ಕುವೈಟ್‌ನಲ್ಲಿ ಗಲ್ಫ್ ವಾಯ್ಸ್ ಆಫ್ ಮಂಗಳೂರು ಸ್ಪರ್ಧೆ |
ಪ್ರಕಟಿಸಿದ ದಿನಾಂಕ : 2008-08-03
ಮಂಗಳೂರು: ಕುವೈತ್‌ನ ಭಾರತೀಯರ ಸಂಘಟನೆ ಯೂತ್ ರಿಕ್ರಿಯೇಶನ್ಸ್ ಸೆಂಟರ್, ರೈಸಿಂಗ್ ಸ್ಟಾರ್ ವತಿಯಿಂದ ಗಲ್ಫ್ ರಾಷ್ಟ್ರದಲ್ಲಿರುವ ಕೊಂಕಣಿ ಗಾಯಕ ಗಾಯಕಿ ಯರಿಗಾಗಿ ಗಲ್ಫ್ ವಾಯ್ಸ್ ಆಫ್ ಮಂಗಳೂರು ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮ ಸಂಘಟಕ ಲೆಸ್ಲಿ ರೇಗೋ ಅವರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈಗಾಗಲೇ ಮೊದಲ ಹಂತದ ಸ್ಪರ್ಧೆ ಮುಗಿದಿದ್ದು, ಎರಡನೇ ಹಂತದ ಸ್ಪರ್ಧೆಯನ್ನು ಕೊಂಕಣಿಯ ಖ್ಯಾತ ಸಂಗೀತಗಾರರು, ತೀರ್ಪುಗಾರರ ಸಮ್ಮುಖದಲ್ಲಿ ನಡೆಸಲಾಗುವುದು ಎಂದರು.
ಆನ್‌ಲೈನ್ ನೋಂದಣಿ ಮೂಲಕ ಸ್ಪರ್ಧಾಕಾಂಕ್ಷಿಗಳನ್ನು ಪ್ರತಿ ರಾಷ್ಟ್ರದಿಂದ ೧೨ರಂದೆ ಆರಿಸಲಾಗಿದೆ. ದುಬೈ, ಬಹರೈನ್, ಮಸ್ಕತ್, ದೋಹ ಕತಾರ್ ಮತ್ತು ಕುವೈಟ್‌ನಿಂದ ೨೦೦ಕ್ಕೂ ಹೆಚ್ಚು ಮಂದಿ ಮೊದಲ ಹಂತದಲ್ಲಿ ಸ್ಪರ್ಧಿಗಳಾಗಿದ್ದರು. ಅಕ್ಟೋಬರ್ ೧೭ರಂದು ನಡೆಯುವ ಮೂರನೇ ಮತ್ತು ಅಂತಿಮ ಸ್ಪರ್ಧೆಗೆ ಪ್ರತಿ ರಾಷ್ಟ್ರದಿಂದ ಇಬ್ಬರಂತೆ ಆರಿಸಲಾಗುವುದು.
ಕೊಂಕಣಿಯ ಸಂಗೀತಗಾರರಾದ ವಿಲ್ಫಿ ರೆ ಬಿಂಬಸ್, ಮೆಲ್ವಿನ್ ಪೆರಿಸ್, ಸಂಗೀತ ನಿರ್ದೇಶಕ ಜೋಯಲ್ ಪಿರೇರಾ ತೀರ್ಪುಗಾರರಾಗಿರುತ್ತಾರೆ. ಮೀನಾ ರೆಬಿಂಬಸ್, ಜೋಸ್ವಿನ್ ಪಿಂಟೊ, ಕ್ರಿಸ್ಟೋಫರ್ ಮಸ್ಕರೇನಸ್, ರಿಚರ್ಡ್ ಮೊಂತೇರೋ, ತಿಯೊ ಆಲ್ವಾರಿಸ್, ಮೆಲ್ವಿನ್ ಫೆರ್ನಾಂಡಿಸ್‌ರನ್ನೊಳಗೊಂಡ ೧೦ ಮಂದಿಯ ಕಲಾತಂಡ ಈ ಪ್ರವಾಸದಲ್ಲಿರುತ್ತದೆ.ಕುವೈಟ್‌ನಲ್ಲಿ ಅ.೧೭ರಂದು ಅಂತಿಮ ಸ್ಪರ್ಧೆ ನಡೆಯುತ್ತದೆ.
ಮೊದಲ ಸ್ಥಾನ ಪಡೆಯುವವರಿಗೆ 1 ಲಕ್ಷ ರು., ದ್ವಿತೀಯ ಬಹುಮಾನ 50 ಸಾವಿರ ರು., ಮತ್ತು ಮೂರನೇ ಬಹುಮಾನ 25 ಸಾವಿರ ರು. ಆಗಿರುತ್ತದೆ.
ಸಂಘಟಕರಾದ ಲಾರೆನ್ಸ್ ಪಿಂಟೊ, ಲೂವಿಸ್ ರಾಡ್ರಿಗಸ್, ವಿಲ್ಫಿ ರೆಬಿಂಬಸ್, ದಾಯ್ಜಿವರ್ಲ್ಡ್‌ನ ವಾಲ್ಟರ್ ನಂದಳಿಕೆ ಹಾಜರಿದ್ದರು.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-03
|
|
|