ತು.

ರಾಜರತ್ನಂ ಚರ್ಮವಾದ್ಯ ತಯಾರಕ. ಇದರ ಕೆಲಸಕ್ಕಾಗಿ ಮನೆಯ ಮಾಡಿಗೆ ಸೇರಿದಂತೆ ಇಳಿಮಾಡು ನಿರ್ಮಿಸಿದ್ದರು. ಇದಕ್ಕೆ ಪ್ಲಾಸ್ಟಿಕ್ ದಂಬೆ ಕೂರಿಸಿದ್ದಾರೆ. ಬಾವಿಗೆ ತಾಗಿಕೊಂಡೇ ೪ x ೪ x ೪ ಅಳತೆಯ ಸೋಸುಗುಂಡಿ. ಹಂಚಿನಚೂರು, ದೊಡ್ಡಜಲ್ಲಿ, ಸಣ್ಣಜಲ್ಲಿ ಮತ್ತ ಚಿಕ್ಕಚಿಕ್ಕ ಚರಳುಕಲ್ಲುಗಳನ್ನು ಅದರಲ್ಲಿ ಹಾಕಿದ್ದಾರೆ. ಸೋಸುಗುಂಡಿಯಿಂದ ಬಾವಿಗೆ ಸಂಪರ್ಕ. ದಂಬೆಯಲ್ಲಿ ಬಂದ ಮಾಡಿನ ನೀರು ಜಾಳಿಗೆಗೆ ಬಿದ್ದು, ಸೋಸಿ ಬಾವಿ ಸೇರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಬುಟ್ಟಿಗೆ, ನೆರಳುಬಲೆಯನ್ನು ಗಟ್ಟಿಯಗಿ ಬಿಗಿದು ಜಾಳಿಗೆಯನ್ನು ಸುಲಭವಾಗಿ ತಯಾರಿಸಿದ್ದಾರೆ. ಸೋಸುಗುಂಡಿಗೆ ನೀರಿನಧಾರೆ ಬೀಳುವಲ್ಲಿ ಈ ಸೋಸುಬುಟ್ಟಿ ಇಟ್ಟರಾಯಿತು.
ಬಾವಿ ಪೂರ್ತಿ ಆರುವ ಮೊದಲು ಮೇ-ಜೂನ್ ತಿಂಗಳಲ್ಲಿ ಏನಿಲ್ಲವೆಂದರೂ ೨-೩ ಅಡಿ ನೀರಿರುತ್ತಿತ್ತು. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ ಮರು ಬೇಸಿಗೆಯಲ್ಲಿ ಬಾವಿಯಲ್ಲಿ ಹತ್ತಡಿ ನೀರು! ಆರಡಿ ಬೋನಸ್ ನೀರು! ಇಲ್ಲರಿಗೂ ಆಶ್ಚರ್ಯ. ಮೊಗೆದಷ್ಟೂ ಏರುವ ಒರತೆ! ಛೇ...ನಾನಿದನ್ನು ನೀರಿನ ಸಂಕಟದ ಕಾಲದಲ್ಲೇ ಮಾಡಿಕೊಂಡಿದ್ದರೆ....? ರಾಜರತ್ನಂ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾರೆ.


ಮೂರು ವರುಷವಾಯಿತು. ಈಗ ಅವರಿಗೆ ನೀರ ನೆಮ್ಮದಿ. ಪಂಪ್ ಮೂಲಕ ನೀರು ಬಳಸಿದರೂ ಒಂದೆರಡು ಅಡಿ ಕಡಿಮೆಯಾಗುತ್ತದಷ್ಟೇ. ತಮ್ಮ ಮನೆಯಿಂದ ಕೇವಲ ಅರುವತ್ತಡಿ ದೂರದ ಪಕ್ಕದ ಹಿತ್ತಿಲಲ್ಲಿರುವ ಬಾವಿ ಈ ಹೊತ್ತಲ್ಲಿ ಪೂರ್ತಿ ಡ್ರೈ. ಹಿತ್ತಿಲಿಗೆ ತಾಗಿಕೊಂಡಿರುವ ಆಸ್ಪತ್ರೆಯ ಮಾಡಿನ ನೀರನ್ನು ಇವರ ಬಾವಿಗೆ ಬಿಟ್ಟರೂ ಸಾಕು. ಎಂಬ ಸಲಹೆ ಕೊಟ್ಟಿದ್ದರಂತೆ.


ಸೋಸುಗುಂಡಿಯನ್ನು ಇದುವರೆಗೆ ಶುಚಿಗೊಳಿಸಿಲ್ಲ. ಸೋಸುವಿಕೆ ನಿಧಾನವಾಗುತ್ತಿದೆ. ಹಾಗಾಗಿ ಗುಂಡಿಯಲ್ಲಿ ನೀರು ಇಂಗದೆ ಫ್ಲೋ ಆಗ್ತಿದೆ. ಎನ್ನುತ್ತಾರೆ.ನೀರಿನ ಸಂಕಟವನ್ನು ಹೇಳಿಕೊಳ್ಳುತ್ತಾ ಬರುವ ಆತ್ಮೀಯರು ಬಾವಿ ನೀರನ್ನು ನೋಡಿ ಇದೆಂಥಾ ರಾಜಣ್ಣ ಎಂದು ಆಶ್ಚರ್ಯ ಪಡುತ್ತಾರಂತೆ. ಅವರಿಗೆ ನೀರಿನ ಮಹತ್ವವನ್ನು ಹೇಳುತ್ತಾ, ನೀವು ಮಾಡಿ, ಬೇಕಾದರೆ ನಿಮ್ಮ ಸಹಾಯಕ್ಕೆ ನಾನೂ ಬರುತ್ತೇನೆ ಎನ್ನುತ್ತಾರೆ. ನೀರು ನೋಡಿದಾಗ ಎಲ್ಲರಿಗೂ ತಾವೂ ಮಾಡಬೇಕು ಎಂದು ತೋಚುತ್ತದೆ. ಆದರೆ ಮಾಡುವುದಿಲ್ಲ. ನೀರಿನ ತೊಂದರೆ ಇದ್ದವರಿಗೂ ಅರ್ಥವಾಗುವುದಲ್ಲವಲ್ಲಾ!
ನಿಮಗೆ ನೀರು ಸಾಕಷ್ಟಿರಬಹುದು. ಆದರೆ ಜಲಮರುಪೂರಣ ಮಾಡುವುದರಿಂದ ಪಕ್ಕದ ಮನೆಯವರಿಗೆ ಪ್ರಯೋಜನವಾಗುತ್ತದೆ ಎಂದು ನೀರಿನ ಶಿಕ್ಷಣ ನೀಡುತ್ತಾರೆ. ನಮ್ಮ ಜನ ಬೇಕಾದರೆ ಕಿಲೋಮೀಟರ್ ಗಟ್ಟರೆ ದೂರದಿಂದ ನೀರು ತಂದಾರು. ಆದರೆ ಮರುಪೂರಣ ಮಾಡಲಾರರು ಎಂದು ಖಾರವಾಗಿ ಪ್ರತಿಕ್ರಿಯಿಸುತ್ತಾರೆ.


ಬಾಲ್ಯದ ನೆನಪೊಂದನ್ನು ರಾಜಣ್ಣ ಬಿಚ್ಚುತ್ತಾರೆ - ಪುತ್ತೂರಿನ ರಾಘವೇಂದ್ರ ಮಠದ ಹತ್ತಿರ ಎರಡು ನೀರಿನ ಝರಿಗಳಿದ್ದುವಂತೆ. ಅದರಿಂದ ನಿರ್ಮಾಣವಾದ ಪಳ್ಳದಲ್ಲಿ (ಸಣ್ಣಕೆರೆ) ನಾವು ಈಜು ಕಲಿದುದು. ಈಗ ಪಳ್ಳವೂ ಇಲ್ಲ, ಝರಿಯೂ ಇಲ್ಲ. ಕಾರಣ, ಅಲ್ಲೆಲ್ಲಾ ಮನೆಗಳು ಬಂದುವು. ರಸ್ತೆಯಾಯಿತು. ನೀರಿನ ಸೆಲೆ ಮುಚ್ಚಿಹೋಯಿತು.
ರಾಜರತ್ನಂ ದೇವಾಡಿಗ, ಆದರ್ಶ ಆಸ್ಪತ್ರೆಯ ಹಿಂಭಾಗ, ಎ.ಪಿ.ಎಂ.ಸಿ.ರಸ್ತೆ, ಪುತ್ತೂರು - ೫೭೪ ೨೦೧ (ದ.ಕ.) ದೂರವಾಣಿ: ೦೮೨೫೧-೨೩೪೬೪೫


ಚಿತ್ರಗಳು:
 ಚಾವಣಿ ನೀರನ್ನು ಸೋಸಿದ ಬಳಿಕವೇ ಬಾವಿಗೆ.
------------------------------------------
ನಾ. ಕಾರಂತ ಪೆರಾಜೆ, ಅಂಚೆ ಪೆಟ್ಟಿಗೆ ೮, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು ೫೭೪ ೨೦೧ (ದ.ಕ.), ಮೊ: ೯೪೪೮೬೨೫೭೯೪

ಕೃಪೆ: ಇಂಡಿಯಾ ವಾಟರ್ ಪೋರ್ಟಲ್

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬರಹ: ನಾ. ಕಾರಂತ ಪೆರಾಜೆ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-10


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಅಮಾಯಕರನ್ನು ಹಿಂಸಿಸುವುದು ನಮ್ಮನ್ನು ನಾವೆ ಹಿಂಸಿಸಿಕೊಂಡಂತೆ
»ಕುಂಕುಮವಿಟ್ಟರೆ ಗೆಟ್ ಔಟ್!
»ಸಬಕೋ ಸನ್ಮತಿ ದೇ ಭಗವಾನ್ .....
»ಟಾಪ್ ಸಿ.ಎಮ್
»ಸರ್ ಎಂ.ವಿಶ್ವೇಶ್ವರಯ್ಯನವರಿಗೆ ನಮನ
»ಅಪ್ಪಿಕೋ ಚಳವಳಿ ನೆನಪಿನ ಹಬ್ಬ
»ಮನೆಯೊಳಗೆ ಬೇರುಗಳ ಸುಂದರ ಲೋಕ
»ಈ ಸಂದಿಗ್ಧ ಕಾಲದಲ್ಲಿ ನೀವು ಯಾರ ಪರ?
»ಅವನಿಗೆ ಅಬ್ದುಲ್ ಕಲಾಂ ಕಾಗದ ಬರೆದರು!
»ದಿನದ ಸುದ್ದಿ- ಹಾಡು ಹಕ್ಕಿಗೆ ಕೃತಕ ಗೂಡು
»ಜೀವಕ್ಕೆ ಬೆಲೆಯೆಲ್ಲಿದೆ? ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...
»ಕೋಮು ದ್ವೇಷದ ಸುಗ್ಗಿಯ ಕುಯಿಲು...
»ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ
»ಮಧ್ಯ ಬೆರಳಿನ ಪುರಾಣ - History of the Middle Finger
»ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
»ಹೋದವರು ಮತ್ತೆ ಬರಲಾರರು
»ವಿಶ್ವದ ಹುಟ್ಟಿನ ಪತ್ತೆ ಯತ್ನ...ವಿಜ್ಞಾನಿಗಳಿಂದ ಪ್ರೊಟಾನ್ ಸ್ಪೋಟ
»ಕಂದನ ನಗು ಕಸಿದಹೃದಯ ಬೇನೆ .....
»ಡಾ. ರಾಜ್‌ಕುಮಾರ್ ಉದ್ಯಾನವನ, ಬೆಂಗಳೂರು
»ಭಗತ್ ಸಿಂಗ್ ರ ಅಣಿಮುತ್ತುಗಳು.
»ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
»ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು
»ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!
»ವಿಜ್ಞಾನಿಗೆ ಕೈಕೊಟ್ಟ ಕಂಪ್ಯೂಟರ್ ಉಪಕರಣಗಳು..!
»ವಾರದಲ್ಲಿ ಹೊಸಮನೆ ರೆಡಿ
»ಹೆಕ್ಕಿಕೋ, ಪ್ಲಾಸ್ಟಿಕ್ ಹೆಕ್ಕಿಕೋ...
»ಮುದ್ರಿಸುವ ಮುನ್ನ ಯೋಚಿಸಿ...
»ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ…?
»ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
»ಮಳೆಗೆ ನಾವೆಷ್ಟು ಸಿದ್ಧ?
»ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
»ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
»Virginity: A virtue or a curse?
»ಭೂಮಿಯ ತಾಪಮಾನದ ಹೆಚ್ಚಳ...ಮನುಕುಲ ತಳಮಳ
»ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!
»ನೋವಿಗೆಷ್ಟು ಕಾಸು!
»ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!
»ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು
»ಅಂದು ಸ್ವಾತಂತ್ರ್ಯಕ್ಕೂ ಸಾರ್ಥಕತೆ!
»ಕೆ‌ಆರ್‌ಎಸ್ ಕ್ರೆಸ್ಟ್‌ಗೇಟ್ ಹಿಂದಿನ ಇತಿಹಾಸ
»ಗಂಡಸರೂ ಬಸುರಿ ಆಗುವುದಾಗಿದ್ದರೆ...?!
»ಮೊಬೈಲ್ ಸಿಮ್: ಉಪೇಕ್ಷೆ ಮಾಡದಿರಿ - ಹೀಗೊಂದು ಉಪಯುಕ್ತ ಮಾಹಿತಿ
»ಪ್ರಚಂಡ ಸವಾಲು
»ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರು..........
»ಸ್ವಾತಂತ್ರ್ಯಕ್ಕಾಗಿ ಜೈಲುವಾಸ: ರಾಜ್ಯದ ಮೊದಲ ಮಹಿಳೆ ಸ್ದಿದಮ್ಮ
»ಛಿದ್ರವಾಗುವ ಮುನ್ನ ಭದ್ರವಾಗೋಣ
» ಮುನ್ನುಗ್ಗುತ್ತಿರುವ ಭಾರತ ಮುಂದಿನ ಸೂಪರ್ ಪವರ್..?
»ವಿಶ್ವಾಸದ ಮೂರು ಮುಖಗಳು ....
»ನೀರಿನ ಹೆಸರಿನಲ್ಲಿ ಕಣ್ಣೀರು.....
»‘ಅರಣ್ಯ’ ರೋದನ.....
»ಸರಕಾರಿ ಬಸ್ಸುಗಳಿರುವುದು ಲಾಭ ಗಳಿಸುವುದಕ್ಕಲ್ಲ
»ಕಲ್ಲು ಗಣಿಗಾರಿಕೆ; ಪಶ್ಚಿಮಘಟ್ಟ ನಾಶಕ್ಕೆ ನಾಂದಿ
»ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್
»ಮರುಪೂರಣದಿಂದ ಹತ್ತಡಿ ಏರಿದ ನೀರು
»ಜನ, ವಾಹನ ದಟ್ಟಣೆಯ ಸುಳಿಯಲ್ಲಿ ಕೆ‌ಆರ್ ಮಾರ್ಕೆಟ್ ಸದಾ ಗಜಿಬಿಜಿ, ಗೌಜು ಗ್ದದಲ, ಗಲೀಜಿನ ವಾತಾವರಣ
»ಬೆಂಗಳೂರು ಸರಣಿ ಸ್ಪೋಟ : ರವಿ ಬೆಳೆಗೆರೆ ಅಭಿಪ್ರಾಯ
»ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!
»ಗಣಿ: ನಿಸರ್ಗ, ಬೊಕ್ಕಸ ಕೊಳ್ಳೆ
»ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಮುಂಬೈ ರೊಟ್ಟಿ ಕಾರ್ಖಾನೆಯೊಂದರೊಳಗಣ ನೋಟ
»ಅತಿಯಾದ ಸೆಖೆಯೇ? ಟ್ರೈ ಮಾಡಿ-ಯು.ಎಸ್.ಬಿ. ಎಸಿ ಶರ್ಟ್
»ಕಣ್ಣಿಲ್ಲದ ಅಜ್ಜಿಯ ಬಳಿ ದಾರಿ ಕಾಣದ ತಬ್ಬಲಿಗಳು
»ಅರವತ್ತು ವರ್ಷಗಳ ಬಳಿಕ ಹಿಂದಕ್ಕೆ ಬಂದ ಪತ್ರ
»ತೋಟವನ್ನೇ ನುಂಗುತ್ತಿರುವ ಬೇರುಹುಳಗಳು : ಕಂಗಾಲಾದ ಅಡಿಕೆ ಬೆಳೆಗಾರರು
»ತುಂಗೆಯ ಮಡಿಲಿಗೆ ಪಕ್ಷಿ ಜೀವಗಳ ಬಾಗಿನ!
»ಬಾಂಬ್ ಸೂಟ್ ಎಂಬ ರಕ್ಷಾ ಕವಚ
»ಕಾವೇರಿ ಕಣಿವೆಯಲ್ಲಿ :ಚುಕ್...ಪುಕ್... ಬಾಬಾ ಎಕ್ಸ್‌ಪ್ರೆಸ್
»ಶ್ರೀರಾಮ ಸೇತುವೆಯನ್ನು ಧ್ವಂಸಗೈದವರು ಯಾರು?
» ‘ಪವರ್ ಕಿಂಗ್’ ನಿಂದ ‘ಪವರ್ ಕ್ವೀನ್’ ಅಗುತ್ತಿರುವ ನಮ್ಮ ಮಹಿಳೆಯರು
»ಸಡಿಲ ಪ್ಯಾಂಟ್ ಧರಿಸಿದರೆ ದಂಡ
»ಮೋಡ ಬಿತ್ತನೆ: ಹೆರಿಗೆಯೋ ಗರ್ಭಪಾತವೋ?
»ಸಂಪ್ರದಾಯಸ್ಥ ಹವ್ಯಕರಲ್ಲಿ ಹೊಸ ಗಾಳಿ...
»ರೈತರನ್ನು ಕೊಂದು ಪ್ರತಿಮೆ ಸ್ಥಾಪಿಸಲು ಹೊರಟವರು
»ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಮುನ್ನ
»ಅಣು ಬಂಧ: ಅನಿರೀಕ್ಷಿತ ಮತ್ತು ಆಕಸ್ಮಿಕ
»ಇಹಲೋಕ ತ್ಯಜಿಸಿದ ಬ್ಲಾಗ್‌ಲೋಕದ ಹಿರಿಯಜ್ಜಿ
»ಗಾಳಿ ಶಕ್ತಿಯಿಂದ ಚಲಿಸಲಿದೆ ವಾಹನ !
»ಓಪನ್ ಆಫೀಸ್ ಬಗ್ಗೆ ಒಂದಿಷ್ಟು ಮಾಹಿತಿ
»ಮೂರೂ ಬಿಟ್ಟವರ ಅಮೆರಿಕ ಯಾತ್ರೆ .......
»ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
»ಎಪ್ಪತ್ತರ ಅಜ್ಜಿಗೆ ಅವಳಿ ಮಕ್ಕಳು
»ರೈತರಿಗೆ ಅನ್ನದಾತರಾಗಿರುವ ಐಟಿ ಇಂಜಿನಿಯರ್‌ಗಳು!!
»ಅಮೆರಿಕೆಗಾಗಿ ದೇಶದ ಹಿತ ಬಲಿ
»ದುಬೈ : ಖರ್ಜೂರದಾಕಾರದ ಹೊಸ ಕಟ್ಟಡ : ದುಬೈ ಕ್ರೌನ್
»ಸಿದ್ದರಾಮಯ್ಯ: ಬಾಣಲೆಯಿಂದ ಬೆಂಕಿಗೆ, ಬೆಂಕಿಯಿಂದ ಎಲ್ಲಿಗೆ?
»ಬಿಜೆಪಿಯ ದುರಂತಕ್ಕೆ ಪೀಠಿಕೆ .....?
»ಚಮ್ಮಾರಿಕೆಯೊಂದಿಗೆ ಪುಸ್ತಕ ಪ್ರಕಟಿಸುವ ಧನರಾಜ
»ಹೊಸ ಬ್ಯಾಟರಿ ಕಂಡುಹಿಡಿಯಿರಿ : 300 ಮಿಲಿಯನ್ ಡಾಲರ್ ಗೆಲ್ಲಿರಿ
»ಮುತ್ತು ವೈಜ್ಞಾನಿಕ ಸತ್ಯಾಂಶಗಳು ..ಇಂದು( ಜು 6) ಅಂತಾರಾಷ್ಟ್ರೀಯ ‘ಕಿಸ್ಸಿಂಗ್ ಡೇ’
»ತರೀಕೆರೆ ಏರಿಯಾ - ಚಿಟ್ಟೆಗಳ ಕಲಾವಿದೆ
»ಹುಲಿ ಸಾಮ್ರಾಜ್ಯದಲ್ಲಿ ಕಾಫಿ ಎಸ್ಟೇಟ್!
»ವೈದ್ಯಕೀಯ ಜ್ಞಾನನಿಧಿ ಡಾ| ಕೆ.ಜಿ.ಎಸ್. ಭಟ್
»ಚಳ್ಳಕೆರೆ : ಮಾನವ ರಹಿತ ವಿಮಾನ ಹಾರಾಟ ಕೇಂದ್ರ
»ಏನಿದು ಭಾರತ-ಅಮೆರಿಕ ಅಣು ಒಪ್ಪಂದ? ಇದರಿಂದ ಏನು ಲಾಭ? ವಿರೋಧ ಏಕೆ? ಸಮಗ್ರ ನೋಟ
»ಹಣದುಬ್ಬರವೆಂದರೇನು ಗೊತ್ತಾ?
»ಹೊಳೆ ದಾಟಿದ ಮೇಲೆ...
»ಅಂತರಿಕ್ಷದಲ್ಲಿ ಮದುವೆ ಮಾಡಿಸುತ್ತದೆ ಈ ಸಂಸ್ಥೆ!
»ಜಿರಾಫೆಯನ್ನು ಬಂಧಿಸಿದ ಪೊಲೀಸರು
»ಆ ಸಿಗರೇಟು ಬಿಡಿ ಇ-ಸಿಗರೇಟು ಸೇದಿ
»ರೈತರ ಸರಣಿ ಆತ್ಮಹತ್ಯೆ : ದೊರಕದ ಸಹಾಯ
»ಪಠ್ಯಪುಸ್ತಕ ಬದಲಾವಣೆಗೆ ಸಚಿವರ ‘ಕೇಸರಿ ನಕಾಶೆ’
»’ಮೊಬೈಲ್’ ಗಾದೆಗಳು!!
»ಭಾರತೀಯ ಭಾಷಾ ಗಣಕಲೋಕದ ಪಿತಾಮಹ - ಶ್ರೀ ಕೆ.ಪಿ ರಾವ್
»ಒಂದು ಸಾವಿನ ಮನೆಯ ವೃತ್ತಾಂತ .....
»ಕನ್ನಡ ಕಲಿಸುವುದಕ್ಕೆ ಇಷ್ಟವಿರುವವರಿಗೆ ಅರ್ಪಣೆ
»ಅನಾಥ ಅಜ್ಜಿಗೆ ಸ್ಪೂರ್ಥಿಯ ಆಸರೆ
»ರಾಜಕೀಯ ಚದುರಂಗದಾಟದ ಕಾಯಿಗಳಾಗುತ್ತಿರುವ ರೈತರು
»ಅನ್ನ ತಿನ್ನುವವರು ನೀರುಳಿಸುವ ವಿಧಾನ
»ಗಂಗೆ ಅಂತರ್ಧಾನಳಾದಾಳೇ... !?
»ಚಿಕುನ್‌ಗುನ್ಯಾದಿಂದ ಕರಾವಳಿ ಕಲಿಯಬೇಕಾದ ಪಾಠ
»ಕಾಲ್ ಸೆಂಟರ್‌ಗಳಲ್ಲಿ ತೆರೆಯಲಿ ಏಡ್ಸ್ ಜಾಗೃತಿ ಅಂಗಡಿಗಳು
»ಕರಾವಳಿಯನ್ನು ಕಾಡುತ್ತಿದೆ ಕಮ್ಯುನಿಸ್ಟ್ ಕಳೆ
»ಗಣಿಗಾರಿಕೆ ರಾಷ್ಟ್ರೀಕರಣವಾಗಲಿ
»ಕಳೆ ಪಡೆಯುತ್ತಿರುವ ಹೊಳೆ ಮೀನುಗಾರಿಕೆ ....
» 'Housewives' out of fashion in metros!
»ನನ್ನಜ್ಜನಿಗೊಂದಾನೆಯಿತ್ತು !
»ಕೊಂಕಣಿ ರಾಜ್ಯದ ಕನಸು ಕಂಡಿದ್ದ ಕಾಮತರು
»ಪದ್ಮಪ್ರಿಯಾ ಪ್ರಕರಣದ ಸುತ್ತ...
»... ಆ ಒಂದು ಮುತ್ತಿನ ಕತೆ
»ಈ ಭೇಟಿ ನ್ಯಾಯವೇ?
»ಪಾಸ್‌ಪೋರ್ಟ್ ಅರ್ಜಿಗೆ ಕನ್ನಡ, ಇಂಗ್ಲಿಷ್‌ನ ವೆಬ್‌ಸೈಟ್
»some ಪದ ಕೇಡಿ
»ಈ-ಮೆಲ್ ರಚನೆಯ ಪರಿಚಯ
»ರೈತರಿಗೆ ಮಾತ್ರ ರಬ್ಬರ್ ಗುಂಡು: ಉಳಿದವರಿಗೆ?
»ಇ-ಮೇಲ್ ಅಕೌಂಟನ್ನು ತೆರೆಯುವುದು
»ನೀರಿನಿಂದ ಓಡುವ ಕಾರು!
»ನಾಡಿನ ಒಳಿತಿನ ಚುಕ್ಕಾಣಿ ಅರ್ಚಕನ ಕೈಗೆ?
»ಕೆಂಪಾಯಿತು ಯಡಿಯೂರಪ್ಪನವರ ಹೆಗಲಿನ ಹಸಿರು ಶಾಲು
»ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗೆ ಮೊದಲ ಬಲಿ ರೈತನೇ!
»ಮುದುಡಿದ ಮನದಲ್ಲಿ ನಗುವೊಂದು ಅರಳಿದಾಗ..
»ಇಲ್ಲಿದೆ ಬ್ರಿಟಿಷರ ಕಾಲದ ನ್ಯಾಯಪೀಠ !
»ಸುವರ್ಣ ಗಣಕನ್ನಡ
»ಕರಾವಳಿ ತೀರದಲ್ಲಿ ‘ಕಡ್ಡಾಯ ರಜೆ’
»